ಕನಸಲ್ಲಿ ಹಾವು, ಕುದುರೆ, ಟಗರು ಕಂಡರೆ ಏನರ್ಥ, ಗೊತ್ತೆ?

By Suvarna NewsFirst Published Oct 22, 2020, 4:54 PM IST
Highlights

ಕೆಲವೊಮ್ಮೆ ನಾವು ಕನಸಿನಲ್ಲಿ ನಾನಾ ಪ್ರಾಣಿ ಪಕ್ಷಿಗಳನ್ನು ಕಾಣುತ್ತೇವೆ. ಇದೆಲ್ಲ ಸುಮ್ಮನೇ ಬರುವುದಿಲ್ಲ. ಒಂದೊಂದಕ್ಕೂ ಒಂದೊಂದು ಅರ್ಥವಿರುತ್ತದೆ.

ಹಾವು: ಕನಸಿನಲ್ಲಿ ಹಾವುಗಳು ಬರುವುದು ಸಾಮಾನ್ಯ. ಆದರೆ ಸರ್ಪರಾಜ ಸುಬ್ರಹ್ಮಣ್ಯ ಕನಸಿನಲ್ಲಿ ಬಂದರೆ, ನಿಮ್ಮ ಚರ್ಮದ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೋ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ, ಕಾಡಲಿದೆ ಎಂದರ್ಥ. ಕುಕ್ಕೆ ಅಥವಾ ಘಾಟಿ ಸುಬ್ರಹ್ಮಣ್ಯನಿಗೆ ಮುಡಿಪು ಕಟ್ಟುವ ಮೂಲಕ ಈ ಕನಸು ಪದೇ ಪದೇ ಬೀಳುವುದನ್ನು ತಪ್ಪಿಸಬಹುದು. ಇನ್ನು ಸರ್ಪ ಹೆಡೆ ತೆರೆದು ಪೂತ್ಕರಿಸಿದರೆ ಹಾಗೂ ಅದರ ಬಣ್ಣ ಸ್ವಚ್ಛ ಗೋಧಿ ಬಣ್ಣದ್ದಾಗಿರದೆ ಮಿಶ್ರಿತವಾಗಿದ್ದರೆ, ಆಗ ನಿಮ್ಮ ಕಾಮನೆಗಳು ಸರಿಯಾಗಿ ಈಡೇರುತ್ತಿಲ್ಲ ಎಂರ್ಥ. ಅಂದರೆ ನಿಮಗೆ ಸೆಕ್ಸ್ ಸಾಕಷ್ಟು ಸಿಗದೆ ಇರಬಹುದು. ಪಾಶ್ಚಾತ್ಯ ಮನಶ್ಶಾಸ್ತ್ರ ಪಂಡಿತರಾದ ಸಿಗ್ಮಂಡ್ ಫ್ರಾಯ್ಡ್ ಮುಂತಾದವರೂ ಸಹ, ಕನಸಿನಲ್ಲಿ ಹಾವು ಕಾಣುವುದು ಕಾಮದ ಸಂಕೇತ ಎಂದಿದ್ದಾರೆ. ಸುರುಳಿ ಸುತ್ತಿ ಮಲಗಿದ ಹಾವು, ನೀವು ಈಡೇರಿಸಿಕೊಳ್ಳಬೇಕಾದ ಆಕಾಂಕ್ಷೆಗಳನ್ನು ಸೂಚಿಸಬಹುದು. ಎರಡು ಅಥವಾ ಮೂರು ಹಾವುಗಳು ಜೊತೆಯಾಗಿ ಕಾಣಿಸಿಕೊಂಡರೆ ನಿಮಗೆ ಗಂಭೀರ ಆರೋಗ್ಯ ಸಮಸ್ಯೆಯಿದೆ ಎಂದರ್ಥ.

ಕುದುರೆ: ಮುಂದಿನ ಎರಡೂ ಕಾಲುಗಳನ್ನು ಎತ್ತಿ ಕೆನೆಯುತ್ತಿರುವ ಕುದುರೆ ಸಹ ಕಾಮದ ಸಂಕೇತ. ಇದನ್ನು ನೋಡಿದರೆ ನೀವು ಇಷ್ಟಪಟ್ಟ ಯಾವುದೋ ಹೆಣ್ಣು ಅಥವಾ ಪುರುಷನ ಜೊತೆಗೆ ಕಾಮವನ್ನು ಅಪೇಕ್ಷಿಸಿದ್ದೀರಿ. ಅದು ಕೈಗೂಡುವ ಹಂತದಲ್ಲಿರಬಹುದು ಅಥವಾ ನಿರಾಶೆ ಉಂಟಾಗಿರಬಹುದು. ಸುಮ್ಮನೆ ನಡೆಯುತ್ತಿರುವ ಕುದುರೆ ಕಂಡರೆ ನಿಮಗೆ ಜಠರಕ್ಕೆ ಸಂಬಂಧಿಸಿದ ಯಾವುದೋ ಸಮಸ್ಯೆ ಇದೆ ಎಂದರ್ಥ. ಅಜೀರ್ಣ ಅಥವಾ ಅಂಥದೇ ಸಮಸ್ಯೆ ಇರಬಹುದು. ಒಂದಕ್ಕಿಂತ ಹೆಚ್ಚು, ಎರಡು ಅಥವಾ ಮೂರು ಕುದುರೆಗಳು ಕಾಣಿಸಿಕೊಂಡರೆ ನೀವು ವೃತ್ತಿರಂಗಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ಅರ್ಥ.

ಟಗರು: ಕನಸಿನಲ್ಲಿ ಒಂದೇ ಟಗರು ಮೇಯುತ್ತಿರುವುದು ಕಂಡರೆ ನಿಮ್ಮ ಕುಟುಂಬದ ಕಡೆಗೆ ನೀವು ಇನ್ನಷ್ಟು ಗಮನ ಕೊಡಬೇಕಾದ ಅಗತ್ಯ ಇದೆ. ನಿಮ್ಮ ತಂದೆ ತಾಯಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾದೀತು. ಒಂದು ಗಂಡು ಟಗರು ಹಾಗೂ ಒಂದು ಮೇಕೆ ಜಗಳ ಮಾಡುತ್ತಿರುವುದು ಕಂಡರೆ ನಿಮ್ಮ ದಾಂಪತ್ಯದಲ್ಲಿ ಏನೋ ವಿಷಮತೆ ಇದೆ ಎಂದರ್ಥ. ಎರಡೂ ಒಟ್ಟಿಗೇ ಮೇಯುತ್ತಿರುವುದು ಕಂಡರೆ, ಇಷ್ಟರಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು. ಟಗರಿನ ಗುಪ್ತಾಂಗ ಕಂಡರೆ, ಅಫ್‌ಕೋರ್ಸ್, ನಿಮ್ಮ ಕಾಮಾಸಕ್ತಿ ಕೆರಳಿದೆ ಎಂದರ್ಥ.

ವೃಷಭ, ಕೋಣ: ಕನಸಿನಲ್ಲಿ ಗೂಳಿ, ಹೋರಿ ಅಥವಾ ವೃಷಭ ಕಾಣುವುದು ಶುಭಸೂಚನೆ. ಇದು ಶಿವನ ವಾಹನ ಆದ್ದರಿಂದ, ನಿಮಗೆ ಶಿವ ಪರಮೇಶ್ವರನ ಕೃಪೆಯನ್ನು ಸೂಚಿಸುತ್ತಿರಬಹುದು. ದೊಡ್ಡ ಒಂಟಿ ಡುಬ್ಬದ ಬೃಹತ್ ಗೂಳಿ ಕಂಡರೆ ನಿಮಗೆ ದೊಡ್ಡದೊಂದು ಅದೃಷ್ಟ ಇಷ್ಟರಲ್ಲೇ ಒಲಿಯಲಿದೆ ಅಥವಾ ಗಂಟು ಸಿಗಲಿದೆ. ಈ ವೃಷಭದ ಮರ್ಮಾಂಗ ನಿಮಿರಿ ನಿಂತಿದ್ದರೆ, ನಿಮ್ಮ ಕಾಮನೆಗಳನ್ನು ತಣಿಸಿಕೊಳ್ಳುವ ಅವಕಾಶಗಳು ಇಷ್ಟರಲ್ಲೇ ಸಿಗಲಿವೆ ಎಂದರ್ಥ. ಆದರೆ ಕನಸಿನಲ್ಲಿ ಕೋಣ ಕಾಣಿಸಿಕೊಳ್ಳುವುದು ಒಳ್ಳೆಯದಲ್ಲ. ಕೋಣ ಯಮನ ವಾಹನ. 

ಕೋಟದಲ್ಲಿದ್ದಾಳೆ ಮಕ್ಕಳಿಗೆ ಹಾಲು ನೀಡುವ ಅಮೃತೇಶ್ವರಿ..! ...

'ಕಾಗೆ: ಕಾಗೆ ಶನಿಯ ವಾಹನ. ಒಂದೇ ಕಾಗೆ ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ಶನಿ ನಿಮ್ಮ ಜೀವನದಲ್ಲಿ ಇಷ್ಟರಲ್ಲೇ ಪ್ರವೇಶಿಸಲಿದ್ದಾನೆ ಎಂದರ್ಥ. ಅಥವಾ ಈಗಾಗಲೇ ನಿಮ್ಮ ರಾಶಿಯಲ್ಲಿ ಪ್ರವೇಶಿಸಿ ಕಾಟ ಕೊಡಲು ಆರಂಭಿಸಿರಲೂಬಹುದು. ಕಾಗೆ ನೀವು ಪ್ರಯಾಣಿಸುತ್ತಿರುವಾಗ ನಿಮ್ಮ ಮುಂದಿನಿಂದ ಹಾರಿ ಹಾರಿ ಹೋಗುತ್ತಾ ಇದ್ದರೆ, ಶನಿಯು ನಿಮ್ಮ ಜೀವನದಿಂದ ಆಚೆ ಹೋಗುತ್ತಿದ್ದಾನೆ ಎಂದು ತಿಳಿಯಬೇಕು. ಹಲವಾರು ಕಾಗೆಗಳ ಗುಂಪು ಕಾಣಿಸಿಕೊಂಡರೆ, ನೀವು ಶನಿಯೂ ಸೇರಿದಂತೆ ನಿಮ್ಮ ಆರಾಧ್ಯ ದೈವಗಳನ್ನು ಪ್ರಸನ್ನೀಕರಿಸಿಕೊಳ್ಳಲು ಇನ್ನಷ್ಟು ಪೂಜಾದಿ ಕೈಂಕರ್ಯಗಳನ್ನು ಮಾಡಬೇಕಾಗ ಅಗತ್ಯವಿದೆ.

ಶಿವನ ದೇವಸ್ಥಾನದಲ್ಲಿ ನಂದಿ ಯಾಕಾಗಿ ಇರುತ್ತಾನೆ? ...

ನಾಯಿ: ಸ್ವಚ್ಛ ಬಿಳಿಬಣ್ಣದ, ಯಾವುದೇ ಕುಂದಿಲ್ಲದ, ಕೈಕಾಲು ಇತ್ಯಾದಿಗಳು ಡೊಂಕಿಲ್ಲದ ಶುಭ್ರ ಮುಖಲಕ್ಷಣದ ನಾಯಿ ಕಾಣಿಸಿಕೊಂಡರೆ ನಿಮ್ಮ ಗ್ರಹಗತಿಗಳು ಈಗ ಚೆನ್ನಾಗಿವೆ, ನೀವು ಹಿಡಿದ ಕೆಲಸಗಳು ಈಡೇರಲಿವೆ ಎಂದರ್ಥ. ಧರ್ಮರಾಯನಿಗೆ ಸ್ವರ್ಗಾರೋಹಣದ ಸಂದರ್ಭದಲ್ಲಿ ನಾಯಿ ಜೊತೆಯಾಗಿತ್ತಂತೆ. ನಿಮ್ಮ ಸಾಕುಪ್ರಾಣಿ ನಿಮಗೆ ಹಿತವನ್ನೇ ತರುತ್ತದೆ. ಆದರೆ ನಾಯಿಯ ಮೈಯಲ್ಲಿ ಕಪ್ಪು ಚುಕ್ಕಿಗಳು ಇರಬಾರದು. ಇದ್ದರೆ ಕಳಂಕ ನಿಮ್ಮನ್ನು ಕಾಡಬಹುದು.




 

click me!