Planet Jupiter: ಶುಭ ಕೆಲಸಕ್ಕೆ ಕೈಹಾಕುವ ಮುನ್ನ ಗುರುಬಲ ತಿಳಿಯುವುದು ಹೇಗೆ?

By Suvarna News  |  First Published Feb 15, 2022, 2:28 PM IST

ಯಾವುದೇ ಶುಭ ಕೆಲಸಕ್ಕೆ ಮುಂದಾಗುವ ಮುನ್ನ ನಿಮಗೆ ಗುರುಗ್ರಹದ ಬಲ ಇದೆಯೇ ಇಲ್ಲವೇ ಎಂದು ತಿಳಿದು ಮುಂದಡಿಯಿಡುವುದು ಉತ್ತಮ. ಅದನ್ನು ನಿರ್ಣಯಿಸುವುದು ಹೇಗೆ?


ಯಾವುದೇ ಒಳ್ಳೆಯ (Auspicious) ಅಥವಾ ದೊಡ್ಡ ಕೆಲಸಕ್ಕೆ ಮುಂದಾಗುವ ಮೊದಲು ನಿಮಗೆ ಈಗ ಗುರುಬಲ (Guru's strength) ಇದೆಯೇ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳಿ. ಗುರುವಿನ ಬಲ ಇರುವಾಗ ಮಾತ್ರ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರೆವೇರುವುದು. ನೀವು ಮನೆ ಕಟ್ಟಿಸುವ ಕಾರ್ಯವು ಸಹ ಬೇಗ ಪರಿಪೂರ್ಣಗೊಳ್ಳುತ್ತದೆ. ಯಾವುದೇ ವಿಶೇಷ ಕಾರ್ಯಗಳಿಗೆ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಗುರುಬಲ ಇಲ್ಲದೆ ಇರುವಾಗ ಯಾವುದೇ ವಿಶೇಷ ಕಾರ್ಯಗಳಿಗೆ ಕೈ ಹಾಕಬಾರದು.

ಅದನ್ನು ತಿಳಿಯುವುದು ಹೀಗೆ- ನಿಮ್ಮ ಜನ್ಮರಾಶಿಯಿಂದ ಈಗಿನ ಗೋಚಾರ ರಾಶಿಯಲ್ಲಿ ಗುರು ಎಲ್ಲಿದ್ದಾನೆ ಎಂಬುದನ್ನು ನೋಡಿ. ಗುರುವು ನಿಮ್ಮ ರಾಶಿಯಲ್ಲಿ 2-5-7-9-11ನೇ ಸ್ಥಾನಗಳಲ್ಲಿ ಇದ್ದರೆ ನಿಮಗೆ ಗುರುಬಲ ಇರುತ್ತದೆ.

Latest Videos

undefined

ಎಂಟು ಮಂದಿ ಚಿರಂಜೀವಿಗಳನ್ನು ನಿತ್ಯ ಸ್ಮರಿಸಿದರೆ ದೀರ್ಘಾಯುಷ್ಯ!

1. ಮೇಷ (Aries) ರಾಶಿಯವರಿಗೆ ಗುರುವು ವೃಷಭ ರಾಶಿ, ಸಿಂಹರಾಶಿ, ತುಲಾರಾಶಿ, ಧನಸ್ಸು ರಾಶಿ ಮತ್ತು ಕುಂಭ ರಾಶಿಯಲ್ಲಿ ಇರುವಾಗ ಗುರುವಿನ ಬಲ ಇರುತ್ತದೆ.
2. ವೃಷಭ (Taurus) ರಾಶಿಯವರಿಗೆ ಗುರುವು ಮಿಥುನ ರಾಶಿ, ಕನ್ಯಾರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಮತ್ತು ಮೀನ ರಾಶಿಯಲ್ಲಿ ಇರುವಾಗ ಗುರುವಿನ ಬಲ ಇರುತ್ತದೆ.
3. ಮಿಥುನ (Gemini) ರಾಶಿಯವರಿಗೆ ಕಟಕ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಕುಂಭ ರಾಶಿ ಮತ್ತು ಮೇಷ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
4. ಕಟಕ (Cancer) ರಾಶಿಯವರಿಗೆ ಸಿಂಹ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಮೀನ ರಾಶಿ ಮತ್ತು ವೃಷಭ ರಾಶಿಯಲ್ಲಿ ಗುರು ಇರುವಾಗ ಗುರುಬಲ ಇರುತ್ತದೆ.
5. ಸಿಂಹ (Leo) ರಾಶಿಯವರಿಗೆ ಕನ್ಯಾರಾಶಿ, ಧನಸ್ಸು ರಾಶಿ, ಕುಂಭ ರಾಶಿ, ಮೇಷ ರಾಶಿ ಮತ್ತು ಮಿಥುನ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
6. ಕನ್ಯಾ (Virgo) ರಾಶಿಯವರಿಗೆ ತುಲಾರಾಶಿ, ಮಕರ ರಾಶಿ, ಮೀನ ರಾಶಿ, ವೃಷಭ ರಾಶಿ ಮತ್ತು ಕಟಕ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
7. ತುಲಾ (Libra) ರಾಶಿಯವರಿಗೆ ವೃಶ್ಚಿಕ ರಾಶಿ, ಕುಂಭ ರಾಶಿ, ಮೇಷ ರಾಶಿ, ಮಿಥುನ ರಾಶಿ ಮತ್ತು ಸಿಂಹ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
8. ವೃಶ್ಚಿಕ (Scorpio) ರಾಶಿಯವರಿಗೆ ಧನಸ್ಸು ರಾಶಿ, ಮೀನ ರಾಶಿ, ವೃಷಭ ರಾಶಿ, ಕಟಕ ರಾಶಿ ಮತ್ತು ಕನ್ಯಾ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
9. ಧನಸ್ಸು (Sagittarius) ರಾಶಿಯವರಿಗೆ ಮಕರ ರಾಶಿ, ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ ಮತ್ತು ತುಲಾ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
10. ಮಕರ (Capricorn) ರಾಶಿಯವರಿಗೆ ಕುಂಭ ರಾಶಿ, ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
11. ಕುಂಭ (Aquarius) ರಾಶಿಯವರಿಗೆ ಮೀನ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.
12. ಮೀನ (Pisces) ರಾಶಿಯವರಿಗೆ ಮೇಷ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮಕರ ರಾಶಿಯಲ್ಲಿ ಗುರು ಇರುವಾಗ ಗುರುವಿನ ಬಲ ಇರುತ್ತದೆ.

