ಅಧಿಕಾರದ ಅಂತಸ್ತು ಬೆಳೆದಂತೆ ನೀತಿಯ ಅಂತಸ್ತು ಬೆಳೆಯಬೇಕು: ರಂಭಾಪುರಿ ಶ್ರೀ

By Kannadaprabha News  |  First Published Sep 5, 2023, 11:26 AM IST

ಮನುಷ್ಯ ಜೀವನ(ದಲ್ಲಿ ಸುಖ ಸಮೃದ್ಧಿಗಳು ಬೆಳೆದಂತೆ ಸಂಸ್ಸೃತಿಗಳು ಬೆಳೆಯಬೇಕು. ವಿದ್ಯಾ ಬುದ್ಧಿ ಬೆಳೆದಂತೆ ಹೃದಯ ವಿಕಾಸಗೊಳ್ಳಬೇಕು. ಅಧಿಕಾರದ ಅಂತಸ್ತು ಏರಿದಂತೆ ನೀತಿ, ಅಂತಸ್ತು ಬೆಳೆಯುವ ಅವಶ್ಯಕತೆಯಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.


ಬಾಳೆಹೊನ್ನೂರು (ಸೆ.5):  ಮನುಷ್ಯ ಜೀವನ(ದಲ್ಲಿ ಸುಖ ಸಮೃದ್ಧಿಗಳು ಬೆಳೆದಂತೆ ಸಂಸ್ಸೃತಿಗಳು ಬೆಳೆಯಬೇಕು. ವಿದ್ಯಾ ಬುದ್ಧಿ ಬೆಳೆದಂತೆ ಹೃದಯ ವಿಕಾಸಗೊಳ್ಳಬೇಕು. ಅಧಿಕಾರದ ಅಂತಸ್ತು ಏರಿದಂತೆ ನೀತಿ, ಅಂತಸ್ತು ಬೆಳೆಯುವ ಅವಶ್ಯಕತೆಯಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ 3ನೇ ಶ್ರಾವಣ ಸೋಮವಾರದ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ತನ್ನ ಜೀವನವನ್ನು ಸ್ವರ್ಗ ಮತ್ತು ನರಕ ಮಾಡಿಕೊಳ್ಳಲು ಅವನ ಮನಸ್ಸೇ ಮೂಲ ಕಾರಣ. ಮನಸ್ಸು ದುರ್ಬಲ ಮಾಡಿಕೊಳ್ಳದೇ ಛಲದಿಂದ ಸಮತೋಲನದಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ. ಮನುಷ್ಯ ಜೀವನದಲ್ಲಿ ಹಲವಾರು ಸಮಸ್ಯೆ ಸವಾಲುಗಳನ್ನು ಎದುರಿಸಿ ಬಾಳಬೇಕಾಗುತ್ತದೆ ಎಂದರು.

Tap to resize

Latest Videos

undefined

ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಯುವತಿ: ರಂಭಾಪುರಿ ಶ್ರೀ ಶುಭಹಾರೈಕೆ

ಆತ್ಮ ಬಲ, ಗುರು ಕಾರುಣ್ಯ ಮತ್ತು ನಿರಂತರ ಸಾಧನೆಯಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಯಾವುದೇ ಧರ್ಮದ ರಹಸ್ಯ ಅಡಗಿರುವುದು ತತ್ವ ಸಿದ್ಧಾಂತಗಳಲ್ಲಿ ಅಲ್ಲ. ಅದರಲ್ಲಿರುವ ವಿಚಾರಗಳನ್ನು ತಿಳಿದು ಅದರಂತೆ ನಡೆದಾಗಲೇ ಜೀವನ ಉನ್ನತಿಗೇರಲು ಸಾಧ್ಯ. ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ತತ್ವ ಸಿದ್ಧಾಂತಗಳನ್ನು ಬೋಧಿಸುವ ಮೂಲಕ ಬದುಕಿಗೆ ನೆಮ್ಮದಿ ಮತ್ತು ಬಲ ತಂದು ಕೊಟ್ಟಿದ್ದಾರೆ. ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ದಾರಿ ದೀಪ ಎಂದರು.

ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಜೀವನದ ಶ್ರೇಯಸ್ಸಿಗೆ ಧರ್ಮವೇ ಮೂಲ. ಅರಿವು ಆದರ್ಶಗಳ ದಾರಿಯಲ್ಲಿ ಮುನ್ನಡೆಯಲು ಗುರು ಕಾರುಣ್ಯ ಅವಶ್ಯಕ. ಶಿವ ಪಥವ ನರಿಯಲು ಮೊದಲು ಗುರು ಪಥ ಬಹಳ ಮುಖ್ಯ. ಜಗದ್ಗುರು ರೇಣುಕಾಚಾರ್ಯರ ಜನ ಹಿತಾತ್ಮಕ ಸಾಧನೆ ಬೋಧನೆಗಳು ಉಜ್ವಲ ಬದುಕಿಗೆ ಕಾರಣ ಎಂದರು.

ಸಮಾರಂಭದಲ್ಲಿ ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಕೂಡ್ಲಿಗಿ ತಾಲೂಕ ಅಲೂರು ಹಿರೇಮಠದ ಸಿದ್ಧಲಿಂಗ ಸ್ವಾಮಿಗಳು, ಉಟಗಿ ಶಿವಪ್ರಸಾದ್, ರೇವತ್‌ಗಾವ್ ವಿಶ್ವನಾಥ, ಬಬಲಾದಿ ದಾನಯ್ಯ ನುಡಿನಮನ ಸಲ್ಲಿಸಿದರು.

 

ಸ್ವಾರ್ಥವಿಲ್ಲದ ಬದುಕು ಸರ್ವ ಕಾಲಕ್ಕೂ ಶ್ರೇಷ್ಠ: ರಂಭಾಪುರಿ ಶ್ರೀ

ಲಕ್ಷ್ಮೇಶ್ವರದ ಆನಂದ ಗಡ್ಡದ್ದೇವರಮಠ, ವಿರೂಪಾಕ್ಷಯ್ಯ ಅಗಡಿ, ಬಸವಕಲ್ಯಾಣದ ಪ್ರೊ.ದಯಾನಂದ ಶೀಲವಂತರ, ಬೀದರ ಮಂಜುನಾಥ, ಬೀರೂರು ಗಂಗಾಧರ, ಸೊರಬ ತಾಲೂಕಿನ ಸದ್ಭಕ್ತ ಮಂಡಳಿ ಸೇರಿದಂತೆ ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಪ್ರಾತಃಕಾಲ ಲೋಕ ಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು. ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ನಡೆಯಿತು.

click me!