ಜ್ಯೋತಿಷ್ಯ ಶಾಸ್ತ್ರದ ನೆರವಿನಿಂದ ನಿಮ್ಮ ರಾಶಿ, ಗ್ರಹಗತಿಗಳನ್ನು ಸ್ವಲ್ಪವಾದರೂ ಅರಿತುಕೊಂಡರೆ ವೈವಾಹಿಕ ಜೀವನವನ್ನು ಸರಳವಾಗಿ ಪರಿಗಣಿಸಲು, ನಿಮ್ಮ ಸಂಗಾತಿಯನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ಸಾಂಗತ್ಯವನ್ನು ಹೆಚ್ಚು ದೃಢಪಡಿಸಿಕೊಳ್ಳಲು ಅನುಕೂಲವಾಗುತ್ತದೆ.
ಮನುಷ್ಯ ಸಂಬಂಧಗಳೇ ವಿಚಿತ್ರ. ಯಾರನ್ನು ಪ್ರೀತಿಪಾತ್ರರೆಂದು ಭಾವಿಸುತ್ತೇವೆಯೋ ಕೆಲ ಸಮಯದ ಬಳಿಕ ಅವರೇ ನಮ್ಮಿಂದ ದೂರವಾಗುತ್ತಾರೆ. ವೈವಾಹಿಕ ಸಂಬಂಧಗಳು ಸಹ ಇಂದು ಭದ್ರವೆನಿಸುತ್ತಿಲ್ಲ. ದಂಪತಿಯ ನಡುವೆ ಇರಬೇಕಾದ ಬಾಂಧವ್ಯ ಇಲ್ಲದೇ ವೈವಾಹಿಕ ಬದುಕು ಸೊರಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ, ಮನುಷ್ಯನ ಸಂಬಂಧದ ಮೇಲೆ ಗ್ರಹ-ತಾರೆಗಳ ಪ್ರಭಾವ ಗಾಢವಾಗಿರುತ್ತದೆ. ಇವುಗಳ ಚಲನೆ ಹಾಗೂ ಸ್ಥಿರವಾದ ಮನೆಗಳು ಸಂಬಂಧದ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತಿರುತ್ತವೆ. ಹಾಗೆಯೇ, ಕೆಲವು ಗ್ರಹಗಳ ಸಂಯೋಗವೂ ಸಂಬಂಧದ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ವೈವಾಹಿಕ ಜೀವನವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದಾದರೆ, ಅಲ್ಪಪ್ರಮಾಣದ ಜ್ಯೋತಿಷ್ಯಶಾಸ್ತ್ರದ ಅರಿವನ್ನು ಬೆಳೆಸಿಕೊಂಡರೆ ಉತ್ತಮ. ಏಕೆಂದರೆ, ಇವುಗಳ ಮೂಲಕ, ಸಂಗಾತಿಯ ಜತೆಗಿನ ಸಂಬಂಧವನ್ನು ಸೌಹಾರ್ದವಾಗಿಸಿಕೊಳ್ಳಲು ಸಾಧ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ವಿಧಾನಗಳ ಮೂಲಕ ವೈವಾಹಿಕ ಜೀವನವನ್ನು ಸುಗಮ ಹಾಗೂ ದೃಢವಾಗಿಸಿಕೊಳ್ಳಬಹುದು. ಅವುಗಳ ಬಗ್ಗೆ ಅಲ್ಪ ಜ್ಞಾನ ಬೆಳೆಸಿಕೊಂಡು, ಅನುಸರಿಸಿದರೆ ದೀರ್ಘಕಾಲ ನೆಮ್ಮದಿಯಿಂದ ಇರಲು ಅನುಕೂಲವಾಗುತ್ತದೆ.
