ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಕಪ್ಪೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಚೀನಾದಲ್ಲಿ ಕಪ್ಪೆ ಸಾಕುವುದಕ್ಕೆ ಆದ್ಯತೆ ನೀಡಲಾಗಿದೆ. ಕಪ್ಪೆಯನ್ನು ಮಂಗಳಕರವೆಂದು ಪರಿಗಣಿಸುವ ಜನರು ಕಪ್ಪೆ, ಸುಖ, ಶಾಂತಿಯ ಸಂಕೇತವೆಂದು ಭಾವಿಸಿದ್ದಾರೆ.
ಜಿಗಿತಾ ಹೋಗುವ ಕಪ್ಪೆ ನೋಡಿದ್ರೆ ಕೆಲವರ ಮೈ ಜುಮ್ ಎನ್ನುತ್ತೆ. ಮತ್ತೆ ಕೆಲವರಿಗೆ ಕಪ್ಪೆ ಕಂಡ್ರೆ ಭಯವಿಲ್ಲ. ಹಳ್ಳಿಗಳಲ್ಲಿ ಈ ಕಪ್ಪೆ ಸಾಮಾನ್ಯ. ಅನೇಕರ ಮನೆಯೊಳಗೆ ಕಪ್ಪೆ ವಾಸವಾಗಿರುತ್ತದೆ. ದೇವರ ಮನೆಯಲ್ಲಿ ವಾಸ್ತವ್ಯ ಹೂಡುವ ಈ ಕಪ್ಪೆಗಳು ಯಾವುದೇ ಹಾನಿ ಮಾಡೋದಿಲ್ಲ. ಮನೆ ತುಂಬಾ ಓಡಾಡ್ತಾ ಇರುವ ಕಪ್ಪೆಯನ್ನು ಮನೆಯಿಂದ ಹೊರ ಹಾಕಲು ಅನೇಕರು ಪ್ರಯತ್ನ ನಡೆಸಿರುತ್ತಾರೆ. ಆದ್ರೆ ಕೆಲ ಕಪ್ಪೆಗಳನ್ನು ಮನೆಯಿಂದ ಹೊರಗೆ ಹಾಕೋದು ಸುಲಭವಲ್ಲ. ಮನೆಯಿಂದ ಹೊರಗೆ ಬಿಟ್ಟು ಬಂದ್ರೂ ಮತ್ತೆ ಅವು ಮನೆ ಸೇರುತ್ತವೆ. ಮನೆಯಲ್ಲಿರುವ ಕಪ್ಪೆ ಓಡಿಸೋದೇ ದೊಡ್ಡ ಸಮಸ್ಯೆ ಎನ್ನುವವರಿದ್ದಾರೆ. ಮನೆಯಲ್ಲಿ ಕಪ್ಪೆ ವಾಸವಿದ್ರೆ ಏನೆಲ್ಲ ಲಾಭವಿದೆ ಹಾಗೆ ಕಪ್ಪೆ ಬಗ್ಗೆ ಧರ್ಮಗಳಲ್ಲಿ, ಶಾಸ್ತ್ರಗಳಲ್ಲಿ ಏನು ಹೇಳಲಾಗಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಹಿಂದೂ (Hindu) ಧರ್ಮದಲ್ಲಿ ಕಪ್ಪೆಗೆ ಒಳ್ಳೆಯದೆಂದು ಪರಿಗಣಿಸಲಾಗಿದೆ. ಕಪ್ಪೆ (Frog) ಯನ್ನು ಸಮೃದ್ಧಿ ಮತ್ತು ಉತ್ತಮ ಆರೋಗ್ಯದೊಂದಿಗೆ ನೋಡಲಾಗುತ್ತದೆ. ಮನೆಯಲ್ಲಿ ಕಪ್ಪೆ ಇರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಕಪ್ಪೆ ಸಾಕುತ್ತೇನೆ ಎನ್ನುವವರು ಶುದ್ಧತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಕಪ್ಪೆ ಇರುವ ಜಾಗ ಅಶುದ್ಧವಾಗಿದ್ದರೆ, ಕೊಳಕಾಗಿದ್ದರೆ ಅದು ರಾಹು ಮತ್ತು ದರಿದ್ರ ಲಕ್ಷ್ಮಿಯನ್ನು ಆಕರ್ಷಿಸುತ್ತದೆ. ಹಾಗಾಗಿ ಕಪ್ಪೆ ಮನೆಯಲ್ಲಿದ್ದಾಗ ಸ್ವಚ್ಛತೆ (Clean) ಬಗ್ಗೆ ಹೆಚ್ಚು ಗಮನ ನೀಡಬೇಕು.
ಮನೆಯಲ್ಲಿ ಜೀವಂತ ಕಪ್ಪೆಯಿದ್ದರೆ ಅಥವಾ ಮಣ್ಣು ಅಥವಾ ಲೋಹದಿಂದ ಮಾಡಿದ ಕಪ್ಪೆಯನ್ನು ನೀವು ಇಟ್ಟುಕೊಂಡಿದ್ದರೆ ಅನೇಕ ಲಾಭವಿದೆ.
ಮನೆಯಿಂದ ಹೊರಹೋಗುವಾಗ ಈ ಮಂತ್ರ ಪಠಿಸಿದ್ರೆ ಅದೃಷ್ಟ ನಿಮ್ಮದಾಗುತ್ತೆ!
1. ಮನೆಯಲ್ಲಿ ಕಪ್ಪೆ ವಾಸವಾಗಿದೆ ಅಂತಾ ಬೇಸರಪಟ್ಟುಕೊಳ್ಳಬೇಡಿ. ಕಪ್ಪೆ ಇರುವ ಮನೆಗೆ ಶಿವ ಮತ್ತು ಅಶ್ವಿನಿ ಕುಮಾರರ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಕಪ್ಪೆ ವಾಸವಾಗಿರುವ ಮನೆಯಲ್ಲಿ ಜನರು ಆರೋಗ್ಯವಾಗಿರುತ್ತಾರೆ. ಉತ್ತಮ ಆರೋಗ್ಯ ಬಯಸುವವರು ಮನೆಯಲ್ಲಿ ಲೋಹದ ಕಪ್ಪೆಯನ್ನು ಇಡಬಹುದು.
2. ಮನೆಯಲ್ಲಿ ಕಪ್ಪೆಯಿದ್ರೆ ರೋಗ ಮಾಯವಾದಂತೆ ಎಂದು ನಂಬಲಾಗಿದೆ. ಕಪ್ಪೆ ರೋಗದಿಂದ ನಮ್ಮನ್ನು ರಕ್ಷಿಸುತ್ತದೆ. ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
3. ಕಪ್ಪೆ ಮನೆಯಲ್ಲಿದ್ದರೆ ಆ ಮನೆಯಲ್ಲಿ ಸಮೃದ್ಧಿಗೆ ಕೊರತೆಯಿಲ್ಲ ಎನ್ನಬಹುದು. ಸದಾ ಸಂಪತ್ತು, ಸಮೃದ್ಧಿ ಆ ಮನೆಯಲ್ಲಿ ನೆಲೆಸುತ್ತದೆ.
4. ಮನೆಯಲ್ಲಿ ಕಪ್ಪೆ ವಾಸವಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಲೋಹದ ಕಪ್ಪೆಗಳಿದ್ದರೆ ವ್ಯಾಪಾರದಲ್ಲಿ ಏಳ್ಗೆಯನ್ನು ನೀವು ಕಾಣಬಹುದು. ಹಾಗೆಯೇ ಉತ್ತಮ ಸ್ನೇಹ ಸಂಬಂಧ ನಿಮಗೆ ಪ್ರಾಪ್ತಿಯಾಗುತ್ತದೆ.
5. ಕಪ್ಪೆಯನ್ನು ಸಾಕುವುದು ಕಾನೂನು ಬಾಹಿರವಾಗಿದೆ. ಹಳ್ಳಿಗಳಲ್ಲಿ ಕಪ್ಪೆಗಳನ್ನು ಸಾಕಬೇಕಾಗಿಲ್ಲ. ಅವೇ ಮನೆಗೆ ಬಂದು ವಾಸ ಮಾಡ್ತವೆ. ಆದ್ರೆ ಮತ್ತೆ ಕೆಲವರು ಜಾತಿ ಕಪ್ಪೆಗಳನ್ನು ಅಕ್ವೇರಿಯಂನಲ್ಲಿ ಇಡ್ತಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಕಪ್ಪೆ ಮನೆಯಲ್ಲಿ ಇರಬೇಕು ಎನ್ನುವವರು ಲೋಹದ ಅಥವಾ ಮಣ್ಣಿನ ಕಪ್ಪೆಯನ್ನು ಮನೆಯಲ್ಲಿ ತಂದಿಡಿ.
ಮನೆಯಲ್ಲಿ ಕಪ್ಪೆಯನ್ನು ಎಲ್ಲಿ ಇಡಬೇಕು? : ಮನೆಗೆ ತಾನಾಗಿಯೇ ಬರುವ ಕಪ್ಪೆ ಸಾಮಾನ್ಯವಾಗಿ ದೇವರ ಮನೆಯಲ್ಲಿರುತ್ತದೆ. ಕಪ್ಪೆ ಮನೆಗೆ ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಮನೆಗೆ ಬಂದ ಕಪ್ಪೆಯನ್ನು ಎಂದೂ ಒದೆಯಬಾರದು. ಹಾಗೆಯೇ ಕಪ್ಪೆ ಮನೆಯಿಂದ ವಾಪಸ್ ಹೊರಟಿದ್ದರೆ ಅದನ್ನು ತಡೆಯಬಾರದು. ಕಪ್ಪೆ ಹತ್ಯೆ ಮಹಾಪಾಪವೆಂದು ಹೇಳಲಾಗುತ್ತದೆ. ಮನೆಗೆ ಕಪ್ಪೆ ಬರುವುದು ಶಾಂತಿಯ ಸಂಕೇತವೆಂದೂ ನಂಬಲಾಗಿದೆ. ಮನೆಗೆ ಕಪ್ಪೆ ಬಂದ್ರೆ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ ಎಂಬ ಸೂಚನೆಯಾಗಿದೆ.
ಇನ್ನು ನೀವು ಮಣ್ಣಿನ ಅಥವಾ ಲೋಹದ ಕಪ್ಪೆಯನ್ನು ಮನೆಗೆ ತಂದಿದ್ದರೆ ಅದನ್ನು ಮನೆಯ ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬೇಕು.
Vastu tips: ಮನೆಯಲ್ಲಿ ಸದಾ ಜಗಳವೇ? ಈ ರೀತಿಯ ಕನ್ನಡಿ, ಪಾತ್ರೆಗಳನ್ನು ಕೂಡಲೇ ಎಸೆಯಿರಿ
ಫೆಂಗ್ ಶೂಯಿಯಲ್ಲಿ ಕ್ರಿಸ್ಟಲ್ ಫ್ರಾಗ್ ಗೆ ಹೆಚ್ಚಿನ ಮಹತ್ವವಿದೆ. ಆದ್ರೆ ಹಿಂದೂ ಧರ್ಮದಲ್ಲಿ ಗಾಜಿನಿಂದ ಮಾಡಿದ ಕಪ್ಪೆಗೆ ಮಹತ್ವ ನೀಡಲಾಗಿಲ್ಲ. ಅದು ಒಡೆಯುತ್ತದೆ ಮತ್ತು ಶುದ್ಧವಾಗಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ.