ಈ ನಾಲ್ಕು ರಾಶಿಯವರಿಗೆ ದುಡ್ಡಿನ ಮೇಲೆ ಹಿಡಿತವೇ ಇರೋಲ್ಲ...!

By Suvarna NewsFirst Published Aug 16, 2021, 4:58 PM IST
Highlights

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ಇಲ್ಲವೇ ಐಷಾರಾಮಿ ಜೀವನವನ್ನು ಬಹಳ ಇಷ್ಟಪಡುತ್ತಾರೆ. ಇದಕ್ಕೋಸ್ಕರ ದುಡ್ಡನ್ನು ಖರ್ಚು ಮಾಡಲು ಹಿಂದೆಮುಂದೆ ನೋಡುವುದಿಲ್ಲ. ಇವರು ಜೀವನವನ್ನು ನಿಭಾಯಿಸುವ ರೀತಿ ಬಲು ಅಚ್ಚರಿ. ಅಂದರೆ ಬೇಕಾಬಿಟ್ಟಿಯಾಗಿ ಹಣವನ್ನು ಖರ್ಚು ಮಾಡುತ್ತಾ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದೇ ಇವರ ಮುಖ್ಯ ಗುರಿಯಾಗಿರುತ್ತದೆ. ಅನಾವಶ್ಯಕ ಖರ್ಚು ಗಳಾಗುತ್ತಿದ್ದರೂ ಸಹ ಅದರ ಬಗ್ಗೆ ಯಾವುದೇ ಯೋಚನೆಯನ್ನು ಮಾಡುವುದಿಲ್ಲ. ಹಾಗಂತ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹ ಖರ್ಚನ್ನು ಮತ್ತು ಕಡಿಮೆ ಮಾಡುವುದೇ ಇಲ್ಲ. ಅಂಥ ರಾಶಿಗಳ ಬಗ್ಗೆ ತಿಳಿಯೋಣ...

ಎಲ್ಲರಿಗೂ ದುಡ್ಡು ಮಾಡಬೇಕು, ದುಡ್ಡು ಉಳಿತಾಯ ಮಾಡಬೇಕು ಎಂಬುದರ ಬಗ್ಗೆ ಆಸಕ್ತಿ ಹೆಚ್ಚಿಗೆ ಇರುತ್ತದೆ.  ಈ ನಿಟ್ಟಿನಲ್ಲಿ ಬಹಳ ಪ್ರಯತ್ನ ಪಡುತ್ತಾರೆ. ಅನೇಕ ಹೂಡಿಕೆಯನ್ನು ಮಾಡುತ್ತಾರೆ. ಅಲ್ಲದೆ ತಮ್ಮ ಖರ್ಚು ವೆಚ್ಚಗಳಲ್ಲಿ ಕೂಡ ಹಿಡಿತವನ್ನು ಸಾಧಿಸುತ್ತಾರೆ. ಮತ್ತೆ ಕೆಲವರಿಗೆ ಹಣವನ್ನು ಉಳಿತಾಯ ಮಾಡಬೇಕು ಎಂದು ಅನ್ನಿಸುತ್ತಿದ್ದರೂ ಸಹ ಅವರಿಗೆ ತಮ್ಮ ಖರ್ಚಿನ ಮೇಲೆ ಹಿಡಿತ ಇರುವುದಿಲ್ಲ. ಯಾವುದೇ ಆಗಲಿ ಬೇಕಾಬಿಟ್ಟಿ ಖರ್ಚು ಮಾಡುತ್ತಿರುತ್ತಾರೆ. 

ಹೀಗೆ ಉಳಿತಾಯ ಮಾಡಬೇಕು ಎಂದು ಅವರ ಮನಸಿನಲ್ಲಿದ್ದರೂ ಸಹ ಸ್ವಭಾವ ಈ ರೀತಿ ಆಗಲು ಬಿಡುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಬಹುಮುಖ್ಯವಾಗಿ ರಾಶಿ, ಗ್ರಹ ಹಾಗೂ ಜನ್ಮನಕ್ಷತ್ರಗಳ ಸ್ಥಿತಿಗತಿಗಳು ಕಾರಣವಾಗುವ ಮೂಲಕ ಪ್ರಭಾವವನ್ನು ಬೀರುತ್ತವೆ. 

ಇದನ್ನು ಓದಿ: ವೃತ್ತಿ ಕ್ಷೇತ್ರದ ಅನುಸಾರ ಅದೃಷ್ಟ ಬದಲಾಯಿಸುವ ರತ್ನಗಳಿವು...

