Garuda Purana: ನಿಮ್ಮ ಈ 5 ಕೆಟ್ಟ ಗುಣಗಳೇ ನಿಮ್ಮ ಬಡತನಕ್ಕೆ ಕಾರಣ; ನೀವು ಎಂದಿಗೂ ಶ್ರೀಮಂತರಾಗಲ್ಲ..!

By Sushma Hegde  |  First Published Aug 3, 2023, 11:20 AM IST

ಗರುಡ ಪುರಾಣದಲ್ಲಿ ಐದು ಕೆಟ್ಟ ಅಭ್ಯಾಸಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಅವುಗಳು ಬಡತನಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗಿದೆ. ಅಂತಹವರು ಯಾರಾದರು ಒಬ್ಬರು ಮನೆಯಲ್ಲಿದ್ದರೆ, ದರಿದ್ರ ಮೇಲುಗೈ ಸಾಧಿಸುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.


ಗರುಡ ಪುರಾಣದಲ್ಲಿ ಐದು ಕೆಟ್ಟ ಅಭ್ಯಾಸಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಅವುಗಳು ಬಡತನಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗಿದೆ. ಅಂತಹವರು ಯಾರಾದರು ಒಬ್ಬರು ಮನೆಯಲ್ಲಿದ್ದರೆ, ದರಿದ್ರ ಮೇಲುಗೈ ಸಾಧಿಸುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ಹಿಂದೂ ಧರ್ಮದ ಎಲ್ಲಾ 18 ಮಹಾಪುರಾಣಗಳಲ್ಲಿ ಗರುಡ ಪುರಾಣವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಗರುಡ ಪುರಾಣವು ಜ್ಞಾನ, ಧರ್ಮ, ನೀತಿ ಮತ್ತು ವ್ಯಕ್ತಿಯ ಮರಣದ ನಂತರ ಸ್ವರ್ಗ ಮತ್ತು ನರಕದ ಬಗ್ಗೆ ವಿವರಿಸಲಾಗಿದೆ. ಗರುಡ ಪುರಾಣದಲ್ಲಿ, ಒಬ್ಬ ವ್ಯಕ್ತಿಯು ಸಂತೋಷದಿಂದ ಬದುಕಲು ಅಗತ್ಯವಾದ ವಿಷಯಗಳ ಬಗ್ಗೆ ಹೇಳಲಾಗಿದೆ. ಗರುಡ ಪುರಾಣದಲ್ಲಿ, ವಿಷ್ಣುವಿನ ನೀತಿಯನ್ನು ವಿವರಿಸಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ನೀವು ಸಂತೋಷದ ಜೊತೆಗೆ ಶ್ರೀಮಂತ ಜೀವನವನ್ನು ನಡೆಸಬಹುದು. 

Tap to resize

Latest Videos

ಆದರೆ ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ಕೆಲವು ಗುಣಗಳು ಇರಲೇಬಾರದು. ಗರುಡ ಪುರಾಣದ ಪ್ರಕಾರ ನಾವು ಜೀವನದಲ್ಲಿ 5 ಕೆಟ್ಟ ಅಭ್ಯಾಸಗಳನ್ನು ತಪ್ಪಿಸಬೇಕೆಂದು ಹೇಳಲಾಗಿದೆ. ಅವುಗಳಿಂದ ಮನುಷ್ಯನು ಬಡವನಾಗುತ್ತಾನೆ. ಅಂತಹ ವ್ಯಕ್ತಿಯು ಎಂದಿಗೂ ಶ್ರೀಮಂತನಾಗುವುದಿಲ್ಲ. ಈ ಕೆಟ್ಟ ಅಭ್ಯಾಸಗಳ ಪರಿಣಾಮವಾಗಿ, ಒಬ್ಬ ವ್ಯಕ್ತಿಯು ಬಡತನ, ಆರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಈ ಕುರಿತು ಇಲ್ಲಿದೆ ಡೀಟೇಲ್ಸ್.

ತಡವಾಗಿ ಮಲಗುವ ಅಭ್ಯಾಸ

ತಡವಾಗಿ ಮಲಗುವ ಅಭ್ಯಾಸವನ್ನು ಹೊಂದಿರುವ ಜನರ ಮೇಲೆ ತಾಯಿ ಲಕ್ಷ್ಮಿದೇವಿಯು ಕೋಪಗೊಳ್ಳುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಬಡತನವನ್ನು ಎದುರಿಸಬೇಕಾಗುತ್ತದೆ. ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಬೆಳಿಗ್ಗೆ ಬೇಗನೆ ಎದ್ದೇಳಬೇಕು. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಏಳುವವರಿಗೆ ಹಣದ ಕೊರತೆ ಎದುರಾಗುವುದಿಲ್ಲ.

ಆಗಸ್ಟ್‌ನಲ್ಲಿ 4 ಗ್ರಹಗಳ ಸಂಚಾರ; ಈ ರಾಶಿಯವರಿಗೆ ಶುಭ-ಅಶುಭ, ಪೃಕೃತಿ ವಿಕೋಪ..!

 

ದುರಾಸೆಯ ಮನೋಭಾವ

ದುರಾಸೆಯುಳ್ಳ ಜನರು ಜೀವನದಲ್ಲಿ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ದುರಾಸೆಯಿಂದ ಆದಷ್ಟು ದೂರವಿರಬೇಕು. ದುರಾಸೆಯ ಮತ್ತು ತಪ್ಪು ದಾರಿಯಲ್ಲಿ ಹಣ ಸಂಪಾದಿಸುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸಂತೋಷವಾಗಿರುವುದಿಲ್ಲ.

ಕಠಿಣ ಕೆಲಸವನ್ನು ತಪ್ಪಿಸುವುದು

ಸಾಮಾನ್ಯವಾಗಿ ಜನರು ಕಷ್ಟಪಟ್ಟು ಕೆಲಸ ಮಾಡಲು ಇಷ್ಟಪಡುವುದಿಲ್ಲ. ಯಾರು ಕಷ್ಟಪಟ್ಟು ದುಡಿಯುವುದನ್ನು ತಪ್ಪಿಸುತ್ತಾರೋ ಅವರ ಜೊತೆಯಲ್ಲಿ ಲಕ್ಷ್ಮಿ ಉಳಿಯುವುದಿಲ್ಲ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಬೇಕು. ಕಷ್ಟಪಟ್ಟು ದುಡಿದ ಹಣ ಬೇಗ ಮುಗಿಯುವುದಿಲ್ಲ.

ಹಣದ ಅಹಂಕಾರ

ಅನೇಕ ಬಾರಿ ಒಬ್ಬ ವ್ಯಕ್ತಿಯು ಹೆಚ್ಚು ಹಣವನ್ನು ಪಡೆಯುತ್ತಾನೆ ನಂತರ ಅವನು ಹಣದ ಬಗ್ಗೆ ಹೆಮ್ಮೆ ಪಡುತ್ತಾನೆ. ಆದರೆ ಹಣದ ಬಗ್ಗೆ ಹೆಮ್ಮೆಯಿಂದ ವ್ಯಕ್ತಿಗೆ ಹಾನಿಯಾಗುತ್ತದೆ. ಹಣದ ಬಗ್ಗೆ ಹೆಮ್ಮೆ ಪಡುವುದರಿಂದ, ಒಬ್ಬ ವ್ಯಕ್ತಿಯು ಜನರನ್ನು ಭೇಟಿಯಾಗುವುದನ್ನು ಕಡಿಮೆ ಮಾಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ತಾಯಿ ಲಕ್ಷ್ಮಿ ತನ್ನ ಮನೆಯಲ್ಲಿ ವಾಸಿಸುವುದಿಲ್ಲ. ನಿಮ್ಮ ಬಳಿ ಹೆಚ್ಚು ಹಣವಿದ್ದರೆ ನಿರ್ಗತಿಕರಿಗೆ ಹಣ ನೀಡಬೇಕು.

ಕೊಳಕು ಬಟ್ಟೆ ಧರಿಸುವುದು

ಒಬ್ಬ ವ್ಯಕ್ತಿಯು ತನ್ನ ಬಟ್ಟೆ ಮತ್ತು ದೇಹವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಉದ್ದ ಕೂದಲು, ಉಗುರುಗಳು ಮುಂತಾದವುಗಳು ಬಡತನವನ್ನು ತರುತ್ತವೆ. ಲಕ್ಷ್ಮಿಯು ಸ್ವಚ್ಛವಾದ ಸ್ಥಳದಲ್ಲಿ ನೆಲೆಸುತ್ತಾಳೆ.

ಅರಿಶಿನ ಎಂತಾ ಚಮತ್ಕಾರಿ ಗೊತ್ತಾ? ಈ ತಂತ್ರಗಳಿಂದ ನಿಮ್ಮ ದುರಾದೃಷ್ಟ ಹೋಗಲಿದೆ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!