Garuda Purana: ನಿಮ್ಮನ್ನು ಪಾತಳಕ್ಕೆ ನೂಕುತ್ತೆ ದಿನನಿತ್ಯದ ಈ ತಪ್ಪು

Published : Jun 10, 2022, 06:52 PM IST
Garuda Purana: ನಿಮ್ಮನ್ನು ಪಾತಳಕ್ಕೆ ನೂಕುತ್ತೆ ದಿನನಿತ್ಯದ ಈ ತಪ್ಪು

ಸಾರಾಂಶ

Garuda Purana in Kannada: ನಮ್ಮ ಶಾಸ್ತ್ರ, ಪುರಾಣಗಳಲ್ಲಿ ಉತ್ತಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಅನೇಕ ಕಿವಿ ಮಾತುಗಳನ್ನು ಹೇಳಲಾಗಿದೆ. ಗರುಡ ಪುರಾಣದಲ್ಲಿಯೂ ನಮ್ಮ ಯಶಸ್ಸಿನ ಮಂತ್ರವನ್ನು ಹೇಳಲಾಗಿದೆ. ಯಾವ ತಪ್ಪುಗಳನ್ನು ಮಾಡಿದ್ರೆ ನಷ್ಟ ಕಟ್ಟಿಟ್ಟ ಬುತ್ತಿ ಎಂಬುದನ್ನೂ ತಿಳಿಸಲಾಗಿದೆ.  

ಹಿಂದೂ ಧರ್ಮದಲ್ಲಿ ಗರುಡ ಪುರಾಣ (Garuda Purana) ಕ್ಕೆ ಮಹತ್ವದ ಸ್ಥಾನವಿದೆ. ಜನನ (Birth) ದಿಂದ ಹಿಡಿದು ಮೃತ್ಯುವಿನವರೆಗೆ ಎಲ್ಲವನ್ನು ಇದ್ರಲ್ಲಿ ಹೇಳಲಾಗಿದೆ. ಬರೀ ಜನನ – ಮರಣದ ಮಧ್ಯೆ ಇರುವ ಜೀವನ (Life) ಮಾತ್ರವಲ್ಲ ಅದರ ನಂತ್ರದ ಜೀವನದ ಬಗ್ಗೆಯೂ ಗರುಡ ಪುರಾಣದಲ್ಲಿ ಹೇಳಲಾಗಿದೆ. ಮನುಷ್ಯ ತನ್ನ ಜೀವನದಲ್ಲಿ ಹೇಗೆ ಸಂತೋಷ ಪಡೆಯಬೇಕು, ಯಶಸ್ವಿ ಜೀವನ ನಡೆಸಲು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬೆಲ್ಲ ಸಂಗತಿಯನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ನಾವು ಪ್ರತಿ ದಿನ ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೆ ಅನೇಕ ಕೆಲಸಗಳನ್ನು ಮಾಡ್ತೇವೆ. ಅದ್ರಲ್ಲಿ ತಪ್ಪು – ಸರಿ ಎಲ್ಲವೂ ಸೇರಿರುತ್ತದೆ. ಅನೇಕ ಬಾರಿ ನಾವು ಮಾಡ್ತಿರುವ ಕೆಲಸ ತಪ್ಪು ಎಂಬ ಸಂಗತಿ ನಮಗೆ ತಿಳಿದೇ ಇರೋದಿಲ್ಲ. ಕೆಟ್ಟ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ಹಾಳುಮಾಡುತ್ತವೆ. ಹಾಗಾಗಿ ಯಾವುದು ತಪ್ಪು ಎಂಬುದು ನಮಗೆ ತಿಳಿದಿರಬೇಕು. ತಪ್ಪಾದ ಕೆಲಸವನ್ನು ಮತ್ತೆ ಮಾಡಬಾರದು. ಗರುಡ ಪುರಾಣದ ಪ್ರಕಾರ, ಮಾಡಿದ ತಪ್ಪಿನ ಭಾರವನ್ನು ನಾವೇ ಹೊರಬೇಕಾಗುತ್ತದೆ. ಹಾಗೆ ನಮ್ಮ ಸಂತೋಷ ಇದ್ರಿಂದ ಹಾಳಾಗುತ್ತದೆ. ಗರುಡ ಪುರಾಣದಲ್ಲಿ ಯಾವ ತಪ್ಪು ಮಾಡಿದ್ರೆ ಜೀವನದಲ್ಲಿ ಸಂಕಷ್ಟ ಎದುರಾಗುತ್ತೆ ಎಂಬುದನ್ನು ಹೇಳಲಾಗಿದೆ. ಅದನ್ನು ನಾವಿಂದು ಹೇಳ್ತೇವೆ. 

