
ಜೀವನದ ಅತ್ಯಂತ ಸುಮಧುರ ಸಂಬಂಧ ಸ್ನೇಹ (Friendship). ಪ್ರೀತಿ, ವಿಶ್ವಾಸ, ನಂಬಿಕೆ, ಗೌರವದಿಂದ ಕೂಡಿದ ಈ ಸಂಬಂಧ ಸಾಕಷ್ಟು ಆಳವಾಗಿದೆ. ಸುಖ – ದುಃಖ ಎರಡರಲ್ಲೂ ಸಮನಾಗಿ ನಿಲ್ಲಬಲ್ಲ ಒಬ್ಬೇ ಒಬ್ಬ ಸ್ನೇಹಿತನಿದ್ರೂ ಜೀವನ ಸಾರ್ಥಕ. ಸ್ನೇಹ ಸಂಬಂಧವನ್ನು ಸಂಭ್ರಮಿಸಲು, ಹೊಸ ಸ್ನೇಹವನ್ನು ಬೆಸೆಯಲು ಸ್ನೇಹಿತರ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತೆ. ಈ ಬಾರಿ ಆಗಸ್ಟ್ 3 ರಂದು ಫ್ರೆಂಡ್ಶಿಪ್ ಡೇ (Friendship Day) ಆಚರಣೆ ಮಾಡಲಾಗ್ತಿದೆ. ನಿಮ್ಮ ಸ್ನೇಹ ಮತ್ತಷ್ಟು ಗಟ್ಟಿಯಾಗಿರ್ಬೇಕು, ಸದಾ ನಿಮ್ಮ ಸ್ನೇಹಿತರು ನಿಮ್ಮ ಜೊತೆಗಿರಬೇಕು ಎಂದಾದ್ರೆ ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಸ್ನೇಹಿತರಿಗೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿ.
ಮೇಷ ರಾಶಿ : ಈ ರಾಶಿಯ ಅಧಿಪತಿ ಮಂಗಳ. ಶಕ್ತಿ ಮತ್ತು ಉತ್ಸಾಹದ ಸಂಕೇತ ಇದು. ನೀವು ನಿಮ್ಮ ಸ್ನೇಹಿತರಿಗೆ ಕೆಂಪು ಅಥವಾ ಕಿತ್ತಳೆ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ. ಇದು ನಿಮ್ಮ ಸ್ನೇಹಕ್ಕೆ ಮತ್ತಷ್ಟು ಉತ್ಸಾಹ, ಶಕ್ತಿ ನೀಡುತ್ತದೆ.
ವೃಷಭ ರಾಶಿ : ಈ ರಾಶಿಯ ಅಧಿಪತಿ ಶುಕ್ರ. ಪ್ರೀತಿ ಹಾಗೂ ಸದ್ಭಾವದ ಸಂಕೇತ. ನೀವು ನಿಮ್ಮ ಸ್ನೇಹಿತರಿಗೆ ಬಿಳಿ, ಗುಲಾಬಿ ಅಥವಾ ಕ್ರೀಮ್ ಕಲರ್ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ. ಇದು ನಿಮ್ಮ ಸಂಬಂಧದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತದೆ.
ಮಿಥುನ ರಾಶಿ : ನಿಮ್ಮ ರಾಶಿಯ ಅಧಿಪತಿ ಬುಧ. ಇದು ಬುದ್ಧಿವಂತ ಗ್ರಹ. ನೀವು, ಮಿಥುನ ರಾಶಿಯವರಾಗಿದ್ದರೆ ಹಸಿರು ಅಥವಾ ಹಳದಿ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ನಿಮ್ಮ ಸ್ನೇಹಿತರಿಗೆ ಕಟ್ಟಬೇಕು.
ಕರ್ಕ ರಾಶಿ : ನಿಮ್ಮ ರಾಶಿಯ ಅಧಿಪತಿ ಚಂದ್ರ. ಭಾವನೆ ಹಾಗೂ ಸಂವೇದನಾಶೀಲ ಮನೋಭಾವಕ್ಕೆ ಹೆಸರುವಾಸಿ. ಬಿಳಿ ಅಥವಾ ಚಂದ್ರನ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ನೀವು ಸ್ನೇಹಿತರಿಗೆ ಕಟ್ಟಿದ್ರೆ, ಸ್ನೇಹಿತರ ಮಧ್ಯೆ ನಂಬಿಕೆ ಬೆಳೆಯುತ್ತದೆ.
ಸಿಂಹ ರಾಶಿ : ಈ ರಾಶಿಯವರ ಅಧಿಪತಿ ಸೂರ್ಯ. ಮುಂದಾಳತ್ವ ಹಾಗೂ ಗೌರವದ ಪ್ರತೀಕ. ಗೋಲ್ಡನ್ ಕಲರ್ ಅಥವಾ ಕಿತ್ತಳೆ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ. ಇದು ನಿಮ್ಮ ಸ್ನೇಹಕ್ಕೆ ಮತ್ತಷ್ಟು ಹೊಳಪು ನೀಡುತ್ತದೆ.
ಕನ್ಯಾ ರಾಶಿ : ಈ ರಾಶಿಯ ಅಧಿಪತಿ ಬುಧ. ವ್ಯವಹಾರ ಬುದ್ಧಿವಂತಿಕೆ ಪ್ರತೀಕ. ಹಸಿರು ಅಥವಾ ತಿಳಿ ನೀಲಿ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ.
ತುಲಾ ರಾಶಿ : ಈ ರಾಶಿಯವರ ಅಧಿಪತಿ ಶುಕ್ರ. ಇದು ನ್ಯಾಯದ ಪ್ರತೀಕ. ತಿಳಿ ನೀಲಿ ಅಥವಾ ಗುಲಾಬಿ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ನೀವು ಕಟ್ಟಬೇಕು. ಇದು ಸ್ನೇಹದಲ್ಲಿ ಮಧುರತೆ ಹೆಚ್ಚಿಸುತ್ತದೆ.
ವೃಶ್ಚಿಕ ರಾಶಿ : ನಿಮ್ಮ ರಾಶಿಯ ಅಧಿಪತಿ ಮಂಗಳ ಮತ್ತು ಪ್ಲುಟೋ. ಫ್ಯಾಷನ್ ಮತ್ತು ರಹಸ್ಯದ ಪ್ರತೀಕ. ಅಚ್ಚು ಕೆಂಪು ಅಥವಾ ಕಪ್ಪು ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ. ಇದು ನಿಮ್ಮ ಸ್ನೇಹವನ್ನು ಮತ್ತಷ್ಟು ಬಲಗೊಳಿಸುತ್ತದೆ.
ಧನು ರಾಶಿ : ನಿಮ್ಮ ರಾಶಿ ಅಧಿಪತಿ ಗುರು. ಜ್ಞಾನ ಮತ್ತು ಭಾಗ್ಯದ ಸಂಕೇತ. ಹಳದಿ ಅಥವಾ ಬದನೆಕಾಯಿ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ. ಇದ್ರಿಂದ ಸ್ನೇಹದಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ.
ಮಕರ ರಾಶಿ : ಮಕರ ರಾಶಿಯ ಅಧಿಪತಿ ಶನಿ. ಧೈರ್ಯ ಹಾಗೂ ನ್ಯಾಯದ ಸಂಕೇತ. ಅಚ್ಚು ನೀಲಿ ಅಥವಾ ಕಪ್ಪು ಬಣ್ಣದ ಫ್ರೆಂಡ್ ಶಿಪ್ ಬೆಲ್ಟನ್ನು ನೀವು ಸ್ನೇಹಿತರಿಗೆ ಕಟ್ಟಬೇಕು.
ಕುಂಭ ರಾಶಿ : ನಿಮ್ಮ ರಾಶಿಯ ಸ್ವಾಮಿ ಶನಿ ಮತ್ತು ಯುರೇನಸ್. ಸ್ವತಂತ್ರತೆ ಮತ್ತು ನವೀನತೆಯ ಪ್ರತೀಕ. ಆಕಾಶ ನೀಲಿ ಅಥವಾ ಬದನೆಕಾಯಿ ಬಣ್ಣದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಬೇಕು.
ಮೀನ ರಾಶಿ : ಈ ರಾಶಿಯ ಅಧಿಪತಿ ಗುರು ಹಾಗೂ ನೆಪ್ಚೂನ್. ಆಧ್ಯಾತ್ಮಿಕ ಮತ್ತು ಕರುಣೆಯ ಸಂಕೇತ. ಹಳದಿ ಅಥವಾ ತಿಳಿ ನೀಲಿ ಬಣ್ಣದ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟಬೇಕು.