ತಮ್ಮ ನಾಲ್ಕನೇ ಐತಿಹಾಸಿಕ ಶ್ರೀ ಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಶ್ರೀ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಮಹಾನಗರದಲ್ಲಿ ಅಭೂತಪೂರ್ವ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವವನ್ನು ಸಲ್ಲಿಸಲಾಯಿತು.
ಉಡುಪಿ (ಜ.23) : ತಮ್ಮ ನಾಲ್ಕನೇ ಐತಿಹಾಸಿಕ ಶ್ರೀ ಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಶ್ರೀ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಮಹಾನಗರದಲ್ಲಿ ಅಭೂತಪೂರ್ವ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವವನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಪೂರ್ಣಕುಂಭ, ವೇದಘೋಷ, ಚಂಡೆ ವಾದ್ಯಗಳೊಂದಿಗೆ ಗುರುಗಳನ್ನು ಸ್ವಾಗತಿಸಲಾಯಿತು. ನಂತರ ಭಕ್ತರಿಂದ ಸಾಮೂಹಿಕ ಪಾದಪೂಜೆ, ಶ್ರೀಗಳಿಂದ ಸಂಸ್ಥಾನ ಪೂಜೆ ನೆರವೇರಿತು.
undefined
Udupi: ಅಬುದಾಭಿಯ ಸಚಿವರೊಂದಿಗೆ ಪುತ್ತಿಗೆಶ್ರೀ
ಸಾಂಪ್ರದಾಯಿಕ ಶೈಲಿಯಲ್ಲಿ ಉಡುಪಿ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಸಂಜೆ ಶ್ರೀಗಳನ್ನು ವೈಭವೋಪೇತವಾಗಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ಉಡುಪಿಯ ಪ್ರಸಿದ್ಧ ಕಲೆ ಹುಲಿವೇಷ , ಕೋಲಾಟ, ಪ್ರಸಿದ್ಧ ದಾಸರುಗಳ ವೇಷ ಪ್ರಮುಖ ಆಕರ್ಷಣೆಯಾಗಿತ್ತು. ಗುರುವಂದನಾ ಕಾರ್ಯಕ್ರಮಕ್ಕೆ ಸರಕಾರದ ವತಿಯಿಂದ ಆಗಮಿಸಿದ ಪ್ರವಾಸ ಮತ್ತು ಕ್ರೀಡಾ ಸಚಿವ ಸ್ಟೀವ್ ಡಿಮೋ ಪುಲಸ್ ರವರು ತಮ್ಮ ಗೌರವವನ್ನು ಶ್ರೀಗಳಿಗೆ ಅರ್ಪಿಸುತ್ತಾ ತಮ್ಮ ದೇಶ ಎಲ್ಲ ಧರ್ಮದವರನ್ನೂ ಗೌರವಿಸುತ್ತೆ , ವಿಶೇಷವಾಗಿ ಹಿಂದೂ ಭಾರತೀಯ ಪರಂಪರೆ ಯ ಜೀವನ ಪದ್ಧತಿ ತುಂಬಾ ಅನುಕರಣೀಯವಾಗಿದೆ. ಎಂದರು .
ತಾವು 2017 ರಲ್ಲಿ ಶ್ರೀ ವೆಂಕಟಕೃಷ್ಣ ಬೃಂದಾವನವನ್ನು ಉದ್ಗಾಟಿಸಿದ್ದನ್ನು ನೆನಪಿಸಿಕೊಂಡರು ಶ್ರೀಪಾದರು ಸಚಿವರ ಸರಳ ಸಜ್ಜನಿಕೆಯನ್ನು ಹೊಗಳುತ್ತಾ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಸಚಿವರಿಂದ ನಡೆಯುವಂತಾಗಲಿ ಎಂದು ಹಾರೈಸುತ್ತಾ ಮುಂದಿನ ತಮ್ಮ ಪರ್ಯಾಯಕ್ಕೆ ಆಹ್ವಾನಿಸಿದರು .
ಪುತ್ತಿಗೆ ಶ್ರೀಗಳ ವಿಶ್ವ ಪರ್ಯಾಯಕ್ಕೆ ಬಾಳೆ ಮಹೂರ್ತದ ನಾಂದಿ!
ನಗರದ ಭಕ್ತರು ಗುರುಗಳಿಗೆ ನಾಣ್ಯದ ತುಲಾಭಾರವನ್ನು ಸಮರ್ಪಿಸುವ ಮೂಲಕ ಗೌರವವನ್ನು ಸಲ್ಲಿಸಿದರು. ಇಸ್ಕಾನ್ , ವೈದಿಕ್ ಸೊಸೈಟಿ , GSB ಸಂಘಟನೆ ,ತುಳು ಸಂಘ ಮೊದಲಾದ ಸಂಘ ಸಂಸ್ಥೆಗಳಿಂದ ಶ್ರೀಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು .ಅರವಿಂದ್ ಜೋಷಿ ಪ್ರಸ್ತಾವನೆ ಸಲ್ಲಿಸಿದರು .ಶ್ರೀ ರಮೇಶ್ ರವರು ಸ್ವಾಗತಿಸಿದರು . ಶ್ರೀ ಧೀರನ್ ರವರು ಕಾರ್ಯಕ್ರಮ ನಿರ್ವಹಿಸಿದರು . ಶ್ರೀ ಗಿರೀಶ್ ಬಾಳಿಗಾ ರವರು ಧನ್ಯವಾದ ವಿತ್ತರು . ರಾತ್ರಿ ತೊಟ್ಟಿಲು ಪೂಜೆ, ಆಶೀರ್ವಚನ, ಫಲ ಮಂತ್ರಾಕ್ಷತೆ ಸ್ವೀಕಾರದೊಂದಿಗೆ ಗುರುವಂದನಾ ಕಾರ್ಯಕ್ರಮವು ವಿಜೃಂಭಣೆಯಿಂದ ಪರಿಸಮಾಪ್ತಿಯಾಯಿತು. 800ಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.