ಈ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ : 

ಕೊಳಕು ಬಟ್ಟೆಗಳನ್ನು ಧರಿಸುವುದು : ಗರುಡ ಪುರಾಣದ ಪ್ರಕಾರ, ಲಕ್ಷ್ಮಿ ದೇವಿ ಸ್ವಚ್ಛತೆಯನ್ನು ಬಯಸ್ತಾಳೆ. ಸ್ವಚ್ಛವಾಗಿರುವ ಜಾಗದಲ್ಲಿ ವಾಸಿಸ್ತಾಳೆ. ಹಾಗೆಯೇ ಸ್ವಚ್ಛವಾಗಿರುವ ಜನರಿಗೆ ಆಶೀರ್ವಾದ ನೀಡ್ತಾಳೆ. ಯಾರ ಬಟ್ಟೆ ಮತ್ತು ಉಗುರುಗಳು ಸ್ವಚ್ಛವಾಗಿರುತ್ತವೆಯೋ, ಪ್ರತಿದಿನ ಸ್ನಾನ ಮಾಡ್ತಾರೋ ಅವರಿಗೆ ತಾಯಿ ಆಶೀರ್ವಾದ ಸದಾ ಇರುತ್ತದೆ. ತಾಯಿ ಲಕ್ಷ್ಮಿ, ಕೊಳಕಾಗಿರುವ, ಕೊಳಕಾದ ಬಟ್ಟೆಯನ್ನು ಧರಿಸುವ, ಸ್ವಚ್ಛತೆ ಬಗ್ಗೆ ಗಮನ ನೀಡದ ಜನರಿಗೆ ಎಂದೂ ಕರುಣೆ ತೋರುವುದಿಲ್ಲ.

ಕೊಳಕಾದ ಪಾತ್ರೆಗಳನ್ನು ಸಿಂಕ್ ನಲ್ಲಿ ಬಿಡುವುದು : ಅಡುಗೆ ಮನೆ ಕೂಡ ಮನೆಯ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರವಹಿಸುತ್ತದೆ. ಅನೇಕರು ರಾತ್ರಿ ಪಾತ್ರೆಗಳನ್ನು ತೊಳೆಯುವುದಿಲ್ಲ. ಪಾತ್ರೆಯನ್ನು ಸಿಂಕ್ ನಲ್ಲಿ ಬಿಟ್ಟಿರುತ್ತಾರೆ.  ಕೊಳಕು ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಡುವುದ್ರಿಂದ ತಾಯಿ ಅನ್ನಪೂರ್ಣೆ ಮತ್ತು ತಾಯಿ ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತದೆ. ಸಿಂಕ್ ನಲ್ಲಿ ಪಾತ್ರೆಯಿಟ್ಟು ಮಲಗುವ ಮನೆಯಲ್ಲಿ ಎಂದಿಗೂ ಸಮೃದ್ಧಿ ಇರುವುದಿಲ್ಲ. ಅವರು ಸದಾ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಮಲಗುವ ಮುನ್ನ ಯಾವಾಗಲೂ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ. ಪಾತ್ರೆಗಳನ್ನು ಕ್ಲೀನ್ ಮಾಡಿ.

ಇದನ್ನೂ ಓದಿ: ಮಗು, ಮನೆ, ಕೆಲಸದ ಮೇಲೆ ಯಾರಾದ್ದಾದ್ರು ದೃಷ್ಟಿ ಬಿದ್ದಿದ್ಯಾ?

ಅತಿಯಾದ ನಿದ್ರೆ : ನಿದ್ರೆಗೂ ಸಮಯವಿದೆ. ಸೂರ್ಯಾಸ್ತದ ವೇಳೆ ಹಾಗೂ ಹಗಲಿನಲ್ಲಿ ಯಾರೂ ನಿದ್ರೆ ಮಾಡಬಾರದು. ಸೂರ್ಯೋದಯಕ್ಕಿಂತ ಮೊದಲು ಏಳ್ಬೇಕು. ಅನೇಕರು ಅತಿಯಾಗಿ ನಿದ್ರೆ ಮಾಡ್ತಾರೆ.  ಸೂರ್ಯ ನೆತ್ತಿಗೆ ಬಂದ್ಮೇಲೂ ನಿದ್ರೆ ಮಾಡುವವರಿದ್ದಾರೆ. ಅಂಥವರಿಗೆ ಲಕ್ಷ್ಮಿ ಎಂದೂ ಆಶೀರ್ವಾದ ನೀಡುವುದಿಲ್ಲ. ಈ ಜನರ ಜೀವನದಲ್ಲಿ ಪ್ರಗತಿಯಾಗುವುದಿಲ್ಲ. ಅವರ ಯಾವುದೇ ಕನಸುಗಳು ಈಡೇರುವುದಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ಅವರಿಗೆ ಸಿಗುವುದಿಲ್ಲ. 

ಅಸಹಾಯಕ – ಬಡವರ ಶೋಷಣೆ : ಅಸಹಾಯಕರು, ಬಡವರಿಗೆ ಸದಾ ನೆರವಾಗಬೇಕು. ನೆರವು ನೀಡಲು ಸಾಧ್ಯವಿಲ್ಲವೆಂದ್ರೆ ಅವರನ್ನು ಅವರ ಪಾಡಿಗೆ ಬಿಡ್ಬೇಕು. ಅದನ್ನು ಬಿಟ್ಟು ಬಡವರು ಹಾಗೂ ಅಸಹಾಯಕರನ್ನು ಶೋಷಣೆ ಮಾಡುವುದು, ಅವರ ಹಕ್ಕುನ್ನು ಕಸಿದುಕೊಳ್ಳುವುದು ಮಾಡ್ಬಾರದು. ಮೋಸದಿಂದ ಯಾರೊಬ್ಬರ ಸಂಪತ್ತನ್ನು ಕಸಿದುಕೊಳ್ಳಬಾರದು. ಈ ತಪ್ಪನ್ನು ಮಾಡೋರು, ಶೀಘ್ರವೇ ಶ್ರೀಮಂತರಾಗುತ್ತಾರೆ. ಆದ್ರೆ ಈ ಸಂಪತ್ತು ಶಾಶ್ವತವಾಗಿರುವುದಿಲ್ಲ. ಕೆಲವೇ ದಿನಗಳಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರ್ತಾರೆ ಎನ್ನುತ್ತದೆ ಗರುಡ ಪುರಾಣ. 

ಇದನ್ನೂ ಓದಿ: ಮಹಾಲಕ್ಷ್ಮೀ ಯೋಗ ಈ ಮೂರು ರಾಶಿಗಳಿಗೆ ಬಂಪರ್ ಲಾಭ!

ಮಹಿಳೆ, ವೃದ್ಧರಿಗೆ ಅವಮಾನ : ಹೆಣ್ಣನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಹೆಣ್ಣಿಗೆ ಅವಮಾನ ಮಾಡಿದ ವ್ಯಕ್ತಿ ಅಥವಾ ಮನೆ ಸಮೃದ್ಧಿ ಕಾಣುವುದಿಲ್ಲ. ಹಾಗೆಯೇ ಹಿರಿಯರು ದೇವರ ಸಮಾನ. ಅವರಿಗೆ ತೊಂದರೆ ನೀಡಿದ್ರೆ ಸಂಪತ್ತು ನಷ್ಟವಾಗುತ್ತದೆ. ಗೌರವಕ್ಕೆ ಧಕ್ಕೆಯಾಗುತ್ತದೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