
ಗ್ರಹಗಳು ಮತ್ತು ನಕ್ಷತ್ರಗಳು ಅಶುಭವಾಗಿದ್ದರೆ, ರಾಜ ಸಹ ಬಡವನಾಗ್ತಾನೆ, ಅದೇ ಒಬ್ಬ ಬಡವ ರಾಜನಾಗುವುದು ಕೂಡ ಗ್ರಹಗಳ ಪ್ರಭಾವದಿಂದ. ಕೆಲ ಗ್ರಹಗಳ ನಕಾರಾತ್ಮಕ ಪ್ರಭಾವವು ಯಶಸ್ಸಿಗೆ ಅಡ್ಡಿಯಾಗುವುದಲ್ಲದೆ, ಸಂತೋಷ, ಸಮೃದ್ಧಿ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಗ್ರಹಗಳಿಗೆ ಮದ್ದು ಜೇನುತುಪ್ಪ.
ಜೇನುತುಪ್ಪವು ಕೇವಲ ತಿನ್ನುವ ವಸ್ತುವಲ್ಲ. ಪ್ರಾಚೀನ ಕಾಲದಿಂದಲೂ ಇದನ್ನು ಪೂಜೆ ಮತ್ತು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಧಾರ್ಮಿಕ ನಂಬಿಕೆಗಳಲ್ಲಿ ಜೇನುತುಪ್ಪವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಪಂಚಾಮೃತ ತಯಾರಿಕೆಯಲ್ಲಿಯೂ ಜೇನುತುಪ್ಪವನ್ನು ಬಳಸುತ್ತಾರೆ. ಜ್ಯೋತಿಷ್ಯದಲ್ಲಿ, ಜೇನುತುಪ್ಪವನ್ನು ಮುಖ್ಯವಾಗಿ ಗುರುಗ್ರಹಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತೆ. ಜೇನುತುಪ್ಪ ಸೂರ್ಯ ಮತ್ತು ಮಂಗಳನ ಜೊತೆ ಸಂಬಂಧ ಹೊಂದಿದೆ ಎಂದೂ ಹೇಳಲಾಗುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ, ಪಂಚಾಮೃತವನ್ನು ಜೇನುತುಪ್ಪದೊಂದಿಗೆ ಬೆರೆಸಿ ಪೂಜೆಯಲ್ಲಿ ಬಳಸಲಾಗುತ್ತದೆ. ಶಿವನಿಗೆ ಜೇನುತುಪ್ಪವನ್ನು ಅರ್ಪಿಸುವ ಸಂಪ್ರದಾಯವು ಅನೇಕ ಸ್ಥಳಗಳಲ್ಲಿ ಕಂಡುಬರುತ್ತದೆ. ಇದರಿಂದ ಮಂಗಳ ಗ್ರಹಕ್ಕೆ ಸಂಬಂಧಿಸಿದ ತೊಂದರೆಗಳು ಕಡಿಮೆಯಾಗುತ್ತವೆ. ಋಣಭಾರದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ದೇವಿಗೆ ಜೇನುತುಪ್ಪವನ್ನು ಅರ್ಪಿಸುವುದರಿಂದ ಎದುರಾಳಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
• ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವು ಅಶುಭ ಫಲ ನೀಡುತ್ತಿದ್ದರೆ ಜೇನುತುಪ್ಪವನ್ನು ಸೇವಿಸುವ ಬದಲು ಮಂಗಳವಾರ ಶಿವಲಿಂಗಕ್ಕೆ ನೈವೇದ್ಯ ಮಾಡಬೇಕು.
• ಗುರುಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಸಂದರ್ಭದಲ್ಲಿ, ಹಿತ್ತಾಳೆ ಅಥವಾ ಚಿನ್ನದಿಂದ ಮಾಡಿದ ಪಾತ್ರೆಯಲ್ಲಿ ಜೇನುತುಪ್ಪವನ್ನು ಇಡಬೇಕು ಅಥವಾ ಸೇವಿಸಬೇಕು.
• ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಗಾಜಿನ ಬಾಟಲಿಗೆ ಜೇನುತುಪ್ಪವನ್ನು ತುಂಬಿಸಿ ಮಲಗುವ ಕೋಣೆಯಲ್ಲಿ ಇಡಬೇಕು.
• ವ್ಯಕ್ತಿಯನ್ನು ತಪ್ಪು ದಾರಿಯಿಂದ ಸರಿದಾರಿಗೆ ತರಲು ಶನಿವಾರದಂದು ಜೇನು ತುಂಬಿದ ಗಾಜಿನ ಬಾಟಲಿಯನ್ನು ನೆಲದಲ್ಲಿ ಹೂತುಹಾಕಬೇಕು.
ಜೇನುತುಪ್ಪ ಬಳಸುವಾಗ ಇದು ನೆನಪಿರಲಿ
ಜೇನುತುಪ್ಪವನ್ನು ಯಾವಾಗಲೂ ಮಿತವಾಗಿ ಸೇವಿಸಬೇಕು. ಜ್ಯೋತಿಷ್ಯ ಮತ್ತು ಸಾಂಪ್ರದಾಯಿಕ ನಂಬಿಕೆಗಳು ಅದನ್ನು ನೀರಿನೊಂದಿಗೆ ಸೇವಿಸಲು ಶಿಫಾರಸು ಮಾಡುತ್ತವೆ. ಬೆಳಿಗ್ಗೆ ಜೇನುತುಪ್ಪವನ್ನು ಸೇವಿಸುವುದು ಒಳ್ಳೆಯದು ಎಂದು ನಂಬಲಾಗಿದೆ. ಜೇನುತುಪ್ಪವನ್ನು ಬಿಸಿ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಎಣ್ಣೆ, ಮಾಂಸ, ಮೀನು ಅಥವಾ ಬೆಲ್ಲದಂತಹ ಆಹಾರಗಳೊಂದಿಗೆ ಸಹ ಇದರ ಸೇವನೆ ತಪ್ಪಿಸಬೇಕು. ಜೇನುತುಪ್ಪದ ಅಲರ್ಜಿ ಅಥವಾ ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.