ಎಂಥ ಮಂಗಳಕರ ದಿನವಾದರೂ ಈ ಬಾರಿ Akshaya Tritiyaದಂದು ವಿವಾಹಕ್ಕಿಲ್ಲ ಮುಹೂರ್ತ!

Published : Apr 13, 2023, 01:07 PM ISTUpdated : Apr 13, 2023, 01:11 PM IST
ಎಂಥ ಮಂಗಳಕರ ದಿನವಾದರೂ ಈ ಬಾರಿ Akshaya Tritiyaದಂದು ವಿವಾಹಕ್ಕಿಲ್ಲ ಮುಹೂರ್ತ!

ಸಾರಾಂಶ

ಅಕ್ಷಯ ತೃತೀಯದ ದಿನ ಅದೆಂಥ ಶುಭ ದಿನವೆಂದರೆ ಇಂದು ಯಾವುದೇ ಶುಭಕಾರ್ಯಕ್ಕೆ ಮುಹೂರ್ತ ನೋಡಬೇಕಿಲ್ಲ. ಆದರೆ, ಈ ವರ್ಷ ಮಾತ್ರ ಅಕ್ಷಯ ತೃತೀಯದ ದಿನ ವಿವಾಹಕ್ಕೆ ಯೋಗ್ಯವಾಗಿಲ್ಲ. ಇದೇಕೆ ಹೀಗೆ?

ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಬಹಳಷ್ಟು ಶುಭ ಕಾರ್ಯಗಳು ಕೈಗೂಡುವ ದಿನ ಇದು. ಈ ದಿನ ಶುಭ ಸಮಯದ ಬಗ್ಗೆ ಯಾವುದೇ ಕಾಳಜಿಯಿಲ್ಲದೆ, ಮುಹೂರ್ತ ನೋಡದೆ ಮದುವೆ ಮುಂತಾದ ಶುಭ ಕಾರ್ಯಗಳನ್ನು ಮಾಡಬಹುದು. ಆದರೆ, ಈ ವರ್ಷ ಮಾತ್ರ ಅಕ್ಷಯ ತೃತೀಯ ದಿನದಂದು ಯಾವುದೇ ಮದುವೆ ನಡೆಯುವುದಿಲ್ಲ. ಇದಕ್ಕೆ ಒಂದೇ ಒಂದು ಗ್ರಹ ಅಡ್ಡಿಯಾಗುತ್ತಿದೆ. 

ಪ್ರತಿ ವರ್ಷ ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್ 22ರಂದು ಆಚರಿಸಲಾಗುತ್ತದೆ.
ಈ ಮಂಗಳಕರ ದಿನದಂದು ಪ್ರತಿ ವರ್ಷ ಸಾವಿರಾರು ವಿವಾಹ ಸಮಾರಂಭಗಳು ಜರುಗುತ್ತವೆ. ಇಂದು ವಿವಾಹವಾದವರು ಸದಾ ಸಂತೋಷದಿಂದಿರುತ್ತಾರೆ, ಅವರ ದಾಂಪತ್ಯ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇರುವುದು ಇದಕ್ಕೊಂದು ಮುಖ್ಯ ಕಾರಣ. ಮತ್ತೊಂದು ಕಾರಣವೆಂದರೆ ಕೆಲವು ಶುಭ ಕಾರ್ಯಗಳನ್ನು ಮಾಡಲು ಯಾವುದೇ ನಿರ್ದಿಷ್ಟ ದಿನಾಂಕ ಲಭ್ಯವಿಲ್ಲದಿದ್ದರೆ, ಆ ಕಾರ್ಯಗಳನ್ನು ಅಕ್ಷಯ ತೃತೀಯದಂದು ಮಾಡಬಹುದು ಎಂಬುದು. ಅದರಲ್ಲೂ ಈ ವರ್ಷ ಅಕ್ಷಯ ತೃತೀಯದ ದಿನ 6 ಅದ್ಭುತ ಶುಭ ಯೋಗಗಳ ಸಂಯೋಗವಾಗುತ್ತಿದೆ. ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ, ತ್ರಿಪುಷ್ಕರ ಯೋಗ, ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ, ಅಮೃತ ಸಿದ್ಧಿ ಯೋಗ ಇರಲಿದೆ.

ಆದರೆ ದುರದೃಷ್ಟವಶಾತ್, ಈ ವರ್ಷ ಅಕ್ಷಯ ತೃತೀಯ ದಿನದಂದು ಮದುವೆಗಳು ನಡೆಯುವುದಿಲ್ಲ. ಏಕೆಂದರೆ ಈ ದಿನ ಮಾಂಗಲ್ಯ, ಗುರು ತಾರಾ ಅಂಶವು ಈ ಬಾರಿ ಸ್ಥಿರವಾಗಿರುತ್ತದೆ.

Mesh Sankranti 2023ಯಂದು ಸೂರ್ಯನ ಅನುಗ್ರಹಕ್ಕಾಗಿ ಈ ಸರಳ ಕೆಲಸಗಳನ್ನು ಮಾಡಿ..

ಕನ್ಯಾದಾನ
'ಅಕ್ಷಯ' ಎಂದರೆ ಅಂತ್ಯವಿಲ್ಲದ ಸಂತೋಷ, ಕಾಲಾನಂತರದಲ್ಲಿ ಕೊಳೆಯದ್ದು, ಶಾಶ್ವತ, ಯಶಸ್ವಿ ಮತ್ತು ತೃತೀಯಾ ಎಂದರೆ 'ತೃತೀಯ' ಎಂದರ್ಥ.
ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ನೀಡಿದ ದಾನವು ಕೊಡುವವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಏಕೆಂದರೆ ಅವರು ತಮ್ಮ ಒಳ್ಳೆಯ ಕಾರ್ಯಗಳಿಗಾಗಿ ಆಶೀರ್ವಾದಗಳನ್ನು ಪಡೆಯುತ್ತಾರೆ. ಆದ್ದರಿಂದ, ಈ ದಿನದಂದು ತಂದೆಯು ತನ್ನ ಮಗಳ ಕನ್ಯಾದಾನವನ್ನು ಮಾಡುತ್ತಾನೆ. ಇದರಿಂದ ಅವಳ ಜೀವನ ಮತ್ತು ಮದುವೆಯು ಅಖಂಡವಾಗಿ ಮತ್ತು ಸಂತೋಷದಿಂದ ಇರುತ್ತದೆ. ಇದರೊಂದಿಗೆ, ಅಕ್ಷಯ ತೃತೀಯ ದಿನದಂದು ವಿವಿಧ ರೀತಿಯ ಧಾನ್ಯಗಳನ್ನು ಸಹ ದಾನ ಮಾಡಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಕೊಯ್ಲು ಮಾಡಿದ ಗೋಧಿ ಬೆಳೆಯನ್ನು ಮನೆಗಳಿಗೆ ತರಲಾಗುತ್ತದೆ.

Shani Chandra In Kumbh: 3 ರಾಶಿಗಳ ಮನಸ್ಸನ್ನು ಕೆಡಿಸಿ, ಜೀವನ ನರಕವಾಗಿಸೋ ವಿಷ ಯೋಗ

ಜ್ಯೋತಿಷ್ಯ ಏನು ಹೇಳುತ್ತದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಶುಭ ಕಾರ್ಯಗಳ ಸೂಚಕ ಎಂದು ಪರಿಗಣಿಸಲಾದ ಗುರು ಗ್ರಹ ಅಕ್ಷಯ ತೃತೀಯದಂದು ಅಸ್ತವಾಗಲಿದೆ. ಈ ಕಾರಣಕ್ಕಾಗಿ, ಅಕ್ಷಯ ತೃತೀಯದ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳಲಾಗುವುದಿಲ್ಲ ಅಥವಾ ಪ್ರಾರಂಭಿಸಲಾಗುವುದಿಲ್ಲ. ಗುರು ಗ್ರಹವು ಮಾರ್ಚ್ 30ರಂದು ಅಸ್ತವಾಗಿದೆ ಮತ್ತು ಏಪ್ರಿಲ್ 28ರಂದು ಉದಯಿಸಲಿದೆ. ಆದ್ದರಿಂದ, ಎಲ್ಲಾ ಮಂಗಳ ಕೆಲಸಗಳನ್ನು ಈ ದಿನದ ನಂತರ ಮಾತ್ರ ತೆಗೆದುಕೊಳ್ಳಲಾಗುವುದು ಮತ್ತು ಅದಕ್ಕಿಂತ ಮೊದಲು ಮುಹೂರ್ತ ಇರುವುದಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