ಹಳೆ ಮನೆ ಖರೀದಿಗೆ ಮೊದಲು ವಿಚಾರಿಸೋದು ಎಷ್ಟು ಮುಖ್ಯ ನೋಡಿ: 37 ವರ್ಷಗಳ ನಂತರವೂ ಬುಸುಗುಡುವ ಆತ್ಮ

ಮನೆಯನ್ನು ಖರೀದಿಸಿದ ಬಾರ್ನೆಲ್ ಫ್ಯಾಮಿಲಿಗೆ ಈ ಮನೆಯ ಹಿಸ್ಟರಿ ಗೊತ್ತಿರಲಿಲ್ಲ. ನೆರೆಮನೆಯವರು ಈ ಕತೆಯನ್ನೆಲ್ಲ ಹೇಳಿದರು. ಈ ಕತೆ ತಿಳಿಯುವ ಮೊದಲೇ ಮನೆಯಲ್ಲಿ ಏನೋ ಕೆಟ್ಟ ಎನರ್ಜಿ ಇದೆ ಎಂಬ ಅನುಭವ ಹೊಸದಾಗಿ ಬಂದ ಫ್ಯಾಮಿಲಿಗೆ ಆಗಿತ್ತು. 

Family Haunted in Home Where Jaws Child Star Was Murdered 37 Years Ago suh

ಜಾಸ್ ಎಂಬ ಹಾಲಿವುಡ್‌ನ ಥ್ರಿಲ್ಲರ್ ಸಿನಿಮಾವನ್ನು ನೀವು ನೋಡಿರಬಹುದು. ಅದರಲ್ಲಿ ನಟಿಸಿದ ಬಾಲನಟಿಯೊಬ್ಬಳನ್ನು ಆಕೆಯ ತಂದೆಯೇ ಕೊಂದ. ಈಗಲೂ ಆಕೆಯ ಆತ್ಮ ಆ ಮನೆಯಲ್ಲಿ ತಿರುಗಾಡುತ್ತಿದೆಯಂತೆ.

2001ರಲ್ಲಿ ಒಂದು ಕುಟುಂಬ ಕ್ಯಾಲಿಫೋರ್ನಿಯಾದ ಕನೋಗಾ ಪಾರ್ಕ್ ಎಂಬಲ್ಲಿನ ಮನೆಯೊಂದನ್ನು ಖರೀದಿ ಮಾಡಿದರು. ರಿಯಲ್ ಎಸ್ಟೇಟ್‌ನವರು ಆ ಮನೆಯ ಹಿಸ್ಟರಿಯನ್ನು ಇವರಿಂದ ಮುಚ್ಚಿಟ್ಟಿದ್ದರು. ನಂತರ ಅಲ್ಲಿಗೆ ತಮ್ಮ ವಾಸವನ್ನು ಸ್ಥಳಾಂತರಿಸಿತು. ಆ ಮನೆಗೊಂದು ಕರಾಳ ಇತಿಹಾಸವಿತ್ತು. 

