ರೂಪವತಿ, ಗುಣವತಿಯಾಗಿರೋ ಸ್ತ್ರೀ ಜಾತಕ ಹೇಗಿರುತ್ತೆ?

By Suvarna News  |  First Published Jan 28, 2020, 3:32 PM IST

ಕೆಲವು ಹೆಣ್ಣು ಮಕ್ಕಳಿಗೆ ರೂಪ, ಗುಣ, ಹಣ ಎಲ್ಲವನ್ನೂ ಕೊಟ್ಟಿರುತ್ತಾನೆ ದೇವರು. ಕೆಲವರಿಗೆ ಏನೂ ಇರುವುದಿಲ್ಲ. ಇದಕ್ಕೆ ಅವರ ಜಾತಕದಲ್ಲಿರುವ ಗ್ರಹ ಗತಿಗಳ ಫಲವೇ ಕಾರಣ ಎನ್ನುತ್ತೆ ಜ್ಯೋತಿಷ್ಯ.       


ಸ್ತ್ರೀಯ ಜಾತಕದಲ್ಲಿ ಸಪ್ತಮ ಭಾವದಲ್ಲಿ ಚಂದ್ರನಿದ್ದರೆ, ಸ್ತ್ರೀಯರು ಬಹಳ ರೂಪವತಿಯಾಗಿ, ಗುಣವಂತರಾಗುತ್ತಾರೆ. ಎಲ್ಲಾ ರೀತಿಯ ಸೌಭಾಗ್ಯವನ್ನೂ ಹೊಂದುತ್ತಾರೆ. ಈ ಫಲವನ್ನು ಶುಕ್ಲ ಪಕ್ಷ ಕೃಷ್ಣ ಪಕ್ಷದ ಚಂದ್ರನನ್ನು ನೋಡಿ ಹೇಳಬೇಕು. ಚಂದ್ರನು ಉಚ್ಛನಾಗಿದ್ದು, ಆ ಸ್ಥಾನವು ಸಪ್ತಮವಾಗಿದ್ದರೆ ಇದರಿಂದ ವಿಶೇಷ ಶುಭ ಫಲಗಳನ್ನು ಅನುಭವಿಸುತ್ತಾರೆ.

- ಸ್ತ್ರೀ ಜಾತಕದಲ್ಲಿ ಲಗ್ನದಿಂದ ಸಪ್ತಮದಲ್ಲಿ ರವಿ ಇದ್ದರೆ, ಅವಳು ಒಳ್ಳೆಯ ಗುಣದಿಂದ ಕೂಡಿದ ಸ್ತ್ರೀಯಾದರೂ ಗಂಡನ ಎದುರು ಕೆಟ್ಟ ಸ್ವಭಾವ ತೋರುತ್ತಾಳೆ. ಇದರಿಂದ ಗಂಡನ ಪ್ರೀತಿ ಸಿಗುವುದಿಲ್ಲ. ಇದರಿಂದ ಇವರು ಮನನೊಂದು ವ್ಯಸನಿಗಳಾಗುತ್ತಾರೆ.

Tap to resize

Latest Videos

undefined

ಬಯಸೋ ಫಲ ಸಿಗೋಕೆ ನೀವು ಯಾವ ದೇವರನ್ನು ಪೂಜಿಸಬೇಕು?

- ಲಗ್ನದಿಂದ ಸಪ್ತಮದಲ್ಲಿ ಬುಧನಿದ್ದರೆ ಅವಳ ಪತಿ ಶ್ರೀಮಂತನಾಗಿರುತ್ತಾನೆ. ದೇವರ ಮೇಲೆ ಅಪಾರ ಭಕ್ತಿಯುಳ್ಳವರೂ ಆಗುತ್ತಾನೆ. ಸ್ತ್ರೀಗೆ ಬೇಕಾಗುವ ಸೌಭಾಗ್ಯವಿದ್ದರೂ, ಇವಳು ಲೈಂಗಿಕ ಸುಖದಿಂದ ವಂಚಿತಳಾಗುತ್ತಾಳೆ. ಮೀನ ಲಗ್ನವಾಗಿ ಬುಧ ಕನ್ಯಾದಲ್ಲಿ ಉಚ್ಛನಾಗಿದ್ದರೆ ಈ ಫಲ ಖಂಡಿತವಾಗಿಯೂ ಬಂದೇ ಬರುತ್ತದೆ.

- ಸ್ತ್ರೀ ಜಾತಕದ ಸಪ್ತಮದಲ್ಲಿ ಶನಿ ಇದ್ದರೆ ಅಂಥವರ ಪತಿ ಅನಾರೋಗ್ಯ ಪೀಡಿತನು, ಶುಚಿತ್ವ ಇಲ್ಲದವನು, ಎಲ್ಲ ರೀತಿಯಿಂದ ದುರ್ಬಲನೂ ಆಗಿರುತ್ತಾನೆ. ಮೇಷ ಲಗ್ನಕ್ಕೆ ಶನಿ ಉಚ್ಛವಾಗಿ, ತುಲಾದಲ್ಲಿದ್ದರೆ ಇಂತಹ ಜಾತಕರಿಗೆ ಅವರ ಗಂಡ ಬಹಳ ಶ್ರೀಮಂತನಾಗಿರುತ್ತಾನೆ ಎಂದು ಕೆಲವು ಜ್ಯೋತಿಷ್ಯರು ಹೇಳುತ್ತಾರೆ.

- ಸ್ತ್ರೀಯರ ಜಾತಕದಲ್ಲಿ ಶುಕ್ರನು ಸಪ್ತಮದಲ್ಲಿರುವಾಗ ಜನಿಸಿದವರು ಕಲೆಯಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ. ಸಂಗೀತದಲ್ಲಿ ನಿಪುಣರಾಗಿದ್ದು, ಮನಸ್ಸು ಚಂಚಲವಾಗಿರುತ್ತದೆ. ಒಳ್ಳೆ ಬಟ್ಟೆಗಳನ್ನು ಧರಿಸುತ್ತಾರೆ. ಇವರಿಗೆ ಉದಾರ ಗುಣ ಇರುವ ಗಂಡ ಸಿಗುತ್ತಾನೆ. ಇವರು ಕಾಮುಕರಾಗಿರುತ್ತಾರೆ. ಕನ್ಯಾ ಲಗ್ನವಾಗಿದ್ದು ಸಪ್ತಮದಲ್ಲಿ ಅಂದರೆ ಮೀನದಲ್ಲಿ ಶುಕ್ರ ಉಚ್ಛವಾಗಿರುತ್ತಾರೆ, ಈ ಸಮಯದಲ್ಲಿ ಜನಿಸಿದವರು ಮೇಲಿನ ಫಲಗಳನ್ನು ವಿಶೇಷವಾಗಿ ಅನುಭವಿಸುತ್ತಾರೆ.

ಜಾತಕದಲ್ಲಿ ಸಂತಾನ ಯೋಗ, ದೋಷವಿದ್ದರೆ ಇಲ್ಲಿದೆ ಪರಿಹಾರ

- ಜಾತಕದಲ್ಲಿ ಸಪ್ತಮದಲ್ಲಿ ಕುಜನಿದ್ದರೆ ಆ ಸ್ತ್ರೀಯು ಒಳ್ಳೆಯ ಕುಲದಲ್ಲಿ ಹುಟ್ಟಿದವರಾದರೂ, ವಾರಾಂಗನೆಯಾಗುತ್ತಾರೆ. ಮಕರ ಲಗ್ನವಾಗಿ ಸಪ್ತಮದಲ್ಲಿ ಕುಜನಿದ್ದರೂ ಕುಂಭ ಲಗ್ನವಾಗಿ ಸಪ್ತಮವಾದ ಸಿಂಹದಲ್ಲಿ ಕುಜ ಶನಿಯೊಡನೆ ಇದ್ದರೆ ಅಂತಹ ಸ್ತ್ರೀಯರು ವಿಧವೆಯಾಗುತ್ತಾರೆ.

