ಗಣೇಶನ ನೈವೇದ್ಯದ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್: 32 ಸಾವಿರಕ್ಕೆ ಲಡ್ಡು ಹರಾಜು

By Govindaraj SFirst Published Sep 22, 2023, 9:51 AM IST
Highlights

ಗಣೇಶನ ಹಬ್ಬದ ಪ್ರಯುಕ್ತ ಪ್ರಯುಕ್ತ ಪಾವಗಡ ನಗರದ ಕಲ್ಮನ್ ಚೆರುವು ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ದೇವಸ್ಥಾನದ ಬಳಿ ಗುರುವಾರ ಸಂಜೆ ವಿಶೇಷ ಲಡ್ಡು ಪ್ರಸಾದ ಹರಾಜು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು (ಸೆ.22): ಗಣೇಶನ ಹಬ್ಬದ ಪ್ರಯುಕ್ತ ಪ್ರಯುಕ್ತ ಪಾವಗಡ ನಗರದ ಕಲ್ಮನ್ ಚೆರುವು ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ದೇವಸ್ಥಾನದ ಬಳಿ ಗುರುವಾರ ಸಂಜೆ ವಿಶೇಷ ಲಡ್ಡು ಪ್ರಸಾದ ಹರಾಜು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಲಡ್ಡನ್ನು ಹಜಾರು ಹಾಕುವುದು ವಾಡಿಕೆ. ಗಣೇಶನ ಪ್ರತಿಷ್ಟಾಪನೆ ದಿನ ಈ ಲಡ್ಡು ತಯಾರಿಸಿ ಗಣೇಶನಿಗೆ ನೈವೇದ್ಯಕ್ಕೆ ಇಡಲಾಗುತ್ತದೆ.‌ 

ಪ್ರತಿದಿನ ಗಣೇಶ ಹಾಗೂ ನೈವೇದ್ಯಕ್ಕೆ ಪೂಜೆ ಸಲ್ಲಿಸಿಕೊಂಡು ಬಂದು, ಗಣೇಶನ ವಿಸರ್ಜನೆಯ ದಿನ ಈ ಲಡ್ಡನ್ನು ಹರಾಜು ಹಾಕಲಾಗುತ್ತದೆ.‌ ಗಣೇಶನ‌ ಪೂಜೆಯಲ್ಲಿ ಪಾಲ್ಗೊಳ್ಳುವ ಕಲ್ಮನ್ ಚೆರುವು ಪ್ರದೇಶದ ಜನರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಲಡ್ಡಿನ ದರವನ್ನು ಕೂಗುತ್ತಾರೆ. ಗಣೇಶ‌ನ ಲಡ್ಡನ್ನು ಪಡೆಯಲು ಪೈಪೋಟಿ ಮೇಲೆ ಹರಾಜು ಕೂಗಲಾಗುತ್ತದೆ.

ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪಿಸುತ್ತೇವೆ: ಶಾಸಕ ಬಸನಗೌಡ ಯತ್ನಾಳ್‌

ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಗಣೇಶನ ನೈವೇದ್ಯದ ಲಡ್ಡು 32,700 ರೂಪಾಯಿಗೆ ಬಿಕರಿಯಾಗಿದೆ. ಸ್ಥಳೀಯ ನಿವಾಸಿಗಳಾದ ಗೋಪಾಲಪ್ಪ ಎಂಬುವರಿಗೆ ಲಡ್ಡು ಲಭಿಸಿದೆ. 32,700 ರೂಪಾಯಿ ಹಣವನ್ನು ನೀಡಿ  ಗೋಪಾಲಪ್ಪ ಲಡ್ಡನ್ನು ತಗೆರುಕೊಂಡಿದ್ದಾರೆ.‌ ನಿನ್ನೆ ಮಧ್ಯರಾತ್ರಿ 2 ಗಂಟೆವರೆಗೂ ಹಜಾರು ನಡೆದಿದೆ.‌ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಗಣೇಶನ ನೈವೇದ್ಯದ ಲಡ್ಡು ಹರಾಜಾಗಿದೆ.‌ ಇನ್ನು ಇದರಲ್ಲಿ ಜಯಗಳಿಸಿದ ಗೋಪಾಲಪ್ಪ ಅವರನ್ನು ಗಣೇಶ ಕಮಿಟಿ ವತಿಯಿಂದ ಸನ್ಮಾನಿಸಿದ್ದಾರೆ.

click me!