3 ತಿಂಗಳು 20 ದಿನ ತುತ್ತು ಆಹಾರ ಸೇವಿಸದೇ ಕಠಿಣ ಉಪವಾಸ ಮಾಡಿದ 16 ವರ್ಷದ ಸುಂದರಿ

By Sushma Hegde  |  First Published Oct 30, 2023, 1:09 PM IST

ಮುಂಬೈನ ಕಂಡಿವಲಿಯ ಗುಜರಾತಿ ಕುಟುಂಬದ 16 ವರ್ಷದ ಹುಡುಗಿ ಮೂರು ತಿಂಗಳು ಮತ್ತು 20 ದಿನಗಳ ಕಾಲ ನಿರಂತರವಾಗಿ ಆಹಾರವಿಲ್ಲದೆ ಉಳಿದು 110 ದಿನಗಳ ಕಠಿಣ ಉಪವಾಸವನ್ನು ಪೂರ್ಣಗೊಳಿಸಿದಳು .


ಮುಂಬೈನ ಕಂಡಿವಲಿಯ ಗುಜರಾತಿ ಕುಟುಂಬದ 16 ವರ್ಷದ ಹುಡುಗಿ ಮೂರು ತಿಂಗಳು ಮತ್ತು 20 ದಿನಗಳ ಕಾಲ ನಿರಂತರವಾಗಿ ಆಹಾರವಿಲ್ಲದೆ ಉಳಿದು 110 ದಿನಗಳ ಕಠಿಣ ಉಪವಾಸವನ್ನು ಪೂರ್ಣಗೊಳಿಸಿದಳು . ಈ ಸಾಧನೆಯನ್ನು ಆಚರಿಸಲು ಕುಟುಂಬವು ಅದ್ಧೂರಿ ಆಚರಣೆಯನ್ನು ಆಯೋಜಿಸಿದೆ. ಕೆಲವು ಸಾಧುಗಳು ಮತ್ತು ಸಾಧ್ವಿಗಳು ಇಂತಹ ತಪಸ್ಸು ಮಾಡಿದ್ದರೂ ಚಿಕ್ಕ ಹುಡುಗಿಯೊಬ್ಬಳು ಇಷ್ಟು ದಿನ ಉಪವಾಸ ಮಾಡುವುದು ದೊಡ್ಡ ವಿಷಯ ಎಂದು ಜೈನಗುರುಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಜುಲೈ 11 ರಂದು 16 ದಿನಗಳ ಉಪವಾಸದ ಪ್ರತಿಜ್ಞೆಯೊಂದಿಗೆ ಕ್ರಿಶಾ ಇಂತಹ ಸುದೀರ್ಘ ಉಪವಾಸ ಪ್ರಾರಂಭವಾಯಿತು.

ಕ್ರಿಶಾ ಉಪವಾಸವನ್ನು ಪ್ರಾರಂಭಿಸಲು ಅನುಮತಿಗಾಗಿ ತನ್ನ ಗುರು ಮುನಿ ಪದ್ಮಕಲಶ ಮಹಾರಾಜರನ್ನು ಸಂಪರ್ಕಿಸಿದಳು. ಬೆಳಿಗ್ಗೆ 9 ರಿಂದ ಸಂಜೆ 6.30 ರ ನಡುವೆ ಮಾತ್ರ ಕುದಿಸಿದ ನೀರನ್ನು ಸೇವಿಸುತ್ತಿದ್ದಳು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿರುವುದರಿಂದ  ಈ ಉಪವಾಸವನ್ನು ಜುಲೈ 10 ರವರೆಗೆ ವಿಸ್ತರಿಸಲು ನಿರ್ಧಾರ ಮಾಡಿದರು. ಕ್ರಿಶಾ ಅವರ ತಂದೆ ಜಿಗರ್ ಷಾ ಸ್ಟಾಕ್ ಬ್ರೋಕರ್ ಆಗಿದ್ದರೆ, ಆಕೆಯ ತಾಯಿ ಗೃಹಿಣಿ.  ಈ ಉಪವಾಸದ ಮೊದಲು ಕ್ರಿಶಾ ಒಂಬತ್ತು ವರ್ಷದವಳಿದ್ದಾಗ ಎಂಟು ದಿನಗಳ ಕಾಲ ಉಪವಾಸ ಮಾಡಿದ್ದಳು ಎಂದು ಶಾ ಕುಟುಂಬ ಹೇಳಿದೆ.

Tap to resize

Latest Videos

undefined

2024 ರಲ್ಲಿ ಸೂರ್ಯ ಚಂದ್ರ ಗ್ರಹಣ ಯಾವಾಗ..? ಭಾರತದಲ್ಲಿ ಎಷ್ಟು ಗ್ರಹಣ ಸಂಭವಿಸುತ್ತೆ..?

ಕ್ರಿಶಾ 26 ದಿನಗಳ ಉಪವಾಸದ ನಂತರ ಅವರು 31 ದಿನಗಳ ಗುರಿಯನ್ನು ಇಟ್ಟುಕೊಂಡಳು. ಇದಾದ ಕೆಲವೇ ದಿನಗಳಲ್ಲಿ ಗುರಿ 51 ದಿನಗಳಿಗೆ ಬದಲಾಯಿತು.  51 ದಿನಗಳ ಉಪವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಮತ್ತೆ 20 ದಿನಗಳ ಉಪವಾಸ ಮಾಡಲು ನಿರ್ಧರಿಸಿದರು. ಕ್ರಿಶಾ ಶಾ ಕಾಂದಿವಲಿಯ ಕೆಇಎಸ್ ಕಾಲೇಜಿನ 11ನೇ ತರಗತಿ ವಿದ್ಯಾರ್ಥಿನಿ.

ಕ್ರಿಶಾ ಅವರ 71 ದಿನಗಳ ಉಪವಾಸದ ನಂತರ, ಆಕೆಯ ಮಾರ್ಗದರ್ಶಕರು 108 ದಿನಗಳ ಕಠಿಣ ಗುರಿಯನ್ನು ಸಾಧಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹೀಗೆ  ಗುರುಗಳ ಆಶೀರ್ವಾದದಿಂದ  ತನ್ನನ್ನು ತಾನೇ ಮುಂದಕ್ಕೆ ತಳ್ಳಿಕೊಂಡು 110 ದಿನಗಳ ಉಪವಾಸವನ್ನು ಮುಗಿಸಿದ್ದಾಳೆ ಕ್ರಿಶಾ.

click me!