
ರಾಶಿಚಕ್ರದ ಚಿಹ್ನೆಗಳು ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಪ್ರೀತಿಯನ್ನು ಕಂಡುಕೊಳ್ಳುವಲ್ಲಿ ಕೆಲ ರಾಶಿಯವರು ಯಶಸ್ವಿಯಾಗುತ್ತಾರೆ. 12 ರಾಶಿಗಳು(12 Rasis) ಕೂಡ ನೀವು ಹೇಗೆ ಪ್ರೀತಿಯನ್ನು ಪ್ರದರ್ಶಿಸಲು ಇಷ್ಟಪಡುತ್ತೀರಿ ಎಂಬುದನ್ನು ತಿಳಿಸಿಕೊಡುತ್ತವೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಮೇಷ ರಾಶಿ(Aries): ಪ್ರೀತಿಯ ವಿಚಾರದಲ್ಲಿ ಮೆಷ ರಾಶಿಯವರು ಬಹಿರಂಗ ಸನ್ನೆಗಳಿಗನ್ನು ವ್ಯಕ್ತಪಡಿಸಲ್ಲ. ಅವರು ಮನಸ್ಸಿನ ಮಾತನ್ನು ಹೆಚ್ಚು ನಂಬುತ್ತಾರೆ. ಈ ರಾಶಿ ಯವರಿಗೆ ಅಂತರಂಗದ ಭಾವನೆ(gut feeling)ಗಳನ್ನು ಹಂಚಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲ.
ವೃಷಭ ರಾಶಿ(Taurus): ವೃಷಭ ರಾಶಿಯವರು ದೃಢ ಮತ್ತು ನಿಷ್ಠಾವಂತ(Loyal)ವ್ಯಕ್ತಿಗಳಾಗಿದ್ದು, ಅವನು/ಅವಳಿಗೆ ತಮ್ಮ ಪ್ರೀತಿಯ ಕುರಿತು ಗೊಂದಲ ಇರುವುದಿಲ್ಲ. ಇವರು ತಮ್ಮ ಸಂಗಾತಿಯನ್ನು ಮುದ್ದಿಸಲು ಇಷ್ಟಪಡುತ್ತಾರೆ.
ಮಿಥುನ ರಾಶಿ(Gemini): ಮಿಥುನ ರಾಶಿಯವರಿಗೆ ಬಯಸಿದ ಪ್ರೀತಿಯನ್ನು ಹುಡುಕಲು ಕಷ್ಟವಾಗಬಹುದು. ಆದರೆ ಅವರು ಮನಸ್ಸು ಮಾಡಿದರೆ ಹಿಂತಿರುಗುವ ಮಾತಿಲ್ಲ. ಅವನು/ಅವಳು ಡೇಟಿಂಗ್ (dating)ಮಾಡುತ್ತಿದ್ದರೆ ಅನೇಕ ಸರ್ಪ್ರೈಸ್’ಗಳನ್ನು ನಿರೀಕ್ಷಿಸಬಹುದು.
ಕಟಕ ರಾಶಿ(Cancer): ಕಟಕ ರಾಶಿಯವರು ಅರ್ಥಪೂರ್ಣ ಸಂಭಾಷಣೆಗಳೊಂದಿಗೆ ತಮ್ಮ ಸಂಗಾತಿಯನ್ನು ತಿಳಿದುಕೊಳ್ಳುತ್ತಾರೆ. ಮೊದಲ ಭೇಟಿಯಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಬಾಲ್ಯದ ನೆನಪು(childhood memory)ಗಳು ಮೆಲುಕು ಹಾಕುವಿರಿ. ಈ ರಾಶಿಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ ಕಾಳಜಿಯುಳ್ಳ ಸಂಬಂಧ ನಿರೀಕ್ಷಿಸಬಹುದಾಗಿದೆ.
ಸಿಂಹ ರಾಶಿ (Leo): ಇವರು ಪ್ರೀತಿಯಲ್ಲಿದ್ದಾಗ ಜಗತ್ತಿಗೆ ತನ್ನ ಪ್ರೀತಿ(Love)ಯನ್ನುತೋರಿಸಲು ಇಷ್ಟಪಡುತ್ತಾರೆ. ಅವನು/ಅವಳು ಉಡುಗೊರೆಗಳನ್ನು ನೀಡಲು ಮತ್ತು ಸ್ವೀಕರಿಸಲು ಇಷ್ಟಪಡುತ್ತಾರೆ. ಯಾರಿಗಾದರೂ ಸಹಾಯ ಮಾಡುವಾಗ ಹೆಚ್ಚು ಅಗತ್ಯವಿದೆಯೆಂದು ಭಾವಿಸುತ್ತಾರೆ. ಆದ್ದರಿಂದ ಅವರ ಮೇಲೆ ಒಲವು ತೋರಲು ಹಿಂಜರಿಯದಿರಿ.
ಕನ್ಯಾರಾಶಿ(Virgo): ಕನ್ಯಾರಾಶಿಯವರು ಜನರನ್ನು ಆಕರ್ಷಿಸುವುದು ಸಹಜ. ಬೇಗನೇ ಇಷ್ಟಪಡದ ಸ್ವಭಾವ ಮತ್ತು ಉತ್ತಮ ವ್ಯಕ್ತಿಯನ್ನು ಹುಡುಕುವ ಬಯಕೆ ಇರುತ್ತದೆ. ಇತರ ರಾಶಿಗಳಿಗಿಂತ ಇವರು ಹೆಚ್ಚು ಅದೃಷ್ಟವಂತರಾಗಿದ್ದಾರೆ.
ತುಲಾ ರಾಶಿ(Libra): ನೀವು ತುಲಾ ರಾಶಿಯವರ ಜೊತೆ ಡೇಟಿಂಗ್ ಮಾಡುತ್ತಿದ್ದರೆ ಒಳ್ಳೆಯ ಪ್ರೀತಿಯನ್ನು ನಿರೀಕ್ಷಿಸಬಹುದು. ದಯೆ(kindness), ಶಾಂತ ಮತ್ತು ಸಮತೋಲಿತ ಗುಣದವರಾಗಿರುತ್ತಾರೆ. ವಾರ್ಷಿಕೋತ್ಸವಕ್ಕಾಗಿ ಕ್ಯಾಂಡಲ್-ಲೈಟ್ ಡಿನ್ನರ್’ನಿಂದ ನಿಮ್ಮನ್ನು ಅಚ್ಚರಿಗೊಳಿಸಬಹುದು.
ವೃಶ್ಚಿಕ ರಾಶಿ(Scorpio): ಈ ರಾಶಿಯವರು ಪ್ರೀತಿಯಲ್ಲಿ ಬಿದ್ದಾಗ ತಮ್ಮ ಭಾವನೆ(feeling)ಗಳನ್ನು ಮೌಖಿಕವಾಗಿ ಹೇಳಲು ಹಿಂಜರಿಯುತ್ತಾರೆ. ಆದ್ದರಿಂದ ಪ್ರೀತಿಯನ್ನು ಪ್ರದರ್ಶಿಸಲು ಇತರ ಮಾರ್ಗಗಳನ್ನು ಅವಲಂಬಿಸಿರಬಹುದು.
ಧನು ರಾಶಿ(Sagittarius): ಇವರು ಮುಕ್ತ ಮನೋಭಾವದವರಾಗಿದ್ದು, ಅವನ/ಅವಳಿಗೆ ಪ್ರೀತಿಯನ್ನು ಗುರುತಿಸುವುದು ಕಷ್ಟವಾಗಬಹುದು. ಅವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವಲ್ಲಿ ಕಷ್ಟಪಡುತ್ತಾರೆ.
ಮಕರ ರಾಶಿ(Capricorn): ಅವನು/ಅವಳು ತಮ್ಮ ಕೆಲಸಗಳ ಮೂಲಕ ಮಾತನಾಡುತ್ತಾರೆ. ಪ್ರೀತಿಯ ವಿಷಯಗಳಿಗೆ ಮಕರ ರಾಶಿಯವರಿಗೆ ಹೆಚ್ಚು ಒತ್ತನ್ನು ನೀಡಲ್ಲ. ಬದಲಾಗಿ, ಭವಿಷ್ಯ(future)ವನ್ನು ರೂಪಿಸಲು ಅವರು ಪ್ರಯತ್ನವನ್ನು ಮಾಡುತ್ತಿರುತ್ತಾರೆ.
ಕುಂಭ ರಾಶಿ(Aquarius): ಈ ರಾಶಿಯವರ ಸ್ವಭಾವ ಊಹಿಸಲು ಕಷ್ಟವಾಗುತ್ತದೆ ಮತ್ತು ಸಂಬಂಧದಲ್ಲಿ ಸಿಕ್ಕಿಬೀಳುವ ಬಗ್ಗೆ ಇವರು ಎಚ್ಚರದಿಂದಿರುತ್ತಾರೆ. ಅವನು/ಅವಳಿಗೆ ಸಮಯ ನೀಡಿದರೆ ದಿನದಿಂದ ದಿನಕ್ಕೆ ಹತ್ತಿರವಾಗುತ್ತಾರೆ.ದಿನಕಳೆದಂತೆ ಅವನ/ಅವಳ ಪ್ರತಿಯೊಂದು ಅಗತ್ಯವನ್ನು ಹೇಳದೆಯೇ ನೋಡಿಕೊಳ್ಳುತ್ತಾರೆ.
ಮೀನ ರಾಶಿ(pisces): ಮೀನ ರಾಶಿಯವರು ಪ್ರೇಮಾ ಲೋಕದಲ್ಲಿ ವಿಹರಿಸಲು ಇಷ್ಟಪಡುತ್ತಾರೆ ಮತ್ತು ಯಾವಾಗಲೂ ಪ್ರೀತಿಯನ್ನು ಪೂರ್ಣವಾಗಿ ಅನುಭವಿಸಲು ಇಷ್ಟಪಡುತ್ತಾರೆ. ಅವನು/ಅವಳಿಗೆ ತಮ್ಮ ಪ್ರೀತಿಯನ್ನು ಹುಡುಕಲು ಹೆಚ್ಚು ಸಮಯದ ಅವಶ್ಯಕತೆ ಇರಲ್ಲ.