• ಸಂಗಾತಿ ಕುಂಡಲಿ (Partner’s Kundali)
ನಿಮ್ಮ ಪತಿ ಅಥವಾ ಪತ್ನಿಯ ಜನ್ಮ ರಾಶಿಯನ್ನು (Birth Sign) ಗಮನಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಜನಿಸುವ ರಾಶಿಗೂ ನಮ್ಮ ಜೀವನದ (Life) ಆಗುಹೋಗುಗಳಿಗೂ ನಿಕಟ ಸಂಬಂಧವಿದೆ. ಇದರಿಂದ ನಿಮ್ಮ ಆಂತರಿಕ ಗುಣಸ್ವಭಾವವನ್ನು ಅರಿಯಲು ಸಾಧ್ಯ. ಸಂಗಾತಿಯ ವರ್ತನೆ (Behavior), ವ್ಯಕ್ತಿತ್ವ (Personality), ಆಸೆ, ಬಯಕೆ, ಅವರ ಆಸಕ್ತಿಗಳನ್ನು (Interest) ರಾಶಿಯ ಸಹಾಯದಿಂದ ತಿಳಿದುಕೊಳ್ಳಬಹುದು. ಹೀಗೆ ಅರ್ಥೈಸಿಕೊಳ್ಳುವ ಮೂಲಕ, ಸಂಗಾತಿಯ ಜತೆಗಿನ ಬಾಂಧವ್ಯವನ್ನು (Relationship) ಹೇಗೆ ಸುಧಾರಿಸಿಕೊಳ್ಳಬಹುದು ಎನ್ನುವ ಅಂದಾಜು ಸಿಗುತ್ತದೆ. ಇದರಿಂದ ಖಂಡಿತವಾಗಿ ಅವರ ವ್ಯಕ್ತಿತ್ವದ ಕುರಿತು ಸಹನೆ ಮೂಡುತ್ತದೆ. ಅವರ ಶಕ್ತಿ ಸಾಮರ್ಥ್ಯ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿಯೇ, ಮದುವೆಗೆ ಮುನ್ನ ಹುಡುಗ-ಹುಡುಗಿಯ ಕುಂಡಲಿ ನೋಡಿ ಹೊಂದಾಣಿಕೆಯನ್ನು ಅರಿಯುವ ಪದ್ಧತಿಯಿದೆ. ಕೆಲವು ರಾಶಿಗಳಿಗೆ ಚೂರೂ ಹೊಂದಾಣಿಕೆ (Compatibility) ಉಂಟಾಗುವುದಿಲ್ಲ. ಅಂತಹ ಸಮಯದಲ್ಲಿ ಒಮ್ಮೆ ಪ್ರೀತಿ (Love) ಮೂಡಿದರೂ ದೀರ್ಘಕಾಲ ಒಟ್ಟಾಗಿ ಬಾಳಲು ಸಾಧ್ಯವಾಗುವುದಿಲ್ಲ.
undefined
ಶನಿ-ಶುಕ್ರನ ಸಂಚಲನ, ನವೆಂಬರ್‌ನಲ್ಲಿ ಈ ರಾಶಿಗೆ ಮುಟ್ಟಿದ್ದೆಲ್ಲ ಬಂಗಾರ
• ಸಮಯದ (Time) ಕೈಯಲ್ಲಿ ಎಲ್ಲವೂ ಇದೆ
ಚಂದ್ರ (Moon) ಗ್ರಹ ನಮ್ಮ ಭಾವನೆಗಳು (Emotions) ಮತ್ತು ಮನಸ್ಥಿತಿಯ (Mentality) ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಅಮಾವಾಸ್ಯೆಯ ಎದುರು ನಮ್ಮ ಮನಸ್ಥಿತಿ ಒಂದು ರೀತಿಯಲ್ಲಿದ್ದರೆ, ಹುಣ್ಣಿಮೆ ಸಮಯಕ್ಕೆ ಮತ್ತೊಂದು ರೀತಿಯಲ್ಲಿರುತ್ತದೆ. ಚಂದ್ರನ ಗತಿಯನ್ನು ಆಧರಿಸಿ ದಾಂಪತ್ಯದಲ್ಲೂ ಕೆಲವೊಮ್ಮೆ ಏರಿಳಿತ ಉಂಟಾಗುವುದನ್ನು ಗಮನಿಸಿ. ಯಾವ ಸಮಯದಲ್ಲಿ ಪ್ರಮುಖ ವಿಚಾರಗಳ ಕುರಿತು ಮಾತುಕತೆ ನಡೆಸಿದರೆ ಉತ್ತಮ ಎನ್ನುವುದು ನಿಮಗೇ ತಿಳಿಯುತ್ತದೆ. ಹುಣ್ಣಿಮೆ ಸಮೀಪಿಸುತ್ತಿರುವ ಸಮಯದಲ್ಲಿ ಭಾವನೆಗಳು ಉತ್ಕರ್ಷದಲ್ಲಿರುತ್ತವೆ. ಮುಕ್ತ ಮಾತುಕತೆಗೆ ಈ ಸಮಯ ಸೂಕ್ತ. ಅದೇ ಅಮಾವಾಸ್ಯೆಯ ಎದುರು ಚಿಕ್ಕಪುಟ್ಟದಕ್ಕೂ ಕಿರಿಕಿರಿ ಹೆಚ್ಚುತ್ತದೆ.
