Festivals
ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲೊಂದರಲ್ಲಿ ಪುರುಷರು ಯಾವ ವಿಷಯಗಳಲ್ಲಿ ಎಂದಿಗೂ ಮಹಿಳೆಯನ್ನು ಹಿಂದೆ ಹಾಕಲಾರರು ಎಂಬುದನ್ನು ತಿಳಿಸಿದ್ದಾರೆ.
ಪುರುಷ ಪ್ರಧಾನ ಸಮಾಜವೇ ಇರಲಿ, ಆದರೆ ಮಹಿಳೆಯರು ಪುರುಷರಿಗಿಂತ ಈ ವಿಷಯಗಳಲ್ಲಿ ಹೆಚ್ಚು ಎಂಬುದನ್ನು ಯಾರೂ ಅಲ್ಲಗೆಳೆಯಲಾರರು ಎನ್ನುತ್ತಾರೆ ಚಾಣಕ್ಯ.
ಹಸಿವಿನ ವಿಷಯಕ್ಕೆ ಬಂದರೆ ಮಹಿಳೆಯರಿಗೇ ಅದು ಹೆಚ್ಚು. ಇದಕ್ಕೆ ಕಾರಣ ಅವರು ದಿನದಲ್ಲಿ ಪುರುಷರಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ. ಹೀಗಾಗಿ ಅವರಿಗೆ ಹೆಚ್ಚು ಎನರ್ಜಿ ಅಗತ್ಯವಿದೆ.
ಮಹಿಳೆಯರು ಪುರುಷರಿಗಿಂತ 4 ಪಟ್ಟು ಹೆಚ್ಚು ಬುದ್ಧಿವಂತಿಕೆ ಹೊಂದಿರುತ್ತಾರೆ. ಅವರು ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲ ಚಾಕಚಕ್ಯತೆ ಹೊಂದಿರುತ್ತಾರೆ.
ದೈಹಿಕವಾಗಿ ಪುರುಷರಿಗಿಂತ ದುರ್ಬಲರಾದರೂ, ಮಹಿಳೆಯರಲ್ಲಿ ಧೈರ್ಯವು ಪುರುಷರಿಗಿಂತ 6 ಪಟ್ಟು ಹೆಚ್ಚಿರುತ್ತದೆ. ಅದನ್ನು ಬಳಸಿ ಅವರು ಏನನ್ನೂ ಸಾಧಿಸಬಲ್ಲರು.
ಇದನ್ನು ಯಾರೂ ಬಾಯ್ಬಿಟ್ಟು ಹೇಳಲಾರರು. ಆದರೂ, ಮಹಿಳೆಯರಲ್ಲಿ ಪುರುಷರಿಗಿಂತ 8 ಪಟ್ಟು ಹೆಚ್ಚು ಲೈಂಗಿಕ ಬಯಕೆ ಇರುತ್ತದೆ.