Death Experience: ಐದು ವರ್ಷಗಳ ಕಾಲ ಸ್ವರ್ಗದಲ್ಲಿದ್ದೆ ಎಂದ ಮಹಿಳೆ, ಸಾವಿನ ನಂತರದ ಅನುಭವವೇ?

By Suvarna NewsFirst Published Feb 1, 2023, 5:10 PM IST
Highlights

ಸಾವಿನ ನಂತರದ ಅನುಭವಗಳು ಹೇಗಿರುತ್ತವೆ ಎನ್ನುವ ಪ್ರಶ್ನೆಗೆ ನಿಖರ ಉತ್ತರವಿಲ್ಲ. ಅದು ಅನುಭವಕ್ಕೇ ದಕ್ಕಬೇಕು. ಆದರೆ, ಆಗ ಯಾರೊಂದಿಗೂ ಅದನ್ನು ಹಂಚಿಕೊಳ್ಳುವ ಸ್ಥಿತಿ ಇರುವುದಿಲ್ಲ ಎನ್ನುವುದು ವಿಪರ್ಯಾಸ. ಸಾವಿನ ಸನಿಹದಲ್ಲಿದ್ದು ಬಂದಿರುವ ಅಮೆರಿಕದ ಡಾ.ಲಿಂಡಾ ಕ್ರೆಮರ್ ಎಂಬಾಕೆ ಇದೀಗ ಸ್ವರ್ಗದ ಅನುಭವಗಳನ್ನು ಹಂಚಿಕೊಂಡು ಕುತೂಹಲ ಮೂಡಿಸಿದ್ದಾರೆ.
 

“ಸತ್ತು ಹೋಗಿಬಿಡಬೇಕು, ಆಗ ಇವರೆಲ್ಲ ಹೇಗೆ ದುಃಖಿಸುತ್ತಾರೆ ಎಂದು ನೋಡಬೇಕು’ ಎಂಬ ಅತ್ಯದ್ಭುತ ಪರಿಕಲ್ಪನೆಯೊಂದು ಬಾಲ್ಯಕಾಲದ ಯಾವುದೋ ಕೋಪದ ಘಳಿಗೆಯಲ್ಲಿ ಮೂಡಿಯೇ ಮೂಡಿರುತ್ತದೆ. ಆದರೆ, ಸಾವಿನ ಬಳಿಕ ನಾವು ಅದನ್ನೆಲ್ಲ ಕಾಣಲು ಸಾಧ್ಯವೇ ಎನ್ನುವ ಪ್ರಶ್ನೆ ಅಂದು ಕಾಡಿರುವುದಿಲ್ಲ. ಅಷ್ಟಕ್ಕೂ ಸಾವಿನ ಬಳಿಕ ಏನಾಗುತ್ತದೆ? ಇದೊಂದು ಬ್ರಹ್ಮಾಂಡದ ಅಸ್ತಿತ್ವವನ್ನೇ ಕಾಣಬಯಸುವ ಪ್ರಶ್ನೆಯಾಗಬಹುದು. ಸಾವಿನ ನಂತರ ಏನಾಗುತ್ತದೆ ಎಂದು ಇದುವರೆಗೆ ಹಲವರು ಹಲವಾರು ರೀತಿಯಲ್ಲಿ ಹೇಳಿದ್ದಾರೆ. ಅವುಗಳಲ್ಲಿ ಯಾವುದು ನಿಜ, ಯಾವುದು ಕಲ್ಪನೆ ಎನ್ನುವುದು ನಮ್ಮ ಅನುಭವಕ್ಕೆ ಬರುವುದು ಸಾಧ್ಯವಿಲ್ಲ. ಆದರೆ, ನಮ್ಮ ಭಾರತೀಯರಲ್ಲಿರುವ ಪುನರ್ಜನ್ಮದ ಪರಿಕಲ್ಪನೆಯಿಂದಾಗಿ ಮರಣದ ಬಳಿಕ ಮತ್ತೊಂದು ಜೀವನವಿದೆ ಎನ್ನುವುದನ್ನು ನಂಬುತ್ತೇವೆ. ಇದಕ್ಕೂ ಸಹ ವೈಜ್ಞಾನಿಕ ಆಧಾರಗಳಿಲ್ಲ. ಆದರೆ, ಸಾವಿನ ಸನಿಹಕ್ಕೆ ಹೋಗಿ ಮರಳಿ ಜೀವ ಪಡೆದುಕೊಂಡ ಹಲವರು ತಮ್ಮ ರೋಚಕ ಅನುಭವಗಳನ್ನು ದಾಖಲಿಸಿದ್ದಾರೆ. ಅಂಥವರಲ್ಲಿ ಅಮೆರಿಕದ ಡಾ.ಲಿಂಡಾ ಕ್ರೆಮರ್ ಎನ್ನುವವರೂ ಒಬ್ಬರು. ನಮ್ಮಲ್ಲಾದರೆ ಪುನರ್ಜನ್ಮ, ಸ್ವರ್ಗ-ನರಕಗಳ ಕಲ್ಪನೆಯಿದೆ. ಹೀಗಾಗಿ, ಸಾವಿನ ಸನಿಹದಲ್ಲಿರುವಾಗ ಒಂದಿಷ್ಟು ಕಾಲ್ಪನಿಕ ಲೋಕಕ್ಕೆ ಹೋಗಿ ಬರುವ ಸಾಧ್ಯತೆಯಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ನಂಬಿಕೆಗಳಿಲ್ಲ. ಆದರೂ, ಲಿಂಡಾ ಕ್ರೆಮರ್ ಸಾವಿನ ನಂತರದ ಅನುಭವಕ್ಕೆ ಒಳಗಾಗಿರುವುದು  ರೋಚಕವೆನಿಸುತ್ತದೆ.

“ಫೈವ್ ಇಯರ್ಸ್ ಇನ್ ಹೆವನ್ (Five Years in Heaven)’ ಎನ್ನುವ ಕೃತಿ 2021ರಲ್ಲಿ ಪ್ರಕಟವಾಗಿದೆ. ಇದರ ಲೇಖಕಿ ಡಾ.ಲಿಂಡಾ ಕ್ರೆಮರ್ (Dr. Lynda Cramer). ಇದರಲ್ಲಿ ಅವರು ತಮ್ಮ ಸಾವಿನ ನಂತರದ (After Death) ಅನುಭವಗಳನ್ನು ಹೇಳಿಕೊಂಡಿದ್ದಾರೆ. 2001ರಲ್ಲಿ ಡಾ.ಲಿಂಡಾ ಅವರು ಸರಿಸುಮಾರು 15 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್ (Clinically Dead) ಎನ್ನುವ ಸ್ಥಿತಿ ತಲುಪಿದ್ದರು. ಮೇ 6ರ ಮುಂಜಾನೆ ಬಾತ್ ರೂಮಿಗೆ ಹೋಗಿದ್ದೊಂದು ನೆನಪು. ಅಷ್ಟೆ, ಬಳಿಕ ಅವರು ಸ್ವರ್ಗದಲ್ಲಿದ್ದರು. 15 ನಿಮಿಷಗಳ ಕಾಲ ವೈದ್ಯಕೀಯವಾಗಿ ಸಾವಿನ ಸ್ಥಿತಿಯಲ್ಲಿದ್ದ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆ ಸಮಯದಲ್ಲಿ “ಸ್ವರ್ಗದಲ್ಲಿ ಐದು ವರ್ಷಗಳನ್ನು ಕಳೆದಂತಹ ಅನುಭವವಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಅವರು ನೀಡಿರುವ ಸಂದರ್ಶನ ಈಗ ಜಗತ್ತಿನೆಲ್ಲೆಡೆ ಭಾರೀ ವೀಕ್ಷಣೆಯಾಗಿದೆ. 

ಸತ್ತವರು ಅದೇ ಮನೆಯಲ್ಲಿ 13 ದಿನ ಇರುತ್ತಾರಾ, ಗರುಡ ಪುರಾಣ ಏನನ್ನುತ್ತೆ?

