ವಿಜೃಂಭಣೆಯಿಂದ ಜರುಗಿದ ಹಳ್ಳಿಗಟ್ಟ್ ಬೋಡ್ ನಮ್ಮೆ, ಗುಡುಗು ಮಳೆ ನಡುವೆ ದೇವಲೋಕವೇ ಸೃಷ್ಟಿ!

By Ravi Janekal  |  First Published May 23, 2023, 12:34 PM IST

ಫುಲ್ ಫ್ಯಾಷನೇಬಲ್ ಡ್ರೆಸ್ ತೊಟ್ಟು ಯುವತಿಯರನ್ನು ನಾಚಿಸುವಂತೆ ಕಾಣಿಸುತ್ತಿರುವ ಯುವತಿಯರ ರೂಪದಲ್ಲಿ ಇರುವ ಯುವಕರು. ಯಾವ ನೃತ್ಯಗಾರ್ತಿಯರಿಗೂ ಕಡಿಮೆ ಇಲ್ಲದಂತೆ ನರ್ತಿಸುತ್ತಿರುವ ಯುವಕಯರು. ತಮ್ಮ ಇಷ್ಟದ ವೇಷ ಧರಿಸಿ ಎಂಜಾಯ್ ಮಾಡಿ ನೋಡುಗರ ಮುದಗೊಳಿಸುತ್ತಿರುವ ಜನರು. ಇದೆಲ್ಲಾ ದೇವರ ಹರಕೆ ತೀರಿಸಲು ಯುವಕರು ತೊಟ್ಟ ವೇಷ ಭೂಷಣಗಳು!


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮೇ.23) : ಫುಲ್ ಫ್ಯಾಷನೇಬಲ್ ಡ್ರೆಸ್ ತೊಟ್ಟು ಯುವತಿಯರನ್ನು ನಾಚಿಸುವಂತೆ ಕಾಣಿಸುತ್ತಿರುವ ಯುವತಿಯರ ರೂಪದಲ್ಲಿ ಇರುವ ಯುವಕರು. ಯಾವ ನೃತ್ಯಗಾರ್ತಿಯರಿಗೂ ಕಡಿಮೆ ಇಲ್ಲದಂತೆ ನರ್ತಿಸುತ್ತಿರುವ ಯುವಕಯರು. ತಮ್ಮ ಇಷ್ಟದ ವೇಷ ಧರಿಸಿ ಎಂಜಾಯ್ ಮಾಡಿ ನೋಡುಗರ ಮುದಗೊಳಿಸುತ್ತಿರುವ ಜನರು. ಇದೆಲ್ಲಾ ದೇವರ ಹರಕೆ ತೀರಿಸಲು ಯುವಕರು ತೊಟ್ಟ ವೇಷ ಭೂಷಣಗಳು!

Latest Videos

undefined

ಹೌದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೊಟ್ಟಿಯತ್ ನಾಡ್ ಹಳ್ಳಿಗಟ್ಟು ಗ್ರಾಮ(Halligattu village)ಕ್ಕೆ ಸೇರಿದ ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ(Shri gundiyat ayyappa) (Shri bhadrakali)ದೇವರ ವಾರ್ಷಿಕ ಬೇಡು ಹಬ್ಬದಲ್ಲಿ ಕಂಡು ಬಂದ ವಿಶೇಷ ದೃಶ್ಯಗಳು. ಈ ಹಬ್ಬ ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. 

Festive vibes: ಹಬ್ಬದ ಆಚರಣೆಯಲ್ಲಿ ಹೆಚ್ಚಿನ ಉತ್ಸಾಹ ತೋರುವ ರಾಶಿಗಳಿವು!

ಹಬ್ಬದ ಎರಡನೇ ದಿನ ಹಬ್ಬವೆಲ್ಲಾ ಮುಗಿದು ಇನ್ನೇನೂ ಮಹಾಮಂಗಳಾರತಿ ಆಗಬೇಕು ಎನ್ನುವಷ್ಟರಲ್ಲಿ ಕಪ್ಪು ಮೋಡ ಆವರಿಸಿ ಆಕಾಶದಲ್ಲಿ ಮಿಂಚು ಕಾಣಿಸಿಕೊಂಡಿತು. ಇನ್ನೇನು ಭಾರಿ ಮಳೆ ಬೀಳುವ ಸೂಚನೆಯನ್ನು ನೀಡಿತಾದರೂ ಕೊನೆಯವರೆಗೂ ವರುಣದೇವನಿಗೆ ಕೊಡೆ ಹಿಡಿದಂತೆ ಕಂಡ ಆ ಕ್ಷಣ ಪ್ರಕೃತಿ ಆರಾಧಕರಿಗೆ ರಸದೌತಣವನ್ನು ನೀಡಿತು ಎಂದರೆ ತಪ್ಪಲ್ಲ. ಇತ್ತ ಮಹಾಮಂಗಳಾರತಿ ಕೊನೆಯ ಕ್ಷಣವಾದ ಮಹಾಪೂಜೆ ಸಂಪನ್ನಗೊಳ್ಳುತ್ತಿದ್ದಂತೆ ಸಾಂಪ್ರದಾಯಿಕ ವಾಲಗ, ಡಮರುಗ, ಜಾಗಟೆ, ಶಂಖ ಹಾಗೂ ಗಂಟೆಯ ನಾದದೊಂದಿಗೆ  ಒಳಗೆ ಮಹಾಮಂಗಳಾರತಿ ಹೊರಗೆ ಮೈಮೇಲೆ ಬರುವ ದೇವರ ಆರ್ಭಟದ ನಡುವೆ ಕೆಲವು ಸಮಯ ಇನ್ನೇನು ಮಳೆ ಬಿದ್ದೇ ಬಿಟ್ಟಿತು ಎಂಬಂತೆ ಆಕಾಶದಲ್ಲಿ ಮೂಡಿಬಂದ ಭಯಂಕರ ಗುಡುಗು ಮಿಂಚು ಒಂದು ಕ್ಷಣ ಕಣ್ಣಿನ ಮುಂದೆ ದೇವರ ಸಿನಿಮಾ ನಡೆಯುತ್ತಿದೆಯೇನೊ ಎಂಬಂತೆ, ಆ ಕ್ಷಣ ದೇವಲೋಕದ ಸುಂದರ ಚಿತ್ರಣವನ್ನು ಸೃಷ್ಟಿಸಿತು. 

