Good Friday 2022: ಈ ದಿನದ ಮಹತ್ವ, ಹಿನ್ನೆಲೆ ಹಾಗೂ ಆಚರಣೆ ಏನು?

Published : Apr 15, 2022, 10:10 AM IST
Good Friday 2022: ಈ ದಿನದ ಮಹತ್ವ, ಹಿನ್ನೆಲೆ ಹಾಗೂ ಆಚರಣೆ ಏನು?

ಸಾರಾಂಶ

ಇಂದು ಕ್ರೈಸ್ತರಿಗೆ ಬಹಳ ಪವಿತ್ರ ದಿನ. ಏಸುವನ್ನು ಶಿಲುಬೆಗೇರಿಸಿದ ಈ ದಿನವನ್ನು ಗುಡ್ ಫ್ರೈಡೇ ಎಂದು ಆಚರಿಸುತ್ತಾರೆ. ಈಗ ಪ್ರಶ್ನೆ ಉದ್ಭವವಾಗಬಹುದು. ದುಃಖದ ದಿನವಾದ ಇದನ್ನು ಬ್ಲ್ಯಾಕ್ ಫ್ರೈಡೇ ಎನ್ನಬೇಕಾಗಿತ್ತು. ಆದರೆ, ಗುಡ್ ಫ್ರೈಡೇ ಅನ್ನೋದೇಕಂತ.. 

ಇಂದು ಗುಡ್ ಫ್ರೈಡೇ(Good Friday). ಈಸ್ಟರ್ ಫ್ರೈಡೇ, ಹೋಲಿ ಫ್ರೈಡೇ, ಗ್ರೇಟ್ ಫ್ರೈಡೇ, ಗಾಡ್ ಫ್ರೈಡೇ ಎಂಬ ಹೆಸರುಗಳೂ ಇಂದಿಗಿವೆ. ಇತಿಹಾಸ ನೋಡಿದರೆ ಇದು ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ. ಕ್ರೈಸ್ತರು ದೇವಧೂತನೆಂದು ನಂಬುವ ಏಸುವು ಶಿಲುಬೆಗೇರಿದ ದಿನ ಬ್ಲ್ಯಾಕ್ ಫ್ರೈಡೇ ಆಗಿರಬೇಕಿತ್ತಲ್ಲವೇ, ಇದು ಗುಡ್ ಫ್ರೈಡೇ ಆಗಿದ್ದು ಹೇಗೆಂಬ ಅನುಮಾನ ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ, ಗುಡ್ ಫ್ರೈಡೇ ಆಚರಣೆ ಹೇಗೆ, ಇದರ ಪ್ರಾಮುಖ್ಯತೆ(significance) ಏನು ನೋಡೋಣ. 

ಶುಭ ಶುಕ್ರವಾರವು ಕ್ರಿಶ್ಚಿಯನ್ ಸಮುದಾಯಕ್ಕೆ ಮಹತ್ವದ ದಿನವಾಗಿದೆ. ಏಕೆಂದರೆ ಇದು ಯೇಸುಕ್ರಿಸ್ತ(Jesus Christ)ನ ಶಿಲುಬೆಗೇರಿಸುವಿಕೆಯನ್ನು ಸ್ಮರಿಸುತ್ತದೆ. ಕೆಲವರು 'ಒಳ್ಳೆಯದು' ಎಂದರೆ ಧಾರ್ಮಿಕ ಅಥವಾ ಪವಿತ್ರ(Holy) ಎಂದು ಹೇಳುತ್ತಾರೆ, ಕ್ರಿಶ್ಚಿಯನ್ನರು ಯೇಸುವಿನ ಮರಣವು ಮಾನವಕುಲದ ಎಲ್ಲ ಪಾಪಗಳಿಗೆ ಕ್ಷಮೆಯನ್ನು ಸೂಚಿಸುತ್ತದೆ ಎಂದು ನಂಬುತ್ತಾರೆ. ಯೇಸುವು ಮಾನವಕುಲದ ಒಳಿತಿಗಾಗಿ ತನ್ನನ್ನು ತ್ಯಾಗ ಮಾಡುತ್ತಾನೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಈ ದಿನವನ್ನು ಪವಿತ್ರ ಶುಕ್ರವಾರ ಎಂದು ಕರೆಯಲಾಗುತ್ತದೆ. ಏಸುವಿನ ತ್ಯಾಗ ಮತ್ತು ನೋವಿನ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

Good Friday 2022: ಕ್ರೈಸ್ತರ ಹಬ್ಬಕ್ಕೆ ಹೀಗೆ ವಿಶ್ ಮಾಡಿ..

ಕ್ರಿಸ್ತನು ತನ್ನ ಜನರಿಗಾಗಿ ನರಳಿ ಪ್ರಾಣ ತೆತ್ತಿದ್ದ ಈ ದಿನವನ್ನು ಆರಂಭದಲ್ಲಿ 'ಗಾಡ್ಸ್ ಫ್ರೈಡೇ'(God's Friday) ಎಂದು ಹೇಳಲಾಗಿತ್ತು. ಅದು ಆಡುಮಾತಲ್ಲಿ ಬದಲಾಗುತ್ತಾ ಗುಡ್ ಫ್ರೈಡೇಯಾಯಿತು ಎಂಬ ವ್ಯಾಖ್ಯಾನವೂ ಇದೆ. 

