Valentines Day : ಪ್ರೇಮಿಗಳ ಮನಸ್ಸು ಕದಿಯಬೇಕೆಂದ್ರೆ ರಾಶಿಗನುಗುಣವಾಗಿ ಗಿಫ್ಟ್ ನೀಡಿ

By Suvarna News  |  First Published Feb 11, 2022, 8:20 PM IST

ಉಡುಗೊರೆ ನೀಡೋದು ಸುಲಭ. ಆದ್ರೆ ನೀಡಿದ ಉಡುಗೊರೆ ಪ್ರೇಮಿಗಳಿಗೆ ಇಷ್ಟವಾಗುತ್ತೆ ಎನ್ನೋದು ಕಷ್ಟ. ನೀಡಿದ ಗಿಫ್ಟ್ ಖುಷಿ ನೀಡುವ ಜೊತೆಗೆ ಸಂಗಾತಿ ಮತ್ತಷ್ಟು ಹತ್ತಿರವಾಗ್ಬೇಕೆಂದ್ರೆ ಜ್ಯೋತಿಷ್ಯ ಶಾಸ್ತ್ರದ ಟಿಪ್ಸ್ ಪ್ರಯೋಗಿಸಿ.
 


ಪ್ರೇಮಿಗಳ ದಿನ (Valentines Day)ಹತ್ತಿರ ಬರ್ತಿದೆ. ಪ್ರೇಮಿಗಳ ದಿನಕ್ಕೆ ತಯಾರಿ ಜೋರಾಗಿದೆ. ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಲು ದಂಪತಿ,ಪ್ರೇಮಿ (Lover)ಗಳು ಕಾತುರದಿಂದ ಕಾಯ್ತಿದ್ದಾರೆ. ಅನೇಕ ಪ್ಲಾನ್ ಗಳು ಈಗಾಗಲೇ ನಡೆದಿವೆ. ಮಾರುಕಟ್ಟೆಯಲ್ಲಿ ಹಾಗೂ ಆನ್ಲೈನ್ (Online) ಶಾಪ್ ಗಳಲ್ಲಿ ಬಗೆ ಬಗೆಯ ಉಡುಗೊರೆ (Gift)ರಾರಾಜಿಸುತ್ತಿದೆ. ಅನೇಕ ಕಂಪನಿಗಳು ವ್ಯಾಲಂಟೈನ್ಸ್ ಡೇ ಗೆ ವಿಶೇಷ ಉಡುಗೊರೆ ಮೇಲೆ ಭರ್ಜರಿ ಆಫರ್ ಕೂಡ ನೀಡ್ತಿವೆ. ಪ್ರೇಮಿಗಳಿಗೆ ಇಷ್ಟವಾಗುವ ಉಡುಗೊರೆಯನ್ನು ನಾವು ನೀಡ್ತೇವೆ. ಅಥವಾ ಅವರ ಬಳಿ ಏನಿಲ್ಲ ಎಂಬುದನ್ನು ತಿಳಿದು ಅದನ್ನ ನೀಡ್ತೇವೆ. ಕೆಲವೊಮ್ಮೆ ನಾವು ನೀಡಿದ ಉಡುಗೊರೆ ಪ್ರೇಮಿಗೆ ಇಷ್ಟವಾಗದೆ ಇರಬಹುದು. ಇಲ್ಲ ನೀಡಿದ ಉಡುಗೊರೆಯಿಂದ ಸಂಬಂಧ ಹಾಳಾಗಬಹುದು. ಹಾಗಾಗಿ ಉಡುಗೊರೆ ನೀಡುವ ಮೊದಲು ಜ್ಯೋತಿಷ್ಯಶಾಸ್ತ್ರದ ಕಡೆ ಗಮನ ನೀಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಿಶೇಷ ಸಂದರ್ಭದಲ್ಲಿ  ರಾಶಿ ಪ್ರಕಾರ ಸಂಗಾತಿ ಅಥವಾ ಪ್ರೀತಿಪಾತ್ರರಿಗೆ ಉಡುಗೊರೆ ನೀಡಿ. ಇದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಸಂಬಂಧಕ್ಕೆ ಹೆಚ್ಚು ಆಳ ಮತ್ತು ಬಲವನ್ನು ನೀಡುತ್ತದೆ. ಪಾಲುದಾರರ ರಾಶಿ ಪ್ರಕಾರ ಅವರಿಗೆ ಯಾವ ಮತ್ತು ಯಾವ ಬಣ್ಣದ ಉಡುಗೊರೆಯನ್ನು ನೀಡುವುದು ಉತ್ತಮ ಎಂದು ನಾವು ಹೇಳ್ತೆವೆ.

ಮೇಷ (Aries): ಈ ರಾಶಿಯ ಗ್ರಹ ಮಂಗಳ ಎಂದು ಪರಿಗಣಿಸಲಾಗುತ್ತದೆ. ರಕ್ತದ ಕೆಂಪು ಬಣ್ಣವು ಅದಕ್ಕೆ ಮಂಗಳಕರವಾಗಿದೆ. ನಿಮ್ಮ ಸಂಗಾತಿಯ ರಾಶಿಯು ಮೇಷ ರಾಶಿಯಾಗಿದ್ದರೆ, ಈ ಪ್ರೇಮಿಗಳ ದಿನದಂದು ಅವರಿಗೆ ಕೆಂಪು ಗುಲಾಬಿಗಳಿರುವ ರೊಮ್ಯಾಂಟಿಕ್ ಕಾರ್ಡ್‌ಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ.

ವೃಷಭ  (Taurus): ಈ ರಾಶಿ ಜನರ ಅಧಿಪತಿ ಶುಕ್ರ ಎಂದು ಪರಿಗಣಿಸಲಾಗಿದೆ. ನಿಮ್ಮ ಜೀವನ ಸಂಗಾತಿ ಅಥವಾ ವಿಶೇಷ ವ್ಯಕ್ತಿ ಈ ರಾಶಿಗೆ ಸೇರಿದವರಾಗಿದ್ದರೆ  ಅವರಿಗೆ ಗುಲಾಬಿ ರೋಸ್ ಜೊತೆ ಗುಲಾಬಿ ಬಣ್ಣದ ಉಡುಗೆ, ಆಭರಣಗಳು ಅಥವಾ ಸೌಂದರ್ಯವರ್ಧಕಗಳನ್ನು ನೀಡಬಹುದು.

Tap to resize

Latest Videos

ಮಿಥುನ (Gemini) : ಮಿಥುನ ರಾಶಿಯ ಅಧಿಪತಿ ಬುಧ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಅವರಿಗೆ ಕೆಂಪು ಅಥವಾ ಬಿಳಿ ಬಣ್ಣದ ಗುಲಾಬಿಯೊಂದಿಗೆ ರೋಮ್ಯಾಂಟಿಕ್ ಕಾದಂಬರಿಗಳನ್ನು ನೀಡುವುದು ಉತ್ತಮ. ಮಿಥುನ ರಾಶಿಯವರಿಗೆ ಕಲಾತ್ಮಕ ವಸ್ತುಗಳನ್ನು ಸಹ ಉಡುಗೊರೆಯಾಗಿ ನೀಡಬಹುದು.

ಕರ್ಕಾಟಕ (Cancer) : ಕರ್ಕಾಟಕ ರಾಶಿಯ ಜನರ ಗ್ರಹವನ್ನು ಚಂದ್ರ ಎಂದು ಪರಿಗಣಿಸಲಾಗುತ್ತದೆ. ಪ್ರೇಮಿಗಳ ದಿನದಂದು, ನಿಮ್ಮ ಸಂಗಾತಿಗೆ ಗುಲಾಬಿ, ಮುತ್ತಿನ ಹಾರ ಅಥವಾ ಕೆಂಪು ಬಣ್ಣದ ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡಬಹುದು.

ಸಿಂಹ (Leo): ಈ ಜನರ ಗ್ರಹಗಳ ಅಧಿಪತಿ ಸೂರ್ಯ. ಈ ರಾಶಿಯ ಜನರಿಗೆ ಕಿತ್ತಳೆ ಅಥವಾ ನೀಲಿ ಬಣ್ಣದ ಗುಲಾಬಿಗಳನ್ನು ಅಥವಾ ಉಡುಗೆಯನ್ನು ನೀಡುವುದು ಮಂಗಳಕರ. 

ಕನ್ಯಾ (Virgo): ಈ ಜನರ ಗ್ರಹ ಅಧಿಪತಿ ಬುಧ ಎಂದು ಪರಿಗಣಿಸಲಾಗಿದೆ.  ನಿಮ್ಮ ಸಂಗಾತಿಯ ರಾಶಿಯು ಕನ್ಯಾರಾಶಿಯಾಗಿದ್ದರೆ, ಈ ಪ್ರೇಮಿಗಳ ದಿನದಂದು ನೀವು ಅವರಿಗೆ ಕೆಂಪು ಅಥವಾ ನೀಲಿ ಗುಲಾಬಿಗಳನ್ನು ನೀಡಬೇಕು. ನಿಮ್ಮ ಈ ಉಡುಗೊರೆ ಅವರ ಮುಖದಲ್ಲಿ ನಗು ಮೂಡಿಸುತ್ತದೆ.

ತುಲಾ (Libra) : ತುಲಾ ರಾಶಿಯ ಅಧಿಪತಿ ಶುಕ್ರ ಎಂದು ಪರಿಗಣಿಸಲಾಗಿದೆ. ಗುಲಾಬಿ ಮತ್ತು ಬಿಳಿ ಬಣ್ಣಗಳು ಅವರಿಗೆ ಮಂಗಳಕರವಾದ ಕಾರಣ, ನೀವು ಅವರಿಗೆ ಈ ಬಣ್ಣದ ಗುಲಾಬಿ ಅಥವಾ ಉಡುಪನ್ನು ಉಡುಗೊರೆಯಾಗಿ ನೀಡಬಹುದು.

ವೃಶ್ಚಿಕ (Scorpio): ಈ ಜನರ ಗ್ರಹವನ್ನು ಮಂಗಳ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಸಂಗಾತಿ ವೃಶ್ಚಿಕ ರಾಶಿಯವರಾಗಿದ್ದರೆ ಅವರಿಗೆ ಕೆಂಪು ಅಥವಾ ಹಳದಿ ಗುಲಾಬಿಗಳನ್ನು ನೀಡಬೇಕು. ಈ ರಾಶಿಯವರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ.

Astrology And Traits: ಪ್ರೀತಿ ಓಕೆ, ಕಮಿಟ್ ಆಗೋದ್ಯಾಕೆ ಎನ್ನೋ ರಾಶಿಯವರಿವರು!

ಧನುಸ್ (Sagittarius): ಈ ರಾಶಿ ಗ್ರಹವು ಗುರು ಆಗಿರುವುದರಿಂದ, ಕಿತ್ತಳೆ ಮತ್ತು ಹಳದಿ ಬಣ್ಣಗಳನ್ನು ಇದಕ್ಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಸಂಗಾತಿಯ ರಾಶಿ ಚಿಹ್ನೆ ಧನು ರಾಶಿಯಾಗಿದ್ದರೆ, ಅವರಿಗೆ ಈ ಬಣ್ಣದ ಗುಲಾಬಿಯನ್ನು ನೀಡಲು ಮರೆಯಬೇಡಿ. ನೀವು ಉತ್ತಮ ಬಜೆಟ್ ಹೊಂದಿದ್ದರೆ,  ಅವರಿಗೆ ಚಿನ್ನದ ಪೆಂಡೆಂಟ್‌ಗಳು ಅಥವಾ ಉಂಗುರಗಳನ್ನು ಸಹ ಉಡುಗೊರೆಯಾಗಿ ನೀಡಬಹುದು.

ಮಕರ (Capricorn): ಈ ಜನರ ಗ್ರಹವನ್ನು ಶನಿ ದೇವ ಎಂದು ಪರಿಗಣಿಸಲಾಗುತ್ತದೆ.  ಈ ಪ್ರೇಮಿಗಳ ದಿನದಂದು, ನಿಮ್ಮ ಸಂಗಾತಿಗೆ ಕೆಂಪು ಅಥವಾ ನೀಲಿ ಗುಲಾಬಿಯನ್ನು ನೀಡಿ. ಇದಲ್ಲದೆ, ನೀವು ಯಾವುದೇ ಪುರಾತನ ವಸ್ತುಗಳನ್ನು ಸಹ ಅವರಿಗೆ ನೀಡಬಹುದು.

ಕುಂಭ (Aquarius) : ಈ ರಾಶಿ ಅಧಿಪತಿ ಶನಿ. ನಿಮ್ಮ ಸಂಗಾತಿ ಕುಂಭ ರಾಶಿಯವರಾಗಿದ್ದರೆ ಅವರಿಗೆ ಕೆಂಪು ಅಥವಾ ನೀಲಿ ಗುಲಾಬಿಯನ್ನು ಉಡುಗೊರೆಯಾಗಿ ನೀಡಬಹುದು. 

Astro tips: ಆರ್ಥಿಕ ಸಂಕಷ್ಟ ನಿವಾರಣೆಗೆ ಗುರುವಾರದ ಸೂತ್ರವಿದು

ಮೀನ (Pisces) :  ಈ ರಾಶಿಯ ಅಧಿಪತಿಯನ್ನು ಗುರು ಎಂದು ಪರಿಗಣಿಸಲಾಗುತ್ತದೆ.  ನಿಮ್ಮ ಸಂಗಾತಿ ಮೀನ ರಾಶಿಯವರಾಗಿದ್ದರೆ ಅವರಿಗೆ ಹಳದಿ ಬಣ್ಣದ ಉಡುಗೊರೆಯನ್ನು ನೀಡಬೇಕು.  

click me!