ಶುಕ್ರಗ್ರಹದ ಪರಿವರ್ತನೆಯಿಂದ ನಿಮ್ಮ ರಾಶಿ ಮೇಲಾಗುವ ಪರಿಣಾಮಗಳೇನು?

By Suvarna News  |  First Published Oct 22, 2020, 2:55 PM IST

ಗ್ರಹಗಳು ಆಗಿಂದಾಗ್ಗೆ ಆಗುತ್ತಲೇ ಇರುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಇನ್ನು ಕೆಲವು ರಾಶಿಯವರಿಗೆ ಕೆಟ್ಟದಾಗುತ್ತದೆ. ಮತ್ತೆ ಕೆಲವರಿಗೆ ಮಿಶ್ರಫಲವನ್ನು ಕೊಡುತ್ತದೆ. ಕೆಲವರಿಗೆ ಆರ್ಥಿಕ ಸ್ಥಿತಿ ಸುಧಾರಿಸಿದರೆ, ಮತ್ತೆ ಕೆಲವರಿಗೆ ಜೀವನದಲ್ಲಿ ಏರುಪೇರು ಆಗಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಅಶುಭ ಉಂಟಾಗುವ ರಾಶಿಯವರಿದ್ದರೆ, ಆ ಗ್ರಹದ ಆರಾಧನೆ ಮಾಡಿದರೆ ಶುಭ ಫಲ ಉಂಟಾಗುವುದರ ಜೊತೆಗೆ ಸಮಸ್ಯೆಗಳು ಸಹ ಪರಿಹಾರವಾಗುತ್ತವೆ. 


ಶುಕ್ರಗ್ರಹವು ಇದೇ ಅಕ್ಟೋಬರ್ 23ರಂದು ರಾಶಿ ಪರಿವರ್ತನೆ ಮಾಡಲಿದೆ. ಇದು ಕೆಲವರಿಗೆ ಶುಭ ಫಲವನ್ನುಂಟು ಮಾಡಿದರೆ ಮತ್ತೆ ಕೆಲವರಿಗೆ ಅಶುಭ ಫಲ, ಇನ್ನೂ ಕೆಲವರಿಗೆ ಮಿಶ್ರ ಫಲವನ್ನು ಕೊಡುತ್ತದೆ. ಹಾಗಂತ ಯಾರೂ ಭಯ ಬೀಳಬೇಕಿಲ್ಲ. ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ ಕೆಲವು ಶುಕ್ರಗ್ರಹದ ಆರಾಧನೆಗಳನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ.

ನವೆಂಬರ್ 17 ರವರೆಗೆ ಅಂದರೆ 25 ದಿನಗಳ ಕಾಲ ಕನ್ಯಾ ರಾಶಿಯಲ್ಲಿ ಶುಕ್ರ ಗ್ರಹವು ನೆಲೆಸಿರುತ್ತದೆ ತದನಂತರ ಅದು ವಾಪಸ್ ತನ್ನ ಸ್ವ ರಾಶಿಯಾದ ತುಲಾಗೆ ಪ್ರವೇಶಿಸಲಿದೆ. ಹೀಗಾಗಿ ಅಲ್ಲಿಯವರೆಗೆ ಏನೇನು ಪರಿಣಾಮಗಳು ಆಗುತ್ತವೆ ಎಂಬುದರ ಬಗ್ಗೆ ತಿಳಿಯಬಹುದಾಗಿದೆ ಹಾಗೂ ಯಾವ ಯಾವ ರಾಶಿಗಳ ಮೇಲೆ ಯಾವ ಯಾವ ಪರಿಣಾಮಗಳು ಉಂಟಾಗುತ್ತವೆ...? ಯಾರು ಯಾರಿಗೆ ಒಳ್ಳೆಯದಾಗುತ್ತದೆ ಎಂಬುದರ ಬಗ್ಗೆಯೂ ತಿಳಿಯೋಣ... 

ಇದನ್ನು ಓದಿ: ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ, ಮತ್ತದರ ಲಾಭ!

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಪರಿಣಾಮದಿಂದ ಶತ್ರುಗಳು ಪ್ರಬಲರಾಗಿ ವಿಜೃಂಭಿಸುತ್ತಾರೆ. ಹೀಗಾಗಿ ತುಸು ಎಚ್ಚರಿಕೆ ವಹಿಸುವುದು ಒಳ್ಳೆಯದು ಅಲ್ಲದೆ ಉದ್ಯೋಗ ಬದಲಾವಣೆ ಮಾಡಿಕೊಂಡ ಬೇಕೆಂದಿದ್ದರೆ ಸ್ವಲ್ಪ ತಾಳುವುದು ಉತ್ತಮ. ಹಾಗಾಗಿ ಇದು ಉದ್ಯೋಗ ಬದಲಾವಣೆಗೆ ಪ್ರಶಸ್ತವಾದ ಸಮಯವೂ ಅಲ್ಲ ಇದಕ್ಕೋಸ್ಕರ ನೀವು ನವೆಂಬರ್ 17 ರವರೆಗೆ ಕಾಯಲೇಬೇಕು. ಜೊತೆಗೆ ನಿಮಗೆ ಖರ್ಚು ಹೆಚ್ಚುತ್ತಾ ಹೋಗುತ್ತದೆ. ಸ್ವಂತ ಖರ್ಚಿನ ಬಗ್ಗೆ ಸ್ವಲ್ಪ ನಿಗಾ ವಹಿಸಿದರೆ ಉತ್ತಮ.

Tap to resize

Latest Videos


ವೃಷಭ ರಾಶಿ 
ಈ ರಾಶಿಯವರಿಗೆ ಕೆಲಸಕಾರ್ಯಗಳಲ್ಲಿ ಶುಭ ಫಲ ಸಿಗಲಿದೆ. ಮಕ್ಕಳಿಂದ ನಿಮಗೆ ಶುಭ ಸುದ್ದಿ ಸಿಗಲಿದೆ. ಹಾಗಾಗಿಯೇ ಶುಕ್ರ ಗ್ರಹದ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ.

ಮಿಥುನ ರಾಶಿ 
ಈ ರಾಶಿಯವರಿಗೆ ಸುಖ-ಸಮೃದ್ಧಿಯು ಹೆಚ್ಚಲಿದೆ. ಅಲ್ಲದೇ ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆಗಳಿವೆ.

ಇದನ್ನು ಓದಿ: ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಗೊತ್ತಾ..?

ಕರ್ಕಾಟಕ ರಾಶಿ 
ಈ ರಾಶಿಯವರಿಗೆ ಸ್ವಲ್ಪ ಉತ್ತಮ ಅವಕಾಶವೇ ಲಭಿಸಲಿದ್ದು, ಬಿರುಕುಗೊಂಡ ಸಂಬಂಧಗಳು ಸುಧಾರಿಸಲಿವೆ. ಜೊತೆಗೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವ ಪ್ರಯತ್ನ ಮಾಡಿದರೆ ಇನ್ನೂ ಉತ್ತಮವಾಗಲಿದೆ. 

ಸಿಂಹ ರಾಶಿ 
ಈ ರಾಶಿಯವರಿಗೆ ಈಗ ಕೂಡಿಟ್ಟ ಹಣವು ಖರ್ಚಾಗುವ ಸಮಯವಿದ್ದು ಅದು ಸರಿಯಾದ ಕೆಲಸಕ್ಕೆ ಉಪಯುಕ್ತವಾಗಲಿದೆ. ವ್ಯಾಪಾರಿಗಳಿಗೆ ಇದು ಉತ್ತಮ ಲಾಭದಾಯಕವಾಗುವಂತಹ ಸಮಯವಾಗಿದೆ. 

ಕನ್ಯಾ ರಾಶಿ
ಈ ರಾಶಿಯವರಿಗೆ ಸಕಾರಾತ್ಮಕ ಮನೋಭಾವ ಇನ್ನಷ್ಟು ಹೆಚ್ಚಲಿದೆ. ಇನ್ನೂ ತಂದೆಯಿಂದ ಯಾವುದಾದರೂ ಕೆಲಸದ ಜವಾಬ್ದಾರಿ ದೊರೆಯಲಿದೆ. 

ತುಲಾ ರಾಶಿ 
ಈ ರಾಶಿಯವರಿಗೆ ವಿದೇಶಯಾತ್ರೆಯ ಯೋಗವಿದೆ. ಹೀಗಾಗಿ ಆ ನಿಟ್ಟಿನಲ್ಲಿ ನೀವು ಪ್ರಯತ್ನಿಸಬಹುದು. ಇದಲ್ಲದೆ ನಿಮ್ಮ ಕ್ಷಮತೆಗಿಂತ ಹೆಚ್ಚಿನ ಜವಾಬ್ದಾರಿಯುಳ್ಳ ಆ ಕೆಲಸವನ್ನು ತೆಗೆದುಕೊಳ್ಳದಿರುವುದು ಉತ್ತಮ.

ವೃಶ್ಚಿಕ ರಾಶಿ 
ಈ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತುಸು ನೆಮ್ಮದಿಯನ್ನು ಕಾಣಬಹುದಾಗಿದೆ. ಕೆಲಸ ಕಾರ್ಯಗಳಲ್ಲಿ ಸ್ನೇಹಿತರ ಸಹಾಯ ದೊರೆಯಲಿದೆ. 

ಧನು ರಾಶಿ 
ನೀವು ರಾಜಕೀಯ ಕ್ಷೇತ್ರದಲ್ಲಿದ್ದರೆ ಇದು ನಿಮಗೆ ಸುಸಂದರ್ಭ. ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಾಗಿದ್ದರೆ ಲಾಭದಾಯಕ ಸಮಯ ಇದಾಗಿದೆ. ಆದರೆ ಶತ್ರುಗಳಿಂದ ಸ್ವಲ್ಪ ಎಚ್ಚರ ವಹಿಸಬೇಕಾಗಿದ್ದು, ಅವರ ನಡೆಯ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.

ಇದನ್ನು ಓದಿ: ಲಕ್ಷ್ಮೀ ನೆಲೆಸಬೇಕೆಂದರೆ ನಿಮ್ಮ ಮನೆಯಲ್ಲಿ ಈ ನಾಲ್ಕು ವಸ್ತುಗಳನ್ನಿಡಿ..!

ಕುಂಭ ರಾಶಿ 
ಈ ರಾಶಿಯವರಿಗೆ ಸ್ವಲ್ಪ ಕಷ್ಟದ ಸಂದರ್ಭವಿದೆ. ಶುಕ್ರನ ಈ ರಾಶಿ ಪರಿವರ್ತನೆಯಿಂದ ಜೀವನದಲ್ಲಿ ಸ್ವಲ್ಪ ಏರುಪೇರುಗಳನ್ನು ಕಾಣಲಿದ್ದೀರಿ. ನಿಮ್ಮ ನಿಲುವಿನ ಬಗ್ಗೆ ಇನ್ನೊಬ್ಬರ ಮುಂದೆ ಹೇಳಿಕೊಳ್ಳಲು ಯಾವುದೇ ಸಂಕೋಚ ಬೇಡ. 

ಮೀನ ರಾಶಿ 
ಈ ರಾಶಿಯವರು ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಕೆಲವರು ಮಾಡುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲೂ ತುಸು ಏರುಪೇರು ಉಂಟಾಗಲಿದೆ. 

click me!