Guru Purnima: ಹೆಚ್ಚು ಕಷ್ಟ ಪಡ್ಬೇಕಾಗಿಲ್ಲ ಈ ಸಿಂಪಲ್‌ ಕೆಲ್ಸ ನಿಮ್ಮನ್ನು ಕೋಟ್ಯಾಧಿಪತಿ ಮಾಡುತ್ತೆ

Published : Jul 21, 2026, 01:14 PM IST
Guru Purnima

ಸಾರಾಂಶ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪೂರ್ಣಿಮೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಆಷಾಢ ಪೂರ್ಣಿಮೆ ಅಂದ್ರೆ ಗುರು ಪೂರ್ಣಿಮೆಯನ್ನು ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಗುರುಗಳಿಗೆ ಗೌರವ ಸಲ್ಲಿಸುವುದಷ್ಟೇ ಅಲ್ಲ, ಲಕ್ಷ್ಮೀ ಹಾಗೂ ಕುಬೇರನ ಕೃಪೆ ಪಡೆಯಲು ಅನೇಕರು ವಿಶೇಷ ಪೂಜೆಗಳನ್ನು ಮಾಡುತ್ತಾರೆ.

ಆಷಾಢ ಪೂರ್ಣಿಮೆಯನ್ನು ಗುರು ಪೂರ್ಣಿಮೆಯಾಗಿ ಆಚರಣೆ ಮಾಡಲಾಗುತ್ತದೆ. ಈ ವರ್ಷ ಜುಲೈ 29ರಂದು ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಮಹರ್ಷಿ ವೇದವ್ಯಾಸರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸುವ ಸಂಪ್ರದಾಯವಿದೆ.

ಶುಭ ಯೋಗ 

ಈ ಬಾರಿ ಗುರು ಪೂರ್ಣಿಮೆಯಂದು ಎರಡು ಶುಭಯೋಗಗಳು ಕೂಡಿ ಬಂದಿವೆ. ಜ್ಯೋತಿಷ್ಯದ ಪ್ರಕಾರ, ಪ್ರೀತಿ ಯೋಗ ಮತ್ತು ಆಯುಷ್ಮಾನ್ ಯೋಗ ಎಂಬ ಎರಡು ಶುಭ ಯೋಗಗಳು ಒಂದೇ ದಿನ ಬಂದಿವೆ. ಆದ್ದರಿಂದ ಈ ದಿನ ಮಾಡಿದ ಪೂಜೆ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ.

ಬುಧನ ನೇರ ಚಲನೆ: ಈ 3 ರಾಶಿಗಳಿಗೆ ಅದೃಷ್ಟ, ನಿಂತಿದ್ದ ಕೆಲಸ ಪೂರ್ಣ-ಆದಾಯ ಹೆಚ್ಚಳ

ಗುರು ಪೂರ್ಣಿಮೆ ದಿನ ತಪ್ಪದೇ ಈ ಕೆಲ್ಸ ಮಾಡಿ 

  • ಗುರು ಪೂರ್ಣಿಮೆಯಂದು ತಾಯಿ ಲಕ್ಷ್ಮಿ ಹಾಗೂ ಕುಬೇರನ ಕೃಪೆ ಬೇಕು ಎನ್ನುವವರು ತಪ್ಪದೆ ಲಕ್ಷ್ಮಿ, ಗಣೇಶ ಹಾಗೂ ಕುಬೇರನ ಪೂಜೆ ಮಾಡಬೇಕು. ಇದ್ರಿಂದ ಆರ್ಥಿಕ ಸ್ಥಿತಿ ಉತ್ತಮಗೊಳುತ್ತದೆ. ಅಪಾರ ಸಂಪತ್ತು ನಿಮ್ಮದಾಗುತ್ತದೆ.
  • ಗುರು ಪೂರ್ಣಿಮೆ ದಿನ ನೀವು ಲಕ್ಷ್ಮೀ ದೇವಿಗೆ ಕಮಲದ ಹೂ ಅರ್ಪಿಸಬೇಕು. ಜೊತೆಗೆ ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡಬೇಕು. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಶ್ರಾವಣ ಮಾಸದಲ್ಲಿ 3 ಗ್ರಹಗಳ ದೊಡ್ಡ ಆಟ; ವೃಷಭ, ತುಲಾ, ಮೀನ ರಾಶಿಗೆ ದೊಡ್ಡ ಆರ್ಥಿಕ ಲಾಭ, ಹೊಸ ಉದ್ಯೋಗ

  •  ಗುರು ಪೂರ್ಣಮೆ ದಿನ ಹೆಚ್ಚಿನ ಫಲ ಪ್ರಾಪ್ತಿಗಾಗಿ ನೀವು ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮ್ಯೈ ನಮಃ ಎಂಬ ಮಹಾಲಕ್ಷ್ಮೀ ಮಂತ್ರವನ್ನು ಕಮಲಗಟ್ಟೆ ಮಾಲೆಯಿಂದ ಜಪಿಸಿದರೆ ಶುಭ ಫಲ ದೊರೆಯುತ್ತದೆ.

ದೀಪ ಬೆಳಗಿ ಸಂಜೆ ಮನೆಯ ಮುಖ್ಯ ಬಾಗಿಲಿನ ಬಳಿ ತುಪ್ಪದ ದೀಪ ಹಚ್ಚಬೇಕು. ಈ ಆಚರಣೆಯಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೂ ಲಕ್ಷ್ಮೀ ಕೃಪೆ ಲಭಿಸುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

PREV
Read more Articles on
click me!

Recommended Stories

ಕೇಂದ್ರ ದೃಷ್ಟಿ ಯೋಗ 2026: ಗುರು ಪೂರ್ಣಿಮೆಯಂದು ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗ, ಈ 4 ರಾಶಿ ಅದೃಷ್ಟವನ್ನು ಬೆಳಗಿಸುತ್ತದೆ
ಬುಧನ ನೇರ ಚಲನೆ: ಈ 3 ರಾಶಿಗಳಿಗೆ ಅದೃಷ್ಟ, ನಿಂತಿದ್ದ ಕೆಲಸ ಪೂರ್ಣ-ಆದಾಯ ಹೆಚ್ಚಳ