Ganesha Chaturthi 2023: ಗಣೇಶ ಹಬ್ಬದ ಮಂಗಳಕರ ಸಮಯ, ಸರಿಯಾದ ದಿನಾಂಕ ತಿಳಿಯಿರಿ

Published : Sep 12, 2023, 10:02 AM ISTUpdated : Sep 12, 2023, 10:51 AM IST
Ganesha Chaturthi 2023: ಗಣೇಶ ಹಬ್ಬದ ಮಂಗಳಕರ ಸಮಯ, ಸರಿಯಾದ ದಿನಾಂಕ ತಿಳಿಯಿರಿ

ಸಾರಾಂಶ

ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಆಚರಿಸಲಾಗುತ್ತದೆ. ಗಣೇಶನನ್ನು ಭಕ್ತಿಯಿಂದ  ಪೂಜಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಭಾರತದ ಅನೇಕ ಭಾಗಗಳಲ್ಲಿ ಬಹಳ ಉತ್ಸಾಹ ಮತ್ತು ವೈಭವದಿಂದ ಆಚರಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಆಚರಿಸಲಾಗುತ್ತದೆ. ಗಣೇಶನನ್ನು ಭಕ್ತಿಯಿಂದ  ಪೂಜಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಭಾರತದ ಅನೇಕ ಭಾಗಗಳಲ್ಲಿ ಬಹಳ ಉತ್ಸಾಹ ಮತ್ತು ವೈಭವದಿಂದ ಆಚರಿಸಲಾಗುತ್ತದೆ.

ಈ ವರ್ಷ ಗಣೇಶ ಚತುರ್ಥಿ ಹಬ್ಬದ ದಿನಾಂಕದ ಬಗ್ಗೆ ಕೆಲವು ಗೊಂದಲಗಳಿವೆ. ಏಕೆಂದರೆ ಕೆಲವು ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿ ರಜೆ ನೀಡಿವೆ, ಕೆಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 19 ರಜೆ ನೀಡಲಾಗಿದೆ. ಈ ವರ್ಷದ ಗಣೇಶ ಚತುರ್ಥಿಯ ಶುಭ ಮುಹೂರ್ತ, ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಮಯ ಪೂಜಾ ವಿಧಾನದ ಬಗ್ಗೆ ತಿಳಿಯಿರಿ.

 ಗಣೇಶ ಚತುರ್ಥಿ ಶುಭ ಸಮಯ

ಸೆಪ್ಟೆಂಬರ್ 18 ಸೋಮವಾರ ತೃತೀಯ ತಿಥಿ ಬೆಳಿಗ್ಗೆ 09 : 56 ನಿಮಿಷಗಳವರೆಗೆ ಇದ್ದು 09 : 56 ರ ನಂತರ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ... ಇನ್ನು ಸೋಮವಾರ ಬೆಳಿಗ್ಗೆ ಸೂರ್ಯೋದಯದ ಸಮಯವು... ಮೈಸೂರಿನಲ್ಲಿ 6 : 12. ಚಾಮರಾಜನಗರ 6 : 11. ಮಂಡ್ಯ 6 : 11. ಬೆಂಗಳೂರಿನಲ್ಲಿ 6 : 08 ಕ್ಕೆ ಆಗಲಿದ್ದು ಇನ್ನೂ ರಾಹುಕಾಲ 7 : 44 ರಿಂದ 9 : 15 ರ ವರೆಗೆ ಯಮಗಂಡಕಾಲ 10 : 46 ರಿಂದ 12 : 17 ರ ವರೆಗೆ ಇರುತ್ತದೆ...ಹಾಗಾಗಿ

ಸ್ವರ್ಣ ಗೌರಿ ವ್ರತ ಮಾಡುವವರು ಬೆಳಿಗ್ಗೆ
6 : 15 ರಿಂದ 7 : 40 ರ ವರಗೆ ಅಥವಾ 9 : 16 ರಿಂದ 9 : 55 ರ ವರೆಗೆ ಮಾಡಬಹುದು

ವರಸಿದ್ದಿ ವಿನಾಯಕ ವ್ರತ ಮಾಡುವವರು ಬೆಳಿಗ್ಗೆ
10 : 00 ರಿಂದ 10 : 45 ರ ವರಗೆ ಅಥವಾ 12 : 20 ರ ಮೇಲೆ ಅಭಿಜಿನ್ ಲಗ್ನದಲ್ಲಿ ಮಾಡಬಹುದು.

ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತ
ಈ ವರ್ಷ ಸೆ.19 ರಂದು ಬೆಳಗ್ಗೆ 11.07 ರಿಂದ ಮಧ್ಯಾಹ್ನ 1.34 ರವರೆಗೆ ಗಣೇಶ ಗಣೇಶ ಪ್ರತಿಷ್ಠಾಪನೆಗೆ ಶುಭ ಮುಹೂರ್ತವಿದೆ. ಈ ಮಂಗಳಕರ ಯೋಗದಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಬಹುದು. 

ಗಣೇಶ ಚತುರ್ಥಿ ಶುಭ ಯೋಗ
ಈ ವರ್ಷಗಣೇಶ ಚತುರ್ತಿಯಂದು ಅಂದರೆ ಸೆ.19 ರಂದು ಅನೇಕ ಮಂಗಳಕರ ಯೋಗವು ರೂಪುಗೊಳ್ಳುತ್ತಿದೆ. ಈ ದಿನ ಸ್ವಾತಿ ನಕ್ಷತ್ರವು ಮಧ್ಯಾಹ್ನ 1 ಗಂಟೆಯವರೆಗೆ ಇರುತ್ತದೆ. ಇದಾದ ನಮತರ ವಿಶಾಖ ನಕ್ಷತ್ರವು ರಾತ್ರಿಯವರೆಗೆ ಇರುತ್ತದೆ. 

Solar Eclipse 2023: ಕೊನೆಯ ಸೂರ್ಯ ಗ್ರಹಣದಿಂದ ಕತ್ತಲಾಗಲಿದೆ ಈ ರಾಶಿಯವರ ಬದುಕು

 

ಗಣೇಶನ ವಿಗ್ರಹವನ್ನು ಆಯ್ಕೆಮಾಡುವಾಗ ಈ ನಿಯಮಗಳನ್ನು ನೆನಪಿನಲ್ಲಿಡಿ-
ವಿಗ್ರಹವು ಮೇಲಾಗಿ ಕುಳಿತುಕೊಳ್ಳಬೇಕು ಮತ್ತು ಒಂದರಿಂದ ಒಂದೂವರೆ ಅಡಿಗಿಂತ ಎತ್ತರವಾಗಿರಬಾರದು .
ಕುಳಿತುಕೊಳ್ಳುವ ಭಂಗಿಯಲ್ಲಿರುವ ವಿಗ್ರಹವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ
ಗಣಪತಿಯ ಸೊಂಡಿಲಿನ  ದಿಕ್ಕು ಎಡಕ್ಕೆ ವಾಲಿರಬೇಕು. 
ಗಣಪತಿಯ ವಿಗ್ರಹದಲ್ಲಿ ಕೆಳಗೆ ಇಲಿ  ಮತ್ತು ಕೈಯಲ್ಲಿ ಮೋದಕ ಇರಬೇಕು.
ಕೆಂಪು ಸಿಂಧೂರ ಬಣ್ಣದ ಗಣೇಶನ ಮೂರ್ತಿಯನ್ನು ಮನೆಗೆ ತರಬೇಕು.

ಇನ್ನು ಹಲವೆಡೆ ಗಣೇಶ ಚತುರ್ಥಿ ಮತ್ತು ಗಣೇಶನ ಹಬ್ಬವು ಅನಂತ ಚತುರ್ದಶಿಯ 10 ನೇ ದಿನದಂದು ಕೊನೆಗೊಳ್ಳುತ್ತದೆ. ಈ ದಿನ ಗಣೇಶನ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಲಾಗುತ್ತದೆ. ಕೆಲವರು ಗಣೇಶನನ್ನು ಒಂದು ದಿನ ಕೂಡಿಸಿದರೆ ಇನ್ನೂ ಕೆಲವರು ಹತ್ತು, ಒಂದು ತಿಂಗಳವರೆಗೂ ಗಣೇಶನನ್ನು ಇಟ್ಟು ಪೂಜೆ ಮಾಡುತ್ತಾರೆ.

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 9 ಸರ್ವಾರ್ಥ ಸಿದ್ಧಿ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