ಈದ್ಗಾ​ದಲ್ಲಿ ಧ್ವಜಾ​ರೋ​ಹಣ, ಗಣೇಶ ಪ್ರತಿ​ಷ್ಠಾ​ಪನೆ

Published : Aug 13, 2022, 12:24 PM IST
ಈದ್ಗಾ​ದಲ್ಲಿ ಧ್ವಜಾ​ರೋ​ಹಣ, ಗಣೇಶ ಪ್ರತಿ​ಷ್ಠಾ​ಪನೆ

ಸಾರಾಂಶ

ಈದ್ಗಾ​ದಲ್ಲಿ ಧ್ವಜಾ​ರೋ​ಹಣ, ಗಣೇಶ ಪ್ರತಿ​ಷ್ಠಾ​ಪನೆ ಮಾಡಲಾಗುವುದು ಎಂದು ಶಾಸಕ ಜಮೀರ್‌ಗೆ ಶಾಸಕ ರೇಣು​ಕಾ​ಚಾರ್ಯ ತಿರುಗೇಟು ನೀಡಿದರು.  ಹೊನ್ನಾ​ಳಿ​ಯಲ್ಲಿ ಬಿಜೆಪಿ ಹಮ್ಮಿ​ಕೊಂಡ ಬೈಕ್‌ Rallyಗೆ ರೇಣುಕಾಚಾರ್ಯ ಚಾಲ​ನೆ

ಹೊನ್ನಾಳಿ ಆ.(13) : ಬೆಂಗ​ಳೂ​ರಿ​ನ ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು. ಅಲ್ಲಿ ಸರ್ಕಾರದಿಂದ ಧ್ವಜಾರೋಹಣ ಹಾಗೂ ಗಣೇಶನ ಪ್ರತಿಷ್ಠಾಪನೆ ನಡೆಯಲಿವೆ ಎಂದು ಶಾಸಕ ರೇಣು​ಕಾ​ಚಾರ್ಯ ತಿರು​ಗೇಟು ನೀಡಿ​ದ್ದಾರೆ. ಈ ವಿವಾದದಲ್ಲಿ ಶಾಸ​ಕ ಜಮೀರ್‌ ಅಹ್ಮದ್‌ ಖಾನ್‌ ಬೆಂಕಿ ಕಾಯಿಸುವುದಕ್ಕೆ ಹೋಗುವುದು ಬೇಡ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿದ ರೇಣು​ಕಾ​ಚಾರ್ಯ, ಇದಕ್ಕೆ ನೀನೇನಾದರೂ ತಕರಾರು ತೆಗೆದರೆ ಅಲ್ಲಿನ ನಾಗರಿಕರು ನಿನಗೆ ತಕ್ಕಪಾಠ ಕಲಿಸುತ್ತಾರೆ ಎಂದು ಜಮೀರ್‌ಗೆ ಎಚ್ಚರಿಕೆ ನೀಡಿದರು.

ಗಣೇಶ ಮೂರ್ತಿ ಬೇಡ ಎನ್ನಲು ಜಮೀರ್‌ ಯಾರು?: ಸಿ.ಟಿ.ರವಿ

ಸ್ವಾತಂತ್ರ್ಯದ ಅಮೃತ ಮಹೋತ್ಸವದ(Azad Ki Amrit Mahotsav) ಅಂಗವಾಗಿ ಹರ್‌ ಘರ್‌ ತಿರಂಗಾ ಅಭಿಯಾನ(Har Ghar Tirang Abhiyana)ದ ಬಗ್ಗೆ ಜಾಗೃತಿ ಮೂಡಿಸಲು ತಾಲೂಕು ಬಿಜೆಪಿ ಹಾಗೂ ಯುವ ಘಟಕಗಳು ಶುಕ್ರವಾರ ಹೊನ್ನಾಳಿ ನಗರದಿಂದ ಆರಂಭಿಸಿ ಆರು ಜಿಪಂ ಕ್ಷೇತ್ರ​ಗ​ಳ​ಲ್ಲಿ 75 ಕಿಮೀ ಸಂಚ​ರಿ​ಸು​ವ ಬೈಕ್‌ ರಾರ‍ಯಲಿಗೆ ತಮ್ಮ ನಿವಾಸದ ಬಳಿ ಚಾಲನೆ ನೀಡಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಅಗಮಿಸಿದಾಗ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತ​ನಾ​ಡಿ​ದ​ರು.

ಆ. 13ರಿಂದ 15 ರವರೆಗೆ ಪ್ರತಿಯೊಬ್ಬರೂ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಹೋರಾಟಗಾರರ ಬಲಿದಾನವಾಗಿದೆ. ಮಹಾತ್ಮ ಗಾಂಧೀಜಿ ಸೇರಿ ಮದನಮೋಹನ ಮಾಳವಿಯ, ಭಗತ್‌ ಸಿಂಗ್‌, ರಾಜಗುರು, ಸುಖದೇವ್‌, ಚಂದ್ರಶೇಖರ್‌ ಆಜಾದ್‌, ವೀರ ಸಾವರ್ಕರ್‌, ಬಂಕಿಮಚಂದ್ರ ಚಟರ್ಜಿ, ಸುಭಾಶ್‌ ಚಂದ್ರಬೋಸ್‌ ಮುಂತಾ​ದ ಅನೇಕ ಕ್ರಾಂತಿಕಾರಿಗಳು ತಮ್ಮ ಜೀವ​ನ ತ್ಯಾಗಮಾಡಿದ್ದಾರೆ. ಅಂತಹವರ ಸ್ಮರಣೆ ಪ್ರಸ್ತುತ ಎಂದರು.

ಈದ್ಗಾದಲ್ಲಿ ಜಮೀರ್‌ ಧ್ವಜಾರೋಹಣ ಬೇಡ, ಒಂದು ವೇಳೆ ಮಾಡಿದರೆ ಅಶಾಂತಿ ಸೃಷ್ಟಿ: ಹಿಂದೂ ಸಂಘಟನೆ

ತ್ರಿವರ್ಣ ಧ್ವಜ ಹಿಡಿದ ನೂರಾರು ಬಿಜೆಪಿ ಕಾರ್ಯಕರ್ತರು ದೇಶಭಕ್ತಿ ಜಯಘೋಷ ಕೂಗಿದರು. ನೂರಾರು ಬೈಕ್‌ಗಳು ರಾರ‍ಯಲಿಯಲ್ಲಿದ್ದವು. ಪುರಸಭಾಧ್ಯಕ್ಷ ರಂಗನಾಥ್‌, ಮಾಜಿ ಅಧ್ಯಕ್ಷ ಬಾಬು ಹೋಬಳದಾರ್‌, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್‌ ಜೆ.ಕೆ. ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್‌, ಕಾರ್ಯದರ್ಶಿ ಅರಕೆರೆ ನಾಗರಾಜ್‌, ಪ್ರಧಾನ ಕಾರ್ಯದರ್ಶಿ ಶಿವಾನಂದ್‌, ಯುವ ಮೋರ್ಚಾ ಅಧ್ಯಕ್ಷ ವಿಕಾಸ್‌ ಕುಂಬಳೂರು, ಮಹೇಶ್‌ ಹುಡೇದ್‌, ಮಂಜುನಾಥ್‌ ಇಂಚರಾ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್‌ ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್‌ನ್ನು ನಂತರ ವಿಸರ್ಜನೆ ಮಾಡುವಂತೆ ಗಾಂಧೀಜಿಯವರು ಅಂದೇ ಸೂಚಿಸಿದರು. ಆದರೆ ಕೆಲ ಸ್ವಾರ್ಥ ಮುಖಂಡರು ಸ್ವಾರ್ಥ, ಅಧಿಕಾರ ಕ್ಕಾಗಿ ವಿಸರ್ಜನೆ ಮಾಡದೆ ಅದೇ ಹೆಸರಿನಲ್ಲಿ ಅಧಿಕಾರಕ್ಕೆ ಬರ ತೊಡಗಿದ್ದರು. ಗಾಂಧೀಜಿ ಕಾಲದ ಕಾಂಗ್ರೆಸ್‌ ದೇಶಕ್ಕಾಗಿ ಇದ್ದರೆ ಇಂದಿನ ಕಾಂಗ್ರೆಸ್‌ ಅಧಿಕಾರಕ್ಕಾಗಿ ಇದೆ.

ರೇಣು​ಕಾ​ಚಾರ್ಯ, ಶಾಸಕ

PREV
Read more Articles on
click me!

Recommended Stories

ಜನವರಿ 9 ರಿಂದ ಮಿಥುನ ಸೇರಿದಂತೆ 3 ರಾಶಿಗೆ ಅದೃಷ್ಟ, ಸೂರ್ಯ-ಗುರುಗಳು ಭಾರಿ ಆರ್ಥಿಕ ಲಾಭ
2025 ಅಬ್ಬರದಿಂದ ಕೊನೆಗೊಳ್ಳುತ್ತದೆ, ಈ 3 ರಾಶಿಗೆ 2026 ರವರೆಗೆ ಅಚಲ ಅದೃಷ್ಟ