Garuda Purana: ಮುಂದಿನ ಜನ್ಮದಲ್ಲಿ ಏನಾಗುತ್ತೀರಿ ಎಂದು ತಿಳ್ಕೋಬೇಕಾ?

By Suvarna News  |  First Published May 21, 2023, 3:15 PM IST

ಸಾವಿಗೂ ಮುನ್ನವೇ ನಿರ್ಧರಿತವಾಗುತ್ತೆ ಮುಂದಿನ ಜನ್ಮದಲ್ಲಿ ಏನಾಗುತ್ತೀರಿ ಎಂಬುದು. ಈ ಬಗ್ಗೆ ಭಗವಾನ್ ವಿಷ್ಣು ನೀತಿ ಗರುಡ ಪುರಾಣದಲ್ಲಿ ವಿವರವಾದ ಉಲ್ಲೇಖವಿದೆ.


ಧಾರ್ಮಿಕ ಗ್ರಂಥಗಳ ಪ್ರಕಾರ, ಈ ಜಗತ್ತಿನಲ್ಲಿ ಮನುಷ್ಯನಾಗಿ ನಮ್ಮ ಜನ್ಮವು ನಮ್ಮ ಕರ್ಮಗಳನ್ನು ಆಧರಿಸಿದೆ ಮತ್ತು ನಮ್ಮ ಮುಂದಿನ ಜನ್ಮವೂ ನಮ್ಮ ಕರ್ಮಗಳನ್ನು ಆಧರಿಸಿದೆ. ಗರುಡ ಪುರಾಣದ ಪ್ರಕಾರ, ವ್ಯಕ್ತಿಯ ಮುಂದಿನ ಜನ್ಮವು ಅವನ ಒಳ್ಳೆಯ ಅಥವಾ ಕೆಟ್ಟ ಕಾರ್ಯವನ್ನು ಆಧರಿಸಿದೆ. ಸಾವಿನ ಬಗ್ಗೆ, ಶ್ರೀಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ, ಹುಟ್ಟು ಮತ್ತು ಸಾವು ಜೀವನ ಚಕ್ರವಾಗಿದ್ದು, ಪ್ರತಿಯೊಬ್ಬರೂ ಹಾದು ಹೋಗಬೇಕು. ಆದ್ದರಿಂದಲೇ ಈ ಲೋಕದಲ್ಲಿ ಹುಟ್ಟಿದವನಿಗೆ ಅವನ ಮರಣವೂ ನಿಶ್ಚಿತ ಮತ್ತು ಇದು ಬದಲಾಗದ ಸತ್ಯ.  ಸಾವಿನ ನಂತರ ದೇಹ ಮಾತ್ರ ನಾಶವಾಗುತ್ತದೆ, ಆತ್ಮವಲ್ಲ ಎಂದು ಗೀತೆಯಲ್ಲಿ ಹೇಳಲಾಗಿದೆ. ಆತ್ಮವು ಹಳೆಯ ದೇಹವನ್ನು ತ್ಯಜಿಸಿ ಹೊಸ ದೇಹವನ್ನು ಪಡೆಯುತ್ತದೆ.

ಒಂದು ಆತ್ಮವಿ 84 ಲಕ್ಷ ಜೀವರಾಶಿಗಳನ್ನು ದಾಟಿ ಸಾಗುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ, ಮಾನವ ಜನ್ಮ ತಾಳುವುದು ಅತ್ಯಂತ ಪುಣ್ಯದ ಫಲವಾಗಿದೆ. ಅದನ್ನು ಹಾಳು ಮಾಡಿಕೊಳ್ಳದೆ ಉಚಿತ ರೀತಿಯಲ್ಲಿ ಬದುಕಬೇಕೆಂದು ಹೇಳಲಾಗಿದೆ. ಗರುಡ ಪುರಾಣದಲ್ಲಿ, ಕರ್ಮಗಳ ಆಧಾರದ ಮೇಲೆ ಹುಟ್ಟುವ ಯೋನಿಯ ಬಗ್ಗೆ ಹೇಳಲಾಗಿದೆ. ಸಾವಿನ ನಂತರ ನೀವು ಯಾವ ಯೋನಿಯಲ್ಲಿ ಜನಿಸುತ್ತೀರಿ ಎಂಬುದು ಈಗಾಗಲೇ ನಿರ್ಧರಿಸಲ್ಪಟ್ಟಿದೆ. 

Tap to resize

Latest Videos

ನಿಮ್ಮ ಜೀವನದಲ್ಲಿ ನೀವು ಯಾವ ರೀತಿಯ ಕೆಲಸವನ್ನು ಮಾಡುತ್ತೀರಿ, ಮರಣದ ನಂತರ, ನಿಮ್ಮ ಮುಂದಿನ ಜನ್ಮವೂ ಅದರ ಆಧಾರದ ಮೇಲೆ ಇರುತ್ತದೆ. ಮುಂದಿನ ಜನ್ಮವನ್ನು ನಿರ್ಧರಿಸುವ ಅಂತಹ ಕಾರ್ಯಗಳ ಬಗ್ಗೆ ತಿಳಿಯೋಣ

ಧರ್ಮವನ್ನು ಅವಮಾನಿಸುವವರು: ಧರ್ಮ, ವೇದ, ಪುರಾಣಗಳಂತಹ ಧಾರ್ಮಿಕ ಗ್ರಂಥಗಳನ್ನು ಅವಮಾನಿಸುವ ವ್ಯಕ್ತಿ, ದೇವರಲ್ಲಿ ಭಕ್ತಿಯಿಲ್ಲದ ಮತ್ತು ಪೂಜೆ ಮಾಡದವನನ್ನು ನಾಸ್ತಿಕ ಎಂದು ಕರೆಯಲಾಗುತ್ತದೆ. ಗರುಡ ಪುರಾಣದ ಪ್ರಕಾರ ಅಂಥವರು ಮುಂದಿನ ಜನ್ಮ ನಾಯಿಯ ರೂಪದಲ್ಲಿರುತ್ತದೆ.

ಸ್ನೇಹಿತರಿಗೆ ಮೋಸ ಮಾಡುವವರು: ಸ್ನೇಹವು ವಿಶ್ವದ ಅತ್ಯಂತ ಸುಂದರವಾದ ಸಂಬಂಧವಾಗಿದೆ. ಆದರೆ ಕೆಲವರು ಮಿತ್ರರಂತೆ ಇದ್ದು ಶತ್ರುತ್ವ ಸಾಧಿಸುತ್ತಾರೆ. ನಯವಂಚನೆ ಮಾಡುತ್ತಾರೆ. ಗರುಡ ಪುರಾಣದ ಪ್ರಕಾರ ಮಿತ್ರರನ್ನು ನಂಬಿಸಿ ವಂಚಿಸುವ ಇಂತಹವರು ಮುಂದಿನ ಜನ್ಮದಲ್ಲಿ ರಣಹದ್ದಾಗಿ ರೂಪ ತಾಳುತ್ತಾರೆ.

ಜನರನ್ನು ಮರುಳು ಮಾಡುವವರು: ಕೆಲವರು ಬುದ್ಧಿವಂತರು. ತಮ್ಮ ಬುದ್ಧಿವಂತಿಕೆಯಿಂದ ಇತರರನ್ನು ಮರುಳು ಮಾಡುವವರು ಮತ್ತು ಅವರ ಲಾಭವನ್ನು ಪಡೆದುಕೊಳ್ಳುವ ಸ್ವಭಾವದವರು.  ಅಂಥವರಿಗೆ ಮರಣಾನಂತರ ನರಕದಲ್ಲಿ ಸ್ಥಾನ ಸಿಗುತ್ತದೆ. ಇದರೊಂದಿಗೆ ಮುಂದಿನ ಜನ್ಮದಲ್ಲಿ ಅಂತಹವರು ಗೂಬೆಯ ರೂಪದಲ್ಲಿ ಹುಟ್ಟುತ್ತಾರೆ.

ಜನರನ್ನು ನಿಂದಿಸುವುದು: ತಾಯಿ ಸರಸ್ವತಿ ಕಂಠದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಆದುದರಿಂದಲೇ ಯಾರ ಮಾತಿನಲ್ಲಿ ಮಾಧುರ್ಯವಿಲ್ಲವೋ ಮತ್ತು ಇತರರಿಗೆ ಕೆಟ್ಟ ಮಾತುಗಳನ್ನು ಹೇಳುತ್ತಾರೋ ಅಥವಾ ಯಾವಾಗಲೂ ನಿಂದಿಸುತ್ತಿರುತ್ತಾರೋ ಅವರ ಮುಂದಿನ ಜನ್ಮವು ಮೇಕೆಯ ರೂಪದಲ್ಲಿರಲಿದೆ.

ಪತ್ನಿಗೆ ಮೋಸ ಮಾಡುವವನು: ಸುಳ್ಳು ಆರೋಪ ಮಾಡಿ ಹೆಂಡತಿಯನ್ನು ತ್ಯಜಿಸುವವನು ಮುಂದಿನ ಜನ್ಮದಲ್ಲಿ ಚಕ್ರವಾಕ ಎಂಬ ಪಕ್ಷಿಯಾಗಬೇಕಾಗುತ್ತದೆ. ಈ ಹಕ್ಕಿ ತುಂಬಾ ಒರಟಾಗಿರುತ್ತದೆ.

ಪತಿಗೆ ಹಿಂಸಿಸುವವರು: ತಮ್ಮ ಮನೆಯಲ್ಲಿ ತೊಂದರೆ ಕೊಡುವ, ಗಂಡನ ಮೇಲೆ ದೌರ್ಜನ್ಯ ಎಸಗುವ ಹೆಂಗಸರು ಮುಂದಿನ ಜನ್ಮದಲ್ಲಿ ಜಿಗಣೆಗಳಾಗುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!