500 ವರ್ಷಗಳ ಬಳಿಕ ಕೇದಾರ ಯೋಗ, ನಿಮ್ಮ ರಾಶಿಗಿದೆಯಾ ಮಹಾ ಅದೃಷ್ಟ?

Published : Apr 15, 2023, 04:42 PM IST
500 ವರ್ಷಗಳ ಬಳಿಕ ಕೇದಾರ ಯೋಗ, ನಿಮ್ಮ ರಾಶಿಗಿದೆಯಾ ಮಹಾ ಅದೃಷ್ಟ?

ಸಾರಾಂಶ

ವೇದಿಕ್ ಅಸ್ಟ್ರಾಲಜಿಯಲ್ಲಿ ಕೇದಾರ ಯೋಗಕ್ಕೆ ಮಹಾನ್ ಪ್ರಾಮುಖ್ಯತೆ ಇದೆ. 500 ವರ್ಷಗಳ ಬಳಿಕ ಬರ್ತಿರೋ ಈ ಯೋಗದಿಂದ ನಿಮ್ಮ ರಾಶಿಗೆ ಅದೃಷ್ಟ ಇದೆಯಾ? ಚೆಕ್ ಮಾಡ್ಕೊಳ್ಳಿ

ಕೇದಾರ ಯೋಗ ಅಂದರೆ ಜ್ಯೋತಿಷ್ಯದಲ್ಲಿ ಮಹಾನ್ ಸ್ಥಾನ ಇರುವ ಯೋಗ. ಇದು ನಮ್ಮ ರಾಶಿಗೆ ದೊಡ್ಡ ಅದೃಷ್ಟವನ್ನೇ ತರಬಹುದು, ಇಲ್ಲವೇ ದೊಡ್ಡ ದುರಾದೃಷ್ಟ ತರಬಹುದು. ಅಂದರೆ ಒಂದೋ ಮಹಾನ್ ಅದೃಷ್ಟ ಒಲಿಯುತ್ತೆ. ಇಲ್ಲದೇ ಹೋದಾಗ ಇರೋ ಬರೋ ಅದೃಷ್ಟ, ಯೋಗಗಳೆಲ್ಲ ಕೊಚ್ಚಿಕೊಂಡು ಹೋಗೋ ಥರ ಆಗುತ್ತೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ, ಇದರ ಪ್ರಭಾವ ನಾವು ಊಹಿಸಿಕೊಂಡದ್ದಕ್ಕಿಂತೆಲ್ಲ ದೊಡ್ಡದು. ಸುಮಾರು 500 ವರ್ಷಗಳ ನಂತರ ಕೇದಾರ ಯೋಗ ರೂಪುಗೊಳ್ಳುತ್ತಿದ್ದು, ಈ ಯೋಗವು ಕೆಲವು ರಾಶಿಯ ಜನರಿಗೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಅಲ್ಲದೇ ಈ ರಾಶಿಯವರ ಬದುಕಿನಲ್ಲಿ ಅದೃಷ್ಟ ತರುತ್ತದೆ. ಏಪ್ರಿಲ್ ೨೩ರಿಂದ ಇದರ ಪ್ರಭಾವ ವಿವಿಧ ರಾಶಿಗಳ ಮೇಲಾಗುತ್ತದೆ. ಏಳು ಗ್ರಹಗಳ ಸಂಯೋಗದಿಂದ ಉಂಟಾಗುವ ಈ ಯೋಗ ವಿವಿಧ ರಾಶಿಗಳ ಮೇಲೆ ತನ್ನದೇ ಪ್ರಭಾವ ಬೀರುತ್ತದೆ. ಅದೃಷ್ಟದ ಮಳೆಯನ್ನೇ ಎದುರು ನೋಡುವ ಆ ರಾಶಿಗಳು ಯಾವುವು ಗೊತ್ತಾ?

ಮೇಷ (Aries)
ನೀವು ಯಾವುದೇ ಕೆಲಸ ಶುರು ಹಚ್ಚಿಕೊಳ್ಳಿ. ಗೆಲುವು ಕಟ್ಟಿಟ್ಟ ಬುತ್ತಿ. ಒಂಥರ ನಿಮಗೀಗ ರಾಜಯೋಗ ಬಂದಿದೆ ಅನ್ನಬಹುದು. ಹೀಗಾಗಿ ಮೇಷ ರಾಶಿಯವರಿಗೆ ಕೇದಾರ ಯೋಗ ಬಹಳ ಲಾಭದಾಯಕವಾಗಿರಲಿದೆ. ಸೂರ್ಯ, ಗುರು, ರಾಹು ಮತ್ತು ಬುಧ ಗ್ರಹಗಳು ಲಗ್ನ ಮನೆಯನ್ನು ಆಕ್ರಮಿಸಿಕೊಂಡಿದ್ದಾರೆ. ಶುಕ್ರ ಎರಡನೇ ಮನೆಯಲ್ಲಿರುತ್ತಾನೆ. ಇದರ ಜೊತೆ ಮಂಗಳ ಮತ್ತು ಚಂದ್ರರು ಮೂರನೇ ಮನೆಯಲ್ಲಿದ್ದು, ಅಲ್ಲದೇ, ಶನಿಯು ಆದಾಯದ ಮನೆಯಲ್ಲಿರುತ್ತಾನೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಸಹ ಲಾಭವಾಗುತ್ತದೆ.