-  ಸಪ್ತಮದಲ್ಲಿ ಗುರು ಇದ್ದರೆ ಆ ಸ್ತ್ರೀಯು ಒಳ್ಳೆಯ ಗುಣವಂತರಾಗುತ್ತಾರೆ. ಧರ್ಮದ ಬಗ್ಗೆ ತಿಳಿದವಳೂ, ಪತಿವ್ರತೆಯೂ ಆಗಿರುತ್ತಾಳೆ. ಸಪ್ತಮವು ಕರ್ಕಾಟಕ ಸ್ಥಾನವಾಗಿ ಅಲ್ಲಿ ಗುರು ಇರುವಾಗ ಜನಿಸಿದವರು ಮೇಲಿನ ಫಲವನ್ನು ವಿಶೇಷವಾಗಿ ಅನುಭವಿಸುತ್ತಾರೆ.

- ಸಪ್ತಮದಲ್ಲಿ ರಾಹು ಕೇತು ಇರುವ ಸ್ತ್ರೀ ತಮ್ಮ ಕುಲಕ್ಕೆ ಕೆಟ್ಟ ಹೆಸರು ತರುತ್ತಾಳೆ. ಇವರಿಗೆ ಸುಖ ಎಂಬುವುದೇ ಇರುವುದಿಲ್ಲ. ಸಪ್ತಮದಲ್ಲಿ ರಾಹು ಉಚ್ಛವಾಗಿದ್ದರೆ ಅಂತಹ ಸ್ತ್ರೀಯರಿಗೆ ಗಂಡನ ಸುಖ ಸಿಗುತ್ತದೆ.

- ಸಪ್ತಮ ರಾಶಿಯಲ್ಲಿ ಬುಧ, ಶನಿಗಳಿರುವ ಸ್ತ್ರೀಯ ವೈವಾಹಿಕ ಜೀವನ ಸುಖಕರವಾಗಿರುವುದಿಲ್ಲ. ಸಪ್ತಮದಲ್ಲಿ ಶುಕ್ರ ಪಾಪ ಗ್ರಹಗಳೊಂದಿಗಿದ್ದರೆ, ಸ್ತ್ರೀಗೆ ಸುಖ ಕೊಡಲು ಅಸಾದ್ಯವಾಗಿರುತ್ತದೆ. ಸ್ತ್ರೀಯರ ಜಾತಕದಲ್ಲಿ ಸಪ್ತಮ ಭಾವದಲ್ಲಿ ಅಶುಭ ಗ್ರಹಗಳಿದ್ದರೆ, ಇವರು ಮೊದಲನೇ ಗಂಡನನ್ನು ಬಿಡುವಂತಾಗುತ್ತದೆ. ಸ್ತ್ರೀಯರ ಲಗ್ನದಿಂದ ಏಳನೇ ಮನೆಯ ಅಧಿಪತಿಯನ್ನು ರಾಹು ಪೀಡಿತನಾಗಿದ್ದರೆ, ಅಂಥವರು ಗಂಡ ಮತ್ತೊಂದು ಹೆಣ್ಣಿನ ಸಂಪರ್ಕದಲ್ಲಿ ಇರುತ್ತಾನೆ. ಸ್ತ್ರೀಯರ ಲಗ್ನದ ಸಪ್ತಮದಲ್ಲಿ ದುರ್ಬಲ ಪಾಪ ಗ್ರಹಗಳಿದ್ದರೆ, ಅದಕ್ಕೆ ಶುಭ ಗ್ರಹಗಳ ದೃಷ್ಟಿ ಇದ್ದರೆ ಅಂಥ ಸ್ತ್ರೀಯರು ಗಂಡನನ್ನು ಬಿಡುತ್ತಾರೆ. ಸ್ತ್ರೀಯರ ಸಪ್ತಮ ಗ್ರಹಕ್ಕೆ ಯಾವುದೇ ಶುಭ ದೃಷ್ಟಿ ಇಲ್ಲದಿದ್ದರೆ, ಸಪ್ತಮದಲ್ಲಿ ಪಾಪಗ್ರಹ ಇದ್ದರೆ ಅಂತಹ ಸ್ತ್ರೀಯರು ವಿಧವೆಯಾಗುವ ಸಂಭವ ಇದೆ.

-ಡಾ| ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ            

click me!