ಭಾವನಾತ್ಮಕವಾಗಿ ಇನ್ನೊಬ್ರೊಟ್ಟಿಗೆ ಕನೆಕ್ಟ್ ಆಗ್ತಿಲ್ವಾ? ಈ ನಂಬರ್ ನಿಮ್ಮಿಂದ ಮಿಸ್ ಆಗಿರುತ್ತೆ!

By Suvarna News  |  First Published Dec 4, 2023, 2:07 PM IST

ನಿಮ್ಮ ವ್ಯಕ್ತಿತ್ವವೇಕೆ ಹೀಗಿದೆ ಎನ್ನುವ ಪ್ರಶ್ನೆಗೆ ಸಂಖ್ಯಾಶಾಸ್ತ್ರದ ಚಾರ್ಟ್‌ ನಲ್ಲಿ ಮಿಸ್ಸಿಂಗ್‌ ಆಗಿರುವ ಸಂಖ್ಯೆಗಳು ಉತ್ತರ ನೀಡುತ್ತವೆ. ಈ ಬಗ್ಗೆ ಜ್ಞಾನ ಹೊಂದಿದಾಗ ಸ್ವ ಅರಿವು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಮೂಲ ಗುಣ ಹೇಗೆಯೇ ಇದ್ದರೂ ಮಾನವ ಸಹಜ ಪ್ರಯತ್ನದಿಂದ ಅದನ್ನು ತಿದ್ದಿಕೊಳ್ಳಲು ಅಥವಾ ಕೊರತೆಯನ್ನು ತುಂಬಿಕೊಳ್ಳಲು ಸಾಧ್ಯವಾಗುತ್ತದೆ. 


ಸಂಖ್ಯೆಗಳೊಂದಿಗೆ ನಮ್ಮ ಜೀವನಕ್ಕಿರುವ ಸಂಬಂಧವನ್ನು ತಿಳಿಸುವ ಸಂಖ್ಯಾಶಾಸ್ತ್ರದ ಮೂಲಕ ನಮ್ಮ ಹಲವು ಗುಣಸ್ವಭಾವ, ವರ್ತನೆಗಳನ್ನು ವಿಮರ್ಶೆಗೆ ಒಡ್ಡಬಹುದು. ಸಂಖ್ಯಾಶಾಸ್ತ್ರ ನಮ್ಮ ಭವಿಷ್ಯ ಹಾಗೂ ಜೀವನದ ಮಾರ್ಗಗಳನ್ನು ಬಹಳ ಸ್ಪಷ್ಟವಾಗಿ ತಿಳಿಸುವಂಥದ್ದು. ಪ್ರತಿ ವ್ಯಕ್ತಿಯ ಸಂಖ್ಯಾಶಾಸ್ತ್ರದ ಚಾರ್ಟ್‌ ನಲ್ಲಿ ಕೆಲವು ಸಂಖ್ಯೆಗಳು ಮಿಸ್‌ ಆಗಿರುತ್ತವೆ. ಅಂದರೆ, ಅವು ನಮ್ಮ ಜೀವನಕ್ಕೆ ಕೊಡುಗೆ ನೀಡುವುದಿಲ್ಲ. ಕೆಲವರು ಎಷ್ಟೇ ಚುರುಕಾಗಿದ್ದರೂ ಕೆಲವು ಗುಣಗಳನ್ನು ಹೊಂದಿರುವುದಿಲ್ಲ. ಇದಕ್ಕೆ ಮಿಸ್‌ ಆಗಿರುವ ಸಂಖ್ಯೆಗಳೇ ಕಾರಣವಾಗಿವೆ ಎನ್ನುತ್ತದೆ ಸಂಖ್ಯಾಶಾಸ್ತ್ರ. ನಮ್ಮ ಸಂಖ್ಯಾಶಾಸ್ತ್ರದ ಚಾರ್ಟ್‌ ಒಂದು ರೀತಿಯಲ್ಲಿ ಕಾಸ್ಮಿಕ್‌ ಮ್ಯಾಪ್‌ ಇದ್ದಂತೆ. ಅದು ನಮ್ಮ ಸಾಮರ್ಥ್ಯ, ಶಕ್ತಿ, ದೌರ್ಬಲ್ಯಗಳನ್ನು ತಿಳಿಸಬಲ್ಲದು. ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಯೂ ಅದರದ್ದೇ ಆಗ ಎನರ್ಜಿ ಹೊಂದಿದೆ. ಆ ಸಂಖ್ಯೆ ನಮ್ಮ ಚಾರ್ಟ್‌ ನಲ್ಲಿ ಇಲ್ಲದೇ ಹೋದರೆ ಅಲ್ಲೊಂದು ಖಾಲಿತನ ಸೃಷ್ಟಿಯಾಗಿರುತ್ತದೆ. ಅದು ನಮ್ಮ ವ್ಯಕ್ತಿತ್ವ ಹಾಗೂ ಅನುಭವಗಳ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತದೆ. ಯಾವ ನಂಬರ್‌ ನಿಮ್ಮಿಂದ ಮಿಸ್‌ ಆಗಿದೆ ಎನ್ನುವುದನ್ನು ಕಂಡುಕೊಳ್ಳಲು ಮೊದಲು ನಿಮ್ಮ ಜನ್ಮರಾಶಿ ಹಾಗೂ ಜನ್ಮದಿನಾಂಕವನ್ನು ಆಧರಿಸಿ ಸಂಖ್ಯಾಶಾಸ್ತ್ರದ ಚಾರ್ಟ್‌ ಸಿದ್ಧಪಡಿಸಿಕೊಳ್ಳಬೇಕು. ಅದರಲ್ಲಿ ಯಾವ ಸಂಖ್ಯೆ ಇಲ್ಲ ಎನ್ನುವುದನ್ನು ಗುರುತಿಸಿಕೊಳ್ಳಬೇಕು. ಕೆಲವು ಸಂಖ್ಯೆ ಮಿಸ್‌ ಆದಾಗ ವ್ಯಕ್ತಿತ್ವದಲ್ಲಿ ನಿರ್ದಿಷ್ಟ ಕೊರತೆ ಕಂಡುಬರುತ್ತದೆ. 

ಸಂಖ್ಯೆ 1: ಸ್ವತಂತ್ರ ಧೋರಣೆ (Independent Thinking) ಮತ್ತು ನಾಯಕತ್ವ (Leadership Quality)
ನಿಮ್ಮ ಸಂಖ್ಯಾಶಾಸ್ತ್ರದ ಚಾರ್ಟ್‌ ನಲ್ಲಿ 1 ಮಿಸ್‌ ಆಗಿದ್ದರೆ ನೀವು ಎಷ್ಟೇ ಚುರುಕಾಗಿದ್ದರೂ, ಬುದ್ಧಿವಂತರಾಗಿದ್ದರೂ ನಿಮ್ಮಲ್ಲಿ ಸ್ವತಂತ್ರ್ಯ ಮನೋಭಾವದ ಕೊರತೆ ಕಂಡುಬರುತ್ತದೆ. ಹಾಗೆಯೇ, ಮುಂದಾಳುತ್ವ (Leadership) ವಹಿಸಲು ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮ ಸುತ್ತ ಮುತ್ತ ಇರುವ ಕೆಲವರನ್ನು ನೋಡಿ, ಅವರು ಎಷ್ಟೇ ಚುರುಕಾಗಿ ವಿಷಯ ಗ್ರಹಿಸಿದರೂ ಅಥವಾ ಬುದ್ಧಿವಂತರಾಗಿದ್ದರೂ ಸ್ವತಂತ್ರವಾಗಿ ಯಾವುದಾದರೂ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಅವರಲ್ಲಿ ಈ ಸಂಖ್ಯೆಯ ಕೊರತೆ ಇರುವ ಸಾಧ್ಯತೆ ಹೆಚ್ಚು. ಈ ಕೊರತೆಯನ್ನು ತುಂಬಲು ನೀವು ಸ್ವಅನ್ವೇಷಣೆಯ ಬುದ್ಧಿ ಹಾಗೂ ಖಚಿತತೆಯನ್ನು ಬೆಳೆಸಿಕೊಳ್ಳಬೇಕು.

ಸಂಖ್ಯಾಶಾಸ್ತ್ರದ ಪ್ರಕಾರ 2024ರ ಭವಿಷ್ಯ ಹೇಗಿರುತ್ತೆ? ನಿಮಗೆ ತರುತ್ತಾ ಲಕ್?

Latest Videos

undefined

ಸಂಖ್ಯೆ 5: ಬದಲಾವಣೆ (Change)
ಒಂದೊಮ್ಮೆ ನಿಮ್ಮ ಚಾರ್ಟ್‌ ನಲ್ಲಿ 5 ಇಲ್ಲದೇ ಹೋದರೆ, ನೀವು ಸುಲಭವಾಗಿ ಬದಲಾವಣೆಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಸಂಖ್ಯೆ ಸಾಹಸಿ ಧೋರಣೆಯನ್ನು ತುಂಬಬಲ್ಲದು. ಆದರೆ, ಬದಲಾವಣೆ ಒಪ್ಪಿಕೊಳ್ಳದ ಜನ ರು ಹಳೆಯ ದೃಷ್ಟಿಕೋನದಿಂದಲೇ ಸಮಾಜವನ್ನು ನೋಡುತ್ತಾರೆ. ಹೊಸ ವಿಚಾರಗಳನ್ನು, ಹೊಸತನವನ್ನು ಸ್ವಾಗತಿಸುವುದಿಲ್ಲ. ಇದನ್ನು ಅರಿತುಕೊಂಡಾಗ, ಬದಲಾವಣೆಯ ಸನ್ನಿವೇಶವನ್ನು ಮುಕ್ತಮನದಿಂದ ಸ್ವಾಗತಿಸಲು, ಹೊಸ ಅನುಭವಗಳನ್ನು ಒಪ್ಪಿಕೊಳ್ಳಲು ಪ್ರಯತ್ನಿಸಬಹುದು.

ಸಂಖ್ಯೆ 7: ಆಂತರಿಕ ಶಕ್ತಿ (Inner Wisdom) ಗುರುತಿಸಿ
ನಿಮ್ಮ ಸಂಖ್ಯಾಶಾಸ್ತ್ರದ ಚಾರ್ಟ್‌ ನಲ್ಲಿ 7 ಇಲ್ಲದಿರುವ ಸಮಯದಲ್ಲಿ ನೀವು ಆತ್ಮಾವಲೋಕನ (Introspection) ಮಾಡಿಕೊಳ್ಳಲು ಹೋರಾಟ ಮಾಡುತ್ತೀರಿ. ನಿಮ್ಮ ಆಂತರಿಕ ಶಕ್ತಿಯನ್ನು ಗುರುತಿಸಿಕೊಳ್ಳಲು ಮುಂದಾಗುವುದಿಲ್ಲ. ಆದರೆ, ನಿಮ್ಮ ಸಾಮರ್ಥ್ಯ ಏನೆಂಬುದನ್ನು ಕಂಡುಕೊಂಡಾಗ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ. ಆತ್ಮಾವಲೋಕನಕ್ಕೆ ಮುಂದಾಗುವ ಮೂಲಕ ನಿಮ್ಮ ಪ್ರಗತಿಗೆ ದಾರಿ ಮಾಡಿಕೊಳ್ಳಬಹುದು.

ರಾಹು- ಕೇತು ಕಾಟ ಕೊಡೋದು ಮಾತ್ರವಾ? ಈ ಗ್ರಹಗಳ ಧನಾತ್ಮಕ ಮುಖ ತಿಳಿದರೆ ಆಶ್ಚರ್ಯಪಡ್ತೀರಿ!

ಸಂಖ್ಯೆ 9: ಪ್ರೀತಿ, ಸಹಾನುಭೂತಿ (Empathy)
9ನೇ ಸಂಖ್ಯೆ ನಿಮ್ಮಿಂದ ಮಿಸ್‌ ಆಗಿದ್ದರೆ ಭಾವನಾತ್ಮಕವಾಗಿ ಇತರರೊಂದಿಗೆ ಸಂಬಂಧ (Relation) ಹೊಂದಲು ನಿಮಗೆ ಕಷ್ಟವಾಗುತ್ತದೆ. ಇದರಿಂದಾಗಿ ನಿಮ್ಮಲ್ಲಿ ಮಾನವೀಯ ಗುಣಗಳು ಕಡಿಮೆಯಾಗಬಹುದು. ಪ್ರೀತಿ, ಸಹಾನುಭೂತಿ ಇಲ್ಲದ ವ್ಯಕ್ತಿಗಳು ಕ್ರೂರಿಯಾಗುವ ಸಾಧ್ಯತೆ ಹೆಚ್ಚು. ಇದರಿಂದ ಸಂಬಂಧಗಳನ್ನು ಚೆನ್ನಾಗಿ ನಿರ್ವಹಣೆ ಮಾಡಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಸಂಬಂಧಗಳನ್ನು ಉತ್ತಮವಾಗಿಸಿಕೊಳ್ಳಲು  ಸಹಾನುಭೂತಿ ಅಳವಡಿಸಿಕೊಳ್ಳಲು ಯತ್ನಿಸಬೇಕು. 
 

click me!