ಸಿಂಹ (Leo)
ನೀವು ಈಗ ಯಶಸ್ಸು ಮತ್ತು ಅಧಿಕ ಲಾಭವನ್ನು ಪಡೆಯಲಿದ್ದೀರಿ. ಸಿಂಹ ರಾಶಿಯವರಿಗೆ ಏಳನೇ, ಒಂಬತ್ತನೇ, ಹತ್ತನೇ ಮತ್ತು ಹನ್ನೊಂದನೇ ಮನೆಗಳಲ್ಲಿ ಏಳು ಗ್ರಹಗಳ ಸಂಯೋಗವಾಗಲಿದ್ದು, ಇದರಿಂದ ಅನೇಕ ರೀತಿಯ ಪ್ರಯೋಜನ ಸಿಗಲಿದೆ. ಏಪ್ರಿಲ್ 23 ರ ನಂತರ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಒಟ್ಟಾರೆ ಬಹಳ ಒಳ್ಳೆಯ ಬೆಳವಣಿಗೆ ಆಗಲಿದೆ. ನೀವು ಊಹಿಸಿಯೂ ಇರದಂಥಾ ಒಳಿತು ನಿಮಗಾಗುತ್ತದೆ. ನಿಮ್ಮ ಬಂಧು ಬಾಂಧವರು ಹತ್ತಿರವಾಗುತ್ತಾರೆ. ಹೆಚ್ಚೆಚ್ಚು ಗೌರವ, ಸ್ಥಾನಮಾನ ಪಡೆಯುವಿರಿ. ನೀವು ಹೇಳಿದಂತೆ ಇತರರು ಕೇಳುತ್ತಾರೆ.

Panchak 2023: ಏ.15ರಿಂದ ಮೃತ್ಯು ಪಂಚಕ, ಈ ಕೆಲಸಗಳನ್ನು ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ..

ಧನು ರಾಶಿ  (Sagittarius)
ನೀವು ಇಲ್ಲೀವರೆಗೆ ಕೊಂಚ ಹೆಚ್ಚೇ ಕಷ್ಟಪಟ್ಟಿರಬಹುದು. ಈಗ ಬಡ್ಡಿಸಮೇತ ಸುಖ ಅನುಭವಿಸೋ ಯೋಗ ನಿಮಗೊದಗಿ ಬಂದಿದೆ. ಧನು ರಾಶಿಯವರಿಗೆ ಕೇದಾರ ಯೋಗದಿಂದ ಬಹಳ ಲಾಭವಾಗಲಿದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ಜೊತೆಗೆ ನಿರುದ್ಯೋಗಿಗಳಿಗೆ ಹೊಸ ಕೆಲಸದ ಆಫರ್(Offer) ಸಹ ಬರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡಲಿದೆ. ನಿಮ್ಮ ಮನೋ ಇಚ್ಛೆಯಂತೆ ಸರ್ವವೂ ನೆರವೇರಲಿದೆ.

ಮಕರ (Capricorn)
ಈ ಯೋಗವು ನಿಮ್ಮ ಆರನೇ ಮನೆಯಲ್ಲಿ ಅಂದರೆ ಸಂಪತ್ತು, ಸಂತೋಷದ(Happiness) ಮನೆಯಲ್ಲಿದೆ. ಹಾಗಾಗಿ ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಅದೇ ಸಮಯದಲ್ಲಿ, ನೀವು ಪೂರ್ವಜರ ಆಸ್ತಿಯಿಂದ ಲಾಭ ಪಡೆಯುತ್ತೀರಿ. ಅಲ್ಲದೇ, ನೀವು ನ್ಯಾಯಾಲಯ ಪ್ರಕರಣಗಳಲ್ಲಿ ಜಯ ಸಾಧಿಸುತ್ತೀರಿ. ನೀವು ಅಂದುಕೊಂಡದ್ದೆಲ್ಲ ಈಡೇರುತ್ತದೆ. ಸಂಗಾತಿಯ ಅತಿ ಪ್ರೀತಿ (Love)ನಿಮ್ಮನ್ನು ಖುಷಿಯಾಗಿಡುತ್ತದೆ. ಕೈ ಹಾಕಿದ ಕೆಲಸದಲ್ಲೆಲ್ಲ ಜಯ. ಹಾಗೇ ನೀವಂದುಕೊಳ್ಳದ ಕ್ಷೇತ್ರಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಇದರಿಂದ ನಿಮಗೆ ಪ್ರಯೋಜನವಾಗಲಿದೆ. ಭವಿಷ್ಯಕ್ಕೂ ಇದು ಪ್ರಯೋಜನಕಾರಿ.

Astrology Tips : ಲಕ್ಷ್ಮಿ ಒಲಿಯಬೇಕೆಂದ್ರೆ ಈ ವಸ್ತು ಮನೆಯಲ್ಲಿ ಇರಕೂಡದು!

PREV
Read more Articles on
click me!

Recommended Stories

Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!
ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