ಇನ್ನೂ ದುಬಾರಿ ವಸ್ತುಗಳನ್ನು ಖರ್ಚುಮಾಡುವ ಹುಚ್ಚುತನ ಅಥವಾ ಶೋಕಿತನವು ಇವರಿಗೆ ಮೊತ್ತದ ಹಣವನ್ನು ಕೂಡಿಡುವ ಮನಸ್ಸನ್ನೇ ಕೊಡುವುದಿಲ್ಲ. ಹೀಗೆ ಅತಿಯಾಗಿ ಖರ್ಚು ಮಾಡುವ ಮನೋಭಾವ ಉಂಟುಮಾಡುವ ರಾಶಿಗಳು ಇವೆ. ಆ ರಾಶಿಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ನೋಡೋಣ...

ಮಿಥುನ ರಾಶಿ 
ಮಿಥುನ ರಾಶಿ ಬುಧಗ್ರಹದ ರಾಶಿಯಾಗಿದೆ. ಅಧಿಪತಿ ಗ್ರಹವು ಬುಧ ಆಗಿರುವುದರಿಂದ ಇವರು ಚತುರರೂ ಆಗಿರುತ್ತಾರೆ, ಆದರೆ ಸ್ವಲ್ಪ ಮಕ್ಕಳ ಬುದ್ಧಿ (ಬಾಲಿಶ) ಇವರದ್ದಾಗಿರುತ್ತದೆ. ಹೀಗಾಗಿ ಯೋಚಿಸುವ ಮನೋಭಾವ ಇವರದ್ದಲ್ಲ. ಆದರೆ ದುಡ್ಡನ್ನು ಖರ್ಚು ಮಾಡುವ ಸಂದರ್ಭ ಬಂದರೆ ಇವರು ಹಿಂದೆ ಮುಂದೆ ಯೋಚಿಸುವುದೇ ಇಲ್ಲ. ಇವರು ತಮ್ಮ ಇರುವಿಕೆಯನ್ನು ತೋರ್ಪಡಿಸುವುದು ಬಹಳ ಇಷ್ಟ ಪಡುತ್ತಾರೆ. ಅಲ್ಲದೆ ಹೆಚ್ಚು ಮಂದಿ ಎದುರಿಗೆ ಕುಡಿಯಲು, ತಿನ್ನಲು ಬಹಳಷ್ಟು ಖರ್ಚು ಮಾಡುತ್ತಾರೆ. ಇವರಿಗೆ ಒಮ್ಮೆ ದುಡ್ಡು ಬರುವುದು ವಿಳಂಬವಾದರೂ ಸಹ ಅದನ್ನು ಬಹುಬೇಗ ಖರ್ಚು ಮಾಡಿಕೊಳ್ಳುತ್ತಾರೆ. ಹೀಗಾಗಿ ಇವರ ಬಳಿ ಸದಾ ಕೈಯಲ್ಲಿ ಕಾಸು ಇರುವುದಿಲ್ಲ.

ಇದನ್ನು ಓದಿ: ಶನಿ ದೋಷದಿಂದ ಮುಕ್ತಿ ಪಡೆಯೋಕೆ ಇಲ್ಲಿದೆ ವಾಸ್ತು ಟಿಪ್ಸ್...!

ಸಿಂಹ ರಾಶಿ 
ಈ ರಾಶಿಗೆ ಸೂರ್ಯ ಗ್ರಹ ಅಧಿಪತಿಯಾಗಿದೆ. ಹೀಗಾಗಿ ಈ ರಾಶಿಯವರಿಗೆ ರಾಜಸ ಸ್ವಭಾವದ ಬಹಳ ಹೆಚ್ಚಿರುತ್ತದೆ. ಅಂದರೆ ಸಿಟ್ಟು - ಸೆಡವು, ಮುಂಗೋಪದಂತಹ ಸ್ವಭಾವಗಳು ಅತಿ ಹೆಚ್ಚಾಗಿ ಬಂದಿರುತ್ತದೆ. ಈ ವ್ಯಕ್ತಿಗಳು ಬಹಳ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಅದರ ಬಗ್ಗೆ ಯಾರೂ ಪ್ರಶ್ನೆಯನ್ನು ಕೂಡ ಮಾಡಬಾರದು. ಸದಾ ವಿಲಾಸಿ ಜೀವನವನ್ನು ನಡೆಸಲು ಇಷ್ಟಪಡುವ ಇವರು ಅದಕ್ಕಾಗಿ ಸಾಕಷ್ಟು ಹಣವನ್ನು ವ್ಯಯ ಮಾಡುತ್ತಾರೆ. ಈ ಮೂಲಕ ಇತರರನ್ನು ಮೆಚ್ಚಿಸಲು ಮುಂದಾಗುತ್ತಾರೆ. ಇವರ ಈ ಅಭ್ಯಾಸವು ಇವರನ್ನು ಸಾಲಗಾರರನ್ನಾಗಿ ಸಹ ಮಾಡುತ್ತದೆ. ಹಣವನ್ನು ಯಾವ ರೀತಿಯಾಗಿ? ಎಲ್ಲಿ? ಎಷ್ಟು ಪ್ರಮಾಣದಲ್ಲಿ ಖರ್ಚು ಮಾಡಬೇಕು ಎಂಬ ಬಗ್ಗೆ ಇವರು ಯೋಚಿಸುವುದೇ ಇಲ್ಲ. 


ತುಲಾ ರಾಶಿ 
ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ಇದು ಭೌತಿಕ ಸುಖಕಾರಕ ಗ್ರಹವಾಗಿದೆ. ಈ ರಾಶಿಯ ವ್ಯಕ್ತಿಗಳಿಗೆ ದುಬಾರಿ ವಸ್ತುಗಳ ಮೇಲೆ ಅತಿಯಾದ ಪ್ರೀತಿ ಮತ್ತು ವ್ಯಾಮೋಹ. ಬಹಳಷ್ಟು ಹಣವನ್ನು ಇವರು, ತಿನ್ನಲು, ಕುಡಿಯಲು ಹಾಗೂ ವಿಲಾಸಿ ಜೀವನ ನಡೆಸಲೇ ಖರ್ಚು ಮಾಡುತ್ತಾರೆ. ಹೀಗೆ ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಲು ಇವರು ಮೊದಲ ಸ್ಥಾನದಲ್ಲಿರುತ್ತಾರೆ. ಹಾಗಂತ ಇವರು ಹೆಚ್ಚಿನ ಹಣವನ್ನು ಸಹ ಗಣಿಸುತ್ತಾರೆ. ಶುಕ್ರಗ್ರಹದ ಕೃಪೆಯಿಂದ ಇದು ಸಾಧ್ಯವಾಗುತ್ತದೆ. ಹೀಗೆ ಹಣವನ್ನು ಖರ್ಚು ಮಾಡುವ ಇವರ ಅಭ್ಯಾಸವು ಹಣವನ್ನು ಉಳಿತಾಯ ಮಾಡಲು ಬಿಡುವುದಿಲ್ಲ. ಇವರ ಇದೇ ಮನೋಭಾವದಿಂದ ಆರ್ಥಿಕ ಸಂಕಷ್ಟ ಎದುರಾಗುವ, ಕೆಲವೊಮ್ಮೆ ಸಾಲ ಮಾಡುವ ಪ್ರಮೇಯ ಎದುರಾಗುತ್ತದೆ.

ಇದನ್ನು ಓದಿ: ಈ ಮೂರು ರಾಶಿ ಹುಡುಗರು ಕೇರಿಂಗ್ –ರೊಮ್ಯಾಂಟಿಕ್!

ವೃಶ್ಚಿಕ ರಾಶಿ 
ಮಂಗಳ ಈ ರಾಶಿಗೆ ಅಧಿಪತಿ ಗ್ರಹವಾಗಿದೆ. ಹೀಗಾಗಿ ಈ ರಾಶಿಯ ವ್ಯಕ್ತಿಗಳು ಹಣ ಖರ್ಚು ಮಾಡುವುದರಲ್ಲಿ ಸದಾ ಮುಂದು. ತಮ್ಮ ಜೀವನಕ್ಕಾಗಿ ಬಹಳಷ್ಟು ಹಣವನ್ನು ವ್ಯಯಿಸುವ ಇವರು ವಿಲಾಸಿ ಜೀವನವನ್ನು ಇಷ್ಟಪಡುತ್ತಾರೆ. ಇವರು ಸ್ವತಂತ್ರ ಜೀವನವನ್ನು ಇಷ್ಟ ಪಡುವುದಲ್ಲದೆ, ಇತರರ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ. ಹಾಗಂತ ಹಣ ಖರ್ಚು ಮಾಡುವಾಗ ಯಾವುದೇ ರೀತಿಯಲ್ಲೂ ಚಿಂತಿಸುವುದಿಲ್ಲ. ಇವರು ಭೂತ, ಭವಿಷ್ಯವನ್ನು ಅಷ್ಟು ಲೆಕ್ಕಕ್ಕೇ ಇಟ್ಟುಕೊಳ್ಳದೆ, ಈಗಿನ ವರ್ತಮಾನ ಪರಿಸ್ಥಿತಿಯಲ್ಲಿ ಜೀವನ ಮಾಡಲು ಇಷ್ಟಪಡುತ್ತಾರೆ. ಹೀಗಾಗಿ ಈಗಿನ ಸಂತೋಷಕ್ಕಾಗಿ ಹಣವನ್ನು ಹೆಚ್ಚು ಬಯಸುತ್ತಾರೆ.
 

click me!