Dream Interpretation: ಕನಸಲ್ಲಿ ಹಲ್ಲಿ ಕಂಡರೆ ಬರಲಿರುವ ಕೆಟ್ಟದ್ದರ ಮುನ್ಸೂಚನೆ!

By Suvarna News  |  First Published Dec 11, 2022, 8:48 AM IST

ಕನಸಿನಲ್ಲಿ ಹಲ್ಲಿಗಳು ಕಂಡರೆ ಅದನ್ನು ಶುಭ ಶಕುನವೆಂದು ಪರಿಗಣಿಸಲಾಗುವುದಿಲ್ಲ. ಕನಸಲ್ಲಿ ಹಲ್ಲಿಗಳು ಯಾವ ರೀತಿ ಕಂಡರೆ ಅದರರ್ಥ ಏನು ನೋಡೋಣ.. 


ನಾಗರಿಕ ಜಗತ್ತಿನಲ್ಲಿ ಮತ್ತು ಕಾಡಿನಲ್ಲಿ ಕಂಡುಬರುವ ಸಾಮಾನ್ಯ ಸರೀಸೃಪಗಳಲ್ಲಿ ಹಲ್ಲಿಯು ಒಂದಾಗಿದೆ. ಈ ಹಲ್ಲಿಗಳಲ್ಲಿ ಕೆಲವು, ಕೆಲವರಿಗೆ ಕೇವಲ ತಮ್ಮ ಉಪಸ್ಥಿತಿಯಿಂದ ಮೈಯ್ಯಲ್ಲಿ ಚಳಿ ಹುಟ್ಟಿಸುತ್ತವೆ. ಮನೆಯೊಳಗೆ ಕಂಡು ಬರುವ ಚಿಕ್ಕ ಹಲ್ಲಿಗಳು ಅಪಾಯಕಾರಿಯಲ್ಲದಿದ್ದರೂ ಅವೆಂದರೆ ಬಹುತೇಕರಿಗೆ ಅಸಹ್ಯವಂತೂ ಹೌದು. ಹಲ್ಲಿಗಳು ಗೋಡೆಯ ಮೇಲೆ ಓಡುವಾಗ ಅವು ಮೈ ಮೇಲೆ ಬಿದ್ದರೆ ಎಂಬ ಯೋಚನೆಯೇ ಭಯ ಹುಟ್ಟಿಸುತ್ತದೆ. ಅಪರೂಪಕ್ಕೆ ಅವು ಮೈ ಮೇಲೆ ಬೀಳುವುದೂ ಇದೆ. ಅದಕ್ಕಂತೂ ಅವು ಎಲ್ಲಿ ಬಿದ್ದವು, ಯಾವ ಸಮಯದಲ್ಲಿ ಬಿದ್ದವು ಎಂಬುದರ ಆಧಾರದ ಮೇಲೆ ಶಕುನ ಹೇಳಲಾಗುತ್ತದೆ. ಅಂತೆಯೇ ಹಲ್ಲಿಗಳು ಕನಸಿನಲ್ಲಿ ಕಂಡರೆ ಸ್ವಪ್ನಶಾಸ್ತ್ರವು(dream science) ಅದೊಂದು ಕೆಟ್ಟ ಶಕುನ ಎಂದು ಹೇಳುತ್ತದೆ. 

ಹೌದು, ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿಗೂ ಕೆಲವು ಅರ್ಥವಿದೆ. ಕೆಲವು ಕನಸುಗಳು ಒಬ್ಬ ವ್ಯಕ್ತಿಗೆ ಎಚ್ಚರವಾದ ಮೇಲೂ ನೆನಪಾದರೆ ಕೆಲವು ಕನಸುಗಳು ಬೆಳಿಗ್ಗೆ ಎದ್ದ ನಂತರ ಮರೆತು ಹೋಗುತ್ತವೆ. ತಮ್ಮ ಕನಸುಗಳನ್ನು ನೆನಪಿಸಿಕೊಳ್ಳುವ ಜನರು ಅದರ ಅರ್ಥವನ್ನು ತಿಳಿದುಕೊಳ್ಳುವ ದೊಡ್ಡ ಆಸೆಯನ್ನು ಹೊಂದಿರುತ್ತಾರೆ. ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸನ್ನೂ ವಿವರವಾಗಿ ವಿವರಿಸಲಾಗಿದೆ(dream interpretation). ಈ ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ನಮಗೆ ಮಾಹಿತಿಯನ್ನು ನೀಡುತ್ತವೆ. ನೀವು ಹಲ್ಲಿಯನ್ನು ಮತ್ತೆ ಮತ್ತೆ ಕನಸಿನಲ್ಲಿ ಕಂಡರೆ, ಅದು ಅಶುಭ ಸಂಕೇತ(Inauspecious sign)ವಾಗಬಹುದು.

Tap to resize

Latest Videos

ಗೋಡೆ ಮೇಲಿನ ಹಲ್ಲಿ
ಹಲ್ಲಿ ಗೋಡೆಗೆ ಅಂಟಿಕೊಂಡಿದ್ದು, ನಿಮ್ಮ ಮೇಲೆ ಬೀಳಲು ಸಜ್ಜಾಗಿರುವಂತೆ ನೀವು ಕನಸು ಕಂಡರೆ, ನೀವು ಜಾಗರೂಕರಾಗಿರಬೇಕು ಎಂದರ್ಥ. ಏಕೆಂದರೆ ನೀವು ಶತ್ರುಗಳ ಪಿತೂರಿಗೆ ಬಲಿಯಾಗಬಹುದು ಎಂದು ಇದು ಮುನ್ಸೂಚನೆ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವುದೇ ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.

Weekly Love Horoscope: ಸಿಂಹಕ್ಕೆ ಈ ವಾರ ಹೆಚ್ಚುವ ಕೌಟುಂಬಿಕ ಕಲಹ

ಹಲ್ಲಿ ತಿನ್ನುವ ಕೀಟಗಳು(Lizard eating insects)
ಕೀಟಗಳನ್ನು ತಿನ್ನುವ ಹಲ್ಲಿಯ ಕನಸು ಕಾಣುವುದು ಒಳ್ಳೆಯದಲ್ಲ. ಈ ರೀತಿಯ ಕನಸು ನಿಮ್ಮ ಜೀವನದಲ್ಲಿ ದೊಡ್ಡ ನಷ್ಟವನ್ನು ಸೂಚಿಸುತ್ತದೆ. ನೀವು ಕೆಲವು ದೊಡ್ಡ ಆರ್ಥಿಕ ತೊಂದರೆಯಲ್ಲಿ ಸಿಲುಕಿಕೊಳ್ಳಬಹುದು. ಇದಲ್ಲದೆ, ನಿಮ್ಮ ಕನಸಿನಲ್ಲಿ ಹಲ್ಲಿ ಮರಿ ಕಾಣಿಸಿಕೊಂಡರೆ, ನಿಮ್ಮ ಕೆಲಸದಲ್ಲಿ ಕೆಲವು ರೀತಿಯ ಅಡಚಣೆ ಉಂಟಾಗಲಿದೆ ಎಂದರ್ಥ.

ಹಲ್ಲಿ ಮನೆಗೆ ಪ್ರವೇಶಿಸುವುದನ್ನು ನೋಡಿದರೆ
ನಿಮ್ಮ ಕನಸಿನಲ್ಲಿ ಹಲ್ಲಿ ಮನೆಗೆ ಪ್ರವೇಶಿಸುವುದನ್ನು ನೀವು ನೋಡಿದರೆ, ನೀವು ಕೆಲವು ದೊಡ್ಡ ದೇಶೀಯ ತೊಂದರೆಗೆ ಸಿಲುಕುತ್ತೀರಿ ಎಂದರ್ಥ. ಕನಸಿನಲ್ಲಿ ಹಲ್ಲಿಯನ್ನು ಕೊಲ್ಲುವುದನ್ನು ನೀವು ನೋಡುವುದು ಶುಭ ಸಂಕೇತವಾಗಿದೆ. ನಿಮ್ಮ ಎಲ್ಲಾ ತೊಂದರೆಗಳನ್ನು ನೀವು ತೊಡೆದುಹಾಕುತ್ತೀರಿ ಎಂದರ್ಥ.

ಈಕೆ ಮತ್ತೊಬ್ಬ ಬಾಬಾ ವಾಂಗಾನಾ? ನಿಜವಾಗುತ್ತಿರುವ 19 ವರ್ಷದ ಮಹಿಳೆಯ ಭವಿಷ್ಯವಾಣಿಗಳು!

ಕನಸಿನಲ್ಲಿ ಹಲ್ಲಿಯನ್ನು ತಿಂದರೆ
ನಿಮ್ಮ ಕನಸಿನಲ್ಲಿ ನೀವು ಹಲ್ಲಿಯನ್ನು ತಿನ್ನುತ್ತಿದ್ದೀರಿ ಎಂಬಂತೆ ನೀವು ನೋಡಿದರೆ, ಇದರರ್ಥ ನೀವು ಶಕ್ತಿಯುತ ಮತ್ತು ಅಧಿಕಾರದಲ್ಲಿರುವ ವ್ಯಕ್ತಿಯಿಂದ ನಿಮ್ಮ ಹಣವನ್ನು ಪಡೆಯುತ್ತಿದ್ದೀರಿ ಎಂದರ್ಥ. ವ್ಯಕ್ತಿಯು ಹಣವನ್ನು ಪಡೆಯುವ ವಿಧಾನವು ಕಾನೂನುಬದ್ಧವಾಗಿಲ್ಲ ಎಂದು ಸಹ ಅರ್ಥ. ವ್ಯಕ್ತಿಯು ಬೇರೊಬ್ಬರ ಶ್ರಮದಿಂದ ಹಣವನ್ನು ಪಡೆಯುತ್ತಿದ್ದಾನೆ ಎಂದು ಅರ್ಥೈಸಬಹುದು; ಬಹುಶಃ ಅವನು ಇತರರ ಹಣವನ್ನು ತೆಗೆದುಕೊಳ್ಳುತ್ತಿರಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!