ಅನಾರೋಗ್ಯ, ಬ್ಯಾಡ್ ಲಕ್ ಹಿಂಬಾಲಿಸಲು ಬಳಸೋ ಕಾರಿನ ಬಣ್ಣವೂ ಕಾರಣವಾಗುತ್ತಾ?

By Suvarna News  |  First Published Nov 25, 2023, 12:36 PM IST

ನಿಮ್ಮ ಜನ್ಮರಾಶಿಯ ಗ್ರಹದ ಗುಣಸ್ವಭಾವಕ್ಕೆ ಸರಿಹೋಗದಂಥ ಬಣ್ಣದ ವಾಹನಗಳನ್ನು ಓಡಿಸಿದರೆ ದುರದೃಷ್ಟ, ಅನಾರೋಗ್ಯ ಹಿಂಬಾಲಿಸಬಹುದು. ಬನ್ನಿ, ಅವು ಯಾವುವು ಅಂತ ನೋಡೋಣ.


ಬಣ್ಣಗಳು ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಹಾಗೆಯೇ ಬಣ್ಣಗಳು ಜ್ಯೋತಿಷ್ಯದ ಪ್ರಕಾರ ಅದೃಷ್ಟವನ್ನೂ ತರುತ್ತವೆ. ಅದೃಷ್ಟವನ್ನು ತಂದಮೇಲೆ ದುರದೃಷ್ಟವನ್ನೂ ತರಲೇಬೇಕಲ್ಲವೇ? ನಿರ್ದಿಷ್ಟ ಜನ್ಮರಾಶಿಯಲ್ಲಿ ಜನಿಸಿದವರಿಗೆ ನಿರ್ದಿಷ್ಟ ಗ್ರಹಗಳು ಜಾತಕವನ್ನು ಆಳುತ್ತವೆ. ಈ ಜಾತಕ ಗ್ರಹಗಳಿಗೆ ಕೆಲವು ಬಣ್ಣಗಳು ಅಚ್ಚುಮೆಚ್ಚು, ಇನ್ನು ಕೆಲವು ಅನಿಷ್ಟ. ಅಂಥವುಗಳನ್ನು ಧರಿಸಿದರೆ, ಅಂಥ ಬಣ್ಣದ ವಾಹನಗಳನ್ನು ಓಡಿಸಿದರೆ ದುರದೃಷ್ಟ, ಅನಾರೋಗ್ಯ ಹಿಂಬಾಲಿಸಬಹುದು. ಬನ್ನಿ, ಅವು ಯಾವುವು ಅಂತ ನೋಡೋಣ.

ಮೇಷ (Aries) ರಾಶಿ 
ಮೇಷ ರಾಶಿಯವರು ಬೆಂಕಿಯ ಹಾಗೆ. ಹೆಚ್ಚು ಶಕ್ತಿ, ಹೆಚ್ಚು ಹತಾಶೆ ಹೊಂದಿರುತ್ತಾರೆ. ಹಾಗಾಗಿ ಅವರು ಕಪ್ಪು, ಬಿಳಿ, ಗುಲಾಬಿ ಬಣ್ಣದ ವಾಹನ ಓಡಿಸುವುದರಿಂದ ದೂರವಿರಬೇಕು. ಇವು ಹತಾಶೆಯನ್ನು ಹೆಚ್ಚು ಮಾಡುತ್ತವೆ. ಕೆಂಪು, ನೇರಳೆ, ಹಳದಿ (ಜ್ವಾಲೆಯ ಬಣ್ಣ), ಮರೂನ್ ಬಣ್ಣಗಳು ಇವರಿಗೆ ಅನುಕೂಲ.

Latest Videos

undefined

ವೃಷಭ (Taurus) ರಾಶಿ

ಇವರು ಸ್ಥಿರವಾದ, ವಾಸ್ತವಿಕ ದೃಷ್ಟಿಕೋನ ಮತ್ತು ಧೈರ್ಯವನ್ನು ಹೊಂದಿರುತ್ತಾರೆ. ಇವರು ನೇರಳೆ ಬಣ್ಣದ ವಾಹನಗಳನ್ನು ಓಡಿಸಬಾರದು ಎಂದು ಹೇಳಲಾಗುತ್ತದೆ. ಕಪ್ಪು, ಹಸಿರು ಮತ್ತು ಗುಲಾಬಿ ಬಣ್ಣಗಳು ಅವರಿಗೆ ಸೂಕ್ತವಾದ ಬಣ್ಣಗಳಾಗಿವೆ.

ಮಿಥುನ (Gemini) ರಾಶಿ
ಇವರು ಯಾವುದನ್ನೂ ವಿಶ್ಲೇಷಿಸದೇ ಆದರ ಕಡೆಗೆ ಹೋಗುವುದಿಲ್ಲ. ಬುದ್ಧಿವಂತರೂ ಹೌದು. ಇವರು ಕೆಂಪು ಮತ್ತು ಕಿತ್ತಳೆ ಬಣ್ಣದ ವಾಹನಗಳಿಂದ ದೂರವಿರಬೇಕು. ಹಳದಿ, ತಿಳಿ ಹಸಿರು, ಬಿಳಿ, ಗುಲಾಬಿ ಬಣ್ಣಗಳನ್ನು ಬಳಸಬೇಕು.

ಕಟಕ (Cancer) ರಾಶಿ
ಇವರು ಸೂಕ್ಷ್ಮ ಮನಸ್ಸಿನ ಜನರು. ಹೆಚ್ಚು ಭಾವನಾತ್ಮಕ ಸ್ವಭಾವದವರು. ಇತರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕಪ್ಪು, ತಿಳಿ ನೇರಳೆ ಬಣ್ಣವನ್ನು (ಬರ್ಗಂಡಿ) ಬಳಸದಿರುವುದು ಉತ್ತಮ. ಬಿಳಿ, ಹಸಿರು, ನೀಲಿ ಮತ್ತು ಹಳದಿ ಬಣ್ಣಗಳನ್ನು ಆಯ್ಕೆ ಮಾಡುವುದು ಸೂಕ್ತ.

ಸಿಂಹ (Leo) ರಾಶಿ
ಇವರು ವರ್ಣರಂಜಿತ, ಹೆಚ್ಚು ಸೃಜನಶೀಲತೆ, ಹೆಚ್ಚು ವರ್ಚಸ್ಸು ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ತಿಳಿ ಗುಲಾಬಿ, ತಿಳಿ ನೀಲಿ ಮತ್ತು ಬಿಳಿ ಬಣ್ಣಗಳನ್ನು ಬಳಸದಿರುವುದು ಉತ್ತಮ. ಕಂದು, ನೇರಳೆ, ಚಿನ್ನ ಮತ್ತು ಕಿತ್ತಳೆ ಬಣ್ಣದ ಉಡುಪುಗಳನ್ನು ಧರಿಸುವುದು ಉತ್ತಮ.

ಕನ್ಯಾ (Virgo) ರಾಶಿ
ಇವರು ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ವಿಶ್ಲೇಷಣೆಯನ್ನು ಚೆನ್ನಾಗಿ ಮಾಡುತ್ತಾರೆ. ಅನೇಕ ಕೌಶಲ್ಯಗಳನ್ನು ಹೊಂದಿರುತ್ತಾರೆ. ಕೆಂಪು ಮತ್ತು ಕಿತ್ತಳೆ ಬಣ್ಣದ ವಾಹನ ಓಡಿಸುವುದರಿಂದ ದೂರವಿರಿ. ಹಸಿರು, ಕಪ್ಪು, ಬೂದು ಮತ್ತು ಪೀಚ್ ಬಣ್ಣಗಳನ್ನು ಬಳಸುವುದು ಉತ್ತಮ.

ತುಲಾ (Libra) ರಾಶಿ
ಜೀವನದಲ್ಲಿ ಎಲ್ಲವನ್ನೂ ಸಮತೋಲನದಲ್ಲಿಡುವವರು. ಈ ರಾಶಿಯವರು ಹೊಳೆಯುವ ನಿಯಾನ್ ಬಣ್ಣಗಳಿಂದ ದೂರವಿರಬೇಕು. ಕೆನೆ, ನೀಲಿ, ಕಪ್ಪು ಮತ್ತು ಗುಲಾಬಿ ಬಣ್ಣಗಳನ್ನು ಬಳಸಿದರೆ ಉತ್ತಮ.

