ಜನವರಿ ಗ್ರಹ ಗೋಚರ, ಮೇಷಕ್ಕೆ ಅದೃಷ್ಟ, ಮಿಥುನಕ್ಕೆ ಕಷ್ಟ, 12 ರಾಶಿ ಶುಭ ಫಲ ಹೇಗಿದೆ?

Published : Dec 31, 2024, 12:35 PM ISTUpdated : Dec 31, 2024, 12:56 PM IST
ಜನವರಿ ಗ್ರಹ ಗೋಚರ, ಮೇಷಕ್ಕೆ ಅದೃಷ್ಟ, ಮಿಥುನಕ್ಕೆ ಕಷ್ಟ, 12 ರಾಶಿ ಶುಭ ಫಲ ಹೇಗಿದೆ?

ಸಾರಾಂಶ

2025 ವರ್ಷದ ಮೊದಲ ತಿಂಗಳು ಗ್ರಹಗಳ ಚಲನೆ ದೃಷ್ಟಿಯಿಂದ ಹೇಗಿದೆ? 12 ರಾಶಿಗಳ ಫಲಾಫಲ ಎನು ಎಂಬುದನ್ನು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ಹೇಳಿದ್ದಾರೆ.  

ಹೊಸ ವ್ಯವಹಾರಿಕ ವರ್ಷದ ನಿರೀಕ್ಷೆಗಳ ಹೊರೆಯನ್ನು ಎದುರಿಸಬೇಕಿದೆ. ಬುಧವಾರ ಶುಭಾರಂಭವಿದ್ದು ಚಂದ್ರ ಉತ್ತರ ಆಷಾಢ ಮಕರ ರಾಶಿಯಲ್ಲಿ ಶುಭ ದಾಯಕನಾಗಿದ್ದು ಧನುರ್ಮಾಸ ನಡೆಯುತ್ತಿದೆ. ರವಿಯ ತೇಜಸ್ಸು ಉತ್ತರಾಯಣಕ್ಕೆ ಶುಭದಾಯಕವಾಗಿದೆ. ಗುರುವು ಮಹಾಶುಭನಾಗಿ ವೃಷಭದಲ್ಲಿ ಹಿಮ್ಮುಖವಾಗಿ ಯೋಗ ಕಾರಕನಾಗಿರುವನು. ಶುಭ ಶುಕ್ರ ಆರೋಹಿಯಾಗಿ ಕುಂಭದ ಶನಿಯ ರಾಶಿಯಲ್ಲಿ ವೈಭವಿ ಕಾರನಾಗಿರವನು. ವೃಶ್ಚಿಕದಲ್ಲಿ ಬುಧ ಗುರು ಪರಸ್ಪರ ವೀಕ್ಷಣೆ ವ್ಯವಹಾರಿಕ ಉನ್ನತಿಯನ್ನು ಹೇಳುತ್ತಿದೆ.

ಪಾಪ ಗ್ರಹಗಳು ಶನಿ ರಾಹು ನಾ ಮುಂದು, ತಾ ಹಿಂದೆ ಎಂದು ಕುಂಭ ಮತ್ತು ಮೀನಗಳಲ್ಲಿ ಯತಿಗೊಳ್ಳಲು ಕಾತರರಾಗಿದ್ದಾರೆ. ಶನಿ ಮಾರ್ಚ್ 29ಕ್ಕೆ , ರಾಹು ಮೇ 18ಕ್ಕೆ ಕುಂಭಕ್ಕೆ ರಾಶಿ ಬದಲಾವಣೆ ಮಾಡುತ್ತವೆ. ಅಲ್ಲಿ ವರೆಗೆ ರಾಜಕೀಯದಲ್ಲಿ ಮಿತೃರರು ಯಾರು ಶತ್ರು ಯಾರು ಎಂಬುದು ಗೊತ್ತಾಗುವುದಿಲ್ಲ.

ಮೇಷ ರಾಶಿಗೆ ಆದಾಯ ಉತ್ತಮ, ಅಸಮಧಾನ ಹಾಗೇ ಇರುವುದು, ವೈರುಧ್ಯ ಸಹಿಸಿಕೊಂಡು ಹಾಗೆ ಮುಂದು ಹೋಗಿ. ನರಸಿಂಹ ದುರ್ಗಾ ಸೇವೆ ಮಾಡಿ.

ವೃಷಭ ರಾಶಿಗೆ ಅನಿರೀಕ್ಷಿತ ಶುಭ ಕಾರ್ಯಗಳು, ಆದಾಯ, ಪ್ರಯಾಣ ಇರಲಿದೆ. ವೆಚ್ಚ ಜಾಸ್ತಿಯಾಗಿರಲಿದೆ. ಶ್ರೀನಿವಾಸ ದೇವರ ಸೇವೆ ಮಾಡಿ.

ಮಿಥುನ ರಾಶಿಗೆ ಇಷ್ಟ ಕಷ್ಟಗಳ ಗೊಂದಲ. ಕೌಟುಂಬಿಕ ವಿಷಯದಲ್ಲಿ ಜಾಗೃತೆ ಬೇಕು. ಶ್ರೀ ನರಸಿಂಹ ದೇವರ ನಿತ್ಯ ಸೇವೆ ಮಾಡಿ.

ಕರ್ಕ ರಾಶಿಗೆ ಪರಿಶ್ರಮ ಹೆಚ್ಚು ಫಲ ಕಡಿಮೆ. ಗುರು ಅನುಕೂಲ ಇದ್ದೂ ಕಷ್ಟದ ತಿಂಗಳು. ಸಮಾಧಾನವಾಗಿ ಸಾಗಿರಿ. ಸ್ರೀಯರು ಜಾಗೃತೆ.

ಸಿಂಹ ರಾಶಿಗೆ ಅಧಿಕಾರ ವರ್ಗದಿಂದ ಒತ್ತಡ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಮಹಾದೇವನ ಸೇವೆ ಮಾಡಿ.

ಕನ್ಯಾ ರಾಶಿಗೆ ಬಹಳ ಏರುಪೇರುಗಳಿಲ್ಲ. ಚಿಂತೆ ಬೇಡ.ಪರಿಶ್ರಮ, ತಾಳ್ಮೆಯಿಂದ ಮುನ್ನಡೆಯಿರಿ. ಶ್ರೀ ಗುರು, ಗಣಪತಿ ಸೇವೆ ಮಾಡಿ.

ತುಲಾ ರಾಶಿಗೆ ಕಷ್ಟಗಳು ನಿವಾರಣೆಯಾಗುವ ವರ್ಷ. ಭರವಸೆ ಇರಲಿ.ನವಗ್ರಹ ಶಾಂತಿ ಪೂಜೆ, ನಾಗ ಪೂಜೆಗಳನ್ನು ಮಾಡಿ.

ವೃಶ್ಚಿಕಕ್ಕೆ ಕುಜನು ಬಾಧಕಾರಿಯಾಗಿದ್ದು, ರಕ್ತದೊತ್ತಡ ಇರಬಹುದು ಶತ್ರು ಭೀತಿಯ ವರ್ಷ ಜಾಗ್ರತೆ. ಶ್ರೀ ದುರ್ಗಾ ಸುಬ್ರಮಣ್ಯ ಸೇವೆ ಮಾಡಿ.

ಧನು ರಾಶಿಗೆ ರವಿ , ಚಂದ್ರ, ಶುಕ್ರ ಅನುಕೂಲವಾಗಿದ್ದು, ವ್ಯಾಪಾರ ಉದ್ಯೋಗ ಚೇತರಿಕೆ ಇರಲಿದೆ. ಶನಿ ಬದಲಾವಣೆ ನಿಮ್ಮ ಸ್ಥಾನಮಾನಗಳ ಮೇಲೂ ಒತ್ತಡ ಹೇರುತ್ತದೆ.

ಮಕರಕ್ಕೆ ಜನ್ಮ ಶನಿ ಪರಹಾರದ ವರ್ಷ, ಶುಭ ಕಾರ್ಯ ಪ್ರೇರಣೆ, ಆರೋಗ್ಯ ಸುಧಾರಣೆ. ಗ್ರಹ ಶಾಂತಿ ನಾಗ ಪೂಜೆಗಳಾಗಲಿ.

ಕುಂಭ ರಾಶಿಗೆ ಶನಿಯ ಬಹುತೇಕ ದೋಷ ಪರಿಹಾರ.  ಜನ್ಮ ರಾಹು ಅಲ್ಪ ದೋಷಕರ ವರ್ಷ. ನರಸಿಂಹ ದೇವರ ಸೇವೆಗಳಾಗಲಿ

ಮೀನ ರಾಶಿಗೆ ಹಲವು ಗೊಂದಲ. ಮಾನಸಿಕ ವೇದನೆ ಹೆಚ್ಚುವುದು. ತಾಳ್ಮೆ ಇರಲಿ. ಗುರುರಾಯರ ಸೇವೆ ಮಾಡಿ.

PREV
Read more Articles on
click me!

Recommended Stories

ಪೂಜೆಗೆ ಬಳಸುವ ಗಂಟೆಯಲ್ಲಿದೆ ಮಹಾನ್ ಶಕ್ತಿ, ತಪ್ಪಾಗಿ ಬಳಸಿದ್ರೆ ಕಷ್ಟ ಗ್ಯಾರಂಟಿ
ಜನಕನ ಅಳಿಯ ಶ್ರೀರಾಮನಲ್ಲವಂತೆ.. ಹಾಗಾದ್ರೆ ನಿಜವಾದ ಅಳಿಯ ಯಾರು? ಇಲ್ಲಿದೆ ರಾಮಾಯಣದ ರಹಸ್ಯ!