ಮನುಷ್ಯನಿಗೆ 7 -8 ಗಂಟೆ ನಿದ್ರೆ ಬೇಕು. ಆದ್ರೆ ಬಹುತೇಕರು ನಿದ್ರೆ ಮಾಡದೆ ಮಧ್ಯರಾತ್ರಿ ಎಚ್ಚರಗೊಳ್ತಾರೆ. ಈ ಎಚ್ಚರಿಕೆ ನಿಮಗೆ ಅನೇಕ ಸೂಚನೆಯನ್ನು ನೀಡುತ್ತೆ. ಯಾವ ಸಮಯದಲ್ಲಿ ಎಚ್ಚರವಾದ್ರೆ ಏನು ಸಂಕೇತ ಗೊತ್ತಾ?
ರಾತ್ರಿ ಸರಿಯಾದ ನಿದ್ರೆ ಪ್ರತಿಯೊಬ್ಬರಿಗೂ ಮುಖ್ಯ. ರಾತ್ರಿ ಮಲಗಿ ಬೆಳಿಗ್ಗೆ ಏಳುವ ಮಂದಿ ಭಾಗ್ಯವಂತರು. ಅನೇಕರಿಗೆ ಈ ಗಾಢ ನಿದ್ರೆ ಬರೋದಿಲ್ಲ. ಮಧ್ಯರಾತ್ರಿ ಎಚ್ಚರವಾಗುತ್ತೆ. ನಂತ್ರ ಎಷ್ಟೇ ಪ್ರಯತ್ನಿಸಿದ್ರೂ ನಿದ್ರೆ ಹತ್ತೋದಿಲ್ಲ. ಈ ನಿದ್ರೆ ಸಮಸ್ಯೆ ನಿಮ್ಮ ಇಡೀ ದಿನವನ್ನು ಹಾಳು ಮಾಡುತ್ತದೆ. ಮಧ್ಯರಾತ್ರಿ ನಿಮಗೂ ನಿದ್ರೆಯಲ್ಲಿ ಎಚ್ಚರವಾಗುತ್ತೆ ಅಂದ್ರೆ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ. ಇದು ಆರೋಗ್ಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಕೆಲ ಮುನ್ನೆಚ್ಚರಿಕೆಯನ್ನು ನೀಡುತ್ತದೆ.
ನಿಮಗೆ ಯಾವ ಸಮಯದಲ್ಲಿ ನಿದ್ರೆ (Sleep) ಯಿಂದ ಎಚ್ಚರವಾಗುತ್ತೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಆರಂಭದಲ್ಲಿ, ಮಧ್ಯರಾತ್ರಿ (Midnight) ಇಲ್ಲ ಬೆಳಗಿನ ಜಾವಕ್ಕೆ ಒಂದೊಂದು ಅರ್ಥವಿದೆ. ಯಾವ ಸಮಯದಲ್ಲಿ ನೀವು ಎಚ್ಚರಗೊಂಡ್ರೆ ಏನು ಅರ್ಥ ಎಂಬುದನ್ನು ನಾವು ಹೇಳ್ತೇವೆ.
ರಾತ್ರಿ 9 ಗಂಟೆಯಿಂದ 11 ಗಂಟೆ : ಸಾಮಾನ್ಯವಾಗಿ ಪ್ರತಿಯೊಬ್ಬರೂ ರಾತ್ರಿ 9 ಗಂಟೆ ನಂತ್ರ ನಿದ್ರೆ ಮೂಡ್ ಗೆ ಹೋಗ್ತಾರೆ. ಕೆಲವರು 10 ಗಂಟೆಗೆ ಮಲಗಿದ್ರೆ ಮತ್ತೆ ಕೆಲವರು 11 ಗಂಟೆಗೆ ಮಲಗ್ತಾರೆ. ನಿಮಗೆ 12 ಗಂಟೆಯಾದ್ರೂ ನಿದ್ರೆ ಬಂದಿಲ್ಲ ಎಂದಾದ್ರೆ ನಿಮಗೆ ಮಾನಸಿಕ (Mental) ಚಿಂತೆ ಕಾಡುತ್ತಿದೆ ಎಂದರ್ಥ. ಚಿಂತೆಯಲ್ಲಿ ಮುಳುಗಿರುವ ವ್ಯಕ್ತಿಗೆ ನಿದ್ರೆ ಬರೋದಿಲ್ಲ. ನಿದ್ರೆ ಮಾಡಲು ನಿದ್ರೆ ಮಾತ್ರೆಯ ಸೇವನೆ ಶುರು ಮಾಡ್ತಾನೆ. ನಿದ್ರೆ ಮಾತ್ರೆ ನಿಮ್ಮ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯವನ್ನು ಹಾಳು ಮಾಡುತ್ತದೆ. ಒತ್ತಡ, ಖಿನ್ನತೆ ಹೆಚ್ಚಾಗುತ್ತದೆ. ನೀವು ಸರಿಯಾದ ಸಮಯಕ್ಕೆ ನಿದ್ರೆ ಮಾಡ್ಬೇಕು ಅಂದ್ರೆ ಚಿಂತೆ ಬಿಡಿ. ನಿಮ್ಮ ಮನೆ ಪರಿಸರವನ್ನು ಸಂತೋಷವಾಗಿಟ್ಟುಕೊಳ್ಳಿ.
Vastu Shastra : 99ರಷ್ಟು ಮಹಿಳೆಯರು ಮನೆ ಒರೆಸುವಾಗ ಮಾಡ್ತಾರೆ ಈ ತಪ್ಪು
ರಾತ್ರಿ 11 ಗಂಟೆಯಿಂದ 1 ಗಂಟೆ : ನಿಮ್ಮ ನಿದ್ರೆ ರಾತ್ರಿ 11 ಗಂಟೆಯಿಂದ ಒಂದು ಗಂಟೆ ಮೊದಲು ಏಳ್ತೀರಿ ಎಂದಾದ್ರೆ ಅದು ಕೂಡ ನಿಮ್ಮ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ. ನೀವು ಭಾವುಕರು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪ್ರತಿ ದಿನ ಈ ಸಮಯದಲ್ಲಿ ನಿಮ್ಮ ನಿದ್ರೆ ಹಾಳಾಗ್ತಿದೆ ಎಂದಾದ್ರೆ ನಿತ್ಯ ಪವಿತ್ರ ಮಂತ್ರವನ್ನು ಜಪಿಸಿ. ನಿಮ್ಮ ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಳ್ಳಿ. ಇತರರನ್ನು ಹಾಗೆ ನಿಮ್ಮನ್ನು ನೀವು ಕ್ಷಮಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ರಾತ್ರಿ ಒಂದರಿಂದ ಮೂರು ಗಂಟೆ : ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಗಳು ನೀವಾಗಿದ್ದರೆ ನಿಮ್ಮ ದೈಹಿಕವಾಗಿ ದುರ್ಬಲರಾಗಿದ್ದೀರಿ ಎಂದರ್ಥ. ನಿಮ್ಮಲ್ಲಿ ಹೆಚ್ಚಿನ ಕೋಪವಿದ್ದರೆ ಅದು ಒತ್ತಡವನ್ನು ಹೆಚ್ಚಿಸುತ್ತದೆ. ಇದ್ರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಇಂಥ ವ್ಯಕ್ತಿಗಳು ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ತಣ್ಣೀರಿನ ಸೇವನೆ ಹೆಚ್ಚು ಮಾಡಬೇಕು. ಅಲ್ಲದೆ ನಿತ್ಯ ದೇವರ ಪೂಜೆಯನ್ನು ಮಾಡಬೇಕು.
ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆ : ಈ ಸಮಯದಲ್ಲಿ ನೀವು ಎಚ್ಚರಗೊಂಡರೆ ನಕಾರಾತ್ಮಕ ಶಕ್ತಿ ನಿಮ್ಮನ್ನು ಆವರಿಸುವ ಸಾಧ್ಯತೆ ಇದೆ. ಹಾಗಾಗಿ ದೇವರ ಮೊರೆ ಹೋಗುವುದು ಮುಖ್ಯ. ತಲೆದಿಂಬಿನ ಕೆಳಗೆ ಚೂಪಾದ ವಸ್ತುವನ್ನು ಇಟ್ಟು ಮಲಗಿ. ಕೆಲ ಬಾರಿ ಶ್ವಾಸಕೋಶದ ಸಮಸ್ಯೆಯಿಂದ ಈ ಸಮಯದಲ್ಲಿ ನಿದ್ರಾಭಂಗವಾಗುತ್ತದೆ. ಮೂರು ಗಂಟೆಯಿಂದ ಐದು ಗಂಟೆ ಮಧ್ಯೆ ಪ್ರತಿ ದಿನ ಎಚ್ಚರವಾಗುತ್ತಿದ್ದರೆ ನೀವು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.
ಅಪ್ಪಿತಪ್ಪಿಯೂ ಈ ಜನರಿಗೆ ಸಲಹೆ ನೀಡೋದಕ್ಕೆ ಹೋಗ್ಬೇಡಿ… ನಿಮಗೆ ತೊಂದ್ರೆ ತಪ್ಪಿದ್ದಲ್ಲ
ಬೆಳಗಿನ ಜಾವ 5ರಿಂದ 7 ಗಂಟೆ : ಈ ಸಮಯದಲ್ಲಿ ಅನೇಕರು ಎದ್ದು ತಮ್ಮ ನಿತ್ಯ ಕೆಲಸ ಶುರು ಮಾಡಿರುತ್ತಾರೆ. ಕೆಲವರು ಈ ಸಮಯದಲ್ಲಿ ನಿದ್ರೆ ಮಾಡಲು ಪ್ರಯತ್ನಿಸಿದ್ರೂ ಸಾಧ್ಯವಾಗೋದಿಲ್ಲ. ಅಂಥವರು ಭಾವನಾತ್ಮಕವಾಗಿ ಕುಸಿದಿದ್ದಾರೆ ಎಂದರ್ಥ. ಶಕ್ತಿಯ ಹರಿವು ಹೆಚ್ಚಾಗುವ ಸಮಯ ಇದಾಗಿದ್ದು, ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ.