ನಿಮ್ಮ ಹಣೆ ಬರಹ ಬದಲಿಸುತ್ತಾ ಹಸಿರು ನೇಲ್ ಪಾಲಿಶ್?

Published : Apr 21, 2025, 02:19 PM ISTUpdated : Apr 21, 2025, 03:08 PM IST
ನಿಮ್ಮ ಹಣೆ ಬರಹ ಬದಲಿಸುತ್ತಾ ಹಸಿರು ನೇಲ್ ಪಾಲಿಶ್?

ಸಾರಾಂಶ

ಹಸಿರು ನೇಲ್ ಪಾಲಿಶ್ ಶಾಂತಿ, ಸಂಪತ್ತು, ಆರೋಗ್ಯ ಮತ್ತು ಅದೃಷ್ಟ ತರುತ್ತದೆ ಎಂಬ "ಗ್ರೀನ್ ನೇಲ್ ಥಿಯರಿ" ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಜನರಲ್ಲಿ ಈ ಪ್ರವೃತ್ತಿ ಜನಪ್ರಿಯವಾಗಿದ್ದು, ಹಸಿರು ಬಣ್ಣವು ಸಕಾರಾತ್ಮಕತೆ ಮತ್ತು ಯಶಸ್ಸನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿದೆ. ವೈಜ್ಞಾನಿಕ ಆಧಾರವಿಲ್ಲದಿದ್ದರೂ, ಕೆಂಪು, ನೀಲಿ ಬಣ್ಣಗಳಂತೆಯೇ ಹಸಿರು ಬಣ್ಣದ ಉಗುರಿನ ಸಿದ್ಧಾಂತವು ವ್ಯಕ್ತಿಗಳ ಭಾವನೆಗಳ ಪ್ರತಿಬಿಂಬ ಎನ್ನಲಾಗಿದೆ.

ಉಗುರಿ (nail)ನ ಅಂದವನ್ನು ನೇಲ್ ಪಾಲಿಶ್ (Nail polish) ಹೆಚ್ಚಿಸುತ್ತೆ. ಈಗ ಮಾರುಕಟ್ಟೆಯಲ್ಲಿ ವೆರೈಟಿ ನೇಲ್ ಪಾಲಿಶ್ ಲಭ್ಯವಿದೆ. ಮಹಿಳೆಯರು ತಮಗೆ ಇಷ್ಟವಾಗುವ ನೇಲ್ ಪಾಲಿಶ್ ಹಚ್ಚಿಕೊಂಡು, ಉಗುರಿಗೆ ಮತ್ತಷ್ಟು ಮೆರಗು ನೀಡ್ತಾರೆ. ಒಂದೊಂದು ಉಗುರಿಗೂ ಭಿನ್ನ ಬಣ್ಣದ ನೇಲ್ ಪಾಲಿಶ್ ಹಚ್ಚಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಿದೆ. ಇಷ್ಟು ದಿನ ನೇಲ್ ಪಾಲಿಶ್ ನಮ್ಮ ಕೈ ಬೆರಳಿನ ಅಂದವನ್ನು ಮಾತ್ರ ಹೆಚ್ಚಿಸುತ್ತೆ ಅಂತ ನಾವು ಭಾವಿಸಿದ್ವಿ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ನೇಲ್ ಪಾಲಿಶ್ ಬಣ್ಣ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತೆ ಎನ್ನುವ ಸುದ್ದಿ ವೈರಲ್ ಆಗ್ತಿದೆ. ಗ್ರೀನ್ ನೇಲ್ ಥಿಯರಿ (Green Nail Theory) ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಸೌಂದರ್ಯ ಪ್ರವೃತ್ತಿ ಚರ್ಚೆಯಲ್ಲಿದೆ. ಈ ಥಿಯರಿ ಪ್ರಕಾರ, ನಿಮ್ಮ ಉಗುರಿಗೆ ಹಸಿರು ಬಣ್ಣ ಹಚ್ಚಿದ್ರೆ ಅದು ನಿಮ್ಮ ಸೌಂದರ್ಯ ಹೆಚ್ಚಿಸೋದು ಮಾತ್ರವಲ್ಲ ಜೀವನದಲ್ಲಿ ಶಾಂತಿ, ಸಂಪತ್ತು, ಆರೋಗ್ಯ ಮತ್ತು ಅದೃಷ್ಟ ತರುತ್ತದೆ. ಈ ಪ್ರವೃತ್ತಿ ವಿಶೇಷವಾಗಿ ಯುವಜನರಲ್ಲಿ ವೇಗವಾಗಿ ಹರಡುತ್ತಿದೆ. ಈ ಹಿಂದೆ, ಕೆಂಪು ಮತ್ತು ನೀಲಿ ಬಣ್ಣಗಳ ಬಗ್ಗೆ ಇದೇ ರೀತಿಯ ಸಿದ್ಧಾಂತಗಳು ಸಹ ವೈರಲ್ ಆಗಿದ್ದವು.  ಕೈ ಬೆರಳಿಗೆ ಹಚ್ಚುವ ಬಣ್ಣ ಭವಿಷ್ಯದ ಮೇಲೆ ಪರಿಣಾಣ ಬೀರುತ್ತಾ ಎನ್ನುವ ಪ್ರಶ್ನೆಯನ್ನು ಈ ಥಿಯರಿ ಹುಟ್ಟು ಹಾಕೋದು ಸಹಜ. 

ಜೆನ್ ಝಡ್ ಮತ್ತು ಮಿಲೇನಿಯಲ್ ಜನರು, ತಮ್ಮ ಉಗುರುಗಳಿಗೆ ಹಸಿರು ಬಣ್ಣದ ನೇಲ್ ಪಾಲಿಶ್ ಹಚ್ಚಿಕೊಳ್ತಿದ್ದಾರೆ. ಅವರು, ಇದು ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಅದೃಷ್ಟದ ಸಂಕೇತ ಎಂದು ನಂಬಿದ್ದಾರೆ.  ಗೂಗಲ್  ಮಾರ್ಚ್ ಬ್ಯೂಟಿ ವರದಿ ಪ್ರಕಾರ, ಇತ್ತೀಚಿನ ವಾರಗಳಲ್ಲಿ  ಗ್ರೀನ್ ನೇಲ್ ಸಿದ್ಧಾಂತದ ಹುಡುಕಾಟ ಗಮನಾರ್ಹವಾಗಿ ಹೆಚ್ಚಾಗಿದೆ. ತಜ್ಞರ ಪ್ರಕಾರ ಹಸಿರು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಯಶಸ್ಸನ್ನು ಆಹ್ವಾನಿಸುತ್ತದೆ. ಹಸಿರು ಬಣ್ಣವು ಯಾವಾಗಲೂ ಮಾನಸಿಕ ಶಾಂತಿ, ಒತ್ತಡ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಇದೇ ಕಾರಣಕ್ಕೆ ಆಸ್ಪತ್ರೆಗಳಲ್ಲಿ, ರೋಗಿಗಳು ನಿರಾಳವಾಗಿರಲು ಹಸಿರು ಬಣ್ಣವನ್ನು ಬಳಸಲಾಗುತ್ತದೆ.

ಈ ದಿನಾಂಕದಂದು ಹುಟ್ಟಿದ ಯುವತಿಯರು ಅತ್ತೆಮನೆಯನ್ನು ಸ್ವರ್ಗ ಮಾಡ್ತಾರೆ

ಇನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಇದನ್ನು ನೋಡಿದ್ರೆ ಇದ್ರ ಬಗ್ಗೆ ಘನ ಆಧಾರ ಇಲ್ಲ.  ಆದ್ರೆ ಅನೇಕರು ತಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ.  ಇದನ್ನು ಹಚ್ಚಿಕೊಂಡಾಗ ಸಕಾರಾತ್ಮಕ ಚಿಂತನೆಯನ್ನು ಅನುಭವಿಸೋದಾಗಿ ಅವರ ವಾದವಾಗಿದೆ. ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಕನಸುಗಳಿಗೆ ಹತ್ತಿರವಾಗುತ್ತೇವೆ ಎಂದು ಜನರು ನಂಬುತ್ತಾರೆ. ಗ್ರೀನ್ ನೇಲ್ ಸಿದ್ಧಾಂತ, ಮಹಿಳೆಯರು ಸ್ವಂತವಾಗಿ ಯೋಚಿಸಲು, ಸ್ವಾವಲಂಬಿಗಳಾಗಿರಲು ಮತ್ತು ಆರಾಮದಾಯಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.  

ಈ ದಿನಗಳಲ್ಲಿ ಹುಟ್ಟಿದವರಿಗೆ ಪ್ರೀತಿಯಲ್ಲಿ ಸಮಸ್ಯೆಗಳೇ ಹೆಚ್ಚು

ಉಳಿದ ಬಣ್ಣಗಳ ಸಿದ್ಧಾಂತ : ಇದಕ್ಕೂ ಮುಂಚೆ ರೆಡ್ ನೇಲ್ ಥಿಯರಿ  ಮತ್ತು  ಬ್ಲೂ ನೇಲ್ ಥಿಯರಿ  ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.  ಕೆಂಪು ನೇಲ್ ಪಾಲೀಶ್ ಸಿದ್ಧಾಂತದ ಪ್ರಕಾರ, ಕೆಂಪು ಉಗುರುಗಳು ಆಕರ್ಷಣೆಯ ಸೂಚಕವಾಗಿದೆ.  ನೀಲಿ ಉಗುರು, ಜನರು ಸಂಬಂಧದಲ್ಲಿ ನೀಲಿ ಬಣ್ಣ ಬಯಸ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕಪ್ಪು ಉಗುರು ಸಿದ್ಧಾಂತವು,ಶಕ್ತಿ ಮತ್ತು ನಿಗೂಢತೆಯನ್ನು ಸೂಚಿಸುತ್ತವೆ.  ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.  ಬಿಳಿ ಉಗುರು ಸಿದ್ಧಾಂತ, ವ್ಯಕ್ತಿ ಒಂಟಿಯಾಗಿದ್ದಾನೆ ಮತ್ತು ಹೊಸ ಸಂಬಂಧಕ್ಕೆ ಸಿದ್ಧನಾಗಿದ್ದಾನೆ ಎಂಬ ಸೂಚಕವಾಗಿದೆ. ಗುಲಾಬಿ ಉಗುರು ಸಿದ್ಧಾಂತ ಮೃದುತ್ವ ಮತ್ತು ಸ್ತ್ರೀತ್ವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಸಂತೋಷ ಮತ್ತು ಸಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ. ಈ ಸಿದ್ಧಾಂತ  ಸಂಪೂರ್ಣವಾಗಿ ವೈಜ್ಞಾನಿಕವಾಗಿಲ್ಲ.  ಜನರು ತಮ್ಮ ಭಾವನೆಗಳನ್ನು ಮತ್ತು ಸ್ಥಾನಮಾನವನ್ನು ತಮ್ಮ ಉಗುರುಗಳ ಬಣ್ಣದ ಮೂಲಕ ವ್ಯಕ್ತಪಡಿಸಬಹುದಷ್ಟೆ. 

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 9 ಸರ್ವಾರ್ಥ ಸಿದ್ಧಿ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