Fathers Day 2025: ಅಪ್ಪನ ಪ್ರೀತಿ ಸಿಗ್ಬೇಕೆಂದ್ರೆ ಯಾವ ಗ್ರಹಕ್ಕೆ ಪೂಜೆ ಮಾಡ್ಬೇಕು?

Published : Jun 14, 2025, 12:35 PM IST
 Fathers Day 2025

ಸಾರಾಂಶ

ಜೂನ್ 15ರಂದು ಫಾದರ್ಸ್ ಡೇ ಆಚರಣೆ ಮಾಡಲಾಗ್ತಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ತಂದೆ ಯಾವ ಗ್ರಹದ ಜೊತೆ ಸಂಬಂಧ ಹೊಂದಿದ್ದಾನೆ, ಯಾವ ಉಡುಗೊರೆಯನ್ನು ಆತನಿಗೆ ನೀಡ್ಬೇಕು ಎಂಬುದನ್ನು ಹೇಳಲಾಗಿದೆ. 

ಮನೆಯ ಅಡಿಪಾಯ ಅಮ್ಮನಾದ್ರೆ ಮನೆಯ ಸೂರು ಅಪ್ಪ (father). ತಂದೆ ಮಕ್ಕಳ ಜೀವನದ ದೊಡ್ಡ ಸಂಪತ್ತು. ಅಪ್ಪನ ತ್ಯಾಗ, ಪ್ರೀತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯಕ್ಕಾಗಿ, ಕುಟುಂಬಸ್ಥರ ಸಂತೋಷಕ್ಕಾಗಿ ಹಗಲಿರುಳೆನ್ನದೆ ದುಡಿಯುವ ತಂದೆ ತನ್ನ ಖುಷಿ, ನೆಮ್ಮದಿಯನ್ನು ತ್ಯಾಗ ಮಾಡಿರ್ತಾನೆ. ಮಾತು ಸ್ವಲ್ಪ ಒರಟಾಗಿದ್ರೂ, ಶಿಸ್ತಿನ ಸಿಫಾಯಿಯಾಗಿದ್ರೂ ಮನಸ್ಸು ಮೃದು. ತನ್ನ ನೋವು, ಕಷ್ಟಗಳನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟುಕೊಳ್ಳುವ ತಂದೆಯನ್ನು ಸನಾತನ ಧರ್ಮದಲ್ಲಿ ದೇವರಿಗೆ ಹೋಲಿಸಲಾಗಿದೆ. ಪ್ರತಿ ವರ್ಷ ಜೂನ್ ಮೂರನೇ ಭಾನುವಾರವನ್ನು ತಂದೆಯಂದಿರ ದಿನ (Fathers Day)ವಾಗಿ ಆಚರಣೆ ಮಾಡಲಾಗುತ್ತೆ. ಈ ಬಾರಿ ಜೂನ್ 15 ರಂದು ಫಾದರ್ಸ್ ಡೇ ಬಂದಿದೆ.

ಅಪ್ಪನ ಪ್ರೀತಿಯ ಮಕ್ಕಳು ತನ್ನ ತಂದೆಗೆ ವಿಶೇಷ ಉಡುಗೊರೆ ನೀಡಿ ಫಾದರ್ಸ್ ಡೇ ಆಚರಣೆ ಮಾಡಲು ಸಿದ್ಧವಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಫಾದರ್ಸ್ ಡೇ ಆಚರಿಸಿಕೊಳ್ಳಲಿದ್ದಾರೆ. ಆದ್ರೆ ಅದೆಷ್ಟೋ ಪಾಲಕರು ಮತ್ತು ಮಕ್ಕಳ ಸಂಬಂಧ ಸರಿಯಲ್ಲ. ಅಪ್ಪನಿದ್ರೂ ಇಲ್ಲದಂತೆ ಬದುಕ್ತಿರುವ ಅನೇಕರು ನಮ್ಮಲ್ಲಿದ್ದಾರೆ. ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹ ಒಬ್ಬೊಬ್ಬರ ಜೊತೆ ಸಂಬಂಧ ಹೊಂದಿದೆ. ತಂದೆಯ ಗ್ರಹ ಯಾವ್ದು, ಮಕ್ಕಳು ಮತ್ತು ತಂದೆ ನಡುವೆ ಉಂಟಾದ ಬಿರುಕನ್ನು ಯಾವ ಉಪಾಯದಿಂದ ಬಗೆ ಹರಿಸಬಹುದು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲೇ ಹೇಳಲಾಗಿದೆ.

ತಂದೆ ಸೂರ್ಯನ ಜೊತೆ ಸಂಬಂಧವನ್ನು ಹೊಂದಿದ್ದಾನೆ. ತಂದೆ ಮನೆಯನ್ನು ಪೋಷಿಸಿದ್ರೆ ಸೂರ್ಯ ಜಗತ್ತನ್ನು ಪೋಷಿಸ್ತಾನೆ. ನಿಮ್ಮ ಹಾಗೂ ನಿಮ್ಮ ತಂದೆ ಸಂಬಂಧ ಹೇಗಿದೆ ಎಂಬುದನ್ನು ನಿಮ್ಮ ಜಾತಕದಲ್ಲಿರುವ ಸೂರ್ಯನ ಸ್ಥಾನದಿಂದ ನೀವು ಪತ್ತೆ ಮಾಡ್ಬಹುದು. ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದಾಗ, ತಂದೆ ಮತ್ತು ಮಕ್ಕಳ ನಡುವಿನ ಸಂಬಂಧ ಹುಳಿಯಾಗುತ್ತದೆ. ಇದ್ರಿಂದ ಗೌರವ ಮತ್ತು ಖ್ಯಾತಿಯ ಕೊರತೆ ಕಾಡುತ್ತದೆ. ಅದೇ ಸೂರ್ಯನ ಸ್ಥಾನ ಬಲವಾಗಿದ್ದರೆ ಮಕ್ಕಳು ತಂದೆ ಜೊತೆ ಉತ್ತಮ ಸಂಬಂಧ ಹೊಂದಿರ್ತಾರೆ.