ಗುಡುಗು ಮಿಂಚಿಗೆ ಭಯಪಡದೆ ಪ್ರಕೃತಿಯನ್ನು ಆರಾಧಿಸಿ ಆಸ್ವಾದಿಸುವ ಮಂದಿಗೆ ಈ ಕ್ಷಣ ಮನಸು ಪುಳಕಿತಗೊಂಡಿತು. ಹಳ್ಳಿಗಟ್ಟು ವ್ಯಾಪ್ತಿಯನ್ನು ಹೊರತುಪಡಿಸಿ ಕೇವಲ ಒಂದೆರಡು ಕಿ.ಮಿ ದೂರದಿಂದಾಚೆ ಭಯಂಕರ ಗಾಳಿ ಮಳೆ ಬೀಳುತ್ತಿದೆ ಎಂಬ ಸುದ್ದಿ ಬಂದರೂ ಊರಿನೊಳಗೆ ದೇವರು ಕೊಡೆ ಹಿಡಿದಂತೆ ಆಕಾಶದಿಂದ ಬೀಳುತಿದ್ದ ಮಳೆ ಅರ್ಧ ದಾರಿಯಲ್ಲಿ ಬಂದು ನಿಂತಂತೆ ಕಂಡದ್ದು ವಿಶೇಷವಾಗಿತ್ತು. 

ವಿಜೃಂಭಣೆಯಿಂದ ನಡೆದ ಹಳ್ಳಿಗಟ್ಟು ಬೋಡ್ ನಮ್ಮೆ ಸೋಮವಾರ ಚಮ್ಮಟೀರ ಹಾಗೂ ಮಚ್ಚಿಯಂಡ ಬಲ್ಯಮನೆಯಲ್ಲಿ ಗುರುಕಾರೋಣ ಹಾಗೂ ಮಂದಣಮೂರ್ತಿಯನ್ನು ಹಾಡುವ ಮೂಲಕ ವಾರ್ಷಿಕ ಬೇಡು ಹಬ್ಬಕ್ಕೆ ಅಂತಿಮ ತೆರೆ ಎಳೆಯಲಾಯಿತು. ಇದಕ್ಕೂ ಮುನ್ನ ಶನಿವಾರ ಮಧ್ಯಾಹ್ನ ಊರು ತಕ್ಕರಾದ ಚಮ್ಮಟೀರ ಕುಟುಂಬದಿಂದ ಪೊಲವಂದೆರೆ ಹೊರಡುವ ಮೂಲಕ ವಾರ್ಷಿಕ ಬೋಡ್ ನಮ್ಮನೆಗೆ ಚಾಲನೆ ದೊರೆತು ಸಂಜೆ ಗುಂಡಿತ್ ಅಯ್ಯಪ್ಪ ದೇವರ ಅವುಲ್ ಬಳಿಕ ರಾತ್ರಿ ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಗಳಲ್ಲಿ ಬೋಡ್ ನಮ್ಮೆಯ ಮನೆ ಮನೆ ಕಳಿ ಗಮನ ಸೆಳೆಯಿತು. ಭಾನುವಾರ ಮಧ್ಯಾಹ್ನ ಚಮ್ಮಟೀರ ಕುಟುಂಬದಿಂದ ಒಂದು ಕುದುರೆ ಹಾಗೂ ಮೊಗ, ಮೂಕಳೇರ ಕುಟುಂಬದಿಂದ ಒಂದು ಕುದುರೆ ಹಾಗೂ ಮೊಗ ಒಂದೆಡೆ ಸೇರಿ ಸಂಭ್ರಮಿಸಿದ್ದರು. 

ನೋಡ ಬನ್ನಿ, ಹಚ್ಚ ಹಸಿರ ಪರಿಸರ, ಮನಸಿಗೆ ಮುದ ನೀಡುವ ಗಿರಿಧಾಮ

ಈ ಸಂದರ್ಭದಲ್ಲಿ ಹತ್ತಿರದ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಎರಚಾಡಿಕೊಂಡು ಊರಿನವರು ಸಂಭ್ರಮಿಸಿದರು. ಹತ್ತಾರು ವಿವಿಧ ವೇಷಧಾರಿಗಳು ಗಮನ ಸೆಳೆದರು. ಬಳಿಕ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ವಾರ್ಷಿಕ ಬೋಡ್ ನಮ್ಮೆ ಸಂಪನ್ನಗೊಂಡಿತು.

click me!