ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ?

By Kannadaprabha News  |  First Published Jan 26, 2020, 3:42 PM IST

ಹಿಂದಿನವರು ಆಚರಿಸುತ್ತಿದ್ದ ಪ್ರತಿಯೊಂದೂ ಆಚರಣೆಯೂ ತನ್ನದೇ ಆದ ಅರ್ಥ ಪಡೆದುಕೊಂಡಿದೆ. ಅದೇ ಇದೀಗ ವಿಭಿನ್ನ ರೂಪ ಪಡೆದುಕೊಂಡು ವಿದೇಶದಲ್ಲಿಯೂ ಆಚರಿಸಲಾಗುತ್ತಿದೆ. ಅದರಲ್ಲಿ ಬಸ್ಕಿ ಹೊಡೆಯುವುದೂ ಒಂದು. ದೇವರ ಮುಂದೆ ಬಸ್ಕಿ ಹೊಡೆಯುವ ಅಭ್ಯಾಸ ಇದೀಗ ಬ್ರೈನ್ ಯೋಗವೆಂದು ಫೇಮಸ್ ಆಗುತ್ತಿದೆ.


ದೇವಸ್ಥಾನಗಳಲ್ಲಿ ಬಹಳ ಜನರು ಎರಡೂ ಕೈಹಿಡಿದು ಬಸ್ಕಿ ಹೊಡೆಯುತ್ತಾರೆ. ಶಾಲೆಯಲ್ಲಿ ತಪ್ಪು ಮಾಡುವ ಹಿದ್ಯಾರ್ಥಿಗಳಿಗೆ ಶಿಕ್ಷಕರು ಬಸ್ಕಿ ಹೊಡೆಸುತ್ತಾರೆ. ಇದಕ್ಕೆ ಉಟಾಬೈಸ್, ಉಟಕ್-ಬೈಠಕ್, ತಪ್ಪು ಕಾರಣಮ್ ಮುಂತಾದ ಹೆಸರುಗಳಿವೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ.

ದೇವರೆದುರು ಬಸ್ಕಿ ಹೊಡೆಯುವುದು ಪಶ್ಚಾತ್ತಾಪ ಪಡುವ ಒಂದು ಮಾರ್ಗ.ಬಸ್ಕಿಯಿಂದ ನಮ್ಮ ಮೆದುಳಿನ ನೆನಪಿನ ಕೋಶಕ್ಕೆ ರಕ್ತದ ಚಲನೆ ಹೆಚ್ಚುತ್ತದೆ. ಮೆದುಳಿನ ಎಡ ಹಾಗೂ ಬಲ ಭಾಗಗಳು ಒಂದಕ್ಕೊಂದು ಹೊಂದಾಣಿಕೆ ಮಾಡಿಕೊಂಡು ಚುರುಕಾಗಿ ಕೆಲಸ ಮಾಡಿ, ಇಡೀ ದೇಹದ ನರವ್ಯವಸ್ಥೆಯನ್ನು ಪ್ರಚೋದಿಸುತ್ತವೆ. ಇದರಿಂದ ಪ್ರಯೋಜನವೇನು ಅಂದರೆ, ಹೀಗೆ ಮಾಡುವಾಗ ನಾವು ಯಾವುದಕ್ಕೆ ಕ್ಷಮೆ ಕೇಳುತ್ತಿದ್ದೇವೋ ಆ ತಪ್ಪನ್ನು ನೆನೆಯುತ್ತೇವಲ್ಲ, ಅದು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಮತ್ತೊಮ್ಮೆ ಆ ತಪ್ಪು ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ. 

Latest Videos

undefined

ರುದ್ರಾಕ್ಷಿ ಧರಿಸುವುದರಿಂದ ಲಾಭವೇನು?

ಇದೇ ಕಾರಣಕ್ಕೆ ಶಾಲೆಯಲ್ಲಿ ಶಿಕ್ಷಕರು ಶಿಕ್ಷೆ ಕೊಡುವಾಗ ಹಿೀಗೆ ಬಸ್ಕಿ ಹೊಡೆಸುತ್ತಾರೆ. ಅದರಿಂದ ಮಕ್ಕಳು ತಾವು ಮಾಡಿದ ತಪ್ಪನ್ನು ನೆನಪಿಟ್ಟುಕೊಂಡು ತಿದ್ದಿಕೊಳ್ಳುತ್ತಾರೆ. ಈ ಶಿಕ್ಷಾಕ್ರಮ ಭಾರತದ ಪ್ರಾಚೀನ ಗುರುಕುಲ ಪದ್ಧತಿಯ ಕೊಡುಗೆ.

ಅಮೆರಿಕದಲ್ಲಿ ’ಸೂಪರ್ ಬ್ರೇನ್ ಯೋಗ’ಕ್ಕೆ ಸಂಬಂಧಿಸಿದ ಹಾಗೆ ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಬಸ್ಕಿಯೂ ಒಂದು. ಬಲಗೈಯಿಂದ ಎಡಗೈಯನ್ನು ಹಾಗೂ ಎಡಗೈಯಿಂದ ಬಲಗೈಯನ್ನು  ಹಿಡಿದುಕೊಂಡು ಕುಳಿತು ಮೇಲೇಳುವಾಗ, ಕಿಹಿಯಲ್ಲಿರುವ ನರಗಳ ಸಂಜ್ಞೆಗಳು ಹಿುದುಳಿಗೆ ರವಾನೆಯಾಗುತ್ತವೆ. ಎಡಗೈನ ನರಸಂಜ್ಞೆಗಳು ಮೆದುಳಿನ ಬಲ ಅರೆಗೋಳಕ್ಕೆ ಹಾಗೂ ಬಲಗೈನ ನರಸಂಜ್ಞೆಗಳು ಎಡ ಅರೆಗೋಳಕ್ಕೆ ರವಾನೆಯಾಗುತ್ತವೆ. ಈ ಎರಡೂ ಅರೆಗೋಳಗಳ ನರ ಚಟುವಟಿಕೆಯಲ್ಲಿ ಹೊಂದಾಣಿಕೆ ಕಂಡು ಬಂದು ಮೆದುಳು ಪ್ರಧಾನವಾಗಿ ಆಲ್ಫ ಅಲೆಗಳನ್ನು ಉತ್ಪಾದಿಸುವುದನ್ನು ಇಇಜಿ ದಾಖಲಿಸಿದೆ. ಆಲ್ಫಾ ಅಲೆಗಳು ಒತ್ತಡವನ್ನು ನಿಯಂತ್ರಿಸುತ್ತವೆ. ಆತಂಕವನ್ನು ಕಡಿಮೆ ಮಾಡುತ್ತವೆ.

ಹಳೆ ಆಚಾರ, ಹೊಸ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮನಸ್ಸನ್ನು ಪ್ರಶಾಂತವಾಗಿಸುತ್ತವೆ. ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ನೆರವಾಗುತ್ತವೆ. ಹಾಗಾಗಿ ಬಸ್ಕಿಯನ್ನು ಸಾಮಾನ್ಯ ಮನುಷ್ಯರ ಜೊತೆಯಲ್ಲಿ ಪ್ರಧಾನವಾಗಿ ಮನೋದೈಹಿಕ ವೈಪರೀತ್ಯಗಳಿಂದ ಬಳಸುವ ಹಿದ್ಯಾರ್ಥಿಗಳಿಗೆ ಹಿಶೇಷವಾಗಿ ಹೊಡೆಸುತ್ತಾರೆ. 

- ಮಹಾಬಲ ಸೀತಾಳಬಾವಿ

click me!