ಗಣೇಶ ಚತುರ್ಥಿಯ ಶುಭ ಮುಹೂರ್ತ, ವಿಶೇಷತೆ ಹಾಗೂ ಪೂಜಾ ವಿಧಾನವಿಲ್ಲಿದೆ..
ಭಾದ್ರಪದ ಶುಕ್ಲದ ಚೌತಿಯಂದು, ನೀ ಮನೆ ಮನೆಗೂ ದಯ ಮಾಡಿ ಹರಸು ಎಂದೂ..
ಗಣಪತಿ ಬಪ್ಪ ಮನೆಗೆ ಬರೋ ಸಮಯ ಸನ್ನಿಹಿತವಾಗಿದೆ. ಗಣಪತಿ ಹಬ್ಬ ಎಂದರೆ ದೇಶಾದ್ಯಂತ ಸಂಭ್ರಮವೋ ಸಂಭ್ರಮ. ಮನೆಮನೆಯಲ್ಲೂ ಗಣಪತಿ ಕೂರಿಸಿ ಸಡಗರ ಪಡುತ್ತಾರೆ. 10 ದಿನಗಳ ಕಾಲ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಗಣೇಶ ಹಬ್ಬ ಯಾವಾಗ, ಆ ದಿನದ ವಿಶೇಷತೆಗಳೇನು, ಗಣಪತಿ ವಿಸರ್ಜನೆ ಯಾವಾಗ ಎಲ್ಲ ನೋಡೋಣ.
ದಿನಾಂಕ, ಮಹೂರ್ತ
ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಂದ ಗಣೇಶ ಪ್ರತಿಷ್ಠಾಪನೆ ನಡೆದರೆ , ಅನಂತ ಚತುರ್ದಶಿಯಂದು ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಣಪತಿಯ ಕೃಪೆಯಿಂದ, ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯು ಆಗಸ್ಟ್ 30 ರ ಮಧ್ಯಾಹ್ನದಿಂದ ಪ್ರಾರಂಭವಾಗಿ ಆಗಸ್ಟ್ 31 ರಂದು ಮಧ್ಯಾಹ್ನ 03:23 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆಗಸ್ಟ್ 31ರ ಮಧ್ಯಾಹ್ನ ಸುಮಾರು 3.30ರವರೆಗೆ ಶುಭ ಮುಹೂರ್ತವಿರುತ್ತದೆ.
ಮಂಗಳಕರ ಯೋಗ
ಈ ವರ್ಷ ಗಣೇಶ ಉತ್ಸವವು 31 ಆಗಸ್ಟ್ 2022 ರಿಂದ ಪ್ರಾರಂಭವಾಗುತ್ತಿದೆ, ಅದೇ ಸಮಯದಲ್ಲಿ, ಗಣಪತಿಯ ಆಗಮನವು ಅತ್ಯಂತ ಮಂಗಳಕರ ಯೋಗದಲ್ಲಿ ನಡೆಯುತ್ತಿದೆ, ಅಂದರೆ, ಮಂಗಳಕರ ಯೋಗದಲ್ಲಿ, ಗಣಪತಿಯು ಮನೆಮನೆಗಳಲ್ಲಿ ಕುಳಿತುಕೊಳ್ಳುತ್ತಾನೆ. ಹಿಂದೂ ಧರ್ಮದಲ್ಲಿ ಬುಧವಾರ ಗಣಪತಿಗೆ ಸಮರ್ಪಿಸಲಾಗಿದೆ. ಈ ವರ್ಷ ಗಣೇಶ ಚತುರ್ಥಿ 31 ಆಗಸ್ಟ್ 2022, ಬುಧವಾರವೇ ಬರುತ್ತಿದೆ. ಅದೇನೆಂದರೆ, ಬುಧವಾರದಿಂದ 10 ದಿನಗಳ ಗಣೇಶ ಉತ್ಸವ ಆರಂಭವಾಗಲಿದೆ.
ಮಕ್ಕಳ ಮುದ್ದಾದ ಹೆಸರು ಸರಣಿ: 'S'ನಿಂದ ಆರಂಭವಾಗುವ ಹೊಸ ಹೆಸರುಗಳಿವು..
