Astrology Tips : ನಾಗರಪಂಚಮಿಯಂದು ತ್ರಿಜೋರಿಯಲ್ಲಿ ಇವನ್ನಿಟ್ರೆ ಹಣದ ಮಳೆ ..!

By Suvarna NewsFirst Published Aug 21, 2023, 3:24 PM IST
Highlights

ನಾಗರ ಪಂಚಮಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಾಗರ ಕಲ್ಲಿಗೆ ಹಾಲೆರೆದು ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥನೆ ಮಾಡ್ತಿದ್ದಾರೆ. ಈ ದಿನ ಆರ್ಥಿಕ ವೃದ್ಧಿಯಾಗ್ಬೇಕೆಂದ್ರೆ ಸುಲಭದ ಟ್ರಿಕ್ಸ್ ಫಾಲೋ ಮಾಡಿ. 
 

ಶ್ರಾವಣ ಮಾಸದಲ್ಲಿ ಬರುವ ನಾಗರಪಂಚಮಿಯನ್ನು ಈ ವರ್ಷ ಆಗಸ್ಟ್ 21 ರಂದು ಅಂದರೆ ಇಂದು ನಾಡಿನೆಲ್ಲಡೆ ಆಚರಿಸಲಾಗ್ತಿದೆ. ಹಬ್ಬಗಳ ಸಾಲಿನಲ್ಲಿ ಬರುವ ಮೊದಲ ಹಬ್ಬ ಇದಾಗಿದೆ. ನಾಗರಪಂಚಮಿಯಂದು ಎಲ್ಲ ಕಡೆ  ನಾಗದೇವರಿಗೆ ಹಾಲಿನ ಅಭಿಷೇಕ ನಡೆಯುತ್ತವೆ. ನಾಗದೇವರ ಆರಾಧನೆಯಿಂದ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಿಗಲಿ ಎಂದು ಬೇಡಿಕೊಳ್ಳಲಾಗುತ್ತದೆ.

ನಾಗರ ಪಂಚಮಿ (Nagar Panchami) ಯಂದು ಎಲ್ಲ ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ, ಹರಕೆಗಳು ನಡೆಯುತ್ತವೆ. ಭಕ್ತರು ಹಾಲು, ಎಳೆನೀರು, ಪಂಚಾಮೃತ ಅಭಿಷೇಕಗಳನ್ನು ಮಾಡಿ ನಾಗನನ್ನು ಪೂಜಿಸುತ್ತಾರೆ. ಸರ್ಪಭಯ ಮತ್ತು ಸರ್ಪದೋಷ ಇರುವವರು ನಾಗರಪಂಚಮಿಯಂದು ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಭಾರತವಲ್ಲದೇ ಗ್ರೀಸ್, ಜಪಾನ್, ಚೀನಾಗಳಲ್ಲಿ ಕೂಡ ನಾಗಪೂಜೆಗಳು ನಡೆಯುತ್ತವೆ ಎಂದು ಹೇಳಲಾಗುತ್ತೆ. ಕೆಲವು ಸಮುದಾಯದ ಜನರು ಜೀವಂತ ನಾಗರಹಾವುಗಳನ್ನು ಪೂಜಿಸುತ್ತಾರೆ. ಇನ್ನು ಕೆಲವರಿಗೆ ನಾಗಾರಾಧನೆ ಪರಂಪರಾಗತವಾಗಿ ಬಂದಿರುತ್ತದೆ. ವೃತ್ತಿಯಲ್ಲಿ ಯಶಸ್ಸು ಸಿಗಲಿ, ಸಂಪತ್ತು ಹೆಚ್ಚಾಗಲಿ, ಕುಟುಂಬದವರ ಆರೋಗ್ಯ ಚೆನ್ನಾಗಿರಲಿ ಎನ್ನುವ ಕಾರಣಕ್ಕೆ ನಾವು ಪೂಜೆ ಪುನಸ್ಕಾರಗಳನ್ನು ನಡೆಸುತ್ತೇವೆ. ಭಕ್ತಿಯಿಂದ ದೇವರ ಆರಾಧನೆ ಮಾಡಿದಾಗ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ.

Latest Videos

ಹಿಂದೂ (Hindu)  ಧರ್ಮದಲ್ಲಿ ಪ್ರತಿಯೊಂದು ಹಬ್ಬವೂ ಅದರದೇ ಆದ ವಿಶೇಷತೆ ಮತ್ತು ಮಹತ್ವವನ್ನು ಹೊಂದಿದೆ. ಉದಾಹರಣೆಗೆ ನವರಾತ್ರಿಯ ವಿದ್ಯಾದಶಮಿಯಂದು ವಿದ್ಯೆಗೆ ಹೆಚ್ಚು ಮಹತ್ವವಿರೋದ್ರಿಂದ ಅಂದು ಅಕ್ಷರಾಭ್ಯಾಸ ಮಾಡಿಸುತ್ತಾರೆ ಹಾಗೆಯೇ ಅಕ್ಷಯ ತೃತೀಯದಂದು ಬಂಗಾರ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತೆ ಎಂದು ಹೇಳಲಾಗುತ್ತೆ. ಧನ ಸಂಪತ್ತು ವೃದ್ಧಿಯಾಗಲೆಂದು ಲಕ್ಷ್ಮಿ ಪೂಜೆಯ ದಿನದಂದು ಹಣದ ಒಡತಿಯಾದ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಹಾಗೆಯೇ ನಾಗರಪಂಚಮಿಯಂದು ಕೂಡ ನೀವು ತ್ರಿಜೂರಿಯಲ್ಲಿ ಕೆಲ ವಸ್ತುಗಳನ್ನು ಇಡುವುದರಿಂದಲೂ ಧನಲಾಭವಾಗುತ್ತದೆ.

ಧನಸಂಪತ್ತಿನ ವೃದ್ಧಿಯಾಗಲು ನಾಗರಪಂಚಮಿಯಂದು ಹೀಗೆ ಮಾಡಿ : ನಾಗಪಂಚಮಿಯಂದು ತ್ರಿಜೂರಿಯಲ್ಲಿ ಅಡಿಕೆಯನ್ನು ಇಡಿ : ಪೂಜೆ, ಹೋಮ, ಹವನಗಳು ಏನೇ ಇದ್ದರೂ ಅದಕ್ಕೆ ಅಡಿಕೆ ಬೇಕೇ ಬೇಕು. ಹಿಂದೂ ಧರ್ಮದಲ್ಲಿ ಅಡಿಕೆಗೆ ಪೂಜನೀಯ ಸ್ಥಾನವಿದೆ. ಬಾಗಿನ, ತಾಂಬೂಲ ಮುಂತಾದವುಗಳಲ್ಲಿ ಕೂಡ ಅಡಿಕೆಯನ್ನು ಬಳಸಲಾಗುತ್ತದೆ. ನಾಗರಪಂಚಮಿಯಂದು ಮನೆಯ ತ್ರಿಜೂರಿಯಲ್ಲಿ ಅಡಿಕೆಯನ್ನಿಟ್ಟರೆ ಅದರಿಂದ ಧನಲಾಭವಾಗುತ್ತದೆ ಹಾಗೂ ಮನೆಯ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ನಾಗರಪಂಚಮಿಯಂದು ಅಡಿಕೆಗೆ ಕೆಂಪು ದಾರವನ್ನು ಸುತ್ತಿ ಮನೆಯ ತ್ರಿಜೋರಿಯಲ್ಲಿ ಇಡಬೇಕು. ನಾಗರಪಂಚಮಿಯಂದು ಅಡಿಕೆಯನ್ನು ತ್ರಿಜೂರಿಯಲ್ಲಿಡುವುದು ಅತ್ಯಂತ ಶುಭವಾಗಿದೆ. ಇದರಿಂದ ಮನೆಯಲ್ಲಿರುವ ತೊಂದರೆಗಳೆಲ್ಲ ನಿವಾರಣೆಯಾಗುತ್ತವೆ.

ಹಳದಿ ಬಣ್ಣದ ಕವಡೆಯನ್ನು ತ್ರಿಜೂರಿಯಲ್ಲಿಡಿ :  ನಾಗರಪಂಚಮಿಯಂದು ನಾಗದೇವರ ಜೊತೆಗೆ ಹಳದಿ ಬಣ್ಣದ ಕವಡೆಯನ್ನು ಕೂಡ ಪೂಜಿಸಿ ನಂತರ ಅದನ್ನು ತ್ರಿಜೂರಿಯಲ್ಲಿಡಿ. ಹಳದಿ ಬಣ್ಣದ ಕವಡೆಯನ್ನು ತ್ರಿಜೂರಿಯಲ್ಲಿ ಇಡುವುದರಿಂದ ಹಣದ ಒಡತಿಯಾದ ಲಕ್ಷ್ಮಿಯ ಕೃಪೆ ಯಾವಾಗಲೂ ನಿಮ್ಮ ಮೇಲಿರುತ್ತೆ. ಇದರಿಂದ ಮನೆಯಲ್ಲಿ ಎಂದೂ ಹಣದ ಕೊರತೆಯಾಗುವುದಿಲ್ಲ.

ಮರಣದ ನಂತರ ಏನಾಗುತ್ತೆ? ಸತ್ತ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಹೇಗೆ?

 

ದಕ್ಷಿಣಾವರ್ತಿ ಶಂಖವನ್ನು ತ್ರಿಜೂರಿಯಲ್ಲಿಡಿ :  ಪುರಾಣ ಕಾಲದಿಂದಲೂ ದಕ್ಷಿಣಾವರ್ತಿ ಶಂಖಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಇದನ್ನು ಮನೆಯಲ್ಲಿ ಇಡೋದ್ರಿಂದ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಇದರಿಂದ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ಕೂಡ ದೂರವಾಗುತ್ತವೆ. ನಾಗರಪಂಚಮಿಯಂದು ದಕ್ಷಿಣಾವರ್ತಿ ಶಂಖವನ್ನು ತ್ರಿಜೂರಿಯಲ್ಲಿಟ್ಟರೆ ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರುತ್ತದೆ. ಲಕ್ಷ್ಮಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳು ಹೇಳುತ್ತವೆ.

ಉದ್ಯೋಗದಲ್ಲಿ ಏಳ್ಗೆಯಾಗಲು ಬೆಳ್ಳಿಯ ಮೂರ್ತಿಯನ್ನು ತ್ರಿಜೂರಿಯಲ್ಲಿಡಿ : ಕೆಲವೊಮ್ಮೆ ಎಷ್ಟೇ ಶೃದ್ಧೆಯಿಂದ ಕೆಲಸ ಮಾಡಿದರೂ ವೃತ್ತಿ ಜೀವನದಲ್ಲಿ ಏಳ್ಗೆ ಇರುವುದಿಲ್ಲ. ಹೀಗೆ ಉದ್ಯೋಗ, ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿರುವವರು ನಾಗರಪಂಚಮಿಯಂದು ಬೆಳ್ಳಿಯ ಮೂರ್ತಿಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತ್ರಿಜೂರಿಯಲ್ಲಿ ಇಡಬೇಕು. ನಾಗರಪಂಚಮಿಯಂದು ಬೆಳ್ಳಿಯ ಮೂರ್ತಿಗಳನ್ನು ಹೀಗೆ ತ್ರಿಜೂರಿಯಲ್ಲಿ ಇಡೋದ್ರಿಂದ ಬ್ಯುಸಿನೆಸ್ ನಲ್ಲಿ ಲಾಭವಾಗಿ ಏಳ್ಗೆಯನ್ನು ಕಾಣಬಹುದು.
 

click me!