Latest Videos

ಅದು ಆ ಮೊದಲು ಒಬ್ಬ ಬಾಲನಟಿಯೊಬ್ಬಳ ನಿವಾಸವಾಗಿತ್ತು. ಆಕೆ ಜಾಸ್ ಎಂಬ ಹಾಲಿವುಡ್‌ ಫಿಲಂನಲ್ಲಿ ನಟಿಸಿದ್ದಳು. ಜಾಸ್, ಬಹಳ ಜನಪ್ರಿಯ ಫಿಲಂ. ಥ್ರಿಲ್ಲರ್ ಫಿಲಂ ಆದ ಇದರಲ್ಲಿ ಒಂದು ಶಾರ್ಕ್ ಮ್ಯಾನ್‌ ಈಟರ್ ಆಗುತ್ತದೆ ಹಾಗೂ ಸಮುದ್ರದಲ್ಲಿ ಈಜುವ ಮನುಷ್ಯರನ್ನು ಬೇಟೆಯಾಡುತ್ತದೆ. ಈ ಬಾಲನಟಿಯ ಹೆಸರು ಜುಡಿತ್. ಆಕೆಯ ತಾಯಿ ಮರಿಯಾ ಮತ್ತು ತಂದೆ ಜೋಸೆಫ್ ಬಾರ್ಸಿ. ಬಾರ್ಸಿ ಮಹಾ ಕುಡುಕನಾಗಿದ್ದ. ಕುಡಿದು ಬಂದು ಹೆಂಡತಿಗೂ ಮಗಳಿಗೂ ಹಿಂಸೆ ಕೊಡುತ್ತಿದ್ದ .1988ರ ಒಂದು ದಿನ ಹೀಗೇ ಕುಡಿದು ಬಂದು ಹೆಂಡತಿಯನ್ನೂ  ಹತ್ತು ವರ್ಷದ ಮಗಳನ್ನೂ ಗುಂಡಿಕ್ಕಿ ಕೊಂದ. ಇಬ್ಬರ ಹೆಣಗಳ ಜೊತೆಗೇ ಎರಡು ದಿನ ಮನೆಯಲ್ಲೇ ಹಾಗೇ ಇದ್ದ. ನಂತರ ಎರಡು ಹೆಣಗಳನ್ನೂ ತನ್ನ ಮನೆಯ ಗ್ಯಾರೇಜ್‌ನಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ. ನಂತರ ತಾನೂ ಗುಂಡಿಕ್ಕಿಕೊಂಡ. ಸತ್ತು ಹೋದ.

ಇದು ಆ ಮನೆಯ ಕರಾಳ ಚರಿತ್ರೆ. ಆದರೆ ಮನೆಯನ್ನು ಖರೀದಿಸಿದ ಬಾರ್ನೆಲ್ ಫ್ಯಾಮಿಲಿಗೆ ಈ ಮನೆಯ ಹಿಸ್ಟರಿ ಗೊತ್ತಿರಲಿಲ್ಲ. ನೆರೆಮನೆಯವರು ಈ ಕತೆಯನ್ನೆಲ್ಲ ಹೇಳಿದರು. ಈ ಕತೆ ತಿಳಿಯುವ ಮೊದಲೇ ಮನೆಯಲ್ಲಿ ಏನೋ ಕೆಟ್ಟ ಎನರ್ಜಿ ಇದೆ ಎಂಬ ಅನುಭವ ಹೊಸದಾಗಿ ಬಂದ ಫ್ಯಾಮಿಲಿಗೆ ಆಗಿತ್ತು. ಮನೆಯೊಳಗೆ ಕೆಲವು ಕೋಲ್ಡ್ ಸ್ಟಾಟ್‌ಗಳು ಅನುಭವಕ್ಕೆ ಬಂದವು. ಅಂದರೆ ಮನೆಯ ಯಾವುದೋ ಒಂದು ಭಾಗದಲ್ಲಿ ಇದ್ದಕ್ಕಿದ್ದಂತೆ ಕೋಲ್ಡ್ ಆಗುವುದು, ತಣ್ಣನೆಯ ಸ್ಪರ್ಶ ಅನುಭವಕ್ಕೆ ಬರತೊಡಗಿತು. ರಾತ್ರಿ ಎಲ್ಲರೂ ಮಲಗಿದ್ದಾಗ ಅಥವಾ ಎಲ್ಲರೂ ಅವರಷ್ಟಕ್ಕೆ ಕುಳಿತಿದ್ದಾಗ, ಯಾರೋ ಓಡಾಡಿದಂತೆ ಹೆಜ್ಜೆಗಳ ಸಪ್ಪಳ ಕೇಳಿಸಿತು. ನಂತರ ಗ್ಯಾರೇಜ್‌ನ ಬಾಗಿಲನ್ನು ಯಾರೋ ಹಾಕಿದಂತೆ, ತೆಗೆದಂತೆ, ಎಳೆದಂತೆ ಆಯಿತು. ಹೋಗಿ ನೋಡಿದರೆ ಗ್ಯಾರೇಜ್ ಬಾಗಿಲು ಯಾರೂ ಇಲ್ಲದೆ ತನ್ನಷ್ಟಕ್ಕೇ ತೆರೆಯುತ್ತಿತ್ತು, ಹಾಕಲ್ಪಡುತ್ತಿತ್ತು. ಇದು ಬಾರ್ನೆಲ್ ಫ್ಯಾಮಿಲಿಗೆ ಅಚ್ಚರಿಯೆನಿಸಿತು. 

ಈ ಫ್ಯಾಮಿಲಿಯ ಯಜಮಾನತಿಗೆ ಅಲ್ಲಿನ ಬೆಡ್‌ರೂಮಿನಲ್ಲಿ ಮಲಗಲು ಕಷ್ಟವಾಗುತ್ತಿತ್ತು. ಕಿಟಕಿಗೆ ಮುಖ ಮಾಡಿ ಮಲಗಿದರೆ ಕಿಟಕಿಯಿಂದ ಯಾರೋ ತೂರಿಕೊಂಡು ಒಳಬಂದಂತೆ, ಕಿಟಕಿಗೆ ಮುಖವಿಟ್ಟು ಯಾರೋ ಬಿಕ್ಕಳಿಸಿ ಅಳುತ್ತಿರುವಂತೆ, ನಿದ್ದೆಯಲ್ಲಿದ್ದಾಗ ಯಾರೋ ಬಂದು ಮುಖಕ್ಕೆ ದಿಂಬು ಇಟ್ಟು ಉಸಿರುಗಟ್ಟಿಸಿದಂತೆ ಫೀಲ್ ಆಗತೊಡಗಿತು. ಅಷ್ಟರಲ್ಲಿ ನೆರೆಮನೆಯವರು ಈ ಮನೆಯ ಇತಿಹಾಸ ತಿಳಿಸಿದರು. ಈಗ ಮನೆಯಲ್ಲಿರುವ ನೆಗೆಟಿವ್ ಎನರ್ಜಿಯ ಕಾರಣ ಅವರಿಗೆ ಗೊತ್ತಾಯಿತು.

ಹೊಸ ಫ್ಯಾಮಿಲಿ ನಂತರ ವಾಸ್ತುಶಾಸ್ತ್ರಜ್ಞರ ಮೊರೆ ಹೋಯಿತು. ವಾಸ್ತು ಸಂಸ್ಥೆಯವರು ಸಂಪೂರ್ಣವಾಗಿ ಆ ಮನೆಯ ಒಳಾಂಗಣ, ಪೀಠೋಪಕರಣಗಳ ಜಾಗ, ಡೋರ್‌ವೇಯ ಸ್ವರೂಪ, ಬೆಡ್‌ರೂಂನಲ್ಲಿ ಮಂಚ ಹಾಗೂ ವಾರ್ಡ್‌ರೋಬ್‌ಗಳ ಪೊಸಿಷನ್, ಕಿಟಕಿ, ಬಾಗಿಲು, ಗಾರ್ಡನ್‌ನ ಚಿತ್ರಣವನ್ನೇ ಬದಲಾಯಿಸಿದರು. ಎಲ್ಲೋ ಕತ್ತಲು ಫೀಲ್ ಆಗದಂತೆ ರೂಪಿಸಿದರು. ಪ್ರಸ್ತುತ ಅಲ್ಲಿರುವ ಬಾರ್ನೆಲ್ ಫ್ಯಾಮಿಲಿಗೆ ಮೊದಲಿಗೆ ನೆಗೆಟಿವ್ ಫೀಲ್ ಆಗುತ್ತಿಲ್ಲ.  ಹಾಗಿದ್ದರೆ ಅಲ್ಲಿ ನಿಜಕ್ಕೂ ಬಾಲನಟಿ, ಆಕೆಯ ತಂದೆ, ತಾಯಿಯ ಆತ್ಮ ಇತ್ತೆ? ಇತ್ತು ಎಂಬುದನ್ನು ಅಲ್ಲಿನ ಮೈ ಬೆವರಿಳಿಸುವ ಅನುಭವ ಪಡೆದ ಬಾರ್ನೆಲ್ ಫ್ಯಾಮಿಲಿಯಂತೂ ಒಪ್ಪಿಕೊಳ್ಳುತ್ತದೆ.
 

vuukle one pixel image
click me!