ದೇವರೊಂದಿಗೆ ಹೋರಾಡಿ, ಬಳಿಕ ದೇವರ ಬೆಂಬಲ ಪಡೆದ ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವ 5 ಪವಿತ್ರ ಹಾವುಗಳ ಬಗ್ಗೆ ತಿಳಿದಿದ್ದೀರಾ?
ಸನಾತನ ಧರ್ಮದಲ್ಲಿ ಹಾವಿನ ಪ್ರಾಮುಖ್ಯತೆ ಅಪಾರವಾಗಿದೆ ಮತ್ತು ಹಾವುಗಳಿಗೆ ಸಂಬಂಧಿಸಿದ ಕಥೆಗಳು ತುಂಬಾ ಆಸಕ್ತಿದಾಯಕವಾಗಿವೆ. ನಾಗಲೋಕ, ಹಾವಿನ ಕತೆಗಳು ಧರ್ಮಗ್ರಂಥಗಳಲ್ಲಿ ಯತೇಚ್ಛವಾಗಿದ್ದು, ಆಸಕ್ತಿ ಹುಟ್ಟಿಸುತ್ತವೆ. ಇದಲ್ಲದೇ ಸರ್ಪವನ್ನು ದೇವರಾಗಿ ಪೂಜಿಸಲಾಗುತ್ತದೆ. ಶಿವನ ಕೊರಳಲ್ಲಿಯೇ ಹಾವಿದೆ. ವಿಷ್ಣುವಿನ ಪಲ್ಲಂಗವಾಗಿ ಹಾವಿದೆ. ಹಾವಿನ ಹಬ್ಬವಾದ ನಾಗಪಂಚಮಿಯನ್ನು ಕೂಡ ಆಚರಿಸಲಾಗುತ್ತದೆ. ಸರ್ಪಹತ್ಯೆ ಮಾಡಿದರೆ ಅದಕ್ಕೆ ಅಂತ್ಯಸಂಸ್ಕಾರ ಮಾಡುವ ಮಟ್ಟಿಗೆ ಹಾವುಗಳ ಬಗ್ಗೆ ಗೌರವ, ಭಯ, ಭಕ್ತಿ ಇದೆ.
ಇಂದು ಹಿಂದೂ ಧರ್ಮದ ಐದು ಸೂಪರ್ ಶಕ್ತಿಶಾಲಿ ಮತ್ತು ಉಗ್ರ ವಿಷಕಾರಿ ಹಾವುಗಳ ಬಗ್ಗೆ ತಿಳಿಯೋಣ.
ಐದು ರೀತಿಯ ಶಕ್ತಿಯುತ ಹಾವುಗಳು(Powerful snakes)
ಶೇಷನಾಗ, ವಾಸುಕಿ ನಾಗ, ತಕ್ಷಕ ನಾಗ, ಕಾರ್ಕೋಟಕ ನಾಗ ಮತ್ತು ಕಾಲಿಯಾ ನಾಗವನ್ನು ಧರ್ಮಗ್ರಂಥಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಹಾವುಗಳು ತಮ್ಮ ಬಲದ ಕಾರಣದಿಂದ ದೇವರಿಗೂ ಸವಾಲೊಡ್ಡಿದ್ದವು ಎನ್ನಲಾಗಿದೆ.
ಒಂದೆಡೆ ಈ ಹಾವುಗಳು ದೇವರೊಂದಿಗೆ ಯುದ್ಧ ಮಾಡಿಕೊಂಡರೆ, ಮತ್ತೊಂದೆಡೆ ತಮ್ಮ ತಪ್ಪಿನ ಅರಿವಾದ ಮೇಲೆ ಅವುಗಳಿಗೆ ದೇವರ ಆಸರೆಯೂ ಸಿಕ್ಕಿತು. ಕೆಲವರನ್ನು ಶ್ರೀ ಕೃಷ್ಣನು ಕ್ಷಮಿಸಿದನು, ಕೆಲವನ್ನು ಶಿವನು ದತ್ತು ಪಡೆದನು ಮತ್ತು ಕೆಲವು ಭಗವಾನ್ ವಿಷ್ಣುವಿನ ಆಶ್ರಯವಾಯಿತು. ಈ ಕತೆಗಳ ಬಗ್ಗೆ ತಿಳಿಯೋಣ ಬನ್ನಿ..
Pradosh Vrat 2022: ವರ್ಷದ ಕಡೆಯ ಪ್ರದೋಷ ವ್ರತ, ಈ ತಪ್ಪುಗಳನ್ನು ಮಾಡ್ಬೇಡಿ!
ಶೇಷ ನಾಗ(Shesh Nag)
ಋಷಿ ಕಶ್ಯಪ್ ಮತ್ತು ಮಾತಾ ಕದ್ರು ಅವರ ಹಿರಿಯ ಮಗ, ಶೇಷನಾಗ ಭಗವಾನ್ ವಿಷ್ಣುವಿನ ಕಟ್ಟಾ ಭಕ್ತರಾಗಿದ್ದ. ಗಂಧಮಾದನ ಪರ್ವತದ ಮೇಲೆ ನಾಗಸಂಕುಲವನ್ನು ತೊರೆದು ಭಕ್ತಿ ಮತ್ತು ತಪಸ್ಸಿನಲ್ಲಿ ತೊಡಗಿದ್ದ. ತಪಸ್ಸಿನಿಂದ ಸಂತುಷ್ಟನಾದ ಬ್ರಹ್ಮನು ಶೇಷನಾಗನಿಗೆ ಸೃಷ್ಟಿಯ ಭಾರವನ್ನು ತನ್ನ ತಲೆಯ ಮೇಲೆ ಹೊರಲು ಅನುಗ್ರಹಿಸಿದನೆಂದು ನಂಬಲಾಗಿದೆ. ಈ ಕಾರಣದಿಂದ ಈ ಇಡೀ ಸೃಷ್ಟಿ ಶೇಷನಾಗನ ತಲೆಯ ಮೇಲೆ ಇದೆ ಎಂದು ಕಥೆಗಳಲ್ಲಿ ಹೇಳಲಾಗಿದೆ.
ವಾಸುಕಿ ನಾಗ(Vasuki Nag)
ವಾಸುಕಿ ನಾಗ ಶಿವನಿಗೆ ಪ್ರಿಯ. ವಾಸುಕಿ ಶೇಷನಾಗನ ಸಹೋದರ. ಒಂದು ದಂತಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ದೇವತೆಗಳು ಮತ್ತು ಅಸುರರು ವಾಸುಕಿ ಎಂಬ ಸರ್ಪವನ್ನು ಹಗ್ಗವಾಗಿ ಬಳಸಿ ಮೇರು ಪರ್ವತವನ್ನು ಮಂಥನ ಮಾಡಿದರು.
ಕಾಲಿಯ ನಾಗ(Kaaliya Nag)
ಕಾಲಿಯಾ ನಾಗ್ ಮತ್ತು ಶ್ರೀ ಕೃಷ್ಣನ ನಡುವಿನ ಯುದ್ಧ ಯಾರಿಗೆ ತಿಳಿದಿಲ್ಲ? ಕಾಳಿಯ ಸರ್ಪವು ಯಮುನೆಯಲ್ಲಿ ತನ್ನ ಸ್ಥಾನವನ್ನು ಪಡೆದಾಗ ಮತ್ತು ಅದರ ವಿಷದಿಂದ ಯಮುನಾ ನದಿಯು ಕಲುಷಿತಗೊಂಡಾಗ, ಶ್ರೀ ಕೃಷ್ಣನು ತನ್ನ ಬಾಲ್ಯದಲ್ಲಿ ಯಮುನೆಯನ್ನು ಪ್ರವೇಶಿಸಿದನು ಮತ್ತು ಕಾಲಿಯನೊಂದಿಗೆ ಹೋರಾಡಿದನು, ಮಾತ್ರವಲ್ಲದೆ ಯುಮುನೆಯನ್ನು ಬಿಡುವಂತೆ ಒತ್ತಾಯಿಸಿದನು.
ತಕ್ಷಕ ನಾಗ(Takshak Nag)
ತಕ್ಷಕ ನಾಗ್ ಋಷಿ ಕಶ್ಯಪ್ ಅವರ ಮಗ. ಪಾಂಡುವಿನ ಮಗ ಅರ್ಜುನನು ತಕ್ಷಕ ಸರ್ಪವನ್ನು ಬೆಂಕಿ ಬಾಣಗಳಿಂದ ಸುಟ್ಟು ಇಡೀ ಕುಟುಂಬವನ್ನು ಕೊಂದನೆಂದು ನಂಬಲಾಗಿದೆ. ಈ ಕಾರಣಕ್ಕಾಗಿ, ತಕ್ಷಕ ನಾಗ ಅರ್ಜುನನನ್ನು ಕೊಲ್ಲಲು ಪದೇ ಪದೇ ಪ್ರಯತ್ನಿಸಿದನು, ಆದರೆ ಪ್ರತಿ ಬಾರಿಯೂ ಶ್ರೀ ಕೃಷ್ಣನು ಅರ್ಜುನನನ್ನು ರಕ್ಷಿಸಿದನು.
Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಬಡತನ ಕಾಡುತ್ತೆ!
ಕಾರ್ಕೋಟಕ ಹಾವು(Karkotak nag)
ಕಾರ್ಕೋಟಕನು ಶಿವನ ಮಗ ಎಂದು ನಂಬಲಾಗಿದೆ. ಕಾರ್ಕೋಟಕನು ಶಿವನ ಕಟ್ಟಾ ಭಕ್ತನೂ ಆಗಿದ್ದನು. ಕಠೋರ ತಪಸ್ಸಿನ ಫಲವಾಗಿ ಕಾರ್ಕೋಟಕನು ಶಿವನ ಕೊರಳಲ್ಲಿ ಸ್ಥಾನವನ್ನು ಕೇಳಿದಾಗ, ಶಿವನು ಅವನಿಗೆ ಆ ಸ್ಥಳವನ್ನು ನೀಡಲು ನಿರಾಕರಿಸಿದನು. ಏಕೆಂದರೆ ವಾಸುಕಿ ನಾಗನು ಅವನ ಕೊರಳಲ್ಲಿ ಈಗಾಗಲೇ ಇದ್ದನು, ಆದರೆ ಶಿವನು ಅವನ ಭಕ್ತಿಗೆ ಮೆಚ್ಚಿ ಶಿವಲಿಂಗದ ಮೇಲೆ ಸ್ಥಾನವನ್ನು ನೀಡಿದನು.
ಅಂದರೆ ಶಿವಲಿಂಗಕ್ಕೆ ಸುತ್ತಿಕೊಂಡಿರುವ ಹಾವು ವಾಸುಕಿ ಅಲ್ಲ, ಅದು ಕಾರ್ಕೋಟಕ ಸರ್ಪ.