Vastu Tips: ಮನೆಯಲ್ಲಿರುವ ತುಳಸಿ ಗಿಡ ಒಣಗ್ತಿದ್ರೆ ಎಚ್ಚೆತ್ತುಕೊಳ್ಳಿ, ಇದು ಶುಭಸೂಚಕವಲ್ಲ !

By Suvarna News  |  First Published Mar 18, 2022, 6:24 PM IST

ತುಳಸಿ ಪೂಜೆ (Tulsi Pooja)ಯನ್ನು ಜನರು ಭಯ, ಭಕ್ತಿಯಿಂದ ಮಾಡ್ತಾರೆ. ಪ್ರತಿ ದಿನ ತುಳಸಿಗೆ ನೀರೆರೆದು ಪೂಜೆ ಮಾಡುವವರಿದ್ದಾರೆ. ಆದ್ರೆ ಅನೇಕ ಬಾರಿ ನಮಗೆ ತಿಳಿಯದೆ ತುಳಸಿ ಗಿಡ ಹಾಳಾಗುತ್ತದೆ. ಪದೇ ಪದೇ ಗಿಡ (Plant)ದ ಎಲೆಗಳು ಒಣಗಲು ಶುರುವಾಗುತ್ತವೆ. ಅದಕ್ಕೆ ಕಾರಣವೇನು ಗೊತ್ತಾ ? 


ಹಿಂದೂ (Hindu) ಧರ್ಮದಲ್ಲಿ ತುಳಸಿ (Basil) ಗಿಡಕ್ಕೆ ಮಹತ್ವದ ಸ್ಥಾನವಿದೆ. ತುಳಸಿಯನ್ನು ಲಕ್ಷ್ಮಿ (Laxmi) ಯ ರೂಪವೆಂದು ಭಾವಿಸಲಾಗುತ್ತದೆ. ಮನೆ (Home) ಯಲ್ಲಿ ತುಳಸಿಯನ್ನು ಇಡುವುದ್ರಿಂದ ಸಕಾರಾತ್ಮಕ ಶಕ್ತಿ (Positive Energy) ಮನೆ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ. ತುಳಸಿ ಪೂಜೆ (Worship ) ಮಾಡಿದ್ರೆ ಭಗವಂತ ವಿಷ್ಣು (Vishnu) ಖುಷಿಯಾಗ್ತಾನೆ ಎನ್ನಲಾಗುತ್ತದೆ. ಬೆಳಿಗ್ಗೆ ಸ್ನಾನ ಮಾಡಿ ತುಳಸಿಗೆ ನೀರು ಹಾಕಿ, ಪೂಜೆ ಮಾಡುವುದ್ರಿಂದ ಹಾಗೂ ಸಂಜೆ ತುಳಸಿ ಮುಂದೆ ದೀಪ ಹಚ್ಚುವುದ್ರಿಂದ ಲಕ್ಷ್ಮಿ ಪ್ರಸನ್ನಳಾಗ್ತಾಳೆ ಎಂದು ನಂಬಲಾಗಿದೆ.

ಆಯುರ್ವೇದದಲ್ಲೂ ತುಳಸಿಗೆ ಮಹತ್ವ ನೀಡಲಾಗಿದೆ. ಅನೇಕ ರೋಗಗಳಿಗೆ ತುಳಸಿ ಮದ್ದಾಗಿದೆ. ತುಳಸಿಯನ್ನು ಪ್ರತಿಯೊಬ್ಬ ಭಾರತೀಯರ ಮನೆ ಮುಂದೆ ನಾವು ನೋಡಬಹುದು. ಅದಕ್ಕೆ ಪ್ರತ್ಯೇಕ ಕಟ್ಟೆ ಕೂಡ ನಿರ್ಮಿಸಲಾಗುತ್ತದೆ. ಅನೇಕ ಬಾರಿ ಎಷ್ಟೇ ಆರೈಕೆ ಮಾಡಿದ್ರೂ, ಪ್ರತಿ ದಿನ ತುಳಸಿಗೆ ನೀರು ಹಾಕಿದ್ರೂ ತುಳಸಿ ಗಿಡ ಒಣಗಲು ಶುರುವಾಗುತ್ತದೆ. ಗೊಬ್ಬರ ಹಾಕಿದ್ರೂ, ಸರಿಯಾಗಿ ನೋಡಿಕೊಂಡ್ರೂ ಗಿಡ ಹಾಳಾಗುತ್ತದೆ. ಬೇರೆ ಗಿಡಗಳು ಸರಿಯಿದ್ದು, ತುಳಸಿ ಗಿಡ ಮಾತ್ರ ಯಾಕೆ ಹಾಳಾಗ್ತಿದೆ ಎಂಬ ಪ್ರಶ್ನೆ ನಿಮಗೂ ಬರಬಹುದು.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ಗಿಡ ಒಣಗುವುದು ಭವಿಷ್ಯದಲ್ಲಿ ನಡೆಯುವ ಘಟನೆಯ ಸಂಕೇತವಾಗಿದೆ. ಇಂದು ತುಳಸಿ ಗಿಡ ಒಣಗಿ ಯಾವ ಸೂಚನೆ ನೀಡುತ್ತದೆ ಎಂಬುದನ್ನು ನಾವು ಹೇಳ್ತೇವೆ.

