ಹಿಂದೂ ಸಂಸ್ಕೃತಿ ಮತ್ತು ಪೂಜೆಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ಅವುಗಳನ್ನು ಕೇವಲ ಅಲಂಕಾರಕ್ಕಾಗಿ ಮಾತ್ರ ಬಳಸಲಾಗುವುದಿಲ್ಲ, ಎಲ್ಲ ದೇವತೆಗಳಿಗೆ ಗೌರವಾರ್ಥವಾಗಿಯೂ ಅರ್ಪಿಸಲಾಗುತ್ತದೆ. ನೀವು ದೇವತೆಗಳಿಗೆ ಅರ್ಪಿಸಬಹುದಾದ ಅತ್ಯುತ್ತಮ ಪೂಜಾ ಹೂವುಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಮ್ಮ ಭವ್ಯವಾದ ಭಾರತೀಯ ಸಂಸ್ಕೃತಿಯಲ್ಲಿ, ಪ್ರತೀ ದೇವರೂ ತಮ್ಮ ನೆಚ್ಚಿನ ದಿನಗಳು, ಹೂವುಗಳು ಮತ್ತು ಬಣ್ಣಗಳನ್ನು ಹೊಂದಿದ್ದಾರೆ. ಈ ಹೂವುಗಳಿಲ್ಲದೆ, ಹಿಂದೂಗಳ ಯಾವುದೇ ಆಚರಣೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಪೂಜೆಯಲ್ಲಿ ಹೂವುಗಳ ಪಾತ್ರ ದೊಡ್ಡದು. ಯಾವ ದೇವರಿಗೆ ಯಾವ ಹೂವು ಇಷ್ಟ? ಯಾವ ಹೂವುಗಳನ್ನು ಅರ್ಪಿಸುವುದರಿಂದ ಇಷ್ಟಾರ್ಥಗಳು ಬೇಗ ಈಡೇರುತ್ತವೆ?
1. ಲಕ್ಷ್ಮಿ ದೇವಿ(Goddess Lakshmi)
ಲಕ್ಷ್ಮಿ ದೇವಿಯು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತಾಳೆ. ತಾಯಿಯು ಅರಳಿದ ಕಮಲದ ಮೇಲೆ ಕುಳಿತಿರುತ್ತಾಳೆ ಮತ್ತು ಆದ್ದರಿಂದ ಕಮಲವನ್ನು ಅವಳ ನೆಚ್ಚಿನ ಹೂವು ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಪ್ರತಿ ಬುಧವಾರದಂದು ಲಕ್ಷ್ಮಿ ಮಾತೆಗೆ ಬಿಳಿ ಬಣ್ಣದ ಪರಿಮಳಯುಕ್ತ ಹೂವುಗಳನ್ನು ಮತ್ತು ಬಿಳಿ ಸೇವಂತಿಗೆಯಂಥ ಪರಿಮಳವಿಲ್ಲದ ಹೂವುಗಳನ್ನು ಅರ್ಪಿಸುವುದು ಶ್ರೇಷ್ಠವಾಗಿದೆ.
2. ಗಣೇಶ(Lord Ganesh)
ಅಡೆತಡೆಗಳನ್ನು ನಿವಾರಿಸುವ ಗಣೇಶನು ಲಕ್ಷ್ಮಿ ದೇವಿಯಂತೆಯೇ ಕೆಂಪು ಹೂವುಗಳನ್ನು ಸ್ವೀಕರಿಸುತ್ತಾನೆ. ನಿರ್ದಿಷ್ಟವಾಗಿ, ಕೆಂಪು ಚೆಂಡುಹೂವು ಗಣೇಶನಿಗಿಷ್ಟ. ತುಳಸಿ ಹೊರತುಪಡಿಸಿ, ಉಳಿದೆಲ್ಲವನ್ನೂ ವಿಘ್ನನಿವಾರಕನಿಗೆ ಅರ್ಪಿಸಬಹುದು. ಇನ್ನು ಕೆಂಪು ದಾಸವಾಳ, ಕೆಂಗುಲಾಬಿ ಕೂಡಾ ಗಣೇಶನಿಗೆ ಅರ್ಪಿಸುವ ಅತ್ಯಂತ ಆದ್ಯತೆಯ ಹೂವು.
3. ಸರಸ್ವತಿ ದೇವಿ(Saraswati Devi)
ಜ್ಞಾನದ ದೇವತೆ ಯಾವಾಗಲೂ ಬಿಳಿ ಬಟ್ಟೆಯನ್ನು ಧರಿಸಿರುತ್ತಾಳೆ, ಏಕೆಂದರೆ ಅವಳು ಮನಸ್ಸು ಮತ್ತು ಆತ್ಮದ ಶುದ್ಧತೆಯನ್ನು ಸೂಚಿಸುತ್ತಾಳೆ. ಆದರೆ ಅವಳ ನೆಚ್ಚಿನ ಬಣ್ಣ ಹಳದಿ ಎಂದರೆ ನಿಮಗೆ ಅಚ್ಚರಿಯಾಗಬಹುದು. ಸರಸ್ವತಿಗೆ ಪ್ರಾರ್ಥನೆ ಸಲ್ಲಿಸುವಾಗ ಚಂಪಾ, ಸೂರ್ಯಕಾಂತಿ, ಗುಲಾಬಿ ಅಥವಾ ಇನ್ನಾವುದೇ ಹಳದಿ ಹೂವು ಅರ್ಪಿಸಿದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಜನವರಿಯಲ್ಲಿ ವಿಪರೀತ ರಾಜಯೋಗದಿಂದ ಈ 3 ರಾಶಿಗೆ ವಿಪರೀತ ಲಾಭ
4. ಭಗವಾನ್ ಶಿವ(Bhagawan Shiva)
ಬ್ರಹ್ಮಾಂಡದ ವಿಧ್ವಂಸಕ ಮತ್ತು ಅಂತಿಮ ಶಕ್ತಿ - ಭಗವಂತ ಶಿವನಿಗೆ ಎಂದಿಗೂ ಸುಂದರವಾದ ಹೂವುಗಳನ್ನು ಅರ್ಪಿಸಲಾಗುವುದಿಲ್ಲ. ಆತ ಕಾನನದ ಪುಷ್ಪಗಳನ್ನು ಇಷ್ಟಪಡುವವನು. ಹೀಗಾಗಿ ಆತನಿಗೆ ದತುರಾ, ತುಂಬೆ ಹೂವು, ನಂದಿಬಟ್ಟಲು, ಒಣ ಕಮಲ, ಬಿಳಿ ಚಂಪಾ ಇತ್ಯಾದಿಗಳನ್ನು ಅರ್ಪಿಸಬೇಕು.
