ಜನವರಿಯಲ್ಲಿ ವಿಪರೀತ ರಾಜಯೋಗದಿಂದ ಈ 3 ರಾಶಿಗೆ ವಿಪರೀತ ಲಾಭ

By Suvarna News  |  First Published Dec 13, 2022, 11:26 AM IST

ಜನವರಿಯಲ್ಲಿ ವಿಪರೀತ ರಾಜಯೋಗ ಉಂಟಾಗುತ್ತಿದೆ. ಈ ಯೋಗದ ರಚನೆಯಿಂದಾಗಿ, ಅನೇಕ ರಾಶಿಚಕ್ರಗಳ ಸ್ಥಳೀಯರಿಗೆ ಪ್ರಯೋಜನ ದೊರೆಯುತ್ತದೆ. ಏನಿದು ವಿಪರೀತ ರಾಜಯೋಗ? ಯಾವ ರಾಶಿಗಳಿಗೆ ಲಾಭ?


ಹೊಸ ವರ್ಷದಲ್ಲಿ, ಗ್ರಹಗಳ ಸಾಗಣೆಯಿಂದಾಗಿ ಅನೇಕ ಸಂಯೋಜನೆಗಳು ಮತ್ತು ಕಾಕತಾಳೀಯಗಳು ಸಂಭವಿಸುತ್ತವೆ. ಜನವರಿ 2023ರಲ್ಲಿ, ಗ್ರಹಗಳ ರಾಶಿಚಕ್ರ ಚಿಹ್ನೆಗಳ ಬದಲಾವಣೆಯಿಂದಾಗಿ, ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಶುಭ ಸಮಯ ಪ್ರಾರಂಭವಾಗಬಹುದು. 2023ರ ಜನವರಿಯಲ್ಲಿ ಗ್ರಹಗಳ ಸಂಚಾರದಿಂದ ವಿಪರೀತ ರಾಜಯೋಗ(Vipreet Raj yog) ನಿರ್ಮಾಣವಾಗುತ್ತಿದೆ. ಇದು ಮಂಗಳಕರ ರಾಜಯೋಗವಾಗಿದ್ದು, ಇದರಿಂದ ಲಾಭ ಪಡೆಯುವವರು ಆರ್ಥಿಕ ಲಾಭದ ಬಲವಾದ ಅವಕಾಶಗಳನ್ನು ಹೊಂದಿರುತ್ತಾರೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 17, 2023ರಂದು, ನ್ಯಾಯದ ದೇವರು ಶನಿ ದೇವನು(Shani Dev) ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಮಂಗಳಕರ ವಿಪರೀತ ರಾಜಯೋಗವನ್ನು ಸೃಷ್ಟಿಸುತ್ತದೆ, ಇದು ಅನೇಕ ರಾಶಿಚಕ್ರಗಳ(Zodiac signs) ಸ್ಥಳೀಯರಿಗೆ ಪ್ರಯೋಜನಕಾರಿಯಾಗಿದೆ. ಯಾವ ರಾಶಿಚಕ್ರದ ಚಿಹ್ನೆಗಳು ಅದರಿಂದ ಪ್ರಯೋಜನ ಪಡೆಯಬಹುದು ಎಂದು ತಿಳಿಯೋಣ.

Tap to resize

Latest Videos

ಏನಿದು ವಿಪರೀತ ರಾಜಯೋಗ?
ರಾಜಯೋಗ ಮತ್ತು ವಿಪರೀತ ಎರಡು ಪದಗಳ ವೈರುಧ್ಯದಂತೆ ಈ ಯೋಗವೂ ನಕಾರಾತ್ಮಕತೆಗಳು ಸೇರಿ ಧನಾತ್ಮಕತೆಯನ್ನು ತರುತ್ತದೆ. ಇಲ್ಲಿ ದುರದೃಷ್ಟದ ಬಳಿಕ ಅದೃಷ್ಟದ ಪ್ರಯೋಜನಗಳು ದೊರೆಯುತ್ತವೆ.
ವಿಪರೀತ್ ರಾಜ ಯೋಗವು ವಿರೋಧಾತ್ಮಕ ಯೋಗವಾಗಿದ್ದು, ಪಾಪಿ ಗ್ರಹಗಳಿಂದ(Papa grah) ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಗ್ರಹಗಳು ತಮ್ಮ ಪರಿಣಾಮಗಳೊಂದಿಗೆ ದುರುದ್ದೇಶ ಮತ್ತು ಕೆಟ್ಟ ಇಚ್ಛೆಯನ್ನು ಉಂಟುಮಾಡುವಲ್ಲಿ ಕುಖ್ಯಾತವಾಗಿವೆ. ಆದರೆ ಅವು ಪರಸ್ಪರರ ಮನೆಗಳಲ್ಲಿದ್ದಾ ಅನುಕೂಲಕರ ಸ್ಥಾನವನ್ನು ಎದುರಿಸುತ್ತಾರೆ ಮತ್ತು ಇದು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ.

ಯಾಕೋ ಲಕ್ ಇಲ್ಲ ಅಂತ ಹೇಳ್ತಿದ್ದ ಈ ರಾಶಿಗೆ ಬರೋ ವರ್ಷ ಅದೃಷ್ಟ ಹೊತ್ತು ತರುತ್ತೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದುಷ್ಟಸ್ಥಾನಗಳು ಎಂದೂ ಕರೆಯಲ್ಪಡುವ ಜಾತಕದ 6, 8 ಮತ್ತು 12 ನೇ ಮನೆಗಳ ಅಧಿಪತಿ- ಅವವೇ ಮೂರು ಮನೆಗಳಲ್ಲಿ - ಅಂದರೆ 6, 8 ಅಥವಾ 12ನೇ ಮನೆಯಲ್ಲಿ ಕುಳಿತಾಗ ವಿಪರೀತ್ ರಾಜ್ ಯೋಗವು ರೂಪುಗೊಳ್ಳುತ್ತದೆ.. ಅದನ್ನು ವಿಪರೀತ ರಾಜಯೋಗ ಎನ್ನುತ್ತಾರೆ. ಇದನ್ನು ಅತ್ಯುತ್ತಮ ಯೋಗವೆಂದು ಪರಿಗಣಿಸಲಾಗಿದೆ. ವಿಪರೀತ ರಾಜಯೋಗದಲ್ಲಿ ಮೂರು ವಿಧಗಳಿವೆ. ಪ್ರಸ್ತುತ ಜನವರಿಯಲ್ಲಿ ಈ ಯೋಗದ ಲಾಭ ಪಡೆಯುವ ರಾಶಿಗಳು ಯಾವೆಲ್ಲ ನೋಡೋಣ..

ವೃಷಭ ರಾಶಿ(Taurus)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನವರಿ 17, 2023ರಿಂದ ಶನಿಯ ಸಂಕ್ರಮಣದಿಂದ ರೂಪುಗೊಂಡ ವಿಪರೀತ ರಾಜಯೋಗದಿಂದ ಈ ರಾಶಿಚಕ್ರದ ಜನರು ಪ್ರಯೋಜನ ಪಡೆಯಬಹುದು. ವಿದೇಶ ಪ್ರವಾಸಕ್ಕೆ ಹೋಗಬಹುದು. ಉದ್ಯೋಗಸ್ಥರಿಗೆ ಈ ರಾಜಯೋಗವು ಪ್ರಯೋಜನಕಾರಿಯಾಗಿದೆ. ನೀವು ಬಡ್ತಿ ಮತ್ತು ಸಂಬಳದ ಹೆಚ್ಚಳದ ಲಾಭವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಸಮಯವು ನಿಮಗೆ ಉತ್ತಮವಾಗಬಹುದು.

2023ಕ್ಕೆ ನಾಸ್ಟ್ರಾಡಾಮಸ್ ಹೇಳಿರುವ ಭೀಕರ ಭವಿಷ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ..

ತುಲಾ ರಾಶಿ(Libra)
ತುಲಾ ರಾಶಿಯ ಜನರ ಜಾತಕದಲ್ಲಿ ಐದನೇ ಮನೆಯಲ್ಲಿ ವಿಪರೀತ ರಾಜಯೋಗವು ರೂಪುಗೊಳ್ಳುತ್ತದೆ. ಸ್ಥಳೀಯರು ತಮ್ಮ ವೃತ್ತಿಯಲ್ಲಿ ಬಡ್ತಿ ಪಡೆಯಬಹುದು. ವ್ಯವಹಾರದಲ್ಲಿ ಉತ್ತಮ ಲಾಭದ ಸಾಧ್ಯತೆಯಿದೆ ಮತ್ತು ಈ ಅವಧಿಯಲ್ಲಿ ನೀವು ನಿಮ್ಮ ವ್ಯವಹಾರವನ್ನು ವಿಸ್ತರಿಸಬಹುದು.

ಧನು ರಾಶಿ(Sagittarius)
ಈ ರಾಶಿಚಕ್ರದ ಜನರಿಗೆ ನಡೆಯುತ್ತಿರುವ ಶನಿದೇವನ ಅರ್ಧಾರ್ಧ ಕೊನೆಗೊಳ್ಳಬಹುದು. ಕುಂಭ ರಾಶಿಯಲ್ಲಿ ಶನಿದೇವನ ಸಂಚಾರವು ಈ ರಾಶಿಚಕ್ರದ ಸ್ಥಳೀಯರಿಗೆ ಪ್ರಯೋಜನವನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಅನೇಕ ಒಳ್ಳೆಯ ಸುದ್ದಿಗಳನ್ನು ಕಾಣಬಹುದು. ಇನ್ನೂ ಅನೇಕ ಪ್ರಯೋಜನಗಳೂ ಇರಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!