• ಬುಧ (Mercury) ಹಿಂದೆ ಸರಿಯುವುದು
ಬುಧ ಗ್ರಹ ಹಿಮ್ಮೆಟ್ಟುವ ಸಮಯದಲ್ಲಿ ಸಂಬಂಧದಲ್ಲೂ ಅಲ್ಲೋಲಕಲ್ಲೋಲ ಉಂಟಾಗುವುದನ್ನು ಗಮನಿಸಲಾಗಿದೆ. ಈ ಸಮಯದಲ್ಲಿ ಮನಸ್ತಾಪಗಳು (Fights) ಹೆಚ್ಚಬಹುದು. ತಪ್ಪಾದ ಸಂವಹನ ಉಂಟಾಗಬಹುದು. ಹೀಗಾಗಿ, ಇದು ತಾಳ್ಮೆಯ (Patience) ಸಮಯ. ಈ ಸಮಯದ ಅರಿವಿದ್ದರೆ ಹೆಚ್ಚಿನ ತಾಳ್ಮೆಯಿಂದ ವರ್ತಿಸಲು ಸಾಧ್ಯವಾಗುತ್ತದೆ. ಮುಖ್ಯವಾದ ಮಾತುಕತೆ, ನಿರ್ಧಾರಗಳನ್ನು ಈ ಸಮಯದಲ್ಲಿ ಕೈಗೊಳ್ಳದಿರುವುದು ಉತ್ತಮ.
• ಶುಕ್ರ ಮತ್ತು ಮಂಗಳ
ಶುಕ್ರ ಗ್ರಹ (Venus) ಪ್ರೀತಿ ಮತ್ತು ಸೌಹಾರ್ದವನ್ನು ಪ್ರತಿನಿಧಿಸಿದರೆ, ಮಂಗಳ (Mars) ಗ್ರಹ ಮೋಹ ಮತ್ತು ಆಸೆಯ ಪ್ರತೀಕ. ನಿಮ್ಮ ಕುಂಡಲಿಯಲ್ಲಿ ಈ ಗ್ರಹಗಳ ಸ್ಥಾನ ಅರಿತರೆ ನಿಮ್ಮ ಪ್ರೀತಿ ಮತ್ತು ರೋಮ್ಯಾಂಟಿಕ್ ಜೀವನ ಹೇಗಿರುತ್ತದೆ ಎನ್ನುವ ಅಂದಾಜು ದೊರೆಯುತ್ತದೆ. ಆಗ ವಾಸ್ತವದ ನೆಲೆಗಟ್ಟಿನಲ್ಲಿ ಯೋಚನೆ ಮಾಡಲು ಸಾಧ್ಯವಾಗುತ್ತದೆ.
ಈ 4 ರಾಶಿಯ ಹುಡುಗಿಯರಿಗೆ ಬೀಳದ ಹುಡುಗರೇ ಇಲ್ಲ..!
• ಶನಿ ಗ್ರಹ
ಶನಿ ಗ್ರಹ ಪಾಠ (Lesson) ಕಲಿಸುವುದಕ್ಕೆ, ಶಿಸ್ತು ಮತ್ತು ಬದ್ಧತೆ ಅಳವಡಿಸಿಕೊಳ್ಳುವುದಕ್ಕೆ ಹೆಸರುವಾಸಿ. ನಿಮ್ಮ ಕುಂಡಲಿಯಲ್ಲಿ ಈ ಗ್ರಹ (Planet) ಯಾವ ಸ್ಥಾನದಲ್ಲಿದೆ ಎಂದು ಅರಿತುಕೊಂಡರೆ ದೀರ್ಘಕಾಲದ ಸಂಬಂಧ ಹೇಗಿರುತ್ತದೆ ಎಂದು ತಿಳಿದುಬರುತ್ತದೆ. ಇಬ್ಬರ ಕುಂಡಲಿಯಲ್ಲೂ ಶನಿಗ್ರಹ ದೃಢವಾದ ಸ್ಥಾನದಲ್ಲಿದ್ದರೆ ಆಳವಾದ ಬದ್ಧತೆಯುಳ್ಳ (commitment) ಸಂಬಂಧ ನಿಮ್ಮದಾಗುತ್ತದೆ.