Ramayana story: ವಾಲಿ ಸುಗ್ರೀವರ ನಡುವೆ ವೈರತ್ವ ಶುರುವಾಗಿದ್ದು ಏಕೆ?

By Suvarna News  |  First Published Dec 18, 2022, 11:14 AM IST

ರಾಮಾಯಣದ ಅನೇಕ ಪ್ರಮುಖ ಪಾತ್ರಗಳಿಲ್ಲಿಬ್ಬರು ವಾಲಿ ಮತ್ತು ಸುಗ್ರೀವ. ವಾಲಿ ಶ್ರೀರಾಮನಿಂದಲೇ ಕೊಲ್ಲಲ್ಪಟ್ಟನು ಮತ್ತು ಸುಗ್ರೀವನು ಶ್ರೀರಾಮನ ಸ್ನೇಹಿತನಾಗಿದ್ದನು. ಈ ಕತೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇವರಿಬ್ಬರ ಜನ್ಮದ ಕಥೆಯೂ ಬಹಳ ವಿಚಿತ್ರವಾಗಿದೆ.


ರಾಮಾಯಣದಲ್ಲಿ ವಾಲಿ ಮತ್ತು ಸುಗ್ರೀವರ ಕತೆಯು ಜನಪ್ರಿಯವಾಗಿದೆ. ಈ ಇಬ್ಬರೂ ಬೇರೆ ಬೇರೆ ತಂದೆಯ, ಆದರೆ ಒಂದೇ ತಾಯಿಯ ಮಕ್ಕಳೆಂಬುದು ನಿಮಗೆ ಗೊತ್ತೇ? ಏನು ಈ ವಾಲಿ ಸುಗ್ರೀವರ ಕತೆ? ಶ್ರೀರಾಮನು ವಾಲಿಯನ್ನು ಕೊಂದಿದ್ದೇಕೆ? 

ರಾಮಾಯಣದ ಪ್ರಕಾರ, ವಾನರರ ರಾಜ ವಾಲಿಯು ತನ್ನ ಸಹೋದರ ಸುಗ್ರೀವನನ್ನು ತನ್ನ ರಾಜ್ಯದಿಂದ ಹೊರಹಾಕಿದನು. ವಾಲಿಗೆ ಹೆದರಿ, ಸುಗ್ರೀವ ಋಷ್ಯಮೂಕ ಪರ್ವತದಲ್ಲಿ ವಾಸಿಸಲು ಪ್ರಾರಂಭಿಸಿದನು, ಅಲ್ಲಿ ಅವನು ಶ್ರೀರಾಮನನ್ನು ಭೇಟಿಯಾದನು. ಆಗ ವಾಲಿಯನ್ನು ಕೊಂದು ಸುಗ್ರೀವನಿಗೆ ರಾಜ್ಯವನ್ನು ಮರಳಿಸಿಕೊಟ್ಟವನು ಶ್ರೀರಾಮ. ರಾಮಾಯಣದಲ್ಲಿ, ವಾಲಿಯನ್ನು ಇಂದ್ರನ ಮಗ ಮತ್ತು ಸುಗ್ರೀವನನ್ನು ಸೂರ್ಯನ ಮಗ ಎಂದು ವಿವರಿಸಲಾಗಿದೆ. ಇಬ್ಬರೂ ಬೇರೆ ಬೇರೆ ತಂದೆಯ ಮಕ್ಕಳಾಗಿದ್ದರೂ ಸಹ ಅವರು ಸಹೋದರರಾಗಿದ್ದರು. ಈ ರಹಸ್ಯದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ವಾಲಿ ಮತ್ತು ಸುಗ್ರೀವನ ಜನನದ ಕಥೆಯೂ ಬಹಳ ಆಸಕ್ತಿದಾಯಕವಾಗಿದೆ. ಈ ಇಬ್ಬರ ಜನ್ಮದ ಕಥೆಯ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ.

Tap to resize

Latest Videos

ವೃಕ್ಷರಾಜ್ ಸುಂದರ ಮಹಿಳೆಯಾದಾಗ
ಧರ್ಮಗ್ರಂಥಗಳ ಪ್ರಕಾರ, ಒಂದು ಕಾಲದಲ್ಲಿ ಋಷ್ಯಮೂಕ ಪರ್ವತದಲ್ಲಿ ಒಂದು ದೊಡ್ಡ ಕೋತಿ ವಾಸಿಸುತ್ತಿತ್ತು. ಅವನ ಹೆಸರು ವೃಕ್ಷರಾಜ್. ವೃಕ್ಷರಾಜ್ ತುಂಬಾ ಬಲಶಾಲಿಯಾಗಿದ್ದ. ಆ ಪರ್ವತದ ಬಳಿ ಒಂದು ದೊಡ್ಡ ಸರೋವರವಿತ್ತು. ಆ ಕೊಳದ ವಿಶೇಷತೆ ಏನೆಂದರೆ, ಅದರಲ್ಲಿ ಸ್ನಾನ ಮಾಡಿದವರು ಸುಂದರಿಯಾಗಿ ಬದಲಾಗುತ್ತಿದ್ದರು. ಈ ವಿಚಾರ ವೃಕ್ಷಾರಾಜ್ ಗೆ ತಿಳಿದಿರಲಿಲ್ಲ. ಒಂದು ದಿನ ಆ ಸರೋವರದಲ್ಲಿ ವೃಕ್ಷರಾಜ್ ಸ್ನಾನ ಮಾಡಿದ. ಹೊರಗೆ ಬಂದ ಕೂಡಲೇ ಆತ ಸುಂದರಿಯಾಗಿ ಬದಲಾಗಿದ್ದ.

Best Husband: ಈ 3 ರಾಶಿಗಳ ವ್ಯಕ್ತಿ ನಿಮ್ಮ ಪತಿಯಾಗಿ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು!

ದೇವರಾಜ ಇಂದ್ರನು ಆ ಸುಂದರಿಯನ್ನು ನೋಡಿದಾಗ..
ರಿಕ್ಷರಾಜನು ಹೆಣ್ಣಾದಾಗ ಒಂದು ದಿನ ದೇವರಾಜ ಇಂದ್ರನ ದೃಷ್ಟಿ ಅವನ ಮೇಲೆ ಬಿದ್ದಿತು. ಅಂತಹ ಸುಂದರ ಮಹಿಳೆಯನ್ನು ನೋಡಿದ ಇಂದ್ರನ ಮನಸ್ಸು ವಿಚಲಿತವಾಯಿತು ಮತ್ತು ಅವನ ಹೊಳಪು (ವೀರ್ಯ) ಸ್ಖಲನಗೊಂಡು ಆ ಮಹಿಳೆಯ ಕೂದಲಿನ ಮೇಲೆ ಬಿದ್ದಿತು. ಆ ವೀರ್ಯದಿಂದ ಒಂದು ವಾನರ ಹುಟ್ಟಿತು. ಕೂದಲಿನ ಮೇಲೆ ಬೀಳುವ ವೀರ್ಯದಿಂದ ಹುಟ್ಟಿದ ಕೋತಿಗೆ ವಾಲಿ ಎಂದು ಹೆಸರಿಸಲಾಯಿತು. ವಾಲಿ ಬಹಳ ಬಲಶಾಲಿಯಾಗಿದ್ದನು.

ಸೂರ್ಯದೇವನು ಆ ಸುಂದರಿಯನ್ನು ಕಂಡಾಗ..
ಸ್ವಲ್ಪ ಸಮಯದ ನಂತರ ಆ ಸುಂದರಿಯು ಋಷ್ಯಮೂಕ ಪರ್ವತದಲ್ಲಿ ವಿಹರಿಸುತ್ತಿರುವಾಗ ಸೂರ್ಯದೇವನ ಕಣ್ಣುಗಳು ಅವಳ ಮೇಲೆ ಬಿದ್ದವು. ಆ ಸುಂದರಿಯನ್ನು ನೋಡಿದ ಸೂರ್ಯ ಕೂಡ ಅವಳಿಂದ ಆಕರ್ಷಿತನಾದ. ಅವನ ಮನಸ್ಸಿನಲ್ಲಿ ಅಸ್ವಸ್ಥತೆ ಬಂದ ತಕ್ಷಣ, ಅವನು ಅವಳ ಮೇಲೆರಗಿದನು. ಅದರಿಂದ ಇನ್ನೊಂದು ಮಂಗ ಹುಟ್ಟಿತು. ಸೂರ್ಯನಿಂಜ ಜನಿಸಿದ ಕೋತಿಗೆ ಸುಗ್ರೀವ ಎಂದು ಹೆಸರಿಸಲಾಯಿತು. ಸುಗ್ರೀವನೂ ತನ್ನ ಸಹೋದರನಂತೆ ಅತ್ಯಂತ ಬಲಶಾಲಿಯಾಗಿದ್ದನು. ಹೀಗೆ ವಾಲಿ ಮತ್ತು ಸುಗ್ರೀವ ಇಬ್ಬರೂ ಬೇರೆ ಬೇರೆ ತಂದೆಯ ಮಕ್ಕಳಾಗಿದ್ದರೂ ಸಹ ಸಹೋದರರಾಗಿದ್ದರು.

ವಾರ ಭವಿಷ್ಯ: ಈ ರಾಶಿಯ ಜೀವನದಲ್ಲಿ ಹೊಸ ಪ್ರೇಮಕತೆ ಆರಂಭ, ನಿಮಗೆ ಈ ವಾರ ಹೇಗಿರಲಿದೆ?

ವಾಲಿ ಮತ್ತು ಸುಗ್ರೀವನ ನಡುವೆ ವಿವಾದ ಏಕೆ?
- ರಾಮಾಯಣದ ಪ್ರಕಾರ ದುಂದುಭಿ ಎಂಬ ರಾಕ್ಷಸನಿದ್ದ. ವಾಲಿ ಮತ್ತು ಸುಗ್ರೀವ ಇಬ್ಬರೂ ಅವನನ್ನು ಕೊಲ್ಲಲು ಹೋಗುತ್ತಾರೆ. ಆಗ ರಾಕ್ಷಸನು ಭಯದಿಂದ ದೈತ್ಯಾಕಾರದ ಗುಹೆಯಲ್ಲಿ ಅಡಗಿಕೊಂಡನು. ವಾಲಿ ಸುಗ್ರೀವನಿಗೆ ನೀನು ಗುಹೆಯ ಹೊರಗೆ ನಿಲ್ಲು, ಆ ರಾಕ್ಷಸನನ್ನು ಕೊಂದು ನಾನು ಹಿಂತಿರುಗುತ್ತೇನೆ ಎಂದು ಹೇಳಿದನು. 
- ವಾಲಿ ಬಹಳ ಹೊತ್ತಿನವರೆಗೆ ಗುಹೆಯಿಂದ ಹೊರಗೆ ಬರಲಿಲ್ಲ ಮತ್ತು ಒಂದು ದಿನ ಗುಹೆಯಿಂದ ರಕ್ತದ ಹೊಳೆ ಹರಿಯುತ್ತಿರುವುದು ಕಂಡುಬಂದಿತು. ಸುಗ್ರೀವನು ರಾಕ್ಷಸನು ತನ್ನ ಸಹೋದರನನ್ನು ಕೊಂದನೆಂದು ಭಾವಿಸಿದನು, ಆದ್ದರಿಂದ ಅವನು ರಾಕ್ಷಸ ಹೊರ ಬರಬಾರದೆಂದು ಗುಹೆಯ ಬಾಯಿಯ ಮೇಲೆ ದೊಡ್ಡ ಕಲ್ಲನ್ನು ಇರಿಸಿ ಅಲ್ಲಿಂದ ತನ್ನ ರಾಜ್ಯಕ್ಕೆ ಹಿಂತಿರುಗಿದನು.
- ಸ್ವಲ್ಪ ಸಮಯದ ನಂತರ, ವಾಲಿ ಹಿಂತಿರುಗಿದಾಗ, ಸುಗ್ರೀವನು ರಾಜನಾದುದನ್ನು ಅವನು ನೋಡಿದನು. ರಾಜ್ಯವನ್ನು ಪಡೆಯಲು ಸುಗ್ರೀವನು ಗುಹೆಯ ಬಾಯಿಗೆ ಕಲ್ಲು ಹಾಕಿದ್ದಾನೆ ಎಂದು ಅವನು ಭಾವಿಸಿದನು. ಇದನ್ನು ತಿಳಿದ ಅವನು ಸುಗ್ರೀವನನ್ನು ಹೊಡೆದು ತನ್ನ ರಾಜ್ಯದಿಂದ ಹೊರಹಾಕಿದನು.
ವಾಲಿಯ ಭಯದಿಂದಾಗಿ, ಸುಗ್ರೀವನು ತನ್ನ ಸ್ನೇಹಿತರೊಂದಿಗೆ ಋಷ್ಯಮೂಕ ಪರ್ವತದಲ್ಲಿ ವಾಸಿಸಲು ಪ್ರಾರಂಭಿಸಿದನು. ಇಲ್ಲಿ ಅವನು ಭಗವಾನ್ ಶ್ರೀರಾಮನನ್ನು ಭೇಟಿಯಾದನು ಮತ್ತು ರಾಮನು  ವಾಲಿಯನ್ನು ಕೊಂದು ಸುಗ್ರೀವನನ್ನು ಕಿಷ್ಕಿಂಧೆಯ ರಾಜನನ್ನಾಗಿ ಮಾಡಿದನು.

click me!