ಹಣ, ಲೈಂಗಿಕ ಶಕ್ತಿ ನಿಯಂತ್ರಿಸಲು ಗೊತ್ತಿದ್ದರೆ ಜೀವನ ಸುಖ ಗ್ಯಾರಂಟಿ ಅಂತಾನೆ ಚಾಣಕ್ಯ!

By Suvarna News  |  First Published Jan 20, 2023, 5:10 PM IST

ಜೀವನದಲ್ಲಿ ಸುಖ, ಸಂತೋಷಕ್ಕೆ ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಆದ್ರೆ ಎಲ್ಲರಿಗೂ ಆನಂದದ ಜೀವನ ಪ್ರಾಪ್ತಿಯಾಗೋದಿಲ್ಲ. ಇದಕ್ಕೆ ಅನೇಕ ಕಾರಣವಿದೆ. ಚಾಣಕ್ಯನ ಪ್ರಕಾರ ಇದಕ್ಕೆ ಹಿಂದಿನ ಜನ್ಮದ ಕರ್ಮವೂ ಕಾರಣ.
 


ಇಡೀ ಜಗತ್ತು ಆಚಾರ್ಯ ಚಾಣಕ್ಯರನ್ನು ಒಬ್ಬ ನುರಿತ ಅರ್ಥಶಾಸ್ತ್ರಜ್ಞ, ಜನಪ್ರಿಯ ರಾಜತಾಂತ್ರಿಕ ಮತ್ತು ಪ್ರಸಿದ್ಧ ರಾಜಕಾರಣಿ ಎಂದು ತಿಳಿದಿದೆ. ಪ್ರಪಂಚದಾದ್ಯಂತ ಅನೇಕ ಜನರು ಯಶಸ್ಸನ್ನು ಪಡೆಯಲು ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯರ ನೀತಿಗಳ ಸಂಗ್ರಹವು ಚಾಣಕ್ಯ ನೀತಿಯಲ್ಲಿ ಕಂಡುಬರುತ್ತದೆ. ಚಾಣಕ್ಯನ ನೀತಿ ಈಗ್ಲೂ ಪ್ರಸ್ತುತ. 

ಪ್ರತಿಯೊಬ್ಬರು ಜೀವನ (Life) ದಲ್ಲಿ ಕಷ್ಟ, ಸುಖಗಳನ್ನು ಅನುಭವಿಸುತ್ತಾರೆ. ಒಬ್ಬರು ಜೀವನ ಪೂರ್ತಿ ಸಂತೋಷ (Happiness), ನೆಮ್ಮದಿಯಿಂದ ಇದ್ರೆ ಮತ್ತೆ ಕೆಲವರು ಜೀವನದ ಅತ್ಯಂತದವರೆಗೂ ನೋವು ತಿನ್ನುತ್ತಾರೆ. ಚಾಣಕ್ಯ (Chanakya) ಈಗಿನ ಜನ್ಮವನ್ನು ಹಿಂದಿನ ಜನ್ಮದ ಜೊತೆ ಜೋಡಿಸಿದ್ದಾರೆ. ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕರ್ಮದಿಂದಾಗಿ ನಾವು ಈಗ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಿದ್ದೇವೆ. ಹಿಂದಿನ ಜನ್ಮದಲ್ಲಿ ಮಾಡಿದ ಒಳ್ಳೆಯ ಕೆಲಸದಿಂದಾಗಿ ಈ ಜನ್ಮದಲ್ಲಿ ಐದು ಸುಖ ನಮಗೆ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಚಾಣಕ್ಯ ಪ್ರಕಾರ, ಹಿಂದಿನ  ಎಂಬುದನ್ನು ನಾವಿಂದು ಹೇಳ್ತೆವೆ.

ಬ್ರಹ್ಮ ಮುಹೂರ್ತದಲ್ಲೆದ್ದು ಆರೋಗ್ಯದ ಜೊತೆ ಅದೃಷ್ಟ ಪಡೆದ್ಕೊಳ್ಳಿ

Tap to resize

Latest Videos

ಹಿಂದಿನ ಜನ್ಮದ ಪುಣ್ಯದಿಂದ ಪ್ರಾಪ್ತಿಯಾಗುತ್ತೆ ಈ ಸುಖ :
ಸುಖ ದಾಂಪತ್ಯ (Happy married Life) :
ಚಾಣಕ್ಯ ಶ್ಲೋಕದ ಮೂಲಕ ಮನುಷ್ಯನಿಗೆ ಏನೆಲ್ಲ ಸುಖ ಸಿಗುತ್ತದೆ ಎಂಬುದನ್ನು ಹೇಳಿದ್ದಾರೆ. ಅದ್ರಲ್ಲಿ ಸಂಗಾತಿ ವಿಷ್ಯವೂ ಇದೆ. ಈ ಕಲಿಯುಗದಲ್ಲಿ ಒಳ್ಳೆಯ ಗಂಡ ಅಥವಾ ಹೆಂಡತಿ ಸಿಗುವುದು ಪ್ರತಿಯೊಬ್ಬರ ಭಾಗ್ಯದಲ್ಲಿ ಇರುವುದಿಲ್ಲ. ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿದವರಿಗೆ ಮಾತ್ರ ಸೂಕ್ತ ಜೀವನ ಸಂಗಾತಿ ಸಿಗುತ್ತಾರೆ ಎನ್ನುತ್ತಾನೆ ಚಾಣಕ್ಯ. ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಕೆಲಸದಿಂದ ಸಾಯುವವರೆಗೂ ಸುಖ -ದುಃಖದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಸಂಗಾತಿ ಸಿಗ್ತಾರಂತೆ.

ಹಣ (Money) ನಿರ್ವಹಣೆ ಗೊತ್ತಿದ್ರೆ ಗೆದ್ದಂತೆ : ಪ್ರಸ್ತುತ ಜೀವನ ಹಾಗೂ  ಭವಿಷ್ಯ ಎರಡೂ ಸುರಕ್ಷಿತವಾಗಿರಬೇಕೆಂದ್ರೆ, ಸಂತೋಷದಿಂದ ಜೀವನ ನಡೆಸಬೇಕೆಂದ್ರೆ ಹಣವನ್ನು ಸರಿಯಾಗಿ ಬಳಸುವ ಬುದ್ಧಿವಂತಿಕೆ (Wisdom) ಇರಬೇಕಾಗುತ್ತದೆ. ಅನೇಕರ ಬಳಿ ಸಾಕಷ್ಟು ಹಣವಿರುತ್ತದೆ. ಆದ್ರೆ ಆ ಹಣವನ್ನು ಸರಿಯಾಗಿ ನಿರ್ವಹಿಸುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಹಣ ಬಳಕೆ ಹಾಗೂ ಸರಿಯಾದ ನಿರ್ವಹಣೆ ತಿಳಿದುಕೊಂಡ್ರೆ ಜೀವನದ ಎಲ್ಲ ಘಟ್ಟದಲ್ಲಿ ಸುಖವಾಗಿರಬಹುದು ಎನ್ನುತ್ತಾರೆ ಚಾಣಕ್ಯ.

ದಾನ (Donation) ದಿಂದ ಡಬಲ್ ಆಗುತ್ತೆ ಸಂತೋಷ : ಒಂದೊಂದು ಪೈಸೆಯನ್ನೂ ಕೂಡಿಡಬೇಕು ಎನ್ನುವುದು ಒಳ್ಳೆಯದು. ಆದ್ರೆ ಅಗತ್ಯವಿರುವವರಿಗೆ ಹಾಗೂ ಬಡವರಿಗೆ ದಾನ ಮಾಡುವ ಗುಣ ಕೂಡ ಇರಬೇಕು. ಮನಸ್ಪೂರ್ವಕವಾಗಿ ದಾನ ಮಾಡಿದ್ರೆ ಮನಸ್ಸಿಗೆ ಸಂತೋಷ, ನೆಮ್ಮದಿ ಸಿಗುತ್ತದೆ. ರಕ್ತ (Blood) ದಾನ (Donation) ಮಾಡಿದ ನಂತ್ರ ಹೇಗೆ ಹೊಸ ರಕ್ತ ತಯಾರಾಗುತ್ತದೆಯೋ ಅದೇ ರೀತಿ ದಾನ ಮಾಡಿದ್ರೆ ನಿಮ್ಮ ಹಣ ಖಾಲಿ ಆಗುವ ಬದಲು ಇನ್ನೊಂದು ಮೂಲದಿಂದ ನಿಮ್ಮ ಮನೆ ಸೇರುತ್ತದೆ. ದಾನದಿಂದ ಸಂತೋಷದ ಜೊತೆ ಹಣ ಕೂಡ ದ್ವಿಗುಣಗೊಳ್ಳುತ್ತದೆ. 

ಭಾಗ್ಯಕ್ಕೂ – ಜೀರ್ಣಶಕ್ತಿಗೂ ನಂಟು : ಚಾಣಕ್ಯನ ಪ್ರಕಾರ, ಯಾವ ವ್ಯಕ್ತಿ ಭಾಗ್ಯಶಾಲಿಯೋ ಆ ವ್ಯಕ್ತಿ ಉತ್ತಮ ಜೀರ್ಣಶಕ್ತಿ ಹೊಂದಿರುತ್ತಾನಂತೆ. ಒಳ್ಳೆಯ ಆಹಾರ ತಿನ್ನುವುದರಿಂದ ಆನಂದ ಸಿಗುತ್ತದೆ. ಆದರೆ ತಿಂದ ಆಹಾರ ಜೀರ್ಣವಾಗದಿದ್ದರೆ ದೇಹ  ರೋಗಗಳಿಗೆ ತತ್ತಾಗುತ್ತದೆ. ಗಂಭೀರ ಕಾಯಿಲೆಗಳು ಶುರುವಾಗುತ್ತವೆ. ಅದೇ ಜೀರ್ಣಶಕ್ತಿ ಚೆನ್ನಾಗಿದ್ರೆ ಆತ ಏನು ತಿಂದ್ರೂ ಅರಗಿಸಿಕೊಳ್ಳಬಲ್ಲ. ದೀರ್ಘಕಾಲ ಶಕ್ತಿಯುತವಾಗಿ, ಆರೋಗ್ಯದಿಂದ, ಸಂತೋಷದಿಂದ ಬಾಳಬಲ್ಲ ಎನ್ನುತ್ತಾನೆ ಚಾಣಕ್ಯ.

ಚೆಂದದ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡೋದು ಅನಿವಾರ್ಯ

ಲೈಂಗಿಕ ಶಕ್ತಿ ಮೇಲೆ ನಿಯಂತ್ರಣ : ಲೈಂಗಿಕ ಶಕ್ತಿಯ ಮೇಲೆ ನಿಯಂತ್ರಣವಿರಬೇಕು. ಇದನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿದಿರುವ ವ್ಯಕ್ತಿಯು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರುತ್ತಾನೆ. 

click me!