Astrology Tips : ಇಂಥ ಪರಿಸ್ಥಿತಿಯಲ್ಲಿ ಪ್ರಮುಖ ನಿರ್ಧಾರ ತೆಗೆದ್ಕೊಳ್ಳಬೇಡಿ

Published : Jun 19, 2023, 03:07 PM IST
Astrology Tips :  ಇಂಥ ಪರಿಸ್ಥಿತಿಯಲ್ಲಿ ಪ್ರಮುಖ ನಿರ್ಧಾರ ತೆಗೆದ್ಕೊಳ್ಳಬೇಡಿ

ಸಾರಾಂಶ

ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ಭವಿಷ್ಯಕ್ಕೆ ಸಹಕಾರಿಯಾಗಿರುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾಲ್ಕೈದು ಬಾರಿ ಆಲೋಚನೆ ಮಾಡ್ಬೇಕು. ಪೂರ್ವಾಪರ ಆಲೋಚನೆ ಮಾಡ್ಬೇಕು. ಆದ್ರೆ ಅನೇಕರ ಬಾರಿ ನಾವು ಯಾವುದೋ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಂಡು ಯಡವಟ್ಟು ಮಾಡಿಕೊಳ್ತೇವೆ.  

ಹಿಂದೂ ಧರ್ಮದಲ್ಲಿ ಭಗವದ್ಗೀತೆಯನ್ನು ದೇವರಂತೆ ಪೂಜಿಸುತ್ತಾರೆ. ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾದ ಭಗವದ್ಗೀತೆಯ ಒಂದೊಂದು ಶ್ಲೋಕಗಳು ಬದುಕಿನ ಅರ್ಥ, ಗುರಿ, ಸಾರ್ಥಕತೆಯನ್ನು ತಿಳಿಸುತ್ತದೆ. ಮನುಷ್ಯನ ಸ್ವಭಾವ ಹೇಗಿರಬೇಕು, ಆತ ಕಷ್ಟಗಳನ್ನು ಹೇಗೆ ಎದುರಿಸಬೇಕು, ಆತನ ಯೋಗ್ಯತೆಗಳೇನು ಎನ್ನುವುದನ್ನು ಕೃಷ್ಣ ಉಪದೇಶ ಮಾಡಿದ್ದಾನೆ. ಕೃಷ್ಣನ ಸಂದೇಶ ಎಲ್ಲರ ಜೀವನಕ್ಕೆ ದಾರಿದೀಪವಾಗಿದೆ.

ಭಗವದ್ಗೀತೆ (Bhagavad Gita)ಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಮನುಕುಲಕ್ಕೆ ಜೀವಿಸಲು ಬೇಕಾದ ಧರ್ಮ (Religion) , ಕರ್ಮ, ಪ್ರೇಮಗಳ ಪಾಠವನ್ನು ಭಗವದ್ಗೀತೆ ಹೇಳಿಕೊಡುತ್ತದೆ. ಇವೆಲ್ಲವುಗಳ ಜೊತೆಗೆ ಯಾವ ಪರಿಸ್ಥಿತಿಯಲ್ಲಿ ನಾವು ಹೇಗಿರಬೇಕು, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೇಗೆ ಎಚ್ಚರದಿಂದಿರಬೇಕು ಎನ್ನುವುದನ್ನು ಕೂಡ ಭಗವದ್ಗೀತೆ ಹೇಳಿದೆ.

ಈ ರಾಶಿಗಳಿಗೆ ಎಷ್ಟು ತಿಳಿದುಕೊಂಡ್ರೂ ತೀರದ ಜ್ಞಾನದ ಹಸಿವು!

ಬದುಕಿಗೆ ಪ್ರೇರಣೆ ನೀಡುತ್ತೆ ಭಗವದ್ಗೀತೆಯ ಈ ವಿಚಾರಗಳು :

ಕೋಪ (Anger) ದ ಕೈಗೆ ಬುದ್ಧಿ ಕೊಡಬೇಡಿ : ಕೆಲವೊಮ್ಮೆ ನಾವು ಸಿಟ್ಟಿನಲ್ಲಿ ಏನೋ ಹೇಳಿಬಿಡುತ್ತೇವೆ. ಆದರೆ ಕೋಪ ತಣ್ಣಗಾದಮೇಲೆ ನಮಗೆ ನಾವು ಆಡಿದ ಮಾತಿನ ಬಗ್ಗೆ ಅಥವಾ ನಿರ್ಧಾರದ ಬಗ್ಗೆ ಪಶ್ಚಾತಾಪವಾಗುತ್ತೆ. ಭಗವದ್ಗೀತೆಯಲ್ಲಿ ಕೃಷ್ಣ ಕೂಡ ಇದೇ ವಿಚಾರವನ್ನು ಹೇಳಿದ್ದಾನೆ. ಕೃಷ್ಣ, ಒಬ್ಬ ವ್ಯಕ್ತಿ ಅತಿಯಾದ ಸಂತೋಷದಲ್ಲಿರುವಾಗ ಅಥವಾ ದುಃಖದಲ್ಲಿ ಇರುವಾಗ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳುತ್ತಾನೆ. ಮನಸ್ಸು ಒಂದು ಕಡೆ ಸ್ಥಿರವಾಗಿ ನಿಂತಾಗ, ವಿವೇಚನೆಯಿಂದ ನಿರ್ಣಯ ತೆಗೆದುಕೊಳ್ಳಬೇಕೆಂದು ಭಗವದ್ಗೀತೆಯಲ್ಲಿ ಕೃಷ್ಣ ಉಪದೇಶ ಮಾಡಿದ್ದಾನೆ.

ಸಮಸ್ಯೆಗೆ ಕಾರಣ ಹುಡುಕಿ : ಜೀವನ ಎಂದ ಮೇಲೆ ಕಷ್ಟ ಸುಖಗಳು ಇದ್ದೇ ಇರುತ್ತದೆ. ಸಮಸ್ಯೆ ಯಾವುದೇ ಇರಲಿ ಅದರ ಹಿಂದೆ ಒಂದು ಕಾರಣವಿರುತ್ತೆ. ಹಾಗಾಗಿ ವ್ಯಕ್ತಿ ತನಗೆ ಬಂದಿರುವ ಕಷ್ಟಗಳಿಗೆ ಕಾರಣ ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಮಸ್ಯೆ ನಾವು ನಮ್ಮ ಜೀವನದಲ್ಲಿ ಯಾವುದನ್ನೋ ಬದಲಿಸಿಕೊಳ್ಳಬೇಕು ಎನ್ನುವುದರ ಸಂಕೇತವಾಗಿದೆ. ನಾವು ಜೀವನ ಕ್ರಮವನ್ನೋ ಅಥವಾ ಕೆಲಸದ ರೀತಿಯನ್ನೋ ಬದಲಾಯಿಸಿಕೊಂಡಾಗ ಸಮಸ್ಯೆಗೆ ಪರಿಹಾರ ಸಿಗಬಹುದು.

Chanakya Neeti: ಪುರುಷರು ಈ ವಿಷಯಗಳಲ್ಲೆಂದೂ ಮಹಿಳೆಯರನ್ನು ಮೀರಿಸಲಾರರು!

ಅವಕಾಶಗಳ ಸದ್ಬಳಕೆಯಾಗಲಿ : ಜೀವನದಲ್ಲಿ ನಮಗೆ ಸಿಕ್ಕ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶಗಳು ನಮಗಾಗಿ ಕಾಯುವುದಿಲ್ಲ. ನಾವು ಅವಕಾಶಕ್ಕಾಗಿ ಕಾಯುತ್ತಿರಬೇಕು. ಹಾಗೆ ಅವಕಾಶ ಸಿಕ್ಕಿದಾಗ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು. ಒಬ್ಬರು ನಮ್ಮ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಜವಾಬ್ದಾರಿ ವಹಿಸಿದಾಗ ಅವರಿಗೆ ಮೋಸ ಮಾಡದೇ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಅದೇ ರೀತಿ ನಿಮಗೆ ಯಾರಾದರೂ ಮೋಸ ಮಾಡಿದರೂ ಕೂಡ ಮತ್ತೊಮ್ಮೆ ಅವರಿಗೆ ಅವಕಾಶ ಕೊಡಬಾರದು.

ಸಿಟ್ಟು ಸಂಬಂಧವನ್ನು ಹಾಳುಮಾಡುತ್ತೆ : ಕ್ಷಣಕಾಲದ ಸಿಟ್ಟು ಒಳ್ಳೆಯ ಸಂಬಂಧವನ್ನು ಹಾಳುಮಾಡುತ್ತೆ. ಆ ಕ್ಷಣದಲ್ಲಿ ನಮ್ಮ ಬುದ್ಧಿ ನಮ್ಮ ಸ್ಥಿಮಿತದಲ್ಲಿ ಇರುವುದಿಲ್ಲ. ಸಮಯ ಮುಗಿದಾಗಲೇ ನಮಗೆ ಪ್ರಜ್ಞೆ ಬರುತ್ತದೆ ಎಂದು ಭಗವದ್ಗೀತೆ ಹೇಳಿದೆ.

ಒಳ್ಳೆತನದ ಮುಖವಾಡ ಬೇಡ : ಅನೇಕ ಮಂದಿ ನಾಲ್ಕು ಜನರೆದುರು ತಮ್ಮನ್ನು ತಾವು ಒಳ್ಳೆಯವರಂತೆ ಬಿಂಬಿಸಿಕೊಳ್ಳುತ್ತಾರೆ. ಮನುಷ್ಯನ ಈ ರೀತಿಯ ಸ್ವಭಾವ ಆತನ ಅವನತಿಗೆ ಕಾರಣವಾಗುತ್ತದೆ. ಭಗವಂತ ನಮ್ಮ ದೇಹದ ಒಳಗಡೆಯೂ ಇದ್ದಾನೆ. ಹಾಗಾಗಿ ನಾವು ಅಂತರಂಗದಿಂದಲೂ ಶುದ್ಧವಾಗಿರುವುದು ಮುಖ್ಯ.

ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ : ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು ಎಂಬ ಮಾತು ನಮ್ಮಲ್ಲಿ ಹಿಂದಿನಿಂದಲೂ ಇದೆ. ಮನುಷ್ಯನಿಗೆ ಸಿಟ್ಟು ಬಂದಾಗ ಆತ ಧೈರ್ಯ ಮತ್ತು ತಾಳ್ಮೆಯನ್ನು ತಂದುಕೊಳ್ಳಬೇಕು ಎಂದು ಕೃಷ್ಣ ಹೇಳುತ್ತಾನೆ. ಒಮ್ಮೆ ಬಂದ ಸಿಟ್ಟನ್ನು ನೀವು ತಾಳ್ಮೆಯಿಂದ ನಿಭಾಯಿಸಿದರೆ ನಿಮ್ಮ ನೂರು ದಿನದ ದುಃಖದಿಂದ ನೀವು ಮುಕ್ತರಾಗುತ್ತೀರಿ ಎಂಬುದು ಭಗವದ್ಗೀತೆಯ ಸಂದೇಶವಾಗಿದೆ.

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ : ಜೀವನದ ಸೋಲು ಗೆಲುವುಗಳು ನಮ್ಮ ಆಲೋಚನೆಯನ್ನು ಅವಲಂಬಿಸಿದೆ. ನಮಗೆ ಆಗುವುದಿಲ್ಲ ಎಂದು ಕೈಚೆಲ್ಲಿ ಕುಳಿತರೆ ಸೋಲನ್ನು ಒಪ್ಪಿಕೊಂಡಂತೆ ಆಗುತ್ತದೆ. ಅದರ ಬದಲಾಗಿ ಗೆಲ್ಲಲೇಬೇಕು ಎನ್ನುವ ಗಟ್ಟಿಯಾದ ನಿರ್ಧಾರ ಮಾಡಿದರೆ ಆಗ ಗೆಲುವು ನಮ್ಮದಾಗುತ್ತದೆ.
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