ಸ್ಮಶಾನದಲ್ಲಿ ಪಿಶಾಚಿ ಕುಣಿದಂತಾಗ್ತಿದೆ: ಕಾಂಗ್ರೆಸ್‌ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀ

By Sathish Kumar KH  |  First Published Aug 16, 2023, 4:09 PM IST

ರಾಜ್ಯ ಸರ್ಕಾರದ ಕುರಿತು ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ, ಏನು ಆಗಲ್ಲ. ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವವರಿಲ್ಲ. ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.


ಹಾಸನ (ಆ.16): ರಾಜ್ಯ ಸರ್ಕಾರದ ಕುರಿತು ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ, ಏನು ಆಗಲ್ಲ. ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವವರಿಲ್ಲ. ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯವನ್ನು ನುಡಿದಿದ್ದಾರೆ. 

ಕೋಡಿಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು,  ಕರ್ನಾಟಕ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಕುರಿತು ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ, ಏನು ಆಗಲ್ಲ. ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವವರಿಲ್ಲ. ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಪಾರ್ಲಿಮೆಂಟ್ ಎಲೆಕ್ಷನ್‌ ಆದ್ಮೇಲೆ ತೀರ್ಮಾನ ಆಗುತ್ತದೆ. ಪಾರ್ಲಿಮೆಂಟ್ ಚುನಾವಣೆ ಬಂದಾಗ ಏನಾಗುತ್ತೆ, ದೇಶದಲ್ಲಿ ಯಾವ ಸರ್ಕಾರ ಬರುತ್ತೆ ಅಂತ ಹೇಳ್ತಿನಿ ಎಂದು ಕೋಡಿ ಮಠದ ಸ್ವಾಮೀಜಿ (Hassan Kodi mutt Shivananda Shivayogi Rajendra Swamiji prediction) ಹೇಳಿದರು. 

Tap to resize

Latest Videos

ಬಿಎಂಟಿಸಿ ಬಸ್‌ ಹರಿದು ಎಲ್‌ಕೆಜಿ ಬಾಲಕಿ ಸಾವು: ಶಾಲೆಗೆ ಹೋಗುತ್ತಿದ್ದಾಗ ದುರ್ಘಟನೆ

ಮಳೆಗೇನೂ ಕೊರತೆ ಆಗೋದಿಲ್ಲ: ರಾಜ್ಯದಲ್ಲಿ ಮಳೆ ಬರುತ್ತೆ ತೊಂದರೆ ಏನಿಲ್ಲ. ಹಿಂದೆ ಒಂದು ಸಾರಿ ಮಳೆ ಬಂದಂತೆ ಇನ್ನೊಂದು ಸಾರಿ ಮಳೆ‌ ಬರುತ್ತದೆ. ಮಳೆಗೇನು ತೊಂದರೆ ಆಗಲ್ಲ, ಕಾಲ‌ ಹೇಳ್ತಿನಿ, ಅಷ್ಟೇ ಮಳೆ‌ ಬರುತ್ತದೆ. ಅನ್ನಕ್ಕೆ ತೊಂದರೆ ಆಗುವುದಿಲ್ಲ. ಇನ್ನು ವಿಪರೀತ ಮಳೆಯಾಗುವ ಲಕ್ಷಣ ಇದೆ, ಬೇಕಾದಷ್ಟು ಮಳೆ ಬರುತ್ತದೆ. ಇನ್ನೂ ಮಳೆ, ಗುಡುಗು, ಭೂಮಿ ಬಿರುಕು ಆಗುವುದು, ದ್ವೇಷಗಳು ಹೆಚ್ಚುತ್ತವೆ, ಅಪಮೃತ್ಯು ಎಲ್ಲಾ ನಡೆಯುತ್ತದೆ. ಪ್ರಕೃತಿಯಿಂದಲೂ ಹಾನಿ ಇದೆ, ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಶ್ರಾವಣದ‌ ಮಧ್ಯಭಾಗದ ಮೇಲೆ ಕಾರ್ತಿಕದವರೆಗೂ ಮಳೆ ಆಗುತ್ತದೆ. ಮತ್ತೆ ಮಳೆಯಿಂದ ಅಪಾಯ ಆಗುವ ಲಕ್ಷಣಗಳಿವೆ ಎಂದು ತಿಳಿಸಿದರು. 

ಕೃಷಿ ಸಚಿವ ಚಲುವರಾಯಸ್ವಾಮಿಗೆ ಮಂತ್ರಿಗಿರಿ ಕುರ್ಚಿ ಕಂಟಕ: ಕಂಡಕ್ಟರ್ ಆಯ್ತು, ಈಗ ಕೃಷಿ ಅಧಿಕಾರಿಗಳಿಂದ ಆತ್ಮಹತ್ಯೆ ಬೆದರಿಕೆ

ಕೋಡಿಶ್ರೀ ಭೇಟಿ ಮಾಡಿ ಕೃಷಿ ಸಚಿವ ಚಲುವರಾಯಸ್ವಾಮಿ:  ಇನ್ನು ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಹಾರನಹಳ್ಳಿ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಕೋಡಿಮಠಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture minister N. Chaluvarayaswamy) ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಅಮಾವಾಸ್ಯೆ ದಿನದಂದು ಪತ್ನಿ ಧನಲಕ್ಷ್ಮಿ ಜೊತೆಗೆ ಕೋಡಿಮಠಕ್ಕೆ ಭೇಟಿ ನೀಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ತಮ್ಮ ಕುಟುಂಬಕ್ಕೆ ಅಭಯ ಕೇಳಿಕೊಂಡಿದ್ದಾರೆ. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಯನ್ನು ಭೇಟಿ ಮಾಡಿದ ಬಗ್ಗೆ ರಾಜಕೀಯ ಕುರಿತಂತೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇನ್ನು ರಾಜ್ಯದಲ್ಲಿ ಚಲುವರಾಯಸ್ವಾಮಿ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದು, ಸಚಿವ ಸ್ಥಾನಕ್ಕೆ ಕುತ್ತು ಬಂದಂತಾಗಿತ್ತು. ಇದರ ಬೆನ್ನಲ್ಲೇ ಎಲ್ಲ ಆರೋಪಗಳು ಸುಳ್ಳೆಂದು ಸಾಬೀತು ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಕೋಡಿ ಶ್ರೀಗಳನ್ನು ಕುಟುಂಬ ಸಮೇತರಾಗಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

click me!