ಭಾರತ, ಕೆನಡ, ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಬರ್ಮುಡಾ, ಬ್ರೆಜಿಲ್, ಫಿನ್‌ಲ್ಯಾಂಡ್, ಮಾಲ್ಟಾ, ಮೆಕ್ಸಿಕೋ, ನ್ಯೂಜಿಲ್ಯಾಂಡ್, ಸಿಂಗಾಪುರ, ಸ್ವೀಡನ್ ಸೇರಿದಂತೆ ಬಹಳಷ್ಟು ದೇಶಗಳಲ್ಲಿ ಗುಡ್‌ ಫ್ರೈಡೇಯ ಈ ದಿನ ಸಾರ್ವಜನಿಕ ರಜೆ ಘೋಷಿಸಲಾಗಿದೆ. 

ಏಸುವನ್ನು ಶಿಲುಬೆಗೇರಿಸಿದ್ದೇಕೆ?
30 ಅಥವಾ 33 ಎಡಿ ಇಸವಿಯಲ್ಲಿ ಏಸುವನ್ನು ಶಿಲುಬೆಗೇರಿಸಲಾಯಿತು. ಏಸುವು ತನ್ನನ್ನು ದೇವರ ಮಗನೆಂದು ಹೇಳಿಕೊಂಡ ಕಾರಣದಿಂದ ಯಹೂದಿ(Yahudi) ಧಾರ್ಮಿಕ ಮುಖಂಡರು ಆತನನ್ನು ಇನ್ನಿಲ್ಲದಂತೆ ದೂಷಣೆ ಮಾಡಿ, ಮರಣದಂಡನೆ ವಿಧಿಸಿದರು. ಒಬ್ಬ ವ್ಯಕ್ತಿಗೆ ಕೊಡಬಹುದಾದ ಅತಿ ಕಠಿಣ ಮರಣದಂಡನೆಯನ್ನು ಏಸುವಿಗೆ ನೀಡಿದರು. ಏಸುವಿನ ತಲೆಗೆ ಮುಳ್ಳಿನ ಕಿರೀಟ ಹಾಕಿ, ಬೆನ್ನಿಗೆ ಶಿಲುಬೆ ಹಾಕಿ ಅದನ್ನೆಳೆದುಕೊಂಡು ಬೆಟ್ಟವೇರಲು ಸೂಚಿಸಲಾಯಿತು. ಬಳಿಕ ಬೆಟ್ಟದ ಮೇಲೆ ಶಿಲುಬೆ ಸ್ಥಾಪಿಸಿ, ಏಸುವಿನ ಕೈ ಕಾಲುಗಳಿಗೆ ಮೊಳೆ ಹೊಡೆದು ಅಲ್ಲಿಯೇ ಬಿಡಲಾಯಿತು. ಹೀಗೆ ಏಸುವನ್ನು ಶಿಲುಬೆಗೆ ಹೊಡೆದು ಸಾಯಲು ಬಿಡಲಾಯಿತು. ಅಷ್ಟಾದರೂ ಏಸುವು ಅವರೆಲ್ಲರನ್ನೂ ಕ್ಷಮಿಸುವ ಮಾತಾಡುತ್ತಾರೆ. ಏಸುವಿನ ತ್ಯಾಗದ ಸ್ಮರಣಾರ್ಥವಾಗಿ ಈಸ್ಟರ್ ಆಚರಿಸಲಾಗುತ್ತದೆ. ಕೆಲವೆಡೆ ಈ ಸಂಬಂಧ ಬಯಲು ನಾಟಕ ಪ್ರದರ್ಶನಗಳೂ, ಮೆರವಣಿಗೆಗಳೂ ನಡೆಯುತ್ತವೆ. 

ಶನಿವಾರ ಬಂದ Hanuman Jayanti; ಇಂದು ಹೀಗೆ ಮಾಡಿ ಶನಿ, ರಾಹು ಕಾಟದಿಂದ ತಪ್ಪಿಸಿಕೊಳ್ಳಿ

ಆಚರಣೆ ಹೇಗೆ?
ಗುರುವಾರ ರಾತ್ರಿ ಏಸುವು ತನ್ನ ಅನುಯಾಯಿಗಳೊಂದಿಗೆ ಕಡೆಯ ಊಟ ಮಾಡಿದ್ದರಿಂದ ಈಸ್ಟರ್(easter) ಗುರುವಾರವನ್ನು ಕೊನೆಯ ಭೋಜನ ಎಂದು ಆಚರಿಸಲಾಗುತ್ತದೆ. ಇನ್ನು ಈಸ್ಟರ್ ಭಾನುವಾರ ಬರುತ್ತಿದ್ದು, ಶಿಲುಬೆಗೇರಿದ ಮೂರನೇ ದಿನಕ್ಕೆ ಏಸುವು ಮರುಹುಟ್ಟು ಪಡೆದ ಎಂಬ ನಂಬಿಕೆ ಈ ಆಚರಣೆ ಹಿಂದಿದೆ. ಅಂದರೆ ಈ ಬಾರಿ ಏಪ್ರಿಲ್ 17ರಂದು ಈಸ್ಟರ್ ಆಚರಣೆ ಇದೆ. ನಡುವಿನ ಈ ಗುಡ್ ಫ್ರೈಡೇಯ ದಿನ ಕ್ರಿಶ್ಚಿಯನ್ನರು ಚರ್ಚ್‌ಗೆ ತೆರಳಿ ವಿಶೇಷ ಸೇವೆಗಳನ್ನು ನಡೆಸುತ್ತಾರೆ. ಮನೆಯಲ್ಲಿ ಬೈಬಲ್ ಪಠಣ ಮಾಡುತ್ತಾರೆ. ಏಸುವಿನ ತ್ಯಾಗವನ್ನು ಸ್ಮರಿಸುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