ಮಹಾಕುಂಭದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ವಿಡಿಯೋ ಆಸಲಿಯತ್ತೇನು?

By Chethan Kumar  |  First Published Jan 15, 2025, 7:48 PM IST

ಆ್ಯಪಲ್ ಸಿಇಒ ಪತ್ನಿ ವೃತ ಕೈಗೊಂಡು ಮಹಾಕುಂಭದಲ್ಲಿ ಪಾಲ್ಗೊಂಡಿದ್ದಾರೆ.ಇದೀಗ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಮಹಾಕುಂಭದಲ್ಲಿ ಪಾಲ್ಗೊಂಡಿದ್ದಾರೆ ಅನ್ನೋ ವಿಡಿಯೋ ವೈರಲ್ ಆಗಿದೆ. ಬಿಲ್ ಗೇಟ್ಸ್ ನಿಜಕ್ಕೂ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರ?
 


ಪ್ರಯಾಗರಾಜ್(ಜ.15)  ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೋಟಿ ಕೋಟಿ ಮಂದಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಚಳಿಯನ್ನು ಲೆಕ್ಕಿಸದೆ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. 45 ದಿನಗಳ ಕಾಲ ನಡೆಯಲಿರವು ಮಹಾಕುಂಭದಲ್ಲಿ 35 ರಿಂದ 40 ಕೋಟಿ ಭಕ್ತರು ಪಾಲ್ಗೊಳ್ಳುವ ನೀರಿಕ್ಷೆ ಇದೆ. ಪ್ರತಿ ದಿನ ಇದೀಗ ಕೋಟಿ ಕೋಟಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಇದೇ ಲೆಕ್ಕಾಚಾರದಲ್ಲಿ ಮಂದುವರಿದರೆ 40 ಕೋಟಿ ದಾಟಲಿದೆ. ಇತ್ತ ಆ್ಯಪಲ್ ಸಿಇಒ ಸ್ಟೀವ್ಸ್ ಜಾಬ್ಸ್ ಪತ್ನಿ ವೃತ ಕೈಗೊಂಡು ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ವಿದೇಶಗಳಿಂದ ಹಲವರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಇದರ ನಡುವೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಯಾಗರಾಜ್ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ ಅನ್ನೋ ವಿಡಿಯೋಗಳು ಹರಿದಾಡುತ್ತಿದೆ. 

ಮಹಾಕುಂಭ ಮೇಳದಲ್ಲಿ ಬಿಲ್ ಗೇಟ್ಸ್ ಎಂದು ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಬಿಲ್ ಗೇಟ್ಸ್ ಪ್ರಯಾಗರಾಜ್ ಕುಂಭ ಮೇಳದಲ್ಲಿ ಪಾಲ್ಗೊಂಡಿಲ್ಲ. ಈ ವಿಡಿಯೋ ಡಿಸೆಂಬರ್ ತಿಂಗಳಲ್ಲೂ ಹರಿದಾಡಿತ್ತು. ಇದೇ ವಿಡಿಯೋವನ್ನು ಬಿಲ್ ಗೇಟ್ಸ್ ಕಾಶಿ ವಿಶ್ವನಾಥನ ಮಂದಿರದಲ್ಲಿ ಎಂದು ಬರೆದು ಪೋಸ್ಟ್ ಮಾಡಲಾಗಿದೆ. ಸದ್ಯ ಬಿಲ್ ಗೇಟ್ಸ್ ಪ್ರಯಾಗರಾಜ್‌ಗೆ ಬೇಟಿ ನೀಡಿಲ್ಲ. ಕುಂಭ ಮೇಳದಲ್ಲಿ ಪಾಲ್ಗೊಂಡಿಲ್ಲ. ಆದರೆ ವಿಡಿಯೋವನ್ನು ಹಲವು ರೂಪದಲ್ಲಿ ಹರಿಬಿಡಲಾಗಿದೆ.

Tap to resize

Latest Videos

ಮಹಾಕುಂಭ ಭಕ್ತರಿಗೆ ಯೋಗಿ ಸರ್ಕಾರದ ಗಿಫ್ಟ್, ಕೇವಲ 1,296 ರೂಗೆ ಹೆಲಿಕಾಪ್ಟರ್ ಪ್ರಯಾಣ

ಇದು ಹಳೇ ವಿಡಿಯೋ. ಆದರೆ ಈ ವಿಡಿಯೋದಲ್ಲಿರುವುದು ಬಿಲ್ ಗೇಟ್ಸ್ ಅನ್ನೋದು ಅನುಮಾನ. ಡಿಸೆಂಬರ್ 2024ರಿಂದ ಈ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ಹರಿದಾಡುತ್ತಿದೆ. ಆದರೆ ದಾಖಲೆ ಪ್ರಕಾರ ಬಿಲ್ ಗೇಟ್ಸ್ ಪ್ರಯಾಗರಾಜ್ ಕುಂಭ ಮೇಳ ಹಾಗೂ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿಲ್ಲ. ಈ ವಿಡಿಯೋ ಎಕ್ಸ್ ಖಾತೆ, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾದಲ್ಲಿ ಹಲವರು ಹಂಚಿಕೊಂಡಿದ್ದಾರೆ. ಹೀಗಾಗಿ ಭಾರಿ ವೈರಲ್ ಆಗುತ್ತಿದೆ.

 

 

ಮಹಾಕುಂಭ ಮೇಳೆ ಆರಂಭಕ್ಕಿಂತಲೂ ಮೊದಲೇ ಈ ವಿಡಿಯೋ ವೈರಲ್ ಆಗುತ್ತಿದೆ. ಡಿಸೆಂಬರ್ ತಿಂಗಳಲ್ಲಿಕಾಶಿ ವಿಶ್ವನಾಥನ ದರ್ಶನಕ್ಕೆ ಆಗಮಿಸಿದ ಬಿಲ್ ಗೇಟ್ಸ್ ಎಂದು ವೈರಲ್ ಮಾಡಲಾಗಿತ್ತು. ಈ ಕುರಿತು ಬಿಲ್ ಗೇಟ್ಸ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕಳೆದ ವರ್ಷ ಬಿಲ್ ಗೇಟ್ಸ್ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆಯೂ ಕಾಶಿ ವಿಶ್ವನಾಥ ಮಂದಿರವಾಗಲಿ, ಪ್ರಯಾಗರಾಜ್ ಆಗಲಿ ಭೇಟಿ ನೀಡಿಲ್ಲ. ಹಳೆ ವಿಡಿಯೋವನ್ನು ಇದೀಗ ಮತ್ತೆ ಹರಿಬಿಟ್ಟಿದ್ದು, ತಪ್ಪು ಮಾಹಿತಿ ನೀಡಲಾಗುತ್ತಿದೆ.

 

World's richest man Bill Gates comes under the divine shelter of Baba Kashi Vishwanath 🕉️🙏🏻 pic.twitter.com/l3hyFTknDI

— Voice of Hindus (@Warlock_Shubh)

 

ಇತ್ತ ಸ್ಟೀವ್ಸ್ ಜಾಬ್ಸ್ ಪತ್ನಿ ಪ್ರಯಾಗರಾಜ್ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಪುಣ್ಯಸ್ನಾನ ಮಾಡಿದ್ದಾರೆ. ಕೋಟ್ಯಾಂತರ ಭಕ್ತರ ನಡುವೆ ಸ್ಟೀವ್ಸ್ ಜಾಬ್ಸ್ ಪತ್ನಿ ಲೌರೆನೆ ಪೊವೆಲ್ ಜಾಬ್ಸ್ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಮೊದಲು ಪ್ರಯಾಗರಾಜ್ ಅರ್ಚಕರು ಲೊರೆನೆಗೆ ಹಿಂದೂ ಹೆಸರು ಹಾಗೂ ಕುಲಗೋತ್ರ ನೀಡಿದ್ದರು. ಹಿಂದೂ ಭಕ್ತರಂತೆ ವೃತ ಕೈಗೊಂಡು ಲೌರೆನ್ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. 

ಕುಂಭಮೇಳದ ಪವಿತ್ರ ಸ್ನಾನದ ವೇಳೆ ಮುಟ್ಟಾದರೆ ನಾಗಸಾಧುಗಳು ಏನ್​ ಮಾಡ್ತಾರೆ? ಇಲ್ಲಿದೆ ಕುತೂಹಲದ ವಿವರ...
 

click me!