ಸೆಪ್ಟೆಂಬರ್ 9ರಂದು ಗಣಪತಿ ವಿಸರ್ಜನೆ
ಆಗಸ್ಟ್ 31ರಂದು, ಗಣಪತಿ ಸ್ಥಾಪನೆಯಾದ 10 ದಿನಗಳ ನಂತರ, ಸೆಪ್ಟೆಂಬರ್ 9ರಂದು, ಗಣೇಶನು ತನ್ನ ನಿವಾಸಕ್ಕೆ ಹಿಂತಿರುಗುತ್ತಾನೆ ಇರಲಿದೆ. ಈ ದಿನದಂದು ಜನರು 'ಗಣಪತಿ ಬಪ್ಪಾ ಮೋರಯಾ ಮುಂದಿನ ವರ್ಷ ಬೇಗ ಬಾ' ಎಂಬ ಹರ್ಷೋದ್ಗಾರಗಳೊಂದಿಗೆ ಗಣೇಶ ವಿಸರ್ಜನೆಯನ್ನು ಮಾಡುತ್ತಾರೆ. ಈ ದಿನ ಅನಂತ ಚತುರ್ದಶಿ ತಿಥಿ. ಇದರ ನಂತರ 15 ದಿನಗಳ ಪಿತೃ ಪಕ್ಷ ಪ್ರಾರಂಭವಾಗುತ್ತದೆ. ಪಿತೃ ಪಕ್ಷದಲ್ಲಿ ಜನರು ಪಿಂಡದಾನ, ತರ್ಪಣ, ಶ್ರಾದ್ಧ ಇತ್ಯಾದಿಗಳನ್ನು ಪೂರ್ವಜರ ಆತ್ಮಶಾಂತಿಗಾಗಿ ಮಾಡುತ್ತಾರೆ.
ಆಚರಣೆ
ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ.
ಸ್ನಾನದ ನಂತರ ಮನೆಯ ದೇವಸ್ಥಾನದಲ್ಲಿ ದೀಪವನ್ನು ಹಚ್ಚಿ.
ಈ ದಿನದಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಗಂಗಾಜಲದಿಂದ ಗಣಪ ದೇವರಿಗೆ ಅಭಿಷೇಕ ಮಾಡಿ.
ಗಣಪತಿಯ ವಿಗ್ರಹವನ್ನು ಸ್ಥಾಪಿಸಿ.
ಸಾಧ್ಯವಾದರೆ ಈ ದಿನವೂ ಉಪವಾಸವಿರಲಿ.
ಗಣೇಶನಿಗೆ ಹೂವುಗಳನ್ನು ಅರ್ಪಿಸಿ.
ಹಾಗೆಯೇ ಗಣೇಶನಿಗೆ ದೂರ್ವೆಯನ್ನು ಅರ್ಪಿಸಿ.
ಗಣಪತಿಗೆ ಸಿಂಧೂರವನ್ನು ಹಚ್ಚಿ.
ಗಣೇಶನನ್ನು ಧ್ಯಾನಿಸಿ.
ಕಾಣಿಕೆಗಳನ್ನು ಅರ್ಪಿಸಿ. ನೀವು ಗಣೇಶನಿಗೆ ಮೋದಕ ಅಥವಾ ಲಡ್ಡೂಗಳನ್ನು ಅರ್ಪಿಸಬಹುದು.
ಗಣೇಶನ ಆರತಿ ಮಾಡಿ.
ಗಣೇಶ ಚತುರ್ಥಿ ದಿನ ಇದನ್ನು ಧರಿಸಿದ್ರೆ ನಿಮ್ಮೆಲ್ಲ ಕಷ್ಟಗಳು ಕರಗುತ್ವೆ..
ಈ ಮಂತ್ರ ಜಪಿಸಿ
ಪೂಜೆಯ ಸಮಯದಲ್ಲಿ 'ಓಂ ಗಣಪತಯೇ ನಮಃ' ಎಂಬ ಮಂತ್ರವನ್ನು ನಿರಂತರ ಪಠಿಸಿ. ಮೋದಕ ಮತ್ತು ಲಡ್ಡೂಗಳನ್ನು ಪ್ರಸಾದವಾಗಿ ವಿತರಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.