Tap to resize

Latest Videos

ತುಳಸಿ ಗಿಡ ಒಣಗುವುದು ಅಶುಭ ಸಂಕೇತ: ಗಿಡಕ್ಕೆ ನೀರು ಹಾಕದಿರುವಾಗ ಅಥವಾ ಅತೀ ಶೀತದಲ್ಲಿ ತುಳಸಿ ಗಿಡ ಸಾಯುವುದು ಸಾಮಾನ್ಯ. ಆದ್ರೆ ಎಲ್ಲ ಆರೈಕೆ ನಂತ್ರವೂ ತುಳಸಿ ಗಿಡ ಒಣಗಿದ್ರೆ ಅದು ಅಶುಭ ಘಟನೆಯ ಸಂಕೇತವಾಗಿದೆ. ತುಳಸಿಯನ್ನು ಬುಧ ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಬುಧ ಗ್ರಹ ಹಸಿರಿನ ಸಂಕೇತ. ಜಾತಕದಲ್ಲಿ ಬುಧ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಬುಧ ನಮ್ಮ ಮೇಲೆ ಪ್ರಭಾವ ಬೀರಲು ಶುರು ಮಾಡ್ತಾನೆ. ಇದೇ ಕಾರಣಕ್ಕೆ ತುಳಸಿ ಗಿಡ ಒಣಗಲು ಶುರುವಾಗುತ್ತದೆ. ಹಾಗೆ ಎಂದೂ ತುಳಸಿ ಗಿಡವನ್ನು ಟೆರೇಸ್ ಮೇಲೆ ಇಡಬಾರದು. ಟೆರೇಸ್ ಮೇಲೆ ತುಳಸಿ ಗಿಡವನ್ನಿಟ್ಟರೆ ಬುಧ ಗ್ರಹ ದುರ್ಬಲವಾಗುತ್ತದೆ. ಇದ್ರಿಂದ ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಗುತ್ತದೆ.

ಭಗವಂತನ ಭಕ್ತಿಗೆ ಜಾತಿ ಆಧಾರವೂ ಅಲ್ಲ, ಮಾನದಂಡವೂ ಅಲ್ಲ ಎಂದಿದ್ದ ಸಂತ ಚೈತನ್ಯ ಮಹಾಪ್ರಭು

ಮನೆಗೆ ಯಾವುದೇ ಸಂಕಟ ಬರ್ತಿದೆ ಎನ್ನುವಾಗ ಮನೆಯಲ್ಲಿರುವ ತುಳಸಿ ಮೊದಲು ಅದನ್ನು ತನ್ನ ಮೇಲೆ ತೆಗೆದುಕೊಳ್ತಾರೆ. ಇದೇ ಕಾರಣಕ್ಕೆ ಮೊದಲು ತುಳಸಿ ಗಿಡ ಒಣಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆಯೇ ಮನೆಗೆ ದರಿದ್ರ ಆವರಿಸುವಾಗ ಲಕ್ಷ್ಮಿ ಮನೆಯಿಂದ ಹೊರ ಹೋಗ್ತಾಳೆ. ಲಕ್ಷ್ಮಿ ರೂಪ ತುಳಸಿ ಒಣಗುತ್ತದೆ. ನಂತ್ರ ಮನೆಯಲ್ಲಿ ಬಡತನ, ಅನಾರೋಗ್ಯ, ಆರ್ಥಿಕ ಸಮಸ್ಯೆ ಕಾಡಲು ಶುರುವಾಗುತ್ತದೆ. 
 
ಪಿತೃ ದೋಷ: 
ಅನೇಕ ಬಾರಿ ಪಿತೃ ದೋಷದ ಕಾರಣಕ್ಕೂ ತುಳಸಿ ಗಿಡ ಒಣಗಲು ಶುರುವಾಗುತ್ತದೆ. ಪದೇ ಪದೇ ಮನೆಯಲ್ಲಿರುವ ತುಳಸಿ ಗಿಡ ಒಣಗುತ್ತಿದ್ದರೆ ಹಾಗೂ ಮನೆಯಲ್ಲಿರುವ ಸದಸ್ಯರ ಮಧ್ಯೆ ಗಲಾಟೆಯಾಗ್ತಿದ್ದರೆ, ಸದಾ ಒಂದಿಲ್ಲೊಂದು ಕಾರಣಕ್ಕೆ ಕಿತ್ತಾಟ ನಡೆಯುತ್ತಿದ್ದರೆ ಪಿತೃದೋಷವಾಗಿದೆ ಎಂದು ಅರ್ಥೈಸಿಕೊಳ್ಳಿ.

Holi Festival: ಗುಮ್ಮಟನಗರಿ ವಿಜಯಪುರದಲ್ಲಿ ಸಂಭ್ರಮದ ಹೋಳಿ ಕಾಮದಹನ..!

ಮನೆಯಲ್ಲಿಡಬೇಡಿ ಒಣಗಿದ ತುಳಸಿ ಗಿಡ: ಮನೆಗೆ ತಂದ ಕೆಲವೇ ದಿನಗಳಲ್ಲಿ ತುಳಸಿ ಗಿಡದ ಎಲೆಗಳು ಒಣಗಿ ಹಾಳಾಗುತ್ತವೆ. ಆದ್ರೆ ಅದು ಸರಿಯಾಗಬಹುದು ಎಂಬ ಕಾರಣಕ್ಕೆ ಅದನ್ನು ಅಲ್ಲಿಯೇ ಇಟ್ಟು ನೀರು ಹಾಕ್ತಿರುತ್ತೇವೆ. ಒಣಗಿದ ಗಿಡವನ್ನು ಮನೆಯಲ್ಲಿಡುವುದು ಕೂಡ ತಪ್ಪು. ಇದು ಅಶುಭವನ್ನು ತರುತ್ತದೆ. ಇದ್ರಿಂದ ಕುಟುಂಬಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ತುಳಸಿ ಗಿಡ ಹಾಳಾಗ್ತಿದ್ದಂತೆ ಅದನ್ನು ತೆಗೆದು ಹೊಸ ಗಿಡ ಬೆಳೆಸಲು ಮರೆಯಬೇಡಿ. 

click me!