ಪ್ರೀತಿ-ಪ್ರೇಮ, ಸಂಬಂಧಗಳ ಕುರಿತಾಗಿ ಎಲ್ಲರಿಗೂ ಅವರದ್ದೇ ಆದ ಭಾವನೆಗಳು, ಕಲ್ಪನೆಗಳಿರುತ್ತವೆ. ಈ ವಿಚಾರದಲ್ಲಿ ರಾಶಿಚಕ್ರದ ಪ್ರಭಾವ ಹೆಚ್ಚು. ಹೀಗಾಗಿ, ರಾಶಿಚಕ್ರಕ್ಕೆ ಅನುಗುಣವಾಗಿ ನಿಮ್ಮ ಲೆಕ್ಕದಲ್ಲಿ ಪ್ರೀತಿ ಎಂದರೇನು ಎಂದು ತಿಳಿದುಕೊಳ್ಳಿ.
ರಾಶಿಚಕ್ರಗಳು ಮನುಷ್ಯ ಜೀವನದ ಹಲವಾರು ಅಂಶಗಳನ್ನು ನಿರ್ಧರಿಸುತ್ತವೆ. ಆರೋಗ್ಯ, ಹಣಕಾಸು, ಸಂಬಂಧ, ಉದ್ಯೋಗ ಸೇರಿದಂತೆ ಪ್ರಮುಖ ವಿಷಯಗಳ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ರೋಮ್ಯಾಂಟಿಕ್ ಜೀವನ, ಪ್ರೀತಿಯ ವಿಚಾರದಲ್ಲೂ ರಾಶಿಚಕ್ರಗಳ ಪ್ರಭಾವ ಮಹತ್ವದ್ದು. ಅದನ್ನು ಅರಿಯಲು ಎಲ್ಲರಿಗೂ ಖಂಡಿತವಾಗಿ ಆಸಕ್ತಿ ಇದ್ದೇ ಇರುತ್ತದೆ. ನಿಮ್ಮ ದೃಷ್ಟಿಕೋನದಲ್ಲಿ ಪ್ರೀತಿ-ಪ್ರೇಮ, ಸಂಬಂಧವೆಂದರೆ ಏನು ಎನ್ನುವುದನ್ನು ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಅರಿತುಕೊಳ್ಳಲು ಸಾಧ್ಯ.
• ಮೇಷ (Aries)
ಅಗ್ನಿಯಂತೆ ಉರಿಯುವ ಮೇಷ ರಾಶಿಯ ಜನ ಪ್ರೀತಿಯ (Love) ಬಗ್ಗೆ ತೀವ್ರವಾದ ಮೋಹ (Passion) ಹೊಂದಿರುತ್ತಾರೆ. ಎಕ್ಸೈಟಿಂಗ್ ಎನಿಸುತ್ತದೆ. ಸಂಬಂಧದಲ್ಲಿ ಲೀಡ್ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಸಂಗಾತಿಯ ಸ್ವಾತಂತ್ರ್ಯಕ್ಕೆ ಬೆಲೆ ನೀಡುತ್ತಾರೆ. ಅವರೊಂದಿಗೆ ಕಾದಾಡುವುದು ಸಹ ಇವರಿಗೆ ಥ್ರಿಲ್ ಎನಿಸುತ್ತದೆ.
• ವೃಷಭ (Taurus)
ಸ್ಥಿರವಾದ, ಸೂಕ್ಷ್ಮವಾದ ವೃಷಭ ರಾಶಿಯ ಜನ ಮಟೀರಿಯಲ್ ಕಂಫರ್ಟ್ (Comfort) ನೀಡುವ ಹಾಗೂ ಸುರಕ್ಷಿತ ಭಾವನೆ ಮೂಡಿಸುವ ಸಂಗಾತಿಯನ್ನು ಬಯಸುತ್ತಾರೆ. ಸಂಬಂಧಕ್ಕೆ ಬದ್ಧರಾಗಿರುತ್ತಾರೆ.
ನವೆಂಬರ್ 12 ನಂತರ 2024ರವರೆಗೆ ಈ ರಾಶಿಗೆ ಸಂಪತ್ತು ಡಬಲ್.. ಯಶಸ್ಸು ಪಕ್ಕಾ...
• ಮಿಥುನ (Gemini)
ನೈಸರ್ಗಿಕವಾಗಿ ಕುತೂಹಲಿಯಾಗಿರುವ, ಮಾತುಗಾರರಾಗಿರುವ ಮಿಥುನ ರಾಶಿಯ ಜನ ಬೌದ್ಧಿಕ (Intellectual) ಸಂಬಂಧಕ್ಕೆ ಆದ್ಯತೆ ನೀಡುತ್ತಾರೆ. ಗಹನವಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸುವ ಸಂಗಾತಿಯನ್ನು ಬಯಸುತ್ತಾರೆ. ಚಡಪಡಿಕೆಯ ಗುಣದಿಂದಾಗಿ ಸಂಬಂಧಕ್ಕೆ ಬದ್ಧರಾಗಿರಲು ಕಷ್ಟವಾಗಬಹುದು.
• ಕರ್ಕಾಟಕ (Cancer)
ಆರೈಕೆ ಗುಣವುಳ್ಳ, ಭಾವನಾತ್ಮಕವಾಗಿರುವ ಕರ್ಕಾಟಕ ರಾಶಿಯ ಜನ ಪ್ರೀತಿಯನ್ನು ಸುರಕ್ಷಿತ (Secure) ಹಾಗೂ ನೆಮ್ಮದಿಯ ಸ್ವರ್ಗವನ್ನಾಗಿ ಭಾವಿಸುತ್ತಾರೆ. ಕುಟುಂಬ (Family) ಮತ್ತು ಮನೆ ಇವರಿಗೆ ಅತ್ಯಗತ್ಯ. ಭಾವನಾತ್ಮಕ ಬೆಂಬಲ ನೀಡುವ, ಅರ್ಥೈಸಿಕೊಳ್ಳುವ ಸಂಗಾತಿಯನ್ನು ಬಯಸುತ್ತಾರೆ.
• ಸಿಂಹ (Leo)
ಸಿಂಹ ರಾಶಿಯ ಜನರಿಗೆ ಪ್ರೀತಿ ಎಂದರೆ ಅದ್ದೂರಿಯ ಹಾಗೂ ಮನಸ್ಸಿನ ಭಾವನೆಗಳನ್ನು ನಾಟಕೀಯವಾಗಿ ವ್ಯಕ್ತಪಡಿಸುವ ವಿಚಾರ. ಸಂಗಾತಿಯ ಜೀವನದಲ್ಲಿ ತಾವೇ ಕೇಂದ್ರಬಿಂದುವಾಗಿರಲು ಬಯಸುತ್ತಾರೆ. ಸಂಗಾತಿ (Partner) ತಮ್ಮನ್ನು ಮೆಚ್ಚಿಕೊಳ್ಳಬೇಕು ಎಂದು ನಿರೀಕ್ಷೆ ಮಾಡುತ್ತಾರೆ.
• ಕನ್ಯಾ (Virgo)
ಕನ್ಯಾ ರಾಶಿಯ ಜನ ಪ್ರಾಯೋಗಿಕವಾಗಿರುತ್ತಾರೆ. ಸಾಂಗತ್ಯದಲ್ಲಿ ಪತಿ ಹಾಗೂ ಪತ್ನಿ ಸಮಭಾಗಿಗಳು, ಇಬ್ಬರೂ ಸಮಾನವಾಗಿ ಒಬ್ಬರ ಬದುಕನ್ನು ಮತ್ತೊಬ್ಬರು ಚೆಂದವಾಗಿಸಲು ಯತ್ನಿಸಬೇಕು ಎನ್ನುವ ಭಾವನೆ ಹೊಂದಿರುತ್ತಾರೆ. ಸಂಬಂಧದಲ್ಲಿ ಪರಿಪೂರ್ಣತೆ ಬಯಸುತ್ತಾರೆ.
• ತುಲಾ (Libra)
ಪ್ರೀತಿಯನ್ನು ಒಂದು ಸುಂದರವಾದ ಕಲೆಯಂತೆ (Art) ಭಾವಿಸುವ ಜನ ತುಲಾ ರಾಶಿಯವರು. ಸಂಬಂಧದಲ್ಲಿ (Relation) ಸಮತೋಲನ ಬಯಸುತ್ತಾರೆ. ಯಾವುದೇ ಸನ್ನಿವೇಶದಲ್ಲಿ ಸಂಗಾತಿಯೊಂದಿಗೆ ಬಿಕ್ಕಟ್ಟು ಸೃಷ್ಟಿಸಿಕೊಳ್ಳದಿರಲು ಯತ್ನಿಸುತ್ತಾರೆ.
• ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನರು ಪ್ರೀತಿಯನ್ನು ಆಳವಾದ, ಪರಿವರ್ತನೆಗೆ ಕಾರಣವಾಗುವ ಅನುಭವವನ್ನಾಗಿ ಪರಿಗಣಿಸುತ್ತಾರೆ. ಭಾವನಾತ್ಮಕ ಹಾಗೂ ದೈಹಿಕ ಆಪ್ತತೆ ಬಯಸುತ್ತಾರೆ. ಸಂಬಂಧದಲ್ಲಿ ವಿಶ್ವಾಸ (Trust) ಮತ್ತು ಬದ್ಧತೆ ಶ್ರೇಷ್ಠವೆಂದು ತಿಳಿಯುತ್ತಾರೆ.
ಮದ್ವೆ ಗಿದ್ವೆ ಬೇಡ, ಲಿವ್ ಇನ್ ಸಂಬಂಧವೇ ಬೆಸ್ಟ್ ಅನ್ನೋ ರಾಶಿ ಪೈಕಿ ನೀವೂ ಇದೀರಾ?
• ಧನು (Sagittarius)
ಮುಕ್ತ ಚೈತನ್ಯದ (Free Spirit), ಸಾಹಸಮಯ ವ್ಯಕ್ತಿತ್ವದ ಧನು ರಾಶಿಯ ಜನ ಪ್ರೀತಿಯನ್ನು ಒಂದು ಸುಂದರ ಪಯಣವನ್ನಾಗಿ ಭಾವಿಸುತ್ತಾರೆ. ಹೊಸ ಅನುಭವಕ್ಕಾಗಿ ತುಡಿಯುತ್ತಾರೆ. ಸ್ವತಂತ್ರ ಧೋರಣೆಯಿಂದಾಗಿ ಸಂಬಂಧಕ್ಕೆ ಬದ್ಧವಾಗಿರುವುದು ಕೆಲವೊಮ್ಮೆ ಸವಾಲಾಗಬಹುದು.
• ಮಕರ (Capricorn)
ಮಕರ ರಾಶಿಯ ಜನ ಗುರಿಯನ್ನು ಸಾಧಿಸುವ ಛಲವುಳ್ಳವರು. ಇವರು ಪ್ರೀತಿಯನ್ನು ಜೀವನದ ಗುರಿಯನ್ನು ಸಾಧಿಸುವ ಮಾರ್ಗವನ್ನಾಗಿ ಪರಿಗಣಿಸುತ್ತಾರೆ. ಮಹತ್ವಾಕಾಂಕ್ಷೆ ಹಾಗೂ ಮೌಲ್ಯಗಳನ್ನು ಹಂಚಿಕೊಳ್ಳುವ ಸಂಗಾತಿಯನ್ನು ಬಯಸುತ್ತಾರೆ.
• ಕುಂಭ (Aquarius)
ವಿಶಿಷ್ಟತೆಗೆ ಮತ್ತೊಂದು ಹೆಸರಾಗಿರುವ ಕುಂಭ ರಾಶಿಯ ಜನ ಪ್ರೀತಿಯನ್ನು ಮಾನಸಿಕವಾಗಿ (Mental) ಬೆಸೆಯುವ, ಬೌದ್ಧಿಕ ಮಟ್ಟದಲ್ಲಿ (Intellectual Level) ಸಂಪರ್ಕಿಸುವ ಮಾರ್ಗವನ್ನಾಗಿ ನೋಡುತ್ತಾರೆ. ಸ್ವಾತಂತ್ರ್ಯಕ್ಕೆ (Freedom) ಆದ್ಯತೆ ನೀಡುತ್ತಾರೆ. ಹೀಗಾಗಿ, ಅಸಾಂಪ್ರದಾಯಿಕ ಸಂಬಂಧಕ್ಕೆ ಆದ್ಯತೆ ನೀಡಬಹುದು.
• ಮೀನ (Pisces)
ಆಳವಾದ ಭಾವನೆಗಳು (Emotions), ಕಲಾತ್ಮಕತೆ (Artistic), ಕ್ರಿಯಾಶೀಲತೆ (Creativity), ಕಲ್ಪನಾಲಹರಿ ಮೇಳೈಸಿರುವ ಮೀನ ರಾಶಿಯ ಜನ ಪ್ರೀತಿಯನ್ನು ಆಧ್ಯಾತ್ಮಿಕ (Spiritual) ಹಾಗೂ ಭಾವನಾತ್ಮಕ ಸಂಪರ್ಕ ಕಲ್ಪಿಸುವ ಸಾಧನವನ್ನಾಗಿ ಪರಿಗಣಿಸುತ್ತಾರೆ. ತಮ್ಮ ಸಂಗಾತಿಯನ್ನು ಅತ್ಯಂತ ಆದರ್ಶವಂತರನ್ನಾಗಿ ನೋಡುತ್ತಾರೆ.