ಮನೋಸಂಕಲ್ಪದಿಂದ ಸಂಚಾರ
ಸ್ವರ್ಗದ ಪಯಣದಲ್ಲಿ ಡಾ. ಲಿಂಡಾ ಕಂಡಿರುವ ವಿದ್ಯಮಾನ ರೋಮಾಂಚಕವಾದದ್ದು. ಸ್ವರ್ಗದಲ್ಲಿ ಅವರು ಇತರ ಜನರನ್ನು ಭೇಟಿಯಾಗಿದ್ದಾರೆ, ಮಾತನಾಡಿದ್ದಾರೆ. ಮನದಲ್ಲಿ ಸಂಕಲ್ಪ (Decision) ಮಾಡಿಕೊಂಡ ತಕ್ಷಣ ನಿಗದಿತ ಸ್ಥಳಕ್ಕೆ ಹೋಗಿ ತಲುಪುವ ಸಾಮರ್ಥ್ಯ ಅಲ್ಲಿತ್ತು. ಲಿಂಡಾ ಕೂಡ ಇದೇ ಮಾದರಿಯಲ್ಲಿ ಸಾಕಷ್ಟು ಕಡೆ ಸಂಚರಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮೈನವಿರೇಳಿಸುವ ದೃಶ್ಯವೊಂದನ್ನು ವೀಕ್ಷಿಸಿದ್ದರು. 

Astrology Tips: ಸಾವಿನ ನಂತ್ರವೂ ಪುಣ್ಯಬೇಕಂದ್ರೆ ಹೀಗೆ ಮಾಡಿ

ಹೂವಿನ ಮೈದಾನ, ಬೃಹದಾಕಾರದ ಪರ್ವತ ಸಾಲು
'ನಾನು ಹೂವಿನ ಮೈದಾನದಲ್ಲಿ (Field of Flower) ನಿಂತಿರುವ ಹಾಗೆ ಕಾಣುತ್ತಿತ್ತು. ಹೂವುಗಳು ಅತ್ಯದ್ಭುತವಾಗಿದ್ದವು. ಆ ಮೈದಾನದ ಎದುರು ಸಾಲುಸಾಲು ಪರ್ವತಗಳಿದ್ದವು. ಮೌಂಟ್ ಎವರೆಸ್ಟ್ ಶಿಖರಕ್ಕಿಂತ (Mountain) ಸಾವಿರಾರು ಪಟ್ಟು ಎತ್ತರದ ಶಿಖರಗಳ ಸಾಲುಗಳನ್ನು ಕಂಡು ನಿಬ್ಬೆರಗಾದೆ. ಅವುಗಳ ತುದಿ ಗೋಚರಿಸುತ್ತಿರಲಿಲ್ಲ. ಅದೊಂದು ಬೃಹದಾಕಾರವಾದ ಪರ್ವತಗಳ ಪ್ರದೇಶವಾಗಿತ್ತು. ಅಲ್ಲಿನ ಕಟ್ಟಡಗಳು (Buildings) ಗಗನಚುಂಬಿಯಾಗಿದ್ದವು. ನಮ್ಮ ಭೂಮಿಯ ಮೇಲಿರುವ ದುಬೈ ಕೂಡ ಅಲ್ಲಿನ ಕಟ್ಟಡಗಳ ಎದುರು ಮಿನಿಯೇಚರ್ (Miniature) ನಂತೆ ಭಾಸವಾಗುವಂತಿತ್ತು. ಅಲ್ಲಿ ಸುತ್ತಮುತ್ತ ಸರೋವರ (Lakes) ಗಳಿದ್ದವು. ಎಲ್ಲವನ್ನೂ ಒಂದು ದೀರ್ಘವಾದ ನೋಟದಲ್ಲೇ ನೋಡಬಹುದಾಗಿತ್ತು. ಅಲ್ಲಿ ಜನ (People)ರಿದ್ದರು, ಅವರೊಂದಿಗೆ ಸಂಭಾಷಿಸಬಹುದಾಗಿತ್ತು. ಅವರಲ್ಲಿ ಒಬ್ಬಳಾಗಿ ಬೆರೆತೆ, ಇದು ಸರಿಸುಮಾರು ಐದು ವರ್ಷಗಳ ಅನುಭವ (Experience)’ ಎಂದು ಡಾ.ಲಿಂಡಾ ಹೇಳಿಕೊಂಡಿದ್ದಾರೆ. 

click me!