5. ಕಾಳಿ ದೇವಿ(Kali Devi)
ಮಹಿಳೆಯ ಶಕ್ತಿ ಅಥವಾ ಆದಿಶಕ್ತಿಯ ಸಾರ - ಕಾಳಿ ದೇವಿಯನ್ನು ರಕ್ತ-ಕೆಂಪು ದಾಸವಾಳದ ಹೂವುಗಳಿಂದ ಮಾತ್ರ ಪೂಜಿಸಲಾಗುತ್ತದೆ. ಅದು ಅಸುರ ತಲೆಗಳ ಮಾಲೆಯನ್ನು ಧರಿಸಿರುವ ಅವಳ ಉಗ್ರ ರೂಪಕ್ಕೆ ಪೂರಕವಾಗಿರುತ್ತದೆ. ಇದಲ್ಲದೆ, ಗಾಢ ಕೆಂಪು ಗುಲಾಬಿ ಹೂವುಗಳನ್ನು ಸಹ ಕಾಳಿ ದೇವಿಗೆ ಅರ್ಪಿಸಲಾಗುತ್ತದೆ.
6. ಭಗವಾನ್ ವಿಷ್ಣು(Bhagawan Vishnu)
ಬ್ರಹ್ಮಾಂಡದ ರಕ್ಷಕ ಎಂದೂ ಕರೆಯಲ್ಪಡುವ ವಿಷ್ಣುವು ಕಮಲ, ಜೂಹಿ, ಚಮೇಲಿ, ಅಶೋಕ, ಮಾಲ್ತಿ, ವಾಸಂತಿ, ಚಂಪಾ ಮತ್ತು ವೈಜಯಂತಿಯನ್ನು ಇಷ್ಟಪಡುತ್ತಾನೆ. ಪರಿಮಳಯುಕ್ತ ಹೂವುಗಳ ಹೊರತಾಗಿ, ಆತ ತುಳಸಿ ಎಲೆಗಳನ್ನು ಪ್ರೀತಿಸುತ್ತಾನೆ.
7. ಭಗವಾನ್ ಹನುಮಾನ್ (Hanuman)
ಹನುಮಂತನಿಗೆ ಮಲ್ಲಿಗೆ ಹೂವುಗಳೆಂದರೆ ತುಂಬಾ ಇಷ್ಟ, ಆದ್ದರಿಂದ ಹನುಮಾನ್ ಪೂಜೆಯ ಸಮಯದಲ್ಲಿ ಮಲ್ಲಿಗೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ವೀಳ್ಯದೆಲೆಗಳು ಮತ್ತು ಭವ್ಯವಾದ ಹೂವುಗಳನ್ನು ಪ್ರತಿ ಶನಿವಾರದಂದು ಬಜರಂಗಬಲಿಗೆ ಅರ್ಪಿಸಲಾಗುತ್ತದೆ.
ಯಾಕೋ ಲಕ್ ಇಲ್ಲ ಅಂತ ಹೇಳ್ತಿದ್ದ ಈ ರಾಶಿಗೆ ಬರೋ ವರ್ಷ ಅದೃಷ್ಟ ಹೊತ್ತು ತರುತ್ತೆ!
8. ಶ್ರೀಕೃಷ್ಣ (Shri Krishna)
ಶ್ರೀಕೃಷ್ಣನು ಕದಂಬ ಕಾಡಿನಲ್ಲಿ ದೀರ್ಘಕಾಲ ಕಳೆಯುತ್ತಿದ್ದನು. ಕದಂಬ ಹೂವುಗಳು ಸುವಾಸನೆಯಿಂದ ಕೂಡಿರುತ್ತವೆ ಮತ್ತು ಚೆಂಡಿನಂತೆ ಸುತ್ತುತ್ತವೆ. ಪಾರಿಜಾತ ಭಗವಾನ್ ಕೃಷ್ಣನು ಭೂಮಿಗೆ ತಂದ ಸ್ವರ್ಗೀಯ ಮರವಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಪಾರಿಜಾತ ಕೂಡಾ ಕೃಷ್ಣನ ಪೂಜೆಗೆ ಶ್ರೇಷ್ಠವಾಗಿದೆ.
9. ಶನಿ (Shani Dev)
ಶನಿಗೆ ನೀಲಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಆತನಿಗೆ ನೀಲಿ ಶಂಖಪುಷ್ಟ ಸೇರಿದಂತೆ ಇತರೆ ನೀಲಿ ಹೂಗಳನ್ನು ಅರ್ಪಿಸಬಹುದು.