ಮೊದಲೇ ಹೇಳಿದಂತೆ ತಂದೆಯನ್ನು ದೇವರಿಗೆ ಹೋಲಿಸಲಾಗುತ್ತದೆ. ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರದವರು ಅಥವಾ ತಂದೆಯನ್ನು ಗೌರವಿಸದವರಿಗೆ ಸೂರ್ಯನ ಆಶೀರ್ವಾದ ಸಿಗೋದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜಾತಕದಲ್ಲಿ ಸೂರ್ಯ ದುರ್ಬಲವಾಗಿದ್ದಾಗ, ಮೂಳೆ ಸಮಸ್ಯೆಗಳು, ವಿಖ್ಯಾತಿ, ವಿಟಮಿನ್ ಡಿ ಕೊರತೆ, ಹೃದಯ ಕಾಯಿಲೆ ಮತ್ತು ಉದ್ಯೋಗ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ನಿಮ್ಮ ತಂದೆಯ ಸಂಬಂಧ ಉತ್ತಮವಾಗಿಲ್ಲ ಎಂದ್ರೆ ಅದನ್ನು ಸರಿಪಡಿಸಲು ನೀವು ಪ್ರಯತ್ನ ನಡೆಸಿ. ಸೂರ್ಯನನ್ನು ಬಲಗೊಳಿಸಿದ್ರೆ ಸಂಬಂಧ ಗಟ್ಟಿಯಾಗುತ್ತದೆ. ತಂದೆಯೊಂದಿಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳಲು, ಭಾನುವಾರ ಸ್ನಾನ ಮಾಡಿದ ನಂತ್ರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ಬೆಲ್ಲವನ್ನು ದಾನ ಮಾಡಬೇಕು. ಭಾನುವಾರ ಉಪ್ಪು, ಶುಂಠಿ ಮತ್ತು ಮಾಂಸಾಹಾರಿ ವಸ್ತುಗಳನ್ನು ಸೇವಿಸಬಾರದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಂದೆಗೆ ಈ ಉಡುಗೊರೆ ನೀಡಿ : ಸೂರ್ಯ ಗ್ರಹವನ್ನು ಬಲಪಡಿಸಲು ನೀವು ತಂದೆಗೆ ಯಾವ ಉಡುಗೊರೆ ನೀಡ್ತೀರಿ ಎಂಬುದು ಮುಖುವಾಗುತ್ತದೆ.

ಹಳದಿ ಬಟ್ಟೆ : ತಂದೆಯಂದಿರ ದಿನದಂದು ನಿಮ್ಮ ಅಪ್ಪನಿಗೆ ಹಳದಿ ಬಣ್ಣದ ಉಡುಗೊರೆಯನ್ನು ನೀಡಿ. ಹಳದಿ ಬಟ್ಟೆ, ಹಳದಿ ಸ್ಕಾರ್ಫ್, ಹಳದಿ ಕುರ್ತಾ ಸೇರಿದಂತೆ ಯಾವುದೇ ಹಳದಿ ಬಟ್ಟೆ ನೀಡಿ, ಪಾದ ಮುಟ್ಟಿ ನಮಸ್ಕಾರ ಮಾಡಿ.

ಪುಸ್ತಕ : ತಂದೆಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡ್ಬಹುದು. ಹಳದಿ ಬಣ್ಣದ ಕವರ್ ನಿಂದ ಪುಸ್ತಕವನ್ನು ಮುಚ್ಚಿ. ಇದರಿಂದ ಸೂರ್ಯ ಮತ್ತು ಗುರು ಗ್ರಹಗಳ ಆಶೀರ್ವಾದ ಸಿಗುತ್ತದೆ.

ಹಳದಿ ಬಣ್ಣದ ಸಿಹಿತಿಂಡಿ : ತಂದೆಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮಿಬ್ಬರ ನಡುವಿನ ಸಂಬಂಧವನ್ನು ಇನ್ನಷ್ಟು ಸಿಹಿಗೊಳಿಸುತ್ತದೆ.

ಚಿನ್ನದ ಆಭರಣ : ಈ ದಿನ ತಂದೆಗೆ ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ವಸ್ತುವನ್ನು ಉಡುಗೊರೆಯಾಗಿ ನೀಡಬಹುದು. ಜ್ಯೋತಿಷ್ಯದ ಪ್ರಕಾರ ಈ ಎರಡೂ ಲೋಹಗಳು ನಿಮ್ಮ ಸಂಬಂಧ ಮತ್ತು ಗ್ರಹಗಳನ್ನು ಬಲಪಡಿಸುತ್ತವೆ.

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 7 ಅಪರೂಪದ ಚತುರ್ಗ್ರಹಿ ಯೋಗ, ಐದು ರಾಶಿಗೆ ಅದೃಷ್ಟ, ಹೆಚ್ಚಿನ ಲಾಭ
ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