Mythology: ಶ್ರೀಕೃಷ್ಣ ಶಿವನೊಡನೆ ಯುದ್ಧ ಮಾಡಿದ್ದೇಕೆ?

ಯಾವುದೇ ರಾಶಿಯವರಿಗೆ ಆಗಲಿ ಗುರುವು ಮಕರ ರಾಶಿಯಲ್ಲಿ ಇರುವಾಗ ನೀಚನಾಗುವುದರಿಂದ ಹಾಗೂ ನಿರ್ಬಲನಾಗುವುದರಿಂದ ಗುರುವಿನ ಪೂರ್ಣಫಲ ದೊರೆಯುವುದಿಲ್ಲ. ಆದ್ದರಿಂದ ಗುರುವು ಈ ರಾಶಿಯಲ್ಲಿ ಇರುವಾಗ ನಿಮ್ಮ ಕೆಲಸ ಕಾರ್ಯಗಳ ಕಡೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗುವ ಸಾಧ್ಯತೆ ಅಥವಾ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ.

ಅದೇ ರೀತಿ ಗುರುವು ಉಚ್ಚಕ್ಷೇತ್ರವಾದ ಕಟಕ ರಾಶಿಯಲ್ಲಿ ಹಾಗೂ ತನ್ನ ಸ್ವಕ್ಷೇತ್ರಗಳಾದ ಧನಸ್ಸು, ಮೀನ ರಾಶಿಯಲ್ಲಿ ಬಲಿಷ್ಠನಾಗಿ ಇರುವುದರಿಂದ ಈ ಗುರುವು ಗೋಚರ ಫಲದಲ್ಲಿ ಯಾವುದೇ ಪಾಪ ಗ್ರಹಗಳಾದ ಶನಿ (Saturn), ರಾಹು, ಕೇತು, ಕುಜ, ಇವರ ದೃಷ್ಟಿ ಗುರುವಿನ ಮೇಲೆ ಇಲ್ಲದೆ ಇದ್ದರೆ ನಿಮ್ಮ ಕೆಲಸ ಕಾರ್ಯಗಳು ಹಾಗೂ ನೀವು ಮಾಡಬೇಕೆಂದಿರುವ ಶುಭ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಈ ಸಮಯದಲ್ಲಿ ನಿಮ್ಮ ಯಾವುದೇ ಉದ್ಯೋಗ, ವ್ಯಾಪಾರ ವ್ಯವಹಾರಗಳು ಸಹ ಲಾಭ ತಂದು ಕೊಡುತ್ತವೆ. ಆದ್ದರಿಂದ ಯಾವುದೇ ಕೆಲಸ ಕಾರ್ಯಗಳು ಕೈಗೂಡ ಬೇಕೆಂದರೂ ನಮಗೆ ಗುರುಬಲ ಇದೆಯೆ ಇಲ್ಲವೆ ಎಂದು ತಿಳಿದುಕೊಂಡು ನಮಗೆ ಗುರುಬಲ ಇರುವಾಗ ಯಾವುದೇ ಕೆಲಸ ಕಾರ್ಯಗಳಿಗೂ ಪ್ರಯತ್ನಿಸಬೇಕು.

click me!