Olavina nildana: ದೀಪಕ್ಕೆ ಭೇದ ಭಾವ ಇಲ್ಲ ಅಂತಿದ್ದಾನೆ ಸಿದ್ಧಾಂತ್, ಹಾಗಿದ್ದರೆ ದೇವರಿಗೆ ಹಚ್ಚೋ ದೀಪದ ಮಹತ್ವವೇನು?

Published : May 02, 2023, 12:03 PM IST
Olavina nildana: ದೀಪಕ್ಕೆ ಭೇದ ಭಾವ ಇಲ್ಲ ಅಂತಿದ್ದಾನೆ ಸಿದ್ಧಾಂತ್, ಹಾಗಿದ್ದರೆ ದೇವರಿಗೆ ಹಚ್ಚೋ ದೀಪದ ಮಹತ್ವವೇನು?

ಸಾರಾಂಶ

ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಹೊಸತಾಗಿ ಮನೆಗೆ ಬಂದ ತನ್ನ ಹೆಂಡತಿಗೆ ಸಿದ್ಧಾಂತ್ ಸಾಂಪ್ರದಾಯಿಕವಾಗಿ ವೆಲ್‌ಕಂ ಮಾಡ್ತಿದ್ದಾನೆ. ಹಾಗೇ ದೀಪಕ್ಕೆ ಭೇದ ಭಾವ ಇಲ್ಲ ಅಂದಿದ್ದಾನೆ. ಹಾಗಿದ್ದರೆ ದೀಪದ ಮಹತ್ವ ಏನು?

ಒಲವಿನ ನಿಲ್ದಾಣ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್. ಈ ಧಾರಾವಾಹಿಗೆ ಈಗ ಹೊಸ ತಿರುವು ಲಭಿಸಿದೆ. ತಾರಿಣಿ ಕೊರಳಿಗೆ ಸಿದ್ಧಾಂತ್ ತಾಳಿ ಕಟ್ಟಿದ್ದಾನೆ. ದೇವಸ್ಥಾನದಲ್ಲಿ ಸಿದ್ಧಾಂತ್ ತಾರಿಣಿ ಮದುವೆ ನೆರವೇರಿದೆ. ಸಿದ್ಧಾಂತ್ ತಾರಿಣಿಗೆ ತಾತ ರಾಜಶೇಖರ್ ಹೊಸಹಳ್ಳಿ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಹಾಗೂ ತಾರಿಣಿಗೆ ತಾತ ರಾಜಶೇಖರ್ ಹೊಸಹಳ್ಳಿ ಆಶೀರ್ವಾದ ಮಾಡುತ್ತಾರೆ. 'ಯಾವುದೇ ಸಂದರ್ಭದಲ್ಲೂ ಒಬ್ಬರನ್ನೊಬ್ಬರು ಬಿಟ್ಟು ಕೊಡಲ್ಲ’ ಅಂತ ಇಬ್ಬರೂ ಪ್ರಮಾಣ ಮಾಡುತ್ತಾರೆ. 'ಯಾರೇ ಏನೇ ಕುತಂತ್ರ ಮಾಡಿದರೂ, ನಿಮ್ಮಿಬ್ಬರನ್ನ ಬೇರೆ ಮಾಡೋಕೆ ಆಗಲ್ಲ’ ಅಂತ ರಾಜಶೇಖರ್ ಹೊಸಹಳ್ಳಿ ಆಶೀರ್ವಾದ ನೀಡುತ್ತಾರೆ. ಆನಂತರ ನವ ದಂಪತಿ ತಾರಿಣಿ - ಸಿದ್ಧಾಂತ್‌ನ ಕರೆದುಕೊಂಡು ಊರಿಗೆ ಹೊರಡುತ್ತಾರೆ ರಾಜಶೇಖರ್ ಹೊಸಹಳ್ಳಿ. ಅಲ್ಲಿ ಸಾಕಷ್ಟು ಹೈ ಡ್ರಾಮಾ ನಡೆದು ಇದೀಗ ಸಿದ್ಧಾಂತ ಮನದನ್ನೆಯಾಗಿ ಮನೆಯೊಡತಿಯಾಗಿ ತಾರಿಣಿ ಬಂದಿದ್ದಾಳೆ.

ಮದುವೆ ಸಿಂಪಲ್‌ ಆಗಿ, ಅರ್ಥಪೂರ್ಣವಾಗಿ ದೇವಸ್ಥಾನದಲ್ಲಿ ಆಗಿದೆ. ಇದೀಗ ತಾರಿಣಿ ಸಿದ್ಧಾಂತ ಮನೆಗೆ ಬಂದಿದ್ದಾಳೆ. ಹೊಸದಾಗಿ ಮನೆಗೆ ಬಂದ ಹೆಂಡತಿಯನ್ನು ಸಂಪ್ರದಾಯದ ಪ್ರಕಾರ ಅರ್ಥಪೂರ್ಣವಾಗಿ ಮನೆ ತುಂಬಿಸಿಕೊಳ್ಳಬೇಕು, ಇಲ್ಲವಾದರೆ ಜೀವನ ಪರ್ಯಂತ ಗಿಲ್ಟ್ ಪಡಬೇಕಾಗುತ್ತೆ ಅನ್ನೋದು ಸಿದ್ಧಾಂತ್‌ ಮನಸ್ಥಿತಿ. ಮನೆಯಲ್ಲೇ ಡಬ್ಬಗಳಲ್ಲೆಲ್ಲ ಹುಡುಕಿ, ಅಕ್ಕಿ, ಬೆಲ್ಲ ತಂದು ಹೊಸ್ತಿಲಲ್ಲಿ ಇಡುತ್ತಾನೆ. ಹಾಗೇ ದೀಪವನ್ನೂ ಸಿದ್ಧಮಾಡಿ ತಾರಿಣಿಯನ್ನು ಆರತಿ ಮಾಡಿ ಒಳಗೆ ಕರೆದುಕೊಳ್ಳಬೇಕು ಅಂದುಕೊಳ್ಳುವಾಗ ತಾರಿಣಿ, 'ಇದೇನು ಸಿದ್ಧಾಂತ್?' ಅಂತ ಪ್ರಶ್ನೆ ಮಾಡುತ್ತಾಳೆ. ಆಗ ಸಿದ್ಧಾಂತ್ ತನ್ನ ತಂದೆ ದೀಪದ ಬಗ್ಗೆ ಹೇಳ್ತಿದ್ದ ಮಾತನ್ನು ನೆನಪು ಮಾಡಿಕೊಳ್ತಾನೆ. 'ದೀಪಕ್ಕೆ ಯಾವುದೇ ಭೇದ ಭಾವ ಇಲ್ಲ ಅಂತ ಅಪ್ಪ ಹೇಳ್ತಿದ್ರು. ಈ ದೀಪ ಈಗ ನಮ್ಮನೆ ದೀಪವನ್ನು ವೆಲ್ಕಂ ಮಾಡ್ತಿದೆ' ಅಂತ ತನ್ನ ಪ್ರೀತಿಯ ಪತ್ನಿ ತಾರಿಣಿಗೆ ತಾನೇ ಸ್ವತಃ ಆರತಿ ಮಾಡುತ್ತಾನೆ.

Olavina nildana: ಮಕ್ಕಳೇ ಸರ್ವಸ್ವ ಅಂತ ಪ್ರೀತಿಸೋ ಪೋಷಕರು ಅವರ ಸ್ವಾತಂತ್ರ್ಯ ಕಸಿಯೋದು ಸರೀನಾ?

ಹಾಗೆ ನೋಡಿದರೆ ನಮ್ಮ ಸಂಪ್ರದಾಯದಲ್ಲಿ ಆರತಿಗೆ, ದೀಪಕ್ಕೆ(Lamp) ಅದರದೇ ಆದ ಮಹತ್ವ ಇದೆ. ಆರತಿ ಮಾಡುವ ತಟ್ಟೆಯಲ್ಲಿ ತುಪ್ಪ ಮತ್ತು ಕರ್ಪೂರವನ್ನಿಟ್ಟು ಹತ್ತಿಯೊಂದಿಗೆ ಬೆಳಗಿದಾಗ, ಅದ್ಭುತ ಸುವಾಸನೆಯು ವಾತಾವರಣದಲ್ಲಿ ಹರಡುತ್ತದೆ. ಈ ಅದ್ಭುತ ಸುವಾಸನೆಯು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ಸಹಕರಿಸುತ್ತದೆ. ಮತ್ತು ಪರಿಸರದಲ್ಲಿ ಸಕಾರಾತ್ಮಕ ಶಕ್ತಿಯು(Negative energy) ಪರಿಚಲನೆಗೊಳ್ಳಲು ಪ್ರಾರಂಭಿಸುತ್ತದೆ. ಮನೆಯಲ್ಲಿ ಅಥವಾ ಪೂಜೆ ಸ್ಥಳದಲ್ಲಿ ನಾವು ತುಪ್ಪ, ಕರ್ಪೂರ ಮತ್ತು ಹತ್ತಿಯೊಂದಿಗೆ ಆರತಿಯನ್ನು ಮಾಡಿದಾಗ ಕೇವಲ ಅದರ ಸುವಾಸನೆಯೊಂದೇ ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು, ನಮ್ಮೊಳಗಿನ ನಕಾರಾತ್ಮಕತೆಯನ್ನು ಕೂಡ ದೂರಾಗಿಸುತ್ತದೆ ಎಂಬ ನಂಬಿಕೆ ಇದೆ.

ಆರತಿಯಲ್ಲಿ ನಮ್ಮ ಆಂತರಿಕ ಮನಸ್ಸನ್ನು ಜಾಗೃತೆಗೊಳಿಸುವ ಶಕ್ತಿಯಿದೆ(Power). ಮನಸ್ಸಿನಲ್ಲಿ ನಡೆಯುತ್ತಿರುವ ದ್ವಂದ್ವವನ್ನು ಇದು ಕೊನೆಗೊಳಿಸುತ್ತದೆ. ಆತ್ಮವನ್ನು ಜಾಗೃತಗೊಳಿಸುತ್ತದೆ. ಯಾವಾಗ ನಮ್ಮ ಆತ್ಮ ಜಾಗೃತಗೊಳ್ಳುತ್ತದೆಯೋ ಆಗ ನಮ್ಮ ಮನಸ್ಸು(Mind) ಮತ್ತು ದೇಹ ಶಕ್ತಿಯುತವಾಗುತ್ತದೆ ಎಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

Bhagyalaxmi serial : ಸೊಸೆ ಮೇಲೆ ಗೂಬೆ ಕೂರಿಸೋ ಬದಲು ಕುಸುಮಾಳಂತೆ ಸ್ಟ್ರಾಂಗ್ ಇದ್ರೆ ಗಂಡಸರು ಸರಿ ದಾರೀಲಿರ್ತಾರೆ!

ಇದೀಗ ‘ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ದೀಪದ ಮಹತ್ವವನ್ನು ಸಿದ್ಧಾಂತ್ ತನ್ನ ಪತ್ನಿ ತಾರಿಣಿಗೆ ಹೇಳಿದ್ದಾನೆ. ಇದರಲ್ಲಿ ತಾರಿಣಿ ಪಾತ್ರದಲ್ಲಿ ಅಮಿತಾ ಸದಾಶಿವ, ಸಿದ್ಧಾಂತ್ ಆಗಿ ಅಕ್ಷಯ್ ನಾಯಕ್, ರಾಜಶೇಖರ್ ಹೊಸಹಳ್ಳಿ ಆಗಿ ಹಿರಿಯ ಕಲಾವಿದ ಅಶೋಕ್, ಸದಾನಂದ ಆಗಿ ಧರ್ಮೇಂದ್ರ ಅರಸ್, ಉಮಾ ಆಗಿ ವರಲಕ್ಷ್ಮೀ ಶ್ರೀನಿವಾಸ್, ಸುಮತಿ ಆಗಿ ಪ್ರಥಮಾ ಪ್ರಸಾದ್, ಪಾಲಾಕ್ಷ ಆಗಿ ಮಂಡ್ಯ ರಮೇಶ್, ಜಗದೀಶ್ವರಿ ಆಗಿ ಆರಾಧನಾ ರಘುರಾಮ್ ನಟಿಸುತ್ತಿದ್ದಾರೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