ವೃಶ್ಚಿಕ (Gemini) ರಾಶಿ
ಇವರು ಸುಲಭವಾಗಿ ಇತರರ ಮೇಲೆ ಪ್ರಭಾವ ಬೀರುತ್ತಾರೆ. ಆಳವಾದ ಭಾವನೆಗಳನ್ನು ಹೊಂದಿರುತ್ತಾರೆ. ಇವರು ಬಿಳಿ ಮತ್ತು ಗುಲಾಬಿ ಬಣ್ಣದ ವಾಹನಗಳನ್ನು ಬಳಸಬಾರದು. ಮರೂನ್, ನೇರಳೆ, ದಾಳಿಂಬೆ ಬಣ್ಣ, ಕಪ್ಪು ಬಣ್ಣಗಳನ್ನು ಬಳಸಬಹುದು.

 ವಯಸ್ಸಾದ ಮೇಲೆ ಸುಖವಾಗಿರಬೇಕು ಅಂದ್ರೆ ಯವ್ವೌನದಲ್ಲಿ ಈ ಕೆಲ್ಸ್ ಮಾಡಿ ಅಂತಾನೆ ಚಾಣಕ್ಯ!

ಧನು (Sagittarius) ರಾಶಿ
ಇವರು ನಿರಂತರವಾಗಿ ರೂಪಾಂತರಗೊಳ್ಳುತ್ತಾರೆ. ಸಾಹಸಗಳನ್ನು ಮಾಡುವ ಗುಣ ಇರುತ್ತದೆ. ಕಪ್ಪು ಮತ್ತು ಗುಲಾಬಿ ಬಣ್ಣದ ವಾಹನಗಳನ್ನು ತಪ್ಪಿಸಬೇಕು. ನೇರಳೆ, ಕಂದು, ಮಿಶ್ರ ಬಣ್ಣದ ವಾಹನಗಳು ಬೇಡ.

ಮಕರ (Capricorn) ರಾಶಿ
ಇವರಲ್ಲಿ ಏನನ್ನಾದರೂ ಸಾಧಿಸುವ ಛಲ ಇದೆ. ನಿಮಗೆ ಹಳದಿ, ನೇರಳೆ ಮತ್ತು ನಿಯಾನ್ ಬಣ್ಣಗಳು ಬೇಡ. ಕಪ್ಪು, ಬೂದು, ಕಡು ನೀಲಿ ಮತ್ತು ಬಿಳಿ ಬಣ್ಣಗಳನ್ನು ಬಳಸಿದರೆ ಉತ್ತಮ.

ಕುಂಭ (Aquarius) ರಾಶಿ
ಉತ್ತಮ ಜ್ಞಾನ ಮತ್ತು ಸ್ನೇಹಪರ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳು. ಆರೆಂಜ್, ಗೋಲ್ಡ್, ಬ್ಲೂ ಬಳಸದಿರುವುದು ಉತ್ತಮ. ಬೆಳ್ಳಿ, ಆಕಾಶ ನೀಲಿ, ನೀಲಿ ಬಣ್ಣದ ವಾಹನಗಳನ್ನು ಓಡಿಸಬಹುದು.

ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು ಎಚ್ಚರ...

ಮೀನ (Pisces) ರಾಶಿ
ಒಳ್ಳೆಯ ಭಾವನೆಗಳನ್ನು ಹೊಂದಿರುವ ಮೀನ ರಾಶಿಯವರು ದಯೆ ಮತ್ತು ಮುಕ್ತ ಹೃದಯದವರು. ಕೆಂಪು ಮತ್ತು ಗಾಢ ನೀಲಿ ಬಣ್ಣಗಳನ್ನು ಬಳಸದಿರುವುದು ಉತ್ತಮ. ಲ್ಯಾವೆಂಡರ್, ಬಿಳಿ, ನೀಲಿ, ಪೀಚ್ ಬಣ್ಣಗಳು ಇವರಿಗೆ ಸೂಕ್ತ.

 

click me!