Latest Videos

ನಿಮ್ಮನೆಗೆ ಲಕ್ಷ್ಮಿ ಬರಬೇಕಾ? ಪರ್ಸಲ್ಲಿ ದುಡ್ಡು ತುಂಬಿರಬೇಕು ಅಂದ್ರೆ ಹೀಗ್ ಮಾಡಿ

By Bhavani BhatFirst Published Jun 27, 2024, 10:35 AM IST
Highlights

ಮನೆಯಲ್ಲಿ ಲಕ್ಷ್ಮೀ ನಲಿದಾಡುತ್ತಿರಬೇಕು ಅನ್ನುವ ಆಸೆ ಯಾರಿಗಿಲ್ಲ ಹೇಳಿ. ಲಕ್ಷ್ಮೀ ಏನೋ ಬರಲಿಕ್ಕೆ ರೆಡಿ ಇರ್ತಾಳೆ. ಆದರೆ ಅವಳನ್ನು ರಿಸೀವ್ ಮಾಡ್ಕೊಳ್ಳೋಕೆ ನೀವು ರೆಡಿ ಆಗ್ಬೇಕು, ಅದು ಹೇಗೆ?

ಲಕ್ಷ್ಮೀ ಅಂದರೆ ಧನ, ಧಾನ್ಯ, ಸಂಪತ್ತು ಅನ್ನುವ ನಂಬಿಕೆ ಇದೆ (Goddess Lakshmi means prosperity, money). ಇದು ತಪ್ಪಲ್ಲ. ಆದರೆ ಇದರ ಜೊತೆಗೆ ಲಕ್ಷ್ಮೀ ಅಂದರೆ ಆರೋಗ್ಯ, ನೆಮ್ಮದಿ, ಸಂತೋಷವೂ (Health, Peace of Mind and Happiness) ಹೌದು. ನಮ್ಮ ಬದುಕನ್ನು ಉಲ್ಲಸಿತವಾಗಿಡುವ ಎಲ್ಲ ಅಂಶಗಳನ್ನೂ ಮಾತೃದೇವತೆ ಲಕ್ಷ್ಮೀ ಪ್ರತಿನಿಧಿಸುತ್ತಾಳೆ. ಆದರೆ ಈ ತಾಯಿ ಕೆಲವೊಂದು ವಿಚಾರಗಳಲ್ಲಿ ಸ್ಪೆಸಿಫಿಕ್. ಅದು ಹಾಗಿದ್ದರೆ ಮಾತ್ರ ತಾನಲ್ಲಿಗೆ ಬರುತ್ತೇನೆ ಅನ್ನುವುದು ಈಕೆಯ ಗುಣ. ಈಕೆ ಇಷ್ಟು ಶಿಸ್ತನ್ನು ಅಪೇಕ್ಷಿಸುವುದರ ಹಿಂದೆ ನಮಗೆ ಒಳಿತಾಗಬೇಕು ಎಂಬ ಭಾವವೇ ಇದೆ. ಇದನ್ನು ಪಾಲಿಸಿದರೆ ಲಕ್ಷ್ಮೀ ಬಂದೇ ಬರುತ್ತಾಳೆ, ಜೊತೆಗೆ ಮನಸ್ಸಿಗೆ ಬದುಕಿಗೆ ಖುಷಿಯನ್ನೂ ಗೆಲುವನ್ನೂ ತರುತ್ತಾಳೆ.

ಇದಕ್ಕೆ ನೀವು ಮೊದಲು ಮಾಡಬೇಕಿರುವ ಅಭ್ಯಾಸ ಮಧ್ಯರಾತ್ರಿ ತನಕ ಮೊಬೈಲ್ ನೋಡೋದನ್ನು ನಿಲ್ಲಿಸೋದು. ಬೇಗ ಮಲಕ್ಕೊಳ್ಳೋದು. ನೀವು ಗ್ಯಾಜೆಟ್‌ಗೆ ಅಂತ ಇಷ್ಟು ಟೈಮ್‌ ಮೀಸಲಿಟ್ಟುಬಿಡಿ. ಆ ಟೈಮ್‌ ಬಿಟ್ಟು ಉಳಿದ ಟೈಮಲ್ಲಿ ಸಮಯ ಕೊಲ್ಲುವ ಸೋಷಿಯಲ್ ಮೀಡಿಯಾಗಳನ್ನೆಲ್ಲ ಬಂದ್ ಮಾಡಿ ಬಿಡಿ. ತೀರಾ ಅವಶ್ಯಕವಿರುವ ವಾಟ್ಸಾಪ್ ನಂಥಾ ಆಪ್‌ಗಳನ್ನು ತೀರಾ ಅವಶ್ಯಕತೆ ಇದ್ದರೆ ನೋಡಿ. ಹೀಗಾದಾಗ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳೋದು ಸಾಧ್ಯವಾಗುತ್ತೆ. ಕಣ್ಣಿಗೆ ಹೆಚ್ಚು ಸ್ಟ್ರೈನ್ ಆಗೋದಿಲ್ಲ. ಇನ್ನು ಮುಂಜಾನೆ ಬೇಗ ಏಳೋದನ್ನು ಅಭ್ಯಾಸ ಮಾಡಿಕೊಳ್ಳಿ. ಆರಂಭದಲ್ಲಿ ಬಹಳ ಕಷ್ಟ ಆಗುತ್ತೆ. ಇನ್ನೈದೇ ಐದು ನಿಮಿಷ ಮಲಗಿಕೊಳ್ಳೋಣ ಅನಿಸುತ್ತೆ. ಹಾಗೆ ಮಲಗಿದಿರೋ ಮುಗೀತು ಕಥೆ, ಆಮೇಲೆ ನೀವು ಏಳೋದು ನಿಮ್ಮ ಮಾಮೂಲಿ ಟೈಮಿಗೇ.

ಈ 5 ರಾಶಿಯವರಿಗೆ ಪ್ರೀತಿ ಒಂದು ದೊಡ್ಡ ವರ, ಆ ವಿಷಯದಲ್ಲಿ ಅವರು ಅದೃಷ್ಟವಂತರು

ಆದರೆ ಮುಂಜಾನೆ ಎದ್ದು ನೋಡಿ ಆ ಖುಷಿ ಏನು ಅಂತ ನಿಮಗೇ ಗೊತ್ತಾಗುತ್ತೆ. ಮುಂಜಾನೆ ಬ್ರಾಹ್ಮೀ ಮುಹೂರ್ತಕ್ಕೆ ಎದ್ದು ಶುಭ ಕಾರ್ಯಗಳನ್ನು ಆರಂಭಿಸಿದರೆ ಇಡೀ ದಿನ ಚೆನ್ನಾಗಿಯೇ ಸಾಗುತ್ತದೆ. ಸೂರ್ಯೋದಯದ ಸಮಯದಲ್ಲಿ ಏಳುವುದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪಲು ಅಗತ್ಯವಾದ ಮಾನಸಿಕ ಶಕ್ತಿಯನ್ನು (Mental Strength) ನೀಡುತ್ತದೆ. ಮುಂಜಾನೆ ಬೇಗನೆ ಎದ್ದು, ಕೆಲವು ರೀತಿಯ ಪ್ರಮುಖ ಕೆಲಸವನ್ನು ಮಾಡಿ. ಈ ಕೆಲಸ ಕಾರ್ಯಗಳ ಆಧಾರದ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವು ಲಭಿಸುತ್ತದೆ. ಇದಲ್ಲದೆ, ಏನೇ ಕೆಲಸ ಮಾಡಿದರೂ ಅದ್ರಲ್ಲಿ ಯಶಸ್ವಿಯಾಗುತ್ತೇನೆ ಎಂಬ ನಂಬಿಕೆ ದೃಢವಾಗುತ್ತದೆ. ಇದೇ ವೇಳೆ, ಲಕ್ಷ್ಮಿ ದೇವಿಯ ಆಶೀರ್ವಾದವೂ ಭರಪೂರ​ ಮುಂದುವರಿಯುತ್ತದೆ. ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿದ್ದರೆ ಬೆಳಗ್ಗೆ ಎದ್ದ ನಂತರ ದಿನಚರಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆಗಳು ಪರಿಹಾರವಾಗುತ್ತವೆ ಮತ್ತು ಗಳಿಕೆಯ ಮಾರ್ಗಗಳು ನಿಚ್ಚಳವಾಗಿ ಕಾಣುತ್ತವೆ ಎಂದು ಹಿರಿಯರು ಹೇಳ್ತಾರೆ.

ನೀವು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ನಿಮ್ಮಿಷ್ಟದ ದೇವರನ್ನು ಮನಸ್ಸಲ್ಲೇ ಕಲ್ಪಿಸಿಕೊಂಡು ಆ ದೈವಕ್ಕೆ ವಂದಿಸಿ. ಸ್ನಾನ ಮಾಡಿ ಬಂದು ದೇವರಿಗೆ ತುಪ್ಪದ ದೀಪ ಹಚ್ಚಿ. ಅದು ಕಷ್ಟ ಅಂದರೆ ಎಣ್ಣೆ ದೀಪವೂ ನಡೆಯುತ್ತೆ. ದೇವರೇನೂ ನಿಮ್ಮ ಮೇಲೆ ಸಿಟ್ಟಾಗಲ್ಲ. ಅವನೋ ಅವಳೋ ಕೊಟ್ಟ ಶಕ್ತಿ ಏನಿದೆಯೋ ಅದರ ಆಧಾರದಲ್ಲಿ ಎಣ್ಣೆಯೋ, ತುಪ್ಪವೋ ಬಳಸಿ. ತುಳಸಿಯನ್ನು ನೀರಲ್ಲಿ ಹಾಕಿ ಮನೆಯಿಡೀ ಚುಮುಕಿಸಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಧನಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದಂತೆ. ಸ್ನಾನದ ಬಳಿಕ ಸೂರ್ಯನಿಗೆ ನಮಸ್ಕರಿಸಿ ಸೂರ್ಯ ನಮಸ್ಕಾರ ಮಾಡಿ ಅರ್ಘ್ನ ನೀಡಿ. ಇದರಿಂದ ಆರೋಗ್ಯವಾಗಿರುವುದು ಮಾತ್ರವಲ್ಲದೆ ನೀವು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ವಿಯಾಗುತ್ತೀರಿ ಎಂಬ ನಂಬಿಕೆಯಿದೆ. ಇದಾಗಿ ಧ್ಯಾನ ಮಾಡಿ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಲಕ್ಷ್ಮೀ ತಾಯಿಯಂತೆ ಅಕ್ಕರೆಯಿಂದ ನಿಮ್ಮನ್ನು ಪೊರೆಯುತ್ತಾಳೆ.

 ನಿಂತ ಲಕ್ಷ್ಮಿ ದೇವಿ ವಿಗ್ರಹ ಮನೆಯಲ್ಲಿಟ್ರೆ ಬಡತನವನ್ನ ನೀವೇ ಆಹ್ವಾನಿಸಿದಂತೆ